ಒಂದೇ ಕುಟುಂಬದ ಐವರು ಆತ್ಮಹತ್ಯೆ, 5 ದಿನಗಳಿಂದ ದೇಹಗಳ ಮುಂದೆ ಹಸಿದು ಕುಳಿತಿದ್ದ 3 ವರ್ಷದ ಮಗು

Five of a family committed suicide in Bengaluru: ಐವರು ನೇಣು ಬಿಗಿದ ಸ್ಥಿತಿಯಲ್ಲಿದ್ದು, ಐದು ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಅದೃಷ್ಟವಶಾತ್​ ಮೂರು ವರ್ಷದ ಮಗು ಬದುಕುಳಿದಿದ್ದು, ಮೃತ ಶರೀರಗಳ ಮುಂದೆ ಹಸಿವಿನಿಂದ ಕುಳಿತಿತ್ತು ಎನ್ನಲಾಗಿದೆ. 

ಶಂಕರ್​ (ಬಿಳಿ ಶರ್ಟ್​​) ಹೊರತುಪಡಿಸಿ ಚಿತ್ರದಲ್ಲಿರುವ ಎಲ್ಲರೂ ಸಾವನ್ನಪ್ಪಿದ್ದಾರೆ

ಶಂಕರ್​ (ಬಿಳಿ ಶರ್ಟ್​​) ಹೊರತುಪಡಿಸಿ ಚಿತ್ರದಲ್ಲಿರುವ ಎಲ್ಲರೂ ಸಾವನ್ನಪ್ಪಿದ್ದಾರೆ

 • Share this:
  ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯನ್ನು ಒಂದೇ ಕುಟುಂಬದ ಐದು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದಿಂದ ಮನೆಯಲ್ಲಿರುವ ಐದು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಐವರು ನೇಣು ಬಿಗಿದ ಸ್ಥಿತಿಯಲ್ಲಿದ್ದು, ಐದು ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಅದೃಷ್ಟವಶಾತ್​ ಮೂರು ವರ್ಷದ ಮಗು ಬದುಕುಳಿದಿದ್ದು, ಮೃತ ಶರೀರಗಳ ಮುಂದೆ ಹಸಿವಿನಿಂದ ಕುಳಿತಿತ್ತು ಎನ್ನಲಾಗಿದೆ. 

  ಮೃತರನ್ನು ಭಾರತಿ (50), ಸಿಂಚನ (33), ಸಿಂಧೂರಾಣಿ (30), ಮಧುಸಾಗರ್​ (26) ಮತ್ತು ಒಂಭತ್ತು ತಿಂಗಳ ಮಗು ಎಂದು ಗುರುತಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮನೆಯ ಹಾಲ್​ನಲ್ಲಿ ತಾಯಿ ಭಾರತಿ, ರೂಮಿನಲ್ಲಿ ಮಗಳು ಸಿಂಧೂರಾಣಿ ನೇಣು ಹಾಕಿಕೊಂಡಿದ್ದಾರೆ. ಘಟನೆ ನಡೆದಾಗ ಗಂಡ ಶಂಕರ್​ ಮನೆಯಲ್ಲಿ ಇರಲಿಲ್ಲ. ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಎಂದು ಹೇಳಲಾಗಿದೆ. ನಿನ್ನೆ ಮನೆಗೆ ಬಂದು ನೋಡಿದಾಗ ಲಾಕ್​ ಆಗಿತ್ತು, ನಂತರ ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದು ವಾಪಸ್​ ಹೋಗಿದ್ದೆ. ಮತ್ತೆ ಇಂದು ಬಂದು ನೋಡಿದಾಗಲೂ ಯಾರೂ ಪ್ರತಿಕ್ರಿಯೆ ಕೊಡಲಿಲ್ಲ, ಇದರಿಂದ ಭಯಕ್ಕೀಡಾಗಿ ಬಾಗಿಲು ಒಡೆದಾಗ ಎಲ್ಲರೂ ಸಾವನ್ನಪ್ಪಿದ್ದರು ಎಂದು ಗಂಡ ಶಂಕರ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಎಲ್ಲಾ ಶರೀರವೂ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಸುಮಾರು ಐದು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಶಂಕರ್​ ಕೂಡಾ ಮನೆ ಬಿಟ್ಟು ಹೋಗಿ ಐದು ದಿನಗಳಾಗಿದೆ. ಮನೆಯ ಯಜಮಾನನ ಹೆಸರು ಹಲ್ಲಗೇರಿ ಶಂಕರ್​ ಎಂದು. ಈತನ ಬಗ್ಗೆ ಹೆಚ್ಚಿನ ಮಾಹಿತಿ ಸಧ್ಯಕ್ಕೆ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್​ ಪಾಟೀಲ್​ ಭೇಟಿ ನೀಡಿ, ತನಿಖೆಯ ಉಸ್ತುವಾರಿ ವಹಿಸಿದ್ದಾರೆ.

  ಮಗಳ ವಿಚಾರಕ್ಕೆ ಬೇಸರ:

  ಮಗಳು ಸಿಂಧೂರಾಣಿಗೆ ಮದುವೆಯಾಗಿದ್ದರೂ, ಗಂಡನ ಜೊತೆ ಗಲಾಟೆ ಮಾಡಿಕೊಂಡು ಮನೆಬಿಟ್ಟು ಬಂದಿದ್ದಳು ಎನ್ನಲಾಗಿದೆ. ಶಂಕರ್​ ಹಲವು ಬಾರಿ ಅಳಿಯನ ಮನೆಗೆ ಹೋಗುವಂತೆ ಹೇಳಿದರೂ, ಆಕೆ ಹೋಗದ ಹಿನ್ನೆಲೆ ಐದು ದಿನಗಳ ಹಿಂದೆ ಜಗಳವಾಗಿದೆ. ಜಗಳ ಮಾಡಿಕೊಂಡು ಶಂಕರ್​ ಮನೆಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಇದೀಗ ಪೊಲೀಸರು ಅಳಿಯನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅದೃಷ್ಟವಶಾತ್​ ಬದುಕುಳಿದ ಮೂರು ವರ್ಷದ ಮಗು, ಹಸಿವಿನಿಂದ ಬಳಲಿದೆ. ಆಸ್ಪತ್ರೆಗೆ ಮಗುವನ್ನು ಕರೆದೊಯ್ದು ತಪಾಸಣೆ ಮಾಡಲಾಗಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

  ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಕೊಂದು ಸಾವಿರಾರು ತುಂಡುಗಳಾಗಿ ಕತ್ತರಿಸಿದ ಗಂಡ: ಪೊಲೀಸರ ರೋಚಕ ತನಿಖೆ ಓದಲೇಬೇಕು

  ಮತ್ತೊಂದು ಪ್ರಕರಣದಲ್ಲಿ ಹೆಂಡತಿಯನ್ನೇ ಕೊಂದ ಗಂಡ:

  ಮೀರತ್​: ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಲಖನೌ ಮೂಲದ ಬ್ಯುಸಿನೆಸ್​ಮನ್​ ಒಬ್ಬರ ಮಗಳು ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಪ್ರೀತಿಸಿ ಮದುವೆಯಾದ ನಂತರ ಸರ್ಧಾನ ನಗರದಲ್ಲಿ ಗಂಡನ ಜೊತೆ ವಾಸವಿದ್ದರು. ಗಂಡನ ಮನೆಯಿಂದ ಮೂರು ವಾರಗಳ ಹಿಂದೆ ರೂಬಿ ಕಾಣೆಯಾಗಿದ್ದರು. ರೂಬಿಯ ಗಂಡ ದೀಪಕ್​ ನಿರಾಲ ವೃತ್ತಿಯಲ್ಲಿ ಕವಿಯಾಗಿದ್ದು, ಇಬ್ಬರೂ ಪ್ರೀತಿಸಿ ಮದುವೆಯಾದ ಕಾರಣ ಅವರ ಮೇಲೆ ಯಾರಿಗೂ ಸಂಶಯ ಇರಲಿಲ್ಲ. ನಾಲ್ಕು ವರ್ಷಗಳ ಹಿಂದೆ ರೂಬಿ ಮತ್ತು ದೀಪಕ್​ ನಿರಾಲ ಮದುವೆಯಾಗಿದ್ದರು. ಕಾಣೆಯಾಗಿ ಮೂರು ವಾರಗಳ ನಂತರ ಭೀಕರ ಸತ್ಯ ಹೊರಬಂದಿದ್ದು, ಹೆಂಡತಿಯನ್ನು ಕೊಲೆ ಮಾಡಿ ಸಾವಿರಾರು ತುಂಡುಗಳಾಗಿ ಕತ್ತರಿಸಿ ನಿರಾಲ ಹೂತುಹಾಕಿದ್ದರು ಎಂಬುದು ಬೆಳಕಿಗೆ ಬಂದಿದೆ.

  ಇದನ್ನೂ ಓದಿ: ಅಮ್ಮ - ಮಗಳು ಇಬ್ಬರ ಜೊತೆಗೂ ಲೈಂಗಿಕ ಸಂಬಂಧ: ತಾಯಿ ಜೊತೆ ಮಲಗಿದ್ದಾಗ ಮಗಳಿಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸ್​

  ಮೀರತ್​ ಪೊಲೀಸರ ಪ್ರಕಾರ ರೂಬಿಯನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಲಾಗಿತ್ತು. ಗಂಡ ಹೆಂಡತಿ ನಡುವೆ ದುಡ್ಡಿನ ವಿಚಾರಕ್ಕೆ ಗಲಾಟೆಯಾಗಿತ್ತು, ಈ ಕಾರಣಕ್ಕಾಗಿಯೇ ನಿರಾಲ ರೂಬಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆ ಮಾಡಿ ತುಂಡರಿಸಿದ ಮೃತ ಶರೀರವನ್ನು ಕ್ಯಾನಲ್​ ಒಳಗೆ ಬಿಸಾಕಿದ್ದ. ಪೊಲೀಸರು ಈಗಾಗಲೇ ಕೊಲೆಗೆ ಬಳಸಲಾದ ಚಾಕು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ದೇಹದ ಭಾಗಗಳನ್ನು ಹುಡುಕುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ನಿರಾಲ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
  Published by:Sharath Sharma Kalagaru
  First published: