fire Accident: ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್​​ನಲ್ಲಿ ಬೆಂಕಿ ಅನಾಹುತ; ಇಬ್ಬರ ಸಾವು

ಬೆಂಕಿ ಕಾಣಿಸಿಕೊಂಡಿರುವ ಅಪಾರ್ಟ್​​ಮೆಂಟ್​ನಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಅಗ್ನಿ ಕೆನ್ನಾಲಿಕೆ ತೀವ್ರವಾಗಿದ್ದು, ಅಗ್ನಿಶಾಮಕ ದಳದವರು ಮನೆಗೆ ಪ್ರವೇಶಿಸುವುದು ಕಷ್ಟಕರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ

ಅಪಾರ್ಟ್‌ಮೆಂಟ್​​ನಲ್ಲಿ ಬೆಂಕಿ

ಅಪಾರ್ಟ್‌ಮೆಂಟ್​​ನಲ್ಲಿ ಬೆಂಕಿ

 • Share this:
  ಬೆಂಗಳೂರು (ಸೆ. 21): ನಗರದ ಬನ್ನೇರುಘಟ್ಟ ರಸ್ತೆಯ ಬಳಿಯಿರುವ ದೇವರ ಚಿಕ್ಕನಹಳ್ಳಿಯ (devarachikkanahalli) ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿರುವ ಮನೆಯಲ್ಲಿ ಬೆಂಕಿ (fire in Apartment ) ಕಾಣಿಸಿಕೊಂಡಿದೆ. ಅಪಾರ್ಟ್ಮೆಂಟ್ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅನಾಹುತ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ಕಾಣಿಸಿಕೊಂಡಿರುವ ಅಪಾರ್ಟ್​​ಮೆಂಟ್​ನಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಬೆಂಕಿ ತೀವ್ರತೆ ಹೆಚ್ಚಿದ್ದು, ಬೆಂಕಿ ಆರಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

  'ಅಶ್ರಿತ್ ಆಸ್ಪೈರ್' ಅಪಾರ್ಟ್ಮೆಂಟ್​ನ ಎರಡನೇ ಮಹಡಿಯಲ್ಲಿ ಈ ಅನಾಹುತ ಸಂಭವಿಸಿದೆ. ಅಪಾರ್ಟ್‌ಮೆಂಟ್ ಗೆ ಬಳಸಿದ ಗ್ಯಾಸ್ ಪೈಪ್ ನಲ್ಲಿ ಸೋರಿಕೆಯಾಗಿರುವುದರಿಂದ ಬೆಂಕಿ ತಗುಲಿದೆ. ಈ ಅನಾಹುತದಲ್ಲಿ ಭಾಗ್ಯ ಲಕ್ಷ್ಮಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಅಪಾರ್ಟ್​ಮೆಂಟ್​ನ ಪ್ಲಾಟ್​ ಸಿಲುಕಿದ್ದ ಈ ಮಹಿಳೆಯ ರಕ್ಷಣೆಗೆ ಮುಂದಾದ ಮತ್ತೊರ್ವ ಮಹಿಳೆ ರೇಖಾ ಲಕ್ಷ್ಮೀ ಎಂಬುವವರು ಕೂಡ ಬೆಂಕಿ ಕೆನ್ನಾಲಿಕೆಗೆ ತುತ್ತಾಗಿದ್ದಾರೆ  ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಈ ಅಪಾರ್ಟ್‌ಮೆಂಟ್ ಸಮುಚ್ಚಯವಿದ್ದು, ಸ್ಥಳಕ್ಕೆ ಎರಡು
  ಪೊಲೀಸರೂ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2015ರಲ್ಲಿ ಎ ಆರ್​ ಕನ್ಸ್ಟ್ರಾಕ್ಷನ್​ ಎಂಬುವವರು ಈ ನಾಲ್ಕು ಅಂತಸ್ತಿನ ಅಪಾರ್ಟ್​ಮೆಂಟ್​ ನಿರ್ಮಾಣ ಮಾಡಿದ್ದರು, ನಿಶಾಂತ್​ ಈ ಅಪಾರ್ಟ್​ಮೆಂಟ್​ ಮಾಲೀಕ ಎಂದು ತಿಳಿದು ಬಂದಿದೆ. ಸಂಜೆ 4 .30ರ ಸುಮಾರಿಗೆ ಈ ಅನಾಹುತ ಸಂಭವಿಸಿದೆ.  ಬೆಂಕಿ ತೀವ್ರತೆಗೆ ಫ್ಲ್ಯಾಟ್‌ನಲ್ಲಿರುವ ಎಲ್ಲ ವಸ್ತುಗಳು ಸುಟ್ಟಿದ್ದು, ಮಹಿಳೆ ಶವ ಕೂಡ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

  ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ಮುಂದಾಗಿದ್ದಾರೆ. ಸ್ಥಳಕ್ಕೆ ಬೇಗೂರು ಪೊಲೀಸರು ಕೂಡ ಆಗಮಿಸಿದ್ದಾರೆ. ಘಟನೆ ಕುರಿತು ಮಾತನಾಡಿರುವ ಡಿಜಿಪಿ ಅಮರ್​ ಪಾಂಡೆ (ಅಗ್ನಿಶಾಮಕ), ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್ ನಿಂದ ಸ್ಪೋಟದಿಂದ ಈ ಅವಘಡ ನಡೆದಿದೆ. ಈಗಾಗಲೇ ತನಿಖೆಯಲ್ಲಿ ಮಹಿಳೆಯರು  ಮೃತಪಟ್ಟಿರುವುದು ಗೊತ್ತಾಗಿದೆ. ಸದ್ಯಕ್ಕೆ ಏರಿಯಾಲ್ ಲ್ಯಾಡರ್ ಫ್ಲಾಟ್ ಫಾಮ್ ವಾಹನ ಸ್ಥಳಕ್ಕೆ ಆಗಮಿಸಿದೆ. ಈಗಾಗಲೇ ಸ್ಥಳಕ್ಕೆ ಐದು ಅಗ್ನಿಶಾಮಕ ಸಿಬ್ಬಂದಿ ವಾಹನಗಳು ಬಂದಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಹೊಗೆ ದಟ್ಟಣೆ ಹೆಚ್ಚು ಇದ್ದ ಕಾರಣ ಸ್ವಲ್ಪ ತಡವಾಗಿದೆ ಎಂದಿದ್ದಾರೆ.
  Published by:Seema R
  First published: