ಪೊಲೀಸ್​ ಸಿಬ್ಬಂದಿಗೆ ತರಾಟೆ: ಪರಿಸ್ಥಿತಿ ಅರ್ಥ ಮಾಡಿಸಿದೆ, ಇದನ್ನು ಹೆಚ್ಚು ಬೆಳೆಸುವುದು ಬೇಡ ಎಂದ ಮಾಜಿ ಸ್ಪೀಕರ್​​

ಚಾಮರಾಜನಗರ ಘಟನೆ ನಡೆದ ದಿನ ನಾನು ಹುಚ್ಚನ ತರಹ ಅಳುತ್ತಿದೆ. ಎಷ್ಟು ಸಮಾಧಾನ ಮಾಡಿಕೊಂಡರು ನೋವು ಕಡಿಮೆ ಆಗಲಿಲ್ಲ

ಮಾಜಿ ಸ್ಪೀಕರ್ ರಮೇಶ್ ಕುಮಾರ್

ಮಾಜಿ ಸ್ಪೀಕರ್ ರಮೇಶ್ ಕುಮಾರ್

 • Share this:
  ಬೆಂಗಳೂರು (ಆ. 29): ನಡು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ದಂಡ ವಿಧಿಸುತ್ತಿದ್ದ ಪೊಲೀಸರನ್ನು ಮಾಜಿ ಸ್ಪೀಕರ್ ರಮೇಶ್​ ಕುಮಾರ್ (Ex Speaker Ramehs Kumar)​​ ತರಾಟೆಗೆ ತೆಗೆದುಕೊಂಡ ಕ್ರಮದ ವಿರುದ್ಧ ಪೊಲೀಸ್​ ಸಿಬ್ಬಂದಿ ಪತ್ರದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ಕುರಿತು ಮಾತನಾಡಿರುವ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​, ಪೊಲೀಸ್​ ಪತ್ರದಲ್ಲಿ (Police letter to Ramesh kumar) ಹೇಳಿರುವುದು ಸರಿ ಇದೆ, ನಾನು ಪೊಲೀಸರನ್ನ ದೋಷಣೆ ಮಾಡಲ್ಲ. ಅವರ ಮೇಲಿನವರು ಅದನ್ನ ತಿಳಿದುಕೊಳ್ಳಬೇಕು. ಒಂದು ಜಿಲ್ಲೆಯಲ್ಲಿ 28 ಕಡೆ ಹಿಡಿದು ಚೆಕ್ ಮಾಡಿಸಿದರೆ, ಜನರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು. ನಾನು ನನಗೊಂದು ನ್ಯಾಯಾ ಜನಸಾಮಾನ್ಯರಿಗೆ ಒಂದು ನ್ಯಾಯಾ ಹೇಗೆ ಎಂದು ಪ್ರಶ್ನಿಸಿದೆ. ನಾನು ತಪ್ಪು ಮಾಡಿದರೆ ನನಗೂ ದಂಡ ಹಾಕಲಿ ಎಂದರು.

  ಕೆಳ ಹಂತದ ಪೊಲೀಸ್​ ಸಿಬ್ಬಂದಿ ವಿರುದ್ಧ ಅವರು ಮಾತನಾಡಿದ ಪದಗಳಿಗೆ ಆಕ್ರೋಶ ವ್ಯಕ್ತವಾದ ಹಿನ್ನಲೆ ಈ ಕುರಿತು ರಾಮಕೃಷ್ಣ ಹೆಗಡೆ 95 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ ಅವರು, ನಾನು ಬರುತ್ತಿರಬೇಕಾದರೆ ನನ್ನ ಕಾರು ನಿಲ್ಲಿಸಿ. ನಾನು ಎಂದು ಗೊತ್ತಾದ ತಕ್ಷಣ ಹೋಗಿ ಎಂದು ಹೇಳುತ್ತಾರೆ. ನನ್ನ ಮಾತ್ರ ಬಿಟ್ಟರು ಎಂದರೆ ನಾನೊಬ್ಬ ಜನಪ್ರತಿನಿಧಿಯಾಗಿ ತಪ್ಪಾಗುತ್ತದೆ. ನನ್ನ ಮತದಾರ ಅಲ್ಲಿ ಇದ್ದರೆ ಅವರು ನನ್ನ ಬಗ್ಗೆ ಏನು ತಿಳಿದುಕೊಳ್ಳಬೇಕು. ಹೀಗಾಗಿ ಅವರಿಗೆ ಅರ್ಥ ಮಾಡಿಸಿದೆ ಅಷ್ಟೇ. ಇದನ್ನ ಹೆಚ್ಚು ಬೆಳೆಸುವುದು ಬೇಡ. ಗೃಹ ಸಚಿವರಿಗೆ ಎಲ್ಲವೂ ಗೊತ್ತಾಗಿರುತ್ತದೆ ಎಂದರು

  ಹುಚ್ಚನಂತೆ ಅತ್ತಿದೆ
  ಇದೇ ವೇಳೆ ಚಾಮರಾಜನಗರ ದುರಂತ ಕುರಿತು ಮಾತನಾಡಿದ ಅವರು, ಅಂದು ಘಟನೆ ನಡೆದ ದಿನ ನಾನು ಹುಚ್ಚನ ತರಹ ಅಳುತ್ತಿದೆ. ಎಷ್ಟು ಸಮಾಧಾನ ಮಾಡಿಕೊಂಡರು ನೋವು ಕಡಿಮೆ ಆಗಲಿಲ್ಲ. 34 ಜನರು ಸಾವು ಅನ್ಯಾಯ ಅಲ್ವಾ, ಯಾರು ಅದಕ್ಕೆ ಹೊಣೆ...? ತನಿಖೆಗೆ ಆಗ್ರಹಿಸಿದ ಬಳಿಕ ಪರಿಹಾರ ಕೊಟ್ಟಿದ್ದಾರೆ. ಆದರೆ ಏನು ಪ್ರಯೋಜನ ಸಾವು ನೋವಿಗೆ ಯಾರು ಜವಾಬ್ದಾರಿ ಎಂದು ವಿಷಾದ ವ್ಯಕ್ತಪಡಿಸಿದರು.

  ಇದನ್ನು ಓದಿ: ರಾಮನಗರ, ರಾಜಾನುಕುಂಟೆ, ಮಾಗಡಿವರೆಗೆ ಮೆಟ್ರೋ ಗುರಿ, ಇಂದಿನಿಂದ ಬೆಂಗಳೂರು ಅಭಿವೃದ್ಧಿ ಯುಗ: ಸಿಎಂ ಬೊಮ್ಮಾಯಿ

  ಘಟನೆ ಕುರಿತು ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಪತ್ರ ಬರೆದೆ. ಈ ವಯಸ್ಸಿನಲ್ಲಿ ನಾನು, ನೀವು ಬದುಕಬೇಕು ಅಂತ ಆಸೆ ಇದೆ. ಆ ಜನರಿಗೆ ಬದುಕುವ ಆಸೆ ಇರಲಿಲ್ವಾ ಎಂದು ಕೇಳಿದೆ. ಈಗ ಎಲ್ಲರೂ ಆ ಘಟನೆ ಮರೆತು ಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.

  ಕುಟುಂಬ ರಾಜಕಾರಣದ ವಿರುದ್ಧ ಕಿಡಿ

  ನಿನ್ನೆ ಸಂಜೆ ಎ. ಕೆ ಸುಬ್ಬಾಯ್ಯ ನೆನಪಿನ ಕಾರ್ಯಕ್ರಮದಲ್ಲಿದ್ದೆ. ಇಂದು ಹೆಗಡೆ ಅವರ ಕಾರ್ಯಕ್ರಮದಲ್ಲಿ ಇದ್ದೇನೆ. ಅವರಿಬ್ಬರು ವಿರುದ್ಧ ದಿಕ್ಕಿನಲ್ಲಿ ಇದ್ದವರು. ನಾವು ಹರಿದಾಸರು ಇದ್ದಂಗೆ, ಕಥೆ ಹೇಳಬೇಕು. ಕಥೆ ಹೇಳುತ್ತಾ ಹೋಗುತ್ತಿದ್ದೇವೆ ಎಂದರು

  ಜಯ ಪ್ರಕಾಶ ನಾರಾಯಣ್ ಮೌಲ್ಯಗಳ ಕುರಿತು ಮಾತನಾಡಿದ ಅವರು, ಜಯಪ್ರಕಾಶ್ ಮದುವೆ ಆಗಿದ್ದರು. ನಮಗೆ ‌ಸಂತಾನ ಹುಟ್ಟಿದ್ದರೆ ರಾಜಕಾರಣಕ್ಕೆ ಬರುತ್ತಾರೆ. ಹಾಗಾಗಿ ಮಕ್ಕಳು ಬೇಡ ಅಂತ ಶಪಥ ಮಾಡಿದ್ದರು. ಅವರ ಧರ್ಮಪತ್ನಿ ಪ್ರತಿಭಾ ಕೂಡ ಈ ವಿಚಾರಕ್ಕೆ ಬದ್ದರಾಗಿದ್ದರು. ಅವರ ದಾರಿಯಲ್ಲಿ ‌ನಡೆದವರು ಹೆಗಡೆಯವರು. ಹೆಗಡೆಯವರಿಗೆ ಮಕ್ಕಳಿದ್ದಾವೆ ನಿಜ. ಆದರೆ ಯಾರನ್ನೂ ರಾಜಕೀಯದಲ್ಲಿ ಬೆಳಸಲಿಲ್ಲ. ಹಾಗಾಗಿ ರಾಮಕೃಷ್ಣ ಮೌಲ್ಯವನ್ನು ಈಗಲೂ ನೆನೆಯುತ್ತೇವೆ. ರಾಮಕೃಷ್ಣ ಹೆಗಡೆ ಅವರಿಗೆ ಮಕ್ಕಳನ್ನು ರಾಜಕೀಯಕ್ಕೆ ತಂದು ಜೀರ್ಣಿಸಿಕೊಳ್ಳುವ ಶಕ್ತಿ ಇರಲಿಲ್ಲ. ಜೀರ್ಣಿಸಿಕೊಳ್ಳುವ ಶಕ್ತಿ ಇದ್ದವರು, ಮಕ್ಕಳನ್ನು, ಮೊಮ್ಮಕ್ಕಳು ‌ರಾಜಕೀಯಕ್ಕೆ ಕರೆ ತರುತ್ತಾರೆ ಎಂದು ಕುಟುಂಬ ರಾಜಕಾರಣದ ಬಗ್ಗೆ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
  Published by:Seema R
  First published: