Bengaluru: ನಕಲಿ ತುಪ್ಪ ಗೋದಾಮುಗಳ ಮೇಲೆ KMF ದಾಳಿ

ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಕಲಿ ತುಪ್ಪ (Fake Ghee) ಮಾರಾಟ ಜಾಲವೊಂದನ್ನು ಕೆಎಂಎಫ್ (KMF Karnataka milk federation) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ (Mysuru) ನಕಲಿ ತುಪ್ಪ ಉತ್ಪಾದನಾ ಅಡ್ಡದ ಮೇಲೆ ದಾಳಿ ನಡೆಸಲಾಗಿತ್ತು.

ನಕಲಿ ತುಪ್ಪ

ನಕಲಿ ತುಪ್ಪ

  • Share this:
    ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಕಲಿ ತುಪ್ಪ (Fake Ghee) ಮಾರಾಟ ಜಾಲವೊಂದನ್ನು ಕೆಎಂಎಫ್ (KMF Karnataka milk federation) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ (Mysuru) ನಕಲಿ ತುಪ್ಪ ಉತ್ಪಾದನಾ ಅಡ್ಡದ ಮೇಲೆ ದಾಳಿ ನಡೆಸಲಾಗಿತ್ತು. ಮೈಸೂರಿನಲ್ಲಿ ಉತ್ಪಾದನೆಯಾಗುವ ನಕಲಿ ತುಪ್ಪ ಬೆಂಗಳೂರು ಸೇರಿದಂತೆ ಸುತ್ತಮುತ್ತ ಜಿಲ್ಲೆಗಳಲ್ಲಿ ಮಾರಾಟ(Fake Ghee Sale)ವಾಗುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಈ ಸಂಬಂಧ  ಕೆಎಂಎಫ್ ಹಲವು ಅಧಿಕಾರಗಳ ತಂಡ ರಚಿಸಿತ್ತು. ಇದೀಗ ಬೆಂಗಳೂರಿನಲ್ಲಿ ನಕಲಿ ಮಾರಾಟಗಾರರು ಸಿಕ್ಕಿ ಬಿದ್ದಿದ್ದಾರೆ. ಇದರ ಜೊತೆಗೆ ಅಧಿಕಾರಿಗಳು ವಿವಿಧಡೆ ಪರಿಶೀಲನೆ ನಡೆಸುತ್ತಿದ್ದಾರೆ.

    ಹೊಸಕೋಟೆಯ ದೇವನಗೊಂಡಿ, ಜಯನಗರ, ಹನುಮಂತ ನಗರ, ರಾಜಾಜಿ ನಗರ ಮತ್ತು ನೆಲಮಂಗಲ ಬಳಿಯ ಮಾಕಳಿಯಲ್ಲಿರು ವಿವಿಧ ಗೋದಾಮುಗಳ ಮೇಲೆ ಎಫ್​ಎಸ್​ಎಸ್​ಎಐ ಮತ್ತು ಸ್ಥಳೀಯ ಪೊಲೀಸರ ಜೊತೆಗೂಡಿ ಕೆಎಂಎಫ್ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಗೋದಾಮಿನಿಂದ ನಕಲಿ ತುಪ್ಪ ಎಲ್ಲಿಗೆ ಸರಬರಾಜು ಆಗುತ್ತೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ದಾಳಿ ವೇಳೆ ನಂದಿನಿ ತುಪ್ಪದ 1000 ಮಿಲಿ ಸ್ಯಾಚಿಯ 15 ಕೆಜಿ ತೂಕದ ಟಿನ್ ಗಳ ಪರಿಶೀಲನೆ ನಡೆಸಲಾಗಿದೆ. ಸದ್ಯ 1000 ಮಿಲಿ ಸ್ಯಾಚಿ ಮಾದರಿಯಲ್ಲಿ ಅಧಿಕಾರಿಗಳು ಎಫ್​ಎಸ್​ಎಸ್​ಎಐಗೆ ರವಾನಿಸಿದ್ದಾರೆ.

    ಸಗಟು ಮಾರಾಟಗಾರರ ವಿರುದ್ಧ ದೂರು

    ಪರಿಶೀಲನೆ ವೇಳೆ ನಕಲಿ ತುಪ್ಪ ಎಂದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ಅಪರ ನಿರ್ದೇಶಕ ಬಿ. ಪಿ. ಸುರೇಶ್, ಸಗಟು ಮಾರಾಟಗಾರರ ವಿರುದ್ಧ ದೂರು ದಾಖಲಿಸಿದ್ದರು.

    ಇದನ್ನೂ ಓದಿ:  Omicron: ರಾಜಧಾನಿಯಲ್ಲಿ ಸದ್ದಿಲ್ಲದೆ ಹಬ್ತಿದೆ ಓಮೈಕ್ರಾನ್; ಶೇ.90ರಷ್ಟು ಮಂದಿಗೆ ರೂಪಾಂತರಿ ಸೋಂಕು

    ದೂರಿನ ಅನ್ವಯ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಮೈಸೂರಿನಲ್ಲಿ ನಕಲಿ ಜಾಲ ಪತ್ತೆಯಾದ ಬೆನ್ನಲ್ಲೇ ತುಪ್ಪ ಸರಬರಾಜು ಮಾಡುತ್ತಿದ್ದ ಬೆಂಗಳೂರಿನ ಸಗಟು ಮಾರಾಟಗಾರ ಏಜೆನ್ಸಿಗಳಾದ ಶ್ರುತಿ ಮಾರ್ಕೆಟಿಂಗ್ ಕಾರ್ಪೊರೇಷನ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

    ಮೈಸೂರಿನ ತುಪ್ಪದ ಅಕ್ರಮ ಬಯಲಿಗೆ ಬಂದಿದ್ದೇಗೆ?

    ಮೈಸೂರಿನ ಹೊಸಹುಂಡಿ ಗ್ರಾಮದಲ್ಲಿ ನಕಲಿ ತುಪ್ಪದ ಗೋದಾಮು ಇರೋ ಮಾಹಿತಿ ಸ್ಥಳೀಯರಿಗೆ ಗೊತ್ತಾಗಿತ್ತು. ಸ್ಥಳೀಯರು ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರು ನಕಲಿ ಜಾಲ ಮಾರಾಟಗಾರರ ತಂಡದ ಮೇಲೆ ಡಿಸೆಂಬರ್ 16 ರಂದು ದಾಳಿ ನಡೆಸಿದ್ದರು.

    ತಲಾ 15 ಕೆಜಿ ತೂಕದ ಸುಮಾರು 1,000 ಟಿನ್​ಗಳು ದೊರಕಿವೆ. ರಾಶಿಗಟ್ಟಲೆ ವನಸ್ಪತಿ, ಪಾಮ್ ಆಯಿಲ್, ಕಲರಿಂಗ್ ಕೆಮಿಕಲ್, ನಂದಿನಿ ಬ್ರ್ಯಾಂಡ್ ತುಪ್ಪದ ನಕಲಿ ಕವರ್, ಪ್ಯಾಕಿಂಗ್ ಯೂನಿಟ್ ಇಲ್ಲಿ ಪತ್ತೆಯಾಗಿತ್ತು. ನಂತರ ಹಾಲು ಉತ್ಪನ್ನ ಮಾರಾಟಗಾರರ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

    ಮುಂದಿನ ವಾರದಿಂದಲೇ ಶಾಲೆ ಆರಂಭ 

    ರಾಜ್ಯದಲ್ಲಿ ಕೋವಿಡ್ (Covid) ಪ್ರಕರಣ  ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಪುನರ್ ಆರಂಭ ಮಾಡಲಾಗಿದದ  ಶಾಲೆಗಳನ್ನು ಬೆಂಗಳೂರಿನಲ್ಲಿ ಬಂದ್ ಮಾಡಲಾಗಿತ್ತು. ಅವುಗಳನ್ನು ಮುಂದಿನ ವಾರದಿಂದಲೇ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಖಚಿತಪಡಿಸಿದ್ದಾರೆ.

    ಇದನ್ನೂ ಓದಿ:  KSRTC: ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ರಾಜ್ಯದ 4 ಸಾರಿಗೆ ನಿಗಮಗಳ ವಿಲೀನಕ್ಕೆ ಒತ್ತಾಯ

    ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ಗ್ರಾಮ ಒನ್ (Gram one) ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಅಮಾತನಾಡಿದ ಅವರು,  ಕಳೆದ ವಾರ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ (Covid Technical suggestion Committee) ಸಭೆಯಲ್ಲೇ ಶಾಲೆ ಆರಂಭದ ಬಗ್ಗೆ ಚರ್ಚಿಸಲಾಗಿತ್ತು. ಇದೀಗ 29 ರಂದು ನಡೆಯುವ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
    Published by:Mahmadrafik K
    First published: