ಬೆಂಗಳೂರು(ಜೂ.29): ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಹೊಸ-ಹೊಸ ವಿಷಯಗಳು ಹೊರಗೆ ಬರ್ತಿವೆ. ಇಷ್ಟು ದಿನ ರಾಜಕೀಯ ದ್ವೇಷಕ್ಕೆ ಪೀಟರ್ ಕೊಲೆ ಮಾಡಿದ್ದ ಅಂದುಕೊಂಡಿದ್ದ ಪೊಲೀಸರಿಗೆ ಈ ಕೊಲೆಯ ಮಾಸ್ಟರ್ ಮೈಂಡ್ ಕದಿರೇಶ್ ಸಹೋದರಿ ಮಾಲಾ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಮಗಳ ರಾಜಕೀಯ ಭವಿಷ್ಯಕ್ಕಾಗಿ ರೇಖಾ ಮುಹೂರ್ತ ಇಟ್ಟಿದ್ದಾಗಿಯೂ ವಿಚಾರಣೆ ವೇಳೆಯಲ್ಲಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಆರೋಪಿ ಮಾಲಾ ಹೇಳಿಕೆಯಿಂದ ಕಂಗಾಲಾದ ಪೊಲೀಸರು..!
ಇತ್ತ ಪೀಟರ್ ಕೊಟ್ಟ ಸ್ಟೇಟ್ ಮೆಂಟ್ ಬಳಿಕ ಕಾಟನ್ ಪೇಟೆ ಪೊಲೀಸರು ಮಾಲಾಳನ್ನು ವಶಕ್ಕೆ ಪಡೆದ್ರು. ಮಾಲಾ ಜೊತೆಗೆ ಮಗ ಅರುಳ್ ನನ್ನು ತೀವ್ರ ವಿಚಾರಣೆ ಮಾಡಲು ಶುರು ಮಾಡಿದ್ರು. ಆದ್ರೆ ಪೊಲೀಸರ ತನಿಖೆ ವೇಳೆ ಮಾಲಾ ಎಳೆಎಳೆಯಾಗಿ ಬಿಚ್ಚಿಟ್ಟರು. ಮಾಲಾ ಹೇಳಿಕೆ ಕೇಳಿ ತನಿಖಾಧಿಕಾರಿಗಳೇ ದಂಗಾಗಿ ಹೋದರು.
ಕೊಲೆಗೂ ಮುನ್ನ ಮಾಲಾ ಸುಮಾರು 20 ಜನರನ್ನು ಇಂಟರ್ವ್ಯೂ ಮಾಡಿದ್ದು, ಅದ್ರಲ್ಲಿ ದಿ ಬೆಸ್ಟ್ ಕ್ರೈಂ ಅಂತ ಮಾಡಿ ಆಕ್ಟೀವ್ ಇದ್ದೋರನ್ನ ಮಾತ್ರ ಸೆಲೆಕ್ಟ್ ಮಾಡಿದ್ದಳು. 20 ಜನರನ್ನು ಇಂಟರ್ವ್ಯೂ ಮಾಡಿ ಸೆಲೆಕ್ಟ್ ಮಾಡಿದ್ದು ಬರೀ 10 ಜನರನ್ನು. ಕೊಲೆಗೂ ಮುನ್ನ ಅಂದ್ರೆ ಒಂದು ತಿಂಗಳ ಹಿಂದೆಯಿಂದಲೂ ಇಂಟರ್ವ್ಯೂ ಮಾಡಿದ್ದ ಪೀಟರ್ ಹಾಗೂ ಮಾಲ ಇಬ್ಬರು ಒನ್ ಟೂ ಒನ್ ಇಂಟರ್ವ್ಯೂ ಮಾಡಿ ಸೆಲೆಕ್ಟ್ ಮಾಡಿದ್ದರು.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಕೇಸ್ನಿಂದ ಮುಕ್ತರಾದರೆ ಮತ್ತೆ ಮಂತ್ರಿಯಾಗ್ತಾರೆ; ಸಚಿವ ಮಾಧುಸ್ವಾಮಿ
ಕ್ರೈಂ ರೇಟ್ ಆಧರಿಸಿ ಸೆಲೆಕ್ಟ್ ಮಾಡಿದ್ದ ಮಾಲಾ..!
ಇನ್ನು ಮಾಲಾ ರೌಡಿಗಳನ್ನು ಇಂಟರ್ವ್ಯೂ ಮಾಡಿದ್ದು ಒಂದು ರೀತಿ ಆಶ್ಚರ್ಯ ಅನಿಸುತ್ತೆ. ಯಾಕಂದ್ರೆ 20 ಜನರನ್ನು ಆಯ್ಕೆ ಮಾಡುವಾಗ ಅವರ ಕ್ರೈಂ ರೇಟ್ ಹೇಗಿದೆ, ಅಟ್ಯಾಕ್ ಹೇಗೆ ಮಾಡ್ತಾರೆ ಅಂತ ನೋಡಿಕೊಂಡು ಆಯ್ಕೆ ಮಾಡಿದ್ರು. ಅದ್ರಂತೆ ಪೀಟರ್ ಹಾಗೂ ಮಾಲಾ ಮೊದಲು ಆಯ್ಕೆ ಮಾಡಿದ್ದು ಚಾಕುವಿನಿಂದ ರೇಖಾ ಹೊಟ್ಟೆ ಭಾಗಕ್ಕೆ ಚುಚ್ಚಿದ್ದ ಸೂರ್ಯನನ್ನು. ನಂತ್ರ ಪುರುಷೋತ್ತಮ್, ಸ್ಟೀಫನ್ ಸೇರಿ ಸುಮಾರು 10 ಜನರನ್ನು ಮೊದಲ ಹಂತದಲ್ಲಿ ಸೆಲೆಕ್ಟ್ ಮಾಡಿದ ಬಳಿಕ ಪ್ಲ್ಯಾನ್ ಹಾಕಿದ್ದಳು.
ನೀವು ಸಿಕ್ಕಿದ್ರೂ ನನ್ನ ಹೆಸರು ಹೇಳಬಾರದು..!
ಹೇಗೆ ಎಲ್ಲಿ ಕೊಲೆ ಮಾಡಬೇಕು ಅನ್ನೋ ಪ್ಲ್ಯಾನ್ ರಚನೆಯಾಗಿದ್ದೇ 10 ಜನರಿಗೆ ತಲೆಗೆ 5 ಲಕ್ಷದಂತೆ 50 ಲಕ್ಷಕ್ಕೆ ಸುಪಾರಿ ನೀಡೋದಾಗಿ ಹೇಳಿದಳು. ಒಂದ್ ವೇಳೆ ಕೊಲೆಯ ಬಳಿಕ ನೀವು ಸಿಕ್ಕಿದ್ರೂ ನನ್ನ ಹೆಸರು ಹೊರಗೆ ಬರಬಾರದು ಅಂತ ಇಂಟರ್ವ್ಯೂ ಟೈಂನಲ್ಲಿ ಹೇಳಿದ್ದಳು. ನೀವ್ ಸಿಕ್ಕಿದ್ರೂ ಭಯ ಬೇಡ ನಿಮಗೆ ಬೇಲ್ ಕೊಡಿಸ್ತೀನಿ, ನಿಮ್ಮ ಫ್ಯಾಮಿಲಿಗೆ ಹಣ ಕೊಡ್ತೀನಿ ಅಂತಾನೂ ಅಂದಿದ್ದಳು. ಅದರಂತೆ ಆರೋಪಿಗಳು ಕೊಲೆ ಮಾಡಿದ್ದರು.
ಇದನ್ನೂ ಓದಿ:SSLC Exam: ಶಿಕ್ಷಣ ಸಚಿವರ ಬೆಂಬಲಕ್ಕೆ ನಿಂತ ಸಿಎಂ ಯಡಿಯೂರಪ್ಪ; ಬೇರೆ ಕಡೆ ಇದ್ದೆ ಎಂದು ಸುಧಾಕರ್ ಯೂಟರ್ನ್
ಕೊಲೆ ಆದ ಬಳಿಕ ಪೊಲೀಸರನ್ನು ಡೈವರ್ಟ್ ಮಾಡೋ ಪ್ಲ್ಯಾನ್ ಸಹ ಮಾಡಿದ್ದ ಮಾಲಾ ಮಾಡಿದ್ದಳು. ಆಕೆಯ ಪ್ಲ್ಯಾನ್ನಂತೆ ಮೊದಲ ದಿನ ಪೊಲೀಸರನ್ನು ಡೈವರ್ಟ್ ಮಾಡಲು ಯತ್ನ ಮಾಡಿದಳು. ಕದಿರೇಶ್ ಮೇಲಿನ ದ್ವೇಷಕ್ಕೆ ಕೊಲೆ ಮಾಡಿದ್ದಾರೆ ಅಂದಿದ್ದ ಮಾಲಾ, ಪೊಲೀಸರನ್ನು ಬೇರೆಡೆ ಡೈವರ್ಟ್ ಮಾಡಿದ್ರೆ ನಾನು ಸೇಫ್ ಅಂದುಕೊಂಡಿದ್ದಳು. ಅದ್ರಂತೆ ಮೊಸಳೆ ಕಣ್ಣೀರು ಹಾಕುತ್ತಾ ಪೊಲೀಸರನ್ನ ಬೇರೆಡೆಗೆ ಸೆಳೆಯುವ ಯತ್ನ ಸಹ ಮಾಡಿದ್ದಳು. ಆಕೆಯ ನಡವಳಿಕೆ ಕಂಡು ಸ್ವಲ್ಪವೂ ಪೊಲೀಸರಿಗೆ ಅನುಮಾನ ಸಹ ಬಂದಿರಲಿಲ್ಲ.ಆದ್ರೆ ಕೊನೆಗೆ ಪೀಟರ್ ಪೊಲೀಸರಿಗೆ ಸಿಕ್ಕಿ ಬಾಯಿಬಿಡೋವರೆಗೂ ಅನುಮಾನ ಬರದ ಹಾಗೆಯೇ ಇದ್ದಳು ಮಾಸ್ಟರ್ ಮೈಂಡ್ ಮಾಲಾ.
ಮಗಳ ರಾಜಕೀಯ ಭವಿಷ್ಯಕ್ಕಾಗಿ ಜೈಲು ಸೇರಿದ ತಾಯಿ..!
ಪೊಲೀಸರ ವಿಚಾರಣೆ ವೇಳೆಯಲ್ಲಿ ರೇಖಾ ಇರೋವರೆಗೂ ನನ್ನ ಮಕ್ಕಳು ಕಾರ್ಪೊರೇಟರ್ ಆಗಲ್ಲ. ಅದಕ್ಕಾಗಿ ಆಕೆಯನ್ನು ಕೊಲೆ ಮಾಡಿದ್ರೆ ನೆಕ್ಟ್ಸ್ ಇರೋದು ರೇಸ್ ನಲ್ಲಿ ನನ್ನ ಮಕ್ಕಳೇ ಅಂದುಕೊಂಡಿದ್ದಳು. ಅದ್ರಂತೆ ತನ್ನ ಮಗಳನ್ನು ಈ ಬಾರಿ ಕಾರ್ಪೊರೇಟರ್ ಎಲೆಕ್ಷನ್ ಗೆ ನಿಲ್ಲಿಸೋ ಪ್ಲ್ಯಾನ್ ಮಾಡಿಕೊಂಡಿದ್ದಳು. ಅದ್ರಂತೆ ರೇಖಾ ಕದಿರೇಶ್ ನ ಕೊಲೆಗೆ ಸ್ಕೆಚ್ ಹಾಕಿದ್ದು, ಕೊಲೆ ಸಹ ಮಾಡಿದ್ದಾಳೆ. ಇನ್ನು ಮಾಲಾ ಜೊತಗೆ ತನ್ನ ಮಗ ಅರುಳ್ ನ ಸಹ ರೇಖಾ ಕೊಲೆಯಲ್ಲಿ ಜೊತೆಯಾಗಿಸಿಕೊಂಡಿದ್ದು ಈಗ ಪೊಲೀಸರು ಮಾಲಾ, ಅರುಳ್ , ಪೀಟರ್, ಸ್ಟಿಫನ್ , ಪುರುಷೋತ್ತಮ್, ಸೂರ್ಯ ಸೇರಿ ಇದುವರೆಗೂ 7 ಜನರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದು ಮತ್ತಷ್ಟು ವಿಚಾರಣೆ ಮಾಡ್ತಾ ಇದ್ದಾರೆ. ಇನ್ನು ಈ ಏಳು ದಿನಗಳಲ್ಲಿ ಏನೆಲ್ಲಾ ಸತ್ಯಾಂಶಗಳು, ಸ್ಪೋಟಕ ವಿಚಾರಗಳು ಹೊರಗೆ ಬರುತ್ತವೆ ಎಂಬುದನ್ನು ಕಾದು ನೋಡಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ