ಇನ್ಮುಂದೆ ಪದವಿ ಪ್ರವೇಶಾತಿಗೆ ಪರೀಕ್ಷೆ ಆಂದ್ರೆ ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ವ್ಯವಸ್ಥೆ ಜಾರಿಯಾಗುತ್ತಿದೆ ಎಂದು ವಿಜಯವಾಣಿ ವರದಿಯಾಗಿದೆ. ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳ ಅಬ್ಬರದಲ್ಲಿ ಪಿಯುಸಿ ಕೇವಲ ವಿದ್ಯಾರ್ಹತೆಯಾಗಿ ಬದಲಾಗುವ ಸುಳಿವುಗಳು ಸಿಗ್ತಿವೆ.
ಶಿಕ್ಷಣ ಅಂಗಳದಲ್ಲಿ ಕಳೆದ ಕೆಲವು ವರ್ಷಗಳಿಂದ ಮಹತ್ತರ ಬದಲಾವಣೆಗಳು ಆಗುತ್ತಿದೆ. ಈ ಬದಲಾವಣೆಗಳ ಬಗ್ಗೆ ಇಂದಿಗೂ ಪರ –ವಿರೋಧದ ಚರ್ಚೆಗಳು ನಡೆಯುತ್ತಿವೆ. ವೈದ್ಯಕೀಯ ಶಿಕ್ಷಣ(Medical Education)ಕ್ಕಾಗಿ ಉಕ್ರೇನ್ (Ukraine) ಗೆ ತೆರಳಿ ಅಲ್ಲಿ ಸಿಲುಕಿದ್ದ ವಿದ್ಯಾರ್ಥಿ(Students)ಗಳು ಭಾರತ(India)ಕ್ಕೆ ಹಿಂದಿರುಗಿದ ಮೇಲೆ ನೀಟ್ (NEET) ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಉನ್ನತ ಶಿಕ್ಷಣ (Higher Education) ಮತ್ತು ವೃತ್ತಿಪರ ಕೋರ್ಸ್ (Professional course) ಗಳ ಅಡಿಪಾಯ ಆಗಿರುವ ಪಿಯುಸಿ (PUC) ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಪ್ರಶ್ನೆಯೊಂದು ಶಿಕ್ಷಣ ಅಂಗಳದಲ್ಲಿ ಕೇಳಿ ಬರುತ್ತಿದೆ. ಇನ್ಮುಂದೆ ಪದವಿ ಪ್ರವೇಶಾತಿಗೆ ಪರೀಕ್ಷೆ ಆಂದ್ರೆ ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ವ್ಯವಸ್ಥೆ ಜಾರಿಯಾಗುತ್ತಿದೆ ಎಂದು ವಿಜಯವಾಣಿ ವರದಿಯಾಗಿದೆ. ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳ ಅಬ್ಬರದಲ್ಲಿ ಪಿಯುಸಿ ಕೇವಲ ವಿದ್ಯಾರ್ಹತೆಯಾಗಿ ಬದಲಾಗುವ ಸುಳಿವುಗಳು ಸಿಗ್ತಿವೆ.
ವಿಜಯವಾಣಿ ವರದಿ ಪ್ರಕಾರ, ಕೇಂದ್ರಿಯ ವಿಶ್ವವಿದ್ಯಾಲಯಗಳಿಗೆ ಕಡ್ಡಾಯವಾಗಿರುವ ಪ್ರವೇಶ ಪರೀಕ್ಷೆ (CUET)ಗೆ ರಾಜ್ಯದ ಸರ್ಕಾರಿ ವಿವಿಗಳು ಒಪ್ಪಿಗೆ ಸೂಚಿಸಿವೆ. ಒಂದು ವೇಳೆ ಈ ವ್ಯವಸ್ಥೆ ಜಾರಿಯಾದ್ರೂ ವಿದ್ಯಾರ್ಥಿಗಳು ಪದವಿಗೆ ದಾಖಲಾತಿ ಪಡೆಯಲು ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.
ಆಗ ಪಿಯುಸಿ ಅಂಕಗಳ ಆಧಾರದ ಮೇಲೆ ದಾಖಲಾತಿ ಪಡೆಯುವ ವ್ಯವಸ್ಥೆ ಕೊನೆಗೊಳ್ಳಲಿದೆ. ಹಾಗಾಗಿ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆಯುವ ಅಂಕಗಳಿಗಿಂತೆ ಪ್ರವೇಶಾತಿ ಸಿಇಟಿಯಲ್ಲಿ ಗಳಿಸುವ ಅಂಕಗಳು ಮುಖ್ಯವಾಗುತ್ತದೆ.
ಸದ್ಯ ಕೇಂದ್ರ ಸರ್ಕಾರ ಬಿಎ, ಬಿಕಾಂ, ಬಿಎಸ್ಸಿ ಅಂತಹ ತಾಂತ್ರಿಕೇತರ ಶಿಕ್ಷಣಕ್ಕೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರಿ ಅಧೀನದ ಖಾಸಗಿ ಮತ್ತು ಡೀಮ್ಡ್ ವಿವಿಗಳಿಗೆ ವಿಸ್ತರಿಸಲು ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ (ಯುಜಿಸಿ) ಮುಂದಾಗಿದ್ದು, ಈ ಸಂಬಂಧ ಕಾರ್ಯತತ್ಪರವಾಗಿದೆ.
ಸಿಯುಇಟಿ ಯಾರಿಗೆ ಕಡ್ಡಾಯ?
ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯ ಸೇರಿದಂತೆ ದೇಶದ 40ಕ್ಕೂ ಹೆಚ್ಚು ಕೇಂದ್ರಿಯ ವಿವಿಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಸಿಯುಇಟಿ ಪರೀಕ್ಷೆಯನ್ನು ಕಡ್ಡಾಯವಾಗಿ ಎದುರಿಸಬೇಕಿದೆ. ಈ ಬಾರಿ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯಗಳು ಸಹ ಈ ಬಾರಿ ಸಿಯುಇಟಿ ನಿಯಮಗಳನ್ನು ಪಾಲಿಸಬೇಕಿದೆ. ಇತ್ತ ಖಾಸಗಿ ಮತ್ತು ಡೀಮ್ಸ್ ವಿವಿಗಳು ಸಹ ಪ್ರವೇಶ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ದಾಖಲಾತಿ ಪಡೆದುಕೊಳ್ಳುವ ನಿಯಮಗಳನ್ನು ಸರಳೀಕರಣಗೊಳಿಸುತ್ತಿವೆ.
ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳು ಅಗತ್ಯವಿದೆಯೇ?
ರಾಷ್ಟ್ರೀಯ ಪ್ರವೇಶಾತಿ ಪರೀಕ್ಷೆಗಳು ರಾಜ್ಯದಲ್ಲಿಯ ಪಿಯುಸಿ ಶಿಕ್ಷಣವಬನ್ನು ಅಸ್ಥಿರಗೊಳಸುತ್ತಿವೆ. ಇದು ಮುಂದಿನ ದಿನಗಳಗಳಲ್ಲಿ ಕೋಚಿಂಗ್ ಅಭ್ಯಾಸವನ್ನು ಬೆಳೆಸುತ್ತದೆ. ಇಂಜಿನೀಯರಿಂಗ್, ಮೆಡಿಕಲ್ ಹೊರತುಪಡಿಸಿ ತಾಂತ್ರಿಕೇತರ ಶಿಕ್ಷಣಕ್ಕಾಗಿ ಶೇ.90 ರಷ್ಟು ವಿದ್ಯಾರ್ಥಿಗಳು ಸ್ಥಳೀಯ ವಿವಿ ಮತ್ತು ಕಾಲೇಜುಗಳನ್ನು ಅವಲಂಬಿಸಿರುತ್ತಾರೆ. ರಾಜ್ಯದಲ್ಲಿ ಈ ಪರಿಸ್ಥಿತಿ ಇರುವಾಗ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳು ನಮ್ಮ ವಿದ್ಯಾರ್ಥಿಗಳಿಗೆ ಅಗತ್ಯವಿದೆಯೇ ಎಂದು ಪಿಇಎಸ್ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ್ ಪ್ರಶ್ನೆ ಮಾಡಿದ್ದಾರೆ.
ಕೋಚಿಂಗ್ ಸಂಸ್ಕೃತಿಯ ಬೆಳವಣಿಗೆ
ಬಿಎ, ಬಿಕಾಂ ಮತ್ತು ಬಿಎಸ್ಸಿ ದಾಖಲಾತಿಗೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳು ರಾಜ್ಯದಲ್ಲಿ ಜಾರಿಯಾದ್ರೆ, ಕೋಚಿಂಗ್ ಸಂಸ್ಕೃತಿ ಹೆಚ್ಚಾಗುತ್ತದೆ. ಪಿಯುಸಿ ಕೇವಲ ವಿದ್ಯಾರ್ಹತೆಯ ಕೋರ್ಸ್ ಆಗಿ ಬದಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಕೇವಲ ಕೋಚಿಂಗ್ ಅಭ್ಯಾಸಕ್ಕೆ ಹೆಚ್ಚು ಗಮನ ನೀಡುವ ದಿನಗಳು ಬರಲಿವೆ.
ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ಸಮರ್ಥಕರು ಹೇಳೋದೇನು?
ಖಾಸಗಿ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ಮನಸೋ ಇಚ್ಛೆ ಅಂಕಗಳನ್ನು ನೀಡಲಾಗುತ್ತದೆ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸುಲಭವಾಗಿ ಸೀಟ್ ಪಡೆದುಕೊಳ್ಳುತ್ತಾರೆ. ಆದರೆ ಕಟ್ಟುನಿಟ್ಟಿನ ಕಾಲೇಜುಗಳಲ್ಲಿ ಜಾಣ ವಿದ್ಯಾರ್ಥಿಗಳ ಅಂಕ ಕಡಿಮೆ ಗಳಿಸಿರುತ್ತಾರೆ. ಈ ಸಮಸ್ಯೆ ನಿವಾರಣೆಗಾಗಿ ರಾಷ್ಟ್ರೀಯ ಮಟ್ಟದ ಪ್ರವೇಶಾತಿ ಪರೀಕ್ಷೆಗಳು ಬೇಕು ಎಂದು ಸಮರ್ಥಕರು ಹೇಳುತ್ತಾರೆ.