ಹೆಂಡತಿಗೆ ಹೊರೆ ಆಗಬಾರದು.. ಮಾತು ಬರದ, ಕಿವಿ ಕೇಳದ ಮಗನನ್ನು ಕೊಲೆ ಮಾಡಿದ ತಂದೆ..!

Bengaluru Crime News: ಮಗುವಿಗೆ ಮಾತು ಬಾರದೆ, ಕಿವಿಯೂ ಸಹ ಕೇಳುತ್ತಿರಲಿಲ್ಲ. ಇದರಿಂದ ತಂದೆ ಸುರೇಶ್ ಮನನೊಂದಿದ್ದರು. ಇದೇ ವಿಷಯವಾಗಿ ಮನೆಯಲ್ಲಿ ಆಗಾಗ ಗಲಾಟೆ ಕೂಡಾ ಮಾಡುತ್ತಿದ್ದರು. ನಿನ್ನೆ ರಾತ್ರಿಯೂ ಕೂಡಾ ಪತ್ನಿಯೊಂದಿಗೆ ಗಲಾಟೆ ಮಾಡಿದ್ದರು.

ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಸುರೇಶ್

ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಸುರೇಶ್

  • Share this:
ಬೆಂಗಳೂರು: ರಾಜ್ಯ ರಾಜಧಾನಿಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಅನಾರೋಗ್ಯ ಸಮಸ್ಯೆ (Health Problems) ಎದುರುಸುತ್ತಿದ್ದ ಕುಟುಂಬ ಛಿದ್ರಗೊಂಡಿದೆ. ಸಂಪಂಗಿರಾಮನಗರದಲ್ಲಿ ತಂದೆಯೇ (Father) ತನ್ನ ಮಗನನ್ನು (Son) ಕೊಲೆ (Murder) ಮಾಡಿದ್ದಾನೆ. 10 ವರ್ಷದ ಉದಯ್ ಸಾಯಿ ಮೃತ ಬಾಲಕ. ಆರೋಪಿ ತಂದೆ ಸುರೇಶ್​ ನಿನ್ನೆ ರಾತ್ರಿ ಹೆಂಡತಿ ಪಕ್ಕ ಮಲಗಿದ್ದ ಮಗನನ್ನು ನೀರಿನ ಸಂಪಿಗೆ ಹಾಕಿದ್ದಾನೆ. ಹುಟ್ಟಿದಾಗಿನಿಂದ ಮಾತು ಬರದ, ಕಿವಿಯೂ ಕೇಳದ ಬಾಲಕ ಉದಯ್​​ ಸಾಯಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಬೆಳಗಿನ ಜಾವ ತಾಯಿ ಎದ್ದು ನೋಡಿದಾಗ ಮಗನ ಶವ ಪತ್ತೆಯಾಗಿದೆ. ಗಂಡ ಸುರೇಶ್​ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

ಮಗುವಿನ ಸ್ಥಿತಿಯಿಂದ ಜಿಗುಪ್ಸೆಗೊಂಡಿದ್ದ ತಂದೆ

ಮಗುವಿಗೆ ಮಾತು ಬಾರದೆ, ಕಿವಿಯೂ ಸಹ ಕೇಳುತ್ತಿರಲಿಲ್ಲ. ಇದರಿಂದ ತಂದೆ ಸುರೇಶ್ ಮನನೊಂದಿದ್ದರು. ಇದೇ ವಿಷಯವಾಗಿ ಮನೆಯಲ್ಲಿ ಆಗಾಗ ಗಲಾಟೆ ಕೂಡಾ ಮಾಡುತ್ತಿದ್ದರು. ನಿನ್ನೆ ರಾತ್ರಿಯೂ ಕೂಡಾ ಪತ್ನಿಯೊಂದಿಗೆ ಗಲಾಟೆ ಮಾಡಿದ್ದರು. ನಂತರ ಬೆಳಗಿನ ಜಾವ ಐದು ಗಂಟೆಗೆ ಪತ್ನಿ ಜೊತೆಗಿದ್ದ ಮಗುವನ್ನ ಎತ್ತಿಕೊಂಡು ಹೋಗಿ ಸಂಪಿಗೆ ಹಾಕಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬೆನ್ನು ಹತ್ತಿದ್ದರು. ಆದರೆ ಸಂಜೆ ವೇಳೆಗೆ ಮತ್ತೊಂದು ಸಾವಿನ ಸುದ್ದಿ ಹೊರ ಬಿದ್ದಿತ್ತು.

ಇದನ್ನೂ ಓದಿ: ಪತಿಯ ಈ ನಡವಳಿಕೆಯೇ ಮಹಿಳಾ ಟೆಕ್ಕಿಯ ಆತ್ಮಹತ್ಯೆಗೆ ಕಾರಣವಾಯ್ತಾ?

ಮಗನನ್ನು ಕೊಂದು ಆತ್ಮಹತ್ಯೆಗೆ ಶರಣು

ಸಂಜೆ ವೇಳೆಗೆ ಶೇಷಾದ್ರರಿಪುರಂ ಬಳಿ ಸುರೇಶ್ ಶವ ಪತ್ತೆಯಾಗಿತ್ತು. ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿ ರೈಲ್ವೆ ಹಳಿ ಪಕ್ಕದಲ್ಲಿ ಸುರೇಶ್​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪರಿಶೀಲಿಸಿದಾಗ ಮಗುವನ್ನು ಕೊಂದ ಬಳಿ ಇಲ್ಲಿ ಸುರೇಶ್ ಸಾವಿಗೆ ಶರಣಾಗಿರುವುದು ತಿಳಿದು ಬಂದಿತ್ತು. ಮೃತ ಸುರೇಶ್ ಗೆ ಸಹ ಆರೋಗ್ಯ ಸಮಸ್ಯೆ ಇತ್ತು. ಮಗು ಹಾಗೂ ತಾನೂ ಹೆಂಡತಿಗೆ ಭಾರವಾಗಬಾರದೆಂದು ನಿರ್ಧರಿಸಿ ಮಗುವನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಬಗ್ಗೆ ಹಲವು ಬಾರಿ ಹೆಂಡತಿ ಜೊತೆ ಚರ್ಚಿಸಿದ್ದ ಸುರೇಶ್​ ಚರ್ಚಿಸಿದ್ದರಂತೆ. ಈ ವೇಳೆ ಗಂಡನ ಜೊತೆ ಹೆಂಡತಿ ಜಗಳ ಮಾಡಿದ್ದರು. ಈಗ ಗಂಡನೂ ಇಲ್ಲದೆ, ಮಗುವೂ ಇಲ್ಲದೇ ಹೆಂಡತಿ ಕಣ್ಣೀರಿಡುತ್ತಿದ್ದಾರೆ.

 ಬೆಂಗಳೂರಲ್ಲಿ ಮತ್ತೊಂದು ಕೌಟುಂಬಿಕ ದುರಂತ

ಜಗಳವಾಡಿದ ಬಳಿಕ ಮನೆಗೆ ಕರೆದರೂ ಹೆಂಡತಿ ಬರದಿದ್ದಕ್ಕೆ ನೊಂದ ಪತಿರಾಯ ತಪ್ಪು ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾರೆ. ಬೆಂಗಳೂರಿನ ಇಟ್ಟಮಡುವು ಸಮೀಪದ ಮಾರುತಿ ನಗರದಲ್ಲಿ ನವೀನ್ ಕುಮಾರ್ (33) ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನವೀನ್ ಕುಮಾರ್ , 6 ವರ್ಷಗಳ ಹಿಂದೆ ಚೈತ್ರಾ ಎಂಬಾಕೆಯನ್ನ ಮದುವೆಯಾಗಿದ್ದರು. ಇತ್ತೀಚೆಗೆ ಮನೆಯಲ್ಲಿ ಜಗಳವಾಗಿ, ಹೆಂಡತಿ ಮನೆ ಬಿಟ್ಟು ಹೋಗಿದ್ದರು. ದಿನಗಳು ಉರುಳಿದ ಮೇಲೆ ಪತಿ ನವೀನ್​ ಕುಮಾರ್​ ಮನಸ್ಸು ಕರಗಿತ್ತು. ಹೆಂಡತಿ ಚೈತ್ರಾಗೆ ಕರೆ ಮಾಡಿ, ಆಗಿದ್ದಾಯ್ತು ಮನೆಗೆ ಬಾ ಎಂದು ಕರೆದಿದ್ದಾರೆ. ಮನೆಗೆ ಮರಳಿ ಬರುವಂತೆ ಕರೆ ಮಾಡಿ ಕೇಳಿಕೊಂಡಿದ್ದರು ನವೀನ್ ಕುಮಾರ್. ಆದರೆ ಗಂಡ-ಹೆಂಡತಿ ಮಧ್ಯೆ ಅದೇನಾಯ್ತೋ, ಚೈತ್ರಾ ಮನೆಗೆ ಮರಳಲು ಒಪ್ಪಿಲ್ಲ.

ಇದನ್ನೂ ಓದಿ: ಅಯ್ಯೋ ಪಾಪಿ.. ಮದುವೆಯಾಗಿ ಬಂದ ಎರಡೇ ತಿಂಗಳಿಗೆ ಮಗುವನ್ನು ಕ್ರೂರವಾಗಿ ಕೊಂದ ಮಲತಾಯಿ!

ಹೆಂಡತಿ ಬರಲ್ಲ ಅಂದಿದ್ದೇ ನವೀನ್​​ ಕುಮಾರ್​ ತೀವ್ರವಾಗಿ ನೊಂದಿದ್ದಾರೆ. ಕಹಿಘಳಿಗೆಯಲ್ಲಿ ಕೆಟ್ಟ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ. ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸ್ಥಳಕ್ಕೆ ಆಗಮಿಸಿದ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ನವೀನ್​ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಗಂಡ-ಹೆಂಡತಿ ಜಗಳಕ್ಕೆ ಸಂಸಾರವೇ ಹಾಳಾಗಿದೆ.
Published by:Kavya V
First published: