Bengaluru: ಹಣದ ವಿಚಾರಕ್ಕೆ ಜಗಳ; ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಪ್ಪ

ಅಪ್ಪ ಮಗನ ನಡುವೆ ಗಲಾಟೆ ತಾರಕಕ್ಕೇರಿತ್ತು, ಸಾಯಿಸ್ತೀಯಾ ಸಾಯಿಸು ನೋಡೋಣ ಎಂದು ಅಪ್ಪನಿಗೆ ಸವಾಲ್​ ಹಾಕಿದ್ದ ಅರ್ಪಿತ್​.  ಲೆಕ್ಕ ಕೊಟ್ರು ಸಾಯಿಸ್ತೀಯಾ.. ಲೆಕ್ಕ ನೀಡದಿದ್ರೂ ಸಾಯಿಸ್ತೀಯ. ನಾನು ಲೆಕ್ಕ ಕೊಡಲ್ಲ ಎಂದಿದ್ದ ಅರ್ಪಿತ್, ಇದೇ ವೇಳೆ ಸಿಟ್ಟಾದ ಸುರೇಂದ್ರ ಮಗನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಇಟ್ಟಿದ್ದಾನೆ

ಸುರೇಂದ್ರ, ಅರ್ಪಿತ್​

ಸುರೇಂದ್ರ, ಅರ್ಪಿತ್​

  • Share this:
ಬೆಂಗಳೂರು (ಏ.7) : 12 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾನೆ ಎಂದು ಹಾಡಹಗಲೇ ಮಗನನ್ನು (Son) ಬೆಂಕಿ ಹಚ್ಚಿ ಅಪ್ಪನೇ ಕೊಂದಿರುವ ಅಮಾನುಷ ಘಟನೆ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಜಾದ್ ನಗರದಲ್ಲಿ  ನಡೆದಿದೆ. ಕಳೆದ ವಾರ ಈ ಘಟನೆ ನಡೆದಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಚಿಕಿತ್ಸೆ ಪಡೆಯುತ್ತಿದ್ದ ಮಗ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದಾರೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಗನ ಮೇಲೆ ತಂದೆ (Father)  ಪೆಟ್ರೋಲ್  (Petrol) ಸುರಿದು ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಷುಲಕ ಕಾರಣಕ್ಕೆ ಅಪ್ಪ ಸುರೇಂದ್ರ, ಮಗ ಅರ್ಪಿತ್​ ಮೇಲೆ ಪೆಟ್ರೋಲ್​ ಸುರಿದು  ಬೆಂಕಿ ಹಚ್ಚಿ ಕೊಲೆಗೈದಿದ್ದಾನೆ

ಮಗನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಇಟ್ಟ ಪಾಪಿ

ಬೆಂಗಳೂರಿನ ಚಾಮರಾಜಪೇಟೆಯ ಆಜಾದ್ ನಗರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗನಿಗೆ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಕಿ ಹಚ್ಚಿ ಕೊಂದ ಅಪ್ಪನನ್ನು ಸುರೇಂದ್ರ ಎಂದು ಗುರುತಿಸಲಾಗಿದ್ದು, ಮಗನನ್ನು ಅರ್ಪಿತ್ ಎಂದು ಗುರುತಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

12 ಸಾವಿರ ಕಳೆದುಕೊಂಡಿದ್ದಕ್ಕೆ ಇದೆಂತಾ ಶಿಕ್ಷೆ

ಆಜಾದ್​ ನಗರದ ನಿವಾಸಿ ಸುರೇಂದ್ರ ಮಗ ಕಳೆದ ವಾರ 12 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದ. ಇದರಿಂದ ಕೋಪಗೊಂಡ ಸುರೇಂದ್ರ ಮನೆಯೊಳಗೆ ತಮ್ಮ ಮಗನ ಮೇಲೆ ಪೆಟ್ರೋಲ್ ಸುರಿದಿದ್ದಾರೆ. ಪೆಟ್ರೋಲ್​ ಸುರಿದಿದ್ದರಿಂದ ಹೆದರಿ ಅರ್ಪಿತ್​ ಮನೆಯಿಂದ ಹೊರಗೆ ಬಂದಿದ್ದಾನೆ. ಈ ವೇಳೆ ಅರ್ಪಿತ್​ ತನ್ನ ತಂದೆಗೆ ಬೇಡಿಕೊಂಡಿದ್ದಾನೆ. ಆದರೂ ಕಟು ಮನಸ್ಸಿನ ಕ್ರೂರಿ ಸುರೇಂದ್ರ ತನ್ನ ಮಗನ ಮೇಲೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾನೆ ಮೊದಲನೇ ಬಾರಿ ಬೆಂಕಿ ಹೊತ್ತದ ಕಾರಣ, ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾರೆ. ಬಳಿಕ ಅರ್ಪಿತ್​ ದೇಹಕ್ಕೆ ಬೆಂಕಿ ಹೊತ್ತಿಕೊಂಡ ಬಳಿಕ ನಗರದ ಜನರೆಲ್ಲಾ ಬಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ.

ಇದನ್ನೂ ಓದಿ: Crime News: ಮಾವನ ಮಗಳ ಹೃದಯ ಕದ್ದವ, ಪಕ್ಕದ ಮನೆ ಚಿನ್ನವನ್ನೂ ಕದ್ದಿದ್ದ! ಅರೆಸ್ಟ್ ಆಗಿದ್ದು ಹೇಗೆ 'ಚೋರ' ಚಿತ್ತ ಚೋರ?

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅರ್ಪಿತ್​ ಸಾವು

ಅರ್ಪಿತ್​ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ದೇಹದ ಬಹುಪಾಲು ಭಾಗ ಸುಟ್ಟುಹೋಗಿತ್ತು. ಬಳಿಕ ಸ್ಥಳೀಯರು ಬೆಂಕಿ ನಂದಿಸಿ ಅರ್ಪಿತ್‌ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿಟ್ಟು ಅರ್ಪಿತ್​ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅರ್ಪಿತ್​ ಮೃತಪಟ್ಟಿದ್ದಾನೆ.

ಅಪ್ಪನ ಬ್ಯುಸಿನೆಸ್​ ಲಾಸ್​ ಮಾಡಿದ್ದ ಅರ್ಪಿತ್​

ವ್ಯವಹಾರದಲ್ಲಿ ಸಾಕಷ್ಟು ಏರುಪೇರು ಮಾಡಿದ್ದ, ಸುಮಾರು 1.5 ಕೋಟಿಗೆ ಲೆಕ್ಕ ನೀಡದ ಮಗ ಅರ್ಪಿತ್ ವಿರುದ್ಧ ಅಪ್ಪನಿಗೆ ಸಿಟ್ಟಿತ್ತು. ಈ ಬಗ್ಗೆ ಅಪ್ಪ ಮಗನ ಮಧ್ಯೆ ಕಳೆದ ಶುಕ್ರವಾರ ಮಧ್ಯಾಹ್ನ ಗಲಾಟೆ ನಡೆದಿತ್ತು. ಬಿಸಿನೆಸ್ ಮೆಟಿರಿಯಲ್ ಇಟ್ಟಿದ್ದ ಗೋಡೌನ್ ನಲ್ಲಿ ಶುರುವಾಗಿದ್ದ ಗಲಾಟೆ ತಾರಕಕ್ಕೆ ಏರಿತ್ತು. ಮಾತಿನ ಚಕಮಕಿ ವೇಳೆ ಸಾಯಿಸ್ತೀಯಾ ಸಾಯಿಸು ನೋಡೋಣ ಎಂದು ಅಪ್ಪನಿಗೆ ಸವಾಲ್​ ಹಾಕಿದ್ದ ಅರ್ಪಿತ್​.  ಲೆಕ್ಕ ಕೊಟ್ರು ಸಾಯಿಸ್ತೀಯಾ.. ಲೆಕ್ಕ ನೀಡದಿದ್ರೂ ಸಾಯಿಸ್ತೀಯ. ನಾನು ಲೆಕ್ಕ ಕೊಡಲ್ಲ ಎಂದಿದ್ದ ಅರ್ಪಿತ್, ಇದೇ ವೇಳೆ ಗೋಡೌನ್ ನಲ್ಲಿ ಇದ್ದ ಕೆಲಸಗಾರರ ಮುಂದೆಯೇ ತಾರಕ್ಕೇರಿತ್ತು ಅಪ್ಪ- ಮಗನ ಜಗಳ, ಇದೇ ವೇಳೆ ಗೋಡೌನ್ ನಲ್ಲಿ ಇದ್ದ ಥಿನ್ನರ್ ಎರಚಿ  ಬೆಂಕಿ ಇಟ್ಟಿದ್ದಾನೆ.  

ಇದನ್ನೂ ಓದಿ: Love Jihad: ಹಿಂದೂ ಯುವಕನಂತೆ ಸೋಗು - ಯುವತಿ ಲವ್ ಜಿಹಾದ್ ಖೆಡ್ಡಾಕ್ಕೆ? ಇಬ್ರಾಹಿಂ-ಸ್ನೇಹಾ ಲವ್​ಸ್ಟೋರಿ

ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ 

ಪರಿಚಯಸ್ಥರು, ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ರು, ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಅರ್ಪಿತ್,  ಅರ್ಪಿತ್ ಹೇಳಿಕೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಮೇಲೆ ದೂರು ಪ್ರಕರಣ ದಾಖಲಿಸಿಕೊಂಡು ತೀವ್ರ ವಿಚಾರಣೆ ನಡೆಸಿ‌ ಸುರೇಂದ್ರ ಅರೆಸ್ಟ್  ಮಾಡಿದ ಪೊಲೀಸರು. ಕೊಲೆ ಪ್ರಕರಣ ದಾಖಲಿಸಿಕೊಂಡ ಚಾಮರಾಜಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Published by:Pavana HS
First published: