Mysuru Expressway: ಜುಲೈನಲ್ಲಿ ಸಂಚಾರ ಮುಕ್ತವಾಗಲಿದೆ ಮೈಸೂರು-ಬೆಂಗಳೂರು ಮೊದಲ ಹಂತದ 10 ಪಥಗಳ ಹೆದ್ದಾರಿ

"ಬೆಂಗಳೂರು ಮತ್ತು ಮೈಸೂರು ನಡುವಿನ ಹೊಸ 10 ಪಥದ ಹೆದ್ದಾರಿಯನ್ನು ದಸರಾ 2022 ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ನಾನು ಹೇಳುತ್ತಿದ್ದೇನೆ, ಆದರೆ ನೀವು ನನ್ನನ್ನು ನಂಬುತ್ತಿಲ್ಲ" ಎಂದು ಸಂಸದರು ಯೋಜನೆಯ 'ಪ್ರಗತಿ ವರದಿ'ಯ ದೃಶ್ಯಗಳನ್ನು ಹಂಚಿಕೊಂಡರು.

ಬೆಂಗಳೂರು-ಮೈಸೂರು ರಸ್ತೆ

ಬೆಂಗಳೂರು-ಮೈಸೂರು ರಸ್ತೆ

  • Share this:
ಬೆಂಗಳೂರಿನಿಂದ ಮೈಸೂರುವರೆಗಿನ (Bengaluru To Mysore) ರಾಷ್ಟ್ರೀಯ ಹೆದ್ದಾರಿ (National Highway) 275 ರ ಪರಿಷ್ಕೃತ ವಿಸ್ತರಣೆಯು ಪ್ರಯಾಣದ ಸಮಯವನ್ನು 3 ಗಂಟೆಗಳಿಂದ ಕೇವಲ 75 ರಿಂದ 90 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದ್ದು, ಈ ಯೋಜನೆಯು ಅಕ್ಟೋಬರ್ (October) 2022 ರಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಇತ್ತೀಚೆಗೆ ಘೋಷಿಸಿದ್ದು ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ. ಈ ಹೊಸ 10 ಪಥದ, (New 10 path) 177 ಕಿಲೋಮೀಟರ್ ಉದ್ದದ ಹೆದ್ದಾರಿಯ ವಿಷಯದಲ್ಲಿ ಈಗ ಒಂದು ಹೊಸ ಸುದ್ದಿ ಕೇಳಲು ಸಿಕ್ಕಿದೆ ಎಂದು ಹೇಳಬಹುದು.

ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ ಮೊದಲ ಹಂತ

ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುವ ಬೃಹತ್ 10 ಪಥದ ಹೆದ್ದಾರಿಯು ಪೂರ್ಣಗೊಳ್ಳುವ ದಿನವನ್ನು ನೋಡಲು ಕರ್ನಾಟಕದ ನಿವಾಸಿಗಳು ತುಂಬಾನೇ ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು. ಹೊಸ ಸುದ್ದಿ ಏನು ಎಂದರೆ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಪ್ರಕಾರ, 117 ಕಿಲೋ ಮೀಟರ್ ಉದ್ದದ ಹೆದ್ದಾರಿಯ ಮೊದಲ 56 ಕಿಲೋ ಮೀಟರ್ ಎಂದರೆ ಬೆಂಗಳೂರಿನಿಂದ ನಿಡಘಟ್ಟದವರೆಗೆ ಜುಲೈ ವೇಳೆಗೆ ಪೂರ್ಣಗೊಳಿಸಬಹುದು ಎಂದು ಹೇಳಿದ್ದಾರೆ.

ಹೆಚ್ಚಿನ ಕಾಮಗಾರಿ ಪೂರ್ಣ

ಮೇ 3, ಮಂಗಳವಾರದಂದು ಸಂಸದರು ಈ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ್ದರು ಮತ್ತು ಹೆಚ್ಚಿನ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಹೇಳಿದರು. ರಸ್ತೆಯ ನಿರ್ಮಾಣದ ಪ್ರಗತಿಯನ್ನು ತೋರಿಸಲು ಸಾರ್ವಜನಿಕರಿಗಾಗಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

"ಬೆಂಗಳೂರು ಮತ್ತು ಮೈಸೂರು ನಡುವಿನ ಹೊಸ 10 ಪಥದ ಹೆದ್ದಾರಿಯನ್ನು ದಸರಾ 2022 ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ನಾನು ಹೇಳುತ್ತಿದ್ದೇನೆ, ಆದರೆ ನೀವು ನನ್ನನ್ನು ನಂಬುತ್ತಿಲ್ಲ" ಎಂದು ಸಂಸದರು ಯೋಜನೆಯ 'ಪ್ರಗತಿ ವರದಿ'ಯ ದೃಶ್ಯಗಳನ್ನು ಹಂಚಿಕೊಂಡರು.

ಇದನ್ನೂ ಓದಿ: Gadaga: ನಗರಸಭೆಯ ಸಾಮಾನ್ಯ ಸಭೆಗೆ ನುಗ್ಗಿ ಆಟೋ ಡ್ರೈವರ್​ಗಳ ಆಕ್ರೋಶ, ರಸ್ತೆ ದುರಸ್ತಿಗೆ ಪಟ್ಟು

ಸಂಚಾರ ದಟ್ಟಣೆ ತಪ್ಪಿಸಲು ಪ್ರತಿ ಟೋಲ್ ಪ್ಲಾಜಾದಲ್ಲಿ 11 ಪ್ರವೇಶ ದ್ವಾರಗಳು

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಬಳಿಯ 4.5 ಕಿಲೋಮೀಟರ್ ಉದ್ದದ ಕುಂಬಳಗೋಡು ಮೇಲ್ಸೇತುವೆಗೆ ಪ್ರತಾಪ್ ಸಿಂಹ ಮತ್ತು ಕೆಲವು ಎಂಜಿನಿಯರ್‌ಗಳು ಭೇಟಿ ನೀಡಿ, ಟೋಲ್ ಪಾಯಿಂಟ್ ಪೂರ್ಣಗೊಳ್ಳುವವರೆಗೆ ಸಂಪೂರ್ಣ ವಿಸ್ತರಣೆಯಾಗಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು ಮಾರ್ಗದುದ್ದಕ್ಕೂ ಪ್ರತಿ ಟೋಲ್ ಪ್ಲಾಜಾದಲ್ಲಿ 11 ಪ್ರವೇಶ ದ್ವಾರಗಳು ಇರಲಿವೆ ಮತ್ತು ಬೆಂಗಳೂರಿನಿಂದ ಬರುವ ಮತ್ತು ಹೋಗುವ ವಾಹನಗಳಿಗೆ ಟೋಲ್ ವಿವಿಧ ಸ್ಥಳಗಳಲ್ಲಿರುತ್ತದೆ ಎಂದು ಅವರು ಹೇಳಿದರು.

ಬಿಡದಿ ಬೈಪಾಸ್ ಬಳಿಯ ರೈಲ್ವೆ ಹಳಿಯ ಮೇಲೆ ಹೊಸ ಹೆದ್ದಾರಿ ಹಾದು ಹೋಗುತ್ತಿದ್ದಂತೆ, ಹಳಿಗಳ ಮೇಲೆ ಸುಗಮವಾಗಿ ಮತ್ತು ಅಡೆತಡೆಯಿಲ್ಲದೆ ಸಂಚಾರ ನಡೆಸಲು ಅನುಕೂಲವಾಗುವಂತೆ 650 ಟನ್ ತೂಕದ ವಿಶೇಷ ಗರ್ಡಲ್ ಅನ್ನು ಸ್ಥಾಪಿಸಲಾಗಿದೆ ಎಂದು ಸಹ ವಿಡಿಯೋದಲ್ಲಿ ತೋರಿಸಲಾಗಿದೆ.

ಹೊಸ ಮೆಗಾ ಹೆದ್ದಾರಿಯು ಈ ಎರಡು ನಗರಗಳ ಮಧ್ಯದ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದ್ದರೂ, ಪ್ರಸ್ತುತ ಅನೇಕ ಸ್ಥಳಗಳಲ್ಲಿ ನಿರ್ಮಾಣ ನಡೆಯುತ್ತಿರುವುದರಿಂದ, ತಿರುವುಗಳು, ಒರಟಾದ ರಸ್ತೆಗಳು ಮತ್ತು ಇತರ ಅಂಶಗಳಿಂದಾಗಿ ಪ್ರಯಾಣಿಕರು ಅನೇಕ ಸಂಚಾರ ದಟ್ಟಣೆಗಳನ್ನು ಎದುರಿಸುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ತಮ್ಮ ವಿಡಿಯೋದಲ್ಲಿ, ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಇದ್ದ ಸಂದೇಹಗಳಿಗೆ ತೆರೆ ಎಳೆದಿದ್ದಾರೆ ಎಂದು ಹೇಳಬಹುದು.

ಇದನ್ನು ಓದಿ: ಸಚಿವ ಅಶ್ವತ್ಥ್ ನಾರಾಯಣ ಪರ ಸಿಎಂ ಬ್ಯಾಟಿಂಗ್, ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ

56 ಕಿಲೋ ಮೀಟರ್ ಮಾರ್ಗ ಜುಲೈನಲ್ಲಿ ಪ್ರಾರಂಭ

"ಬೆಂಗಳೂರಿನಿಂದ ನಿಡಘಟ್ಟದವರೆಗೆ ಎಂದರೆ 56 ಕಿಲೋ ಮೀಟರ್ ಮಾರ್ಗವನ್ನು ಜುಲೈನಲ್ಲಿ ಪ್ರಾರಂಭಿಸಲಾಗುವುದು, ಆದರೆ ನಿರ್ಮಾಣ ಕಾರ್ಯವನ್ನು ನೋಡಿದಾಗ, ಇದು ಸಾಧ್ಯವಾಗುತ್ತದೆ ಎಂದು ನಿಮಗೆ ಅನ್ನಿಸದಿರಬಹುದು. ಸುಮಾರು 34 ಕಿಲೋ ಮೀಟರ್ ಕಾಮಗಾರಿಗಳು ಸಾರ್ವಜನಿಕರಿಗೆ ಗೋಚರಿಸದ ಕಾರಣ ನೀವು ಇದನ್ನು ಅನುಮಾನಿಸಬಹುದು.

ಆದರೆ ನಿಸ್ಸಂದೇಹವಾಗಿ, ಜುಲೈ ವೇಳೆಗೆ ಮೊದಲ ವಿಸ್ತರಣೆ ಪೂರ್ಣಗೊಳ್ಳಲಿದೆ ಎಂದು ನಾವು ಹೇಳಬಹುದು. ಮತ್ತು ನಿಡಘಟ್ಟದಿಂದ ಮೈಸೂರಿಗೆ ಈ ಕೆಳಗಿನ ಮಾರ್ಗವನ್ನು ದಸರಾ ವೇಳೆಗೆ ಪೂರ್ಣಗೊಳಿಸಲಾಗುವುದು ಮತ್ತು ಪ್ರಧಾನಿ ಮೋದಿ ಅವರು ಇದನ್ನು ಉದ್ಘಾಟಿಸಲಿದ್ದಾರೆ" ಎಂದು ಮೈಸೂರು - ಕೊಡಗು ಸಂಸದ ಪ್ರತಾಪ್‌ ಸಿಂಹ ಹೇಳಿದರು.
Published by:Pavana HS
First published: