15 ದಿನಗಳ ಕಾಲ ಶಾಲಾ-ಕಾಲೇಜುಗಳನ್ನು ಬಂದ್ ಮಾಡೋದೇ ಒಳಿತು: HD Kumaraswamy ಸಲಹೆ

ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಕೋವಿಡ್ ಅನಾಹುತಗಳ ಗ್ರಾಫ್  ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗಿದೆ. ಕರ್ಫ್ಯೂ ವಿಚಾರವಾಗಿ ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲು ಗಮನಿಸುತ್ತಿದ್ದೇನೆ.

ಎಚ್​.ಡಿ.ಕುಮಾರಸ್ವಾಮಿ

ಎಚ್​.ಡಿ.ಕುಮಾರಸ್ವಾಮಿ

  • Share this:
ಬೆಂಗಳೂರು: ಕೊರೊನಾ 3ನೇ ಅಲೆ (Corona 3rd Wave) ದಿನೇ ದಿನೇ ರಾಜ್ಯದಲ್ಲಿ ತೀವ್ರಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆ ಸಂಬಂಧ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ. ಇನ್ನೊಂದು ವಾರದಲ್ಲಿ 3ನೇ ಅಲೆ ತೀವ್ರಗೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ. ಮುಂದಿನ 15 ದಿನಗಳ ಕಾಲ ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವುದೇ ಒಳಿತು ಎಂದು ಎಚ್​ಡಿಕೆ ಸಲಹೆ ನೀಡಿದ್ದಾರೆ. ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಕೋವಿಡ್ ಅನಾಹುತಗಳ ಗ್ರಾಫ್  ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗಿದೆ. ಕರ್ಫ್ಯೂ ವಿಚಾರವಾಗಿ ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲು ಗಮನಿಸುತ್ತಿದ್ದೇನೆ. ನೈಟ್ ಕರ್ಫ್ಯೂ ಜಾರಿಗೆ ತಂದಿರೋದು ಸರಿಯಿಲ್ಲ ಅಂತಿದ್ದಾರೆ ಎಂದು ಅಸಮಾಧನ ವ್ಯಕ್ತಪಡಿಸಿದರು.

ಜನರಿಗೂ ಜವಾಬ್ದಾರಿ ಇರಬೇಕು

ಒಂದಿಷ್ಟು ಜನ ವ್ಯಾಪಾರಿ ಸಂಘಟನೆಗಳು ಕೂಡ ನೈಟ್​​ ಕರ್ಫ್ಯೂಗೆ ವಿರೋಧ ವ್ಯಕ್ತ ಮಾಡಿವೆ. ಧಾರ್ಮಿಕ ಕ್ಷೇತ್ರದಲ್ಲಿ ಇನ್ನೊಂದೆರಡು ವಾರ ನಡೆಯಲಿವೆ. ಬಾದಾಮಿಯಲ್ಲಿ 40-40 ಸಾವಿರ ಭಕ್ತರು ಹೋಗಿದ್ದಾರೆ. ನಾಡಿನ ಜನತೆಗೆ ವಿಶೇಷವಾಗಿ ಮನವಿ ಮಾಡ್ತೀನಿ. ಸರ್ಕಾರದ ನೀತಿ ನಿಯಮಗಳಿಂದ ಇದನ್ನು ಸರಿ ಪಡಿಸಲು ಸಾಧ್ಯವಿಲ್ಲ. ನಮ್ಮ ಜವಾಬ್ದಾರಿ ಇಲ್ಲಿ ಮುಖ್ಯವಾಗಿದೆ. ಇನ್ನೊಂದು ವರ್ಷಗಳಲ್ಲಿ ಚುನಾವಣಾ ಸಮಯ ಬರಲಿದೆ. ಆಗ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ಜನರು ಪ್ರಶ್ನೆ ಮಾಡ್ತಾರೆ. ಈಗಾಗಲೇ ಈ ರೀತಿ ಘಟನೆಗಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಇದನ್ನೂ ಓದಿ: ಮಾಸ್ಕ್ ಕಡ್ಡಾಯವಲ್ಲ ಎಂದ ಸಚಿವ Umesh Katti.. ಮತ್ಯಾಕೆ ಜನಸಾಮಾನ್ಯರಿಗೆ ದಂಡ ಹಾಕುತ್ತಿದ್ದೀರಿ..?

ದಿನಗೂಲಿ ಕೆಲಸಗಾರರಿಗೆ ತೊಂದರೆ

ದೇವರ ದಯೆಯಿಂದ ಎರಡನೇ ಅಲೆಯಂತೆ ಆಗಿಲ್ಲ. ದೊಡ್ಡ ಮಟ್ಟದ ಸಮಸ್ಯೆ, ಗಂಭೀರ ಸ್ಥಿತಿ ಇಲ್ಲ. ಇದಕ್ಕೆ ದೇವರಿಗೆ ನಾವು ಧನ್ಯವಾದ ಸಲ್ಲಿಸಬೇಕು ಎಂದರು. ನೈಟ್ ಕರ್ಫ್ಯೂ ನಿಂದ ಇದನ್ನು ತಡೆಯಬಹುದು ಎಂದು ತಜ್ಞರು ವರದಿ ನೀಡಿದ್ದಾರೋ ಗೊತ್ತಿಲ್ಲ. ಆದರೆ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ನಿಂದ ದಿನ ಗೂಲಿಯವರಿಗೆ ತೊಂದರೆ ಆಗುತ್ತಿದೆ. ಏನಾದರೂ ಬದಲಿ ವ್ಯವಸ್ಥೆ ಮಾಡಬೇಕಲ್ಲಾ ಸರ್ಕಾರ..?

ವಿಶೇಷ ಪ್ಯಾಕೇಜ್ ಘೋಷಿಸಿ

ವಿಜಯಪುರ ಸೇರಿದಂತೆ ಅನೇಕ ಕಡೆ ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಆಗಿಲ್ಲ. ವೀಕೆಂಡ್ ಅಂಡ್ ನೈಟ್ ಕರ್ಫ್ಯೂ ನಿಂದ ನಿತ್ಯ ದುಡಿದು ತಿನ್ನುವವರಿಗೆ ಸಮಸ್ಯೆ ಆಗುತ್ತಿದೆ. ಅವರ ಬದುಕು ಕಟ್ಟಿಕೊಡಲು ಏನಾದರೂ ಸಹಾಯ ಮಾಡಬೇಕು. ವಿಶೇಷ ಪ್ಯಾಕೇಜ್ ಏನಾದ್ರೂ ಘೋಷಣೆ ಮಾಡಿ ಎಂದು ಸರ್ಕಾರವನ್ನು ಎಚ್​ಡಿಕೆ ಆಗ್ರಹಿಸಿದರು. ರೈತರು ಬೆಳೆದ ಬೆಳೆ ಮಾರಾಟ ಮಾಡುವಾಗ ಅವರಿಗೆ ಸೂಚನೆ ನೀಡಿ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಮಾರ್ಗಸೂಚಿ ಪಾಲಿಸಿ ಮಾರಾಟಕ್ಕೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಸರ್ಕಾರ ಪಾಪರ್ ಆಗಿದ್ರೆ, ನಾನೇ ಸಂಬಳ ನೀಡ್ತೀನಿ: ಸ್ನಾತಕೋತ್ತರ ಪದವಿಗಾಗಿ HD Revanna ಏಕಾಂಗಿ ಪ್ರತಿಭಟನೆ

ಇಂದೂ ಸಿಎಂ ಕೋವಿಡ್​ ಸಭೆ

ಇನ್ನು ಇಂದು ಸಿಎಂ ಜೊತೆ ಸಭೆ ಬಳಿ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಸಿಎಂ ಸಲಹೆ ಮಾರ್ಗದರ್ಶನ ಮಾಡಿದ್ದಾರೆ. ಐಸಿಎಂ ಆರ್ ರೀತಿ ಟೆಸ್ಟಿಂಗ್ ಮಾಡಲು ಸೂಚನೆ ನೀಡಿದ್ದಾರೆ. ಹಿರಿಯ ನಾಗರಿಕರ ಆರೋಗ್ಯದ ಕಡೆ ಗಮನ ಕೊಡಿ. ಫೀವರ್ ಕ್ಲಿನಿಕ್ ಮಾಡಲಾಗಿದೆ. ಟೆಲಿ ಕಾಲರ್ ವ್ಯವಸ್ಥೆ ಮಾಡಲಾಗಿದೆ. ಪಾಸಿಟಿವಿಟಿ ಬಗ್ಗೆ ಚಿಂತೆ ಮಾಡಬೇಡಿ. ಅವರಿಗೆ ಆರೋಗ್ಯ ಚಿಕಿತ್ಸೆ ನೀಡಲು ಮುಂದಾಗಿ ಎಂದು ಸೂಚನೆ ನೀಡಿದ್ದಾರೆ.

ಹೋಂ ಐಸೋಲೇಷನ್ ಇರುವವರಿಗೆ ಮೆಡಿಕಲ್‌ ಕಿಟ್ ನೀಡಲಾಗುವುದು. ವೈದ್ಯರ ನಡಿಗೆ ಹಳ್ಳಿ ಕಡೆ ಸಿಎಂ ಸಲಹೆ ನೀಡಿದ್ದಾರೆ. ಕೇರ್ ಸೆಂಟರ್ ಸ್ಥಾಪನೆ, ನಿರ್ವಹಣೆ ಮಾಡಲು ಹಾಗೂ ಕೊರೊನಾ ಹೆಚ್ಚಾದ್ರೆ ಒಂದೆರಡು ವಾರದಲ್ಲಿ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ.
Published by:Kavya V
First published: