Bengaluru Crime: ತಂದೆಯ ಕೊಲೆ ಕೇಸ್​​ಗೆ ಟ್ವಿಸ್ಟ್; 17ರ ಮಗಳ ಮೇಲೆಯೇ ನಡೆಸಿದ್ದನಂತೆ ಅನಾಚಾರ!

ಮೃತ ವ್ಯಕ್ತಿ 17 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂಬ ಅಂಶ ಬಯಲಾಗಿದೆ. ತಾಯಿಯ ಬಳಿ ತಂದೆಯ ಕಿರುಕುಳದ ಬಗ್ಗೆ ಹೇಳಿಯೂ ಪ್ರಯೋಜನ ಆಗಿರಲಿಲ್ಲ. ಹಾಗಾಗಿ ತಂದೆಯ ಕಿರುಕುಳದ ಬಗ್ಗೆ ಸ್ನೇಹಿತರ ಬಳಿ ಯುವತಿ ಹೇಳಿಕೊಂಡಿದ್ದಳು.

ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ

ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ

 • Share this:
  ಬೆಂಗಳೂರು: ರಾಜಧಾನಿಯಲ್ಲಿ ಮಧ್ಯರಾತ್ರಿ ಮನೆಯೊಂದರಲ್ಲಿ ಇಬ್ಬರು ಹೆಣ್ಣು ಮಕ್ಕಳು (Two Daughters) ಇರುವಾಗಲೇ ತಂದೆಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಯಲಹಂಕ ನ್ಯೂ ಟೌನ್ (Yelahanka New Town) ಪೊಲೀಸ್ ಠಾಣೆ ವ್ಯಾಪ್ತಿಯ ವೀರ್ ಸಾಗರ್ ರಸ್ತೆಯಲ್ಲಿ ಘಟನೆ ನಡೆಸಿದೆ. ಮಧ್ಯರಾತ್ರಿ ಮನೆಯಲ್ಲಿಯೇ 46 ವರ್ಷದ ವ್ಯಕ್ತಿ ಕೊಲೆಯಾಗಿದೆ(Murder). ಮೂಲತಃ ಬಿಹಾರದವರಾದ ಮೃತರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ತಡರಾತ್ರಿ 1:30 ರ ಸುಮಾರಿಗೆ ಮನೆಗೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ. ಘಟನೆ ನಡೆದ ವೇಳೆ ಮೃತ ವ್ಯಕ್ತಿಯ​ ಇಬ್ಬರು ಮಕ್ಕಳು ಮನೆಯಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ.

  ತನಿಖೆ ವೇಳೆ ಬಯಲಾಯ್ತು ಅಸಲಿ ಸತ್ಯ..!  

  ಕೊಲೆ ಪ್ರಕರಣದ ಬಗ್ಗೆ ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ. ಮೃತ ವ್ಯಕ್ತಿ 17 ವರ್ಷದ ಮಗಳ ಮೇಲೆ  ಲೈಂಗಿಕ ದೌರ್ಜನ್ಯವೆಸಗಿದ್ದ ಎಂಬ ಅಂಶ ಬಯಲಾಗಿದೆ. ಕಳೆದ ಒಂದು ವರ್ಷದಿಂದ 17 ವರ್ಷದ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದನಂತೆ. ತಂದೆಯ ಕಿರುಕುಳದ ಬಗ್ಗೆ ಮಗಳು ಅನೇಕ ಬಾರಿ ತಾಯಿ ಬಳಿ ಹೇಳಿಕೊಂಡಿದ್ಲು. ತಾಯಿಯ ಬಳಿ ತಂದೆಯ ಕಿರುಕುಳದ ಬಗ್ಗೆ ಹೇಳಿಯೂ ಪ್ರಯೋಜನ ಆಗಿರಲಿಲ್ಲ. ಹಾಗಾಗಿ ತಂದೆಯ ಕಿರುಕುಳದ ಬಗ್ಗೆ ಸ್ನೇಹಿತರ ಬಳಿ ಯುವತಿ ಹೇಳಿಕೊಂಡಿದ್ದಳು.

  ಸ್ನೇಹಿತರಿಂದಲೇ ಕೊಲೆಗೆ ಸಂಚು..!

  ಗೆಳತಿಯ ದುಸ್ಥಿತಿ ತಿಳಿದ ಸ್ನೇಹಿತರು ಕೊಲೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ತಂದೆ ಮನೆಯಲ್ಲಿ ಮಲಗಿರುವಾಗ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಯಲಹಂಕ ನ್ಯೂ ಟೌನ್ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

  ತಾಯಿ ಇಲ್ಲದಾಗ ತಂದೆ ಕೊಲೆ

  ಘಟನೆಯ ಬಗ್ಗೆ ಮೃತರು ವಾಸವಿದ್ದ ಮನೆಯ ಮಾಲೀಕರು ಮಾತನಾಡಿದರು. ಮಧ್ಯರಾತ್ರಿ ಹೆಣ್ಣು ಮಕ್ಕಳಿಬ್ಬರು ಕೆಳಗೆ ಇರುವ ನಮ್ಮ ಮನೆಯ ಬಾಗಿಲು ಬಡಿದರು. ತಂದೆಯನ್ನು ಯಾರೋ ಒಡೆದಿದ್ದಾರೆ ಎಂದು ಹೇಳಿದರು. ಕೂಡಲೇ ನಾನು, ನನ್ನ ಮಗ ಮೇಲೆ ಹೋಗಿ ನೋಡಿದೆವು. ಅಷ್ಟರಲ್ಲಿ ತಂದೆ​ ರಕ್ತದ ಮಡುವಲ್ಲಿ ಬಿದ್ದಿದ್ದರು. ಕಳೆದ ಒಂದು ವರ್ಷದಿಂದ ಗಂಡ-ಹೆಂಡತಿ, ಇಬ್ಬರು ಹೆಣ್ಣು ಮಕ್ಕಳ ಕುಟುಂಬ ನಮ್ಮ ಮನೆಯಲ್ಲಿ ವಾಸವಿದ್ದಾರೆ. ಶನಿವಾರ ಮೃತರ ಪತ್ನಿ ಊರಿಗೆ ಹೋಗಿದ್ದಾರೆ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು, ತಂದೆ ಇದ್ದರು. ಒಬ್ಬ ಮಗಳು ಪಿಯು ಓದುತ್ತಿದ್ದು, ಮತ್ತೊಬ್ಬ ಯುವತಿ 4ನೇ ತರಗತಿ ಓದುತ್ತಿದ್ದಾರೆ ಎಂದು ತಿಳಿಸಿದರು.

  ಇದನ್ನೂ ಓದಿ: Mangaluru: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

  ಇನ್ನು ಮಂಡ್ಯದಲ್ಲಿ ಪತ್ನಿಯನ್ನು ಕೊಲೆ ಮಾಡಿ ಅನುಮಾನ ಬಾರದರಿಲಿ ಎಂದು ವಿಷ ಸೇವಿಸಿ ಡ್ರಾಮಾ ಮಾಡಿದ್ದ ಗಂಡನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಹೊರ ಬಂದ ಪತಿಯನ್ನು ಪೊಲೀಸರು ಬಲೆ ಹಾಕಿದ್ದಾರೆ. ಸಂಧ್ಯಾ ಪತಿಯಿಂದಲೇ ಕೊಲೆಯಾದ ಮಹಿಳೆ. ಒಂದೂವರೆ ವರ್ಷದ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಕೆಲವೇ ದಿನಗಳಲ್ಲಿ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ವಾರದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರ ಬಂದ ಷಡಕ್ಷರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಿಚ್ಚಿಟ್ಟಿದ್ದಾನೆ. ಕಂಪ್ಯೂಟರ್ ಕ್ಲಾಸ್ ನಿಂದ ಹಿಂದಿರುಗಿ ಬರುತ್ತಿದ್ದ ಪತ್ನಿಯನ್ನು ನಾಲೆಯಲ್ಲಿ ಮುಳುಗಿಸಿ ಕೊಲೆಗೈದಿರೋದನ್ನ ಒಪ್ಪಿಕೊಂಡಿದ್ದಾನೆ.
  Published by:Kavya V
  First published: