ಲವರ್ ಜೊತೆಗೆ ಐಷಾರಾಮಿಯಾಗಿ ಬದುಕಲು ಗಾಂಜಾ ಮಾರಾಟಕ್ಕಿಳಿದು ಸಿಕ್ಕಿಬಿದ್ದ ಪದವೀಧರೆ..!

ಲಾಕ್ ಡೌನ್​​ ಅನ್ನೇ ಬಂಡವಾಳ‌ ಮಾಡಿಕೊಂಡು ಹೆಚ್ಚು ಹಣಕ್ಕೆ ಬಿಹಾರದ ವ್ಯಕ್ತಿ ಜೊತೆ ಸೇರಿ ಗಾಂಜಾವನ್ನ‌ ಸಣ್ಣ ಪೊಟ್ಟಣಗಳನ್ನಾಗಿ ಮಾಡುತ್ತಿದ್ದಳು. ಮಾರತ್ ಹಳ್ಳಿಯಲ್ಲಿ ಪಿಜಿಯಲ್ಲಿದ್ದುಕೊಂಡು ಗಾಂಜಾವನ್ನ ಪ್ರಿಯಕರನಿಂದ ಪಡೆದು ಮಾರಾಟ ಮಾಡ್ತಿದ್ದಳು.

ಬಿಹಾರದ ವ್ಯಕ್ತಿ ಹಾಗೂ ಆರೋಪಿ ರೇಣುಕಾ

ಬಿಹಾರದ ವ್ಯಕ್ತಿ ಹಾಗೂ ಆರೋಪಿ ರೇಣುಕಾ

  • Share this:
ಬೆಂಗಳೂರು: ಅವರಿಬ್ಬರೂ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದರು. ಇಬ್ಬರಿಗೂ ಕಾಲೇಜಿನ ಕಾರಿಡಾರ್ ನಲ್ಲಿ ಲವ್ ಶುರುವಾಗಿತ್ತು. ಆದರೆ ಪ್ರಿಯಕರನ ಐಷರಾಮಿ ಜೀವನದ ಮೋಡಿಗೆ ಬಿದ್ದ ಯುವತಿ ಈಗ ಗಾಂಜಾ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದಾಳೆ‌. ಜೈಲುಪಾಲಾಗಿರುವ ಯುವರಿಯ ಹೆಸರು ರೇಣುಕಾ. ಇನ್ನೂ 25 ವರ್ಷ, ಸಿವಿಲ್ ಇಂಜಿನಿಯರಿಂಗ್ ಪದವೀಧರೆ. ರೇಣುಕಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದು, ಕೈತುಂಬಾ ಸಂಬಳ ಬರ್ತಿತ್ತು. ಆದ್ರೆ ಪ್ರೀತಿ ಎಂಬ ಮಾಹೆಗೆ ಸಿಲುಕಿದ ರೇಣುಕಾ ಪ್ರಿಯಕರ ಸಿದ್ದಾರ್ಥ ಎಂಬಾತನ ಮಾತು ಕೇಳಿ ಬೆಂಗಳೂರಿನಲ್ಲಿ  ಗಾಂಜಾ ಮಾರಾಟಕ್ಕಿಳಿದಿದ್ದಳು.

ಬಾಯ್​​ಫ್ರೆಂಡ್​​ ಜೊತೆ ಸೇರಿ ಗಾಂಜಾ ಸಪ್ಲೈ ಮಾಡೋದನ್ನೇ ವೃತ್ತಿ ಮಾಡಿಕೊಂಡಿದ್ದಳು. ಸದಾಶಿವನಗರ ಪೊಲೀಸರ ಕೈಲಿ ಸಿಕ್ಕಾಕ್ಕೊಂಡು ಈಗ ಕಂಬಿ ಎಣಿಸ್ತಿದ್ದಾಳೆ. ಆಂಧ್ರಪ್ರದೇಶ ಶ್ರೀಕಾಕುಳಂನ ರೇಣುಕಾ ಚೆನೈನಲ್ಲಿ ಎಂಜಿನಿಯರಿಂಗ್ ಮಾಡುವಾಗ ಕಡಪದ ಸಿದ್ದಾರ್ಥ್ ಎಂಬಾತನ ಜೊತೆಗೆ ಪ್ರೀತಿಯಾಗಿರುತ್ತೆ. ಸಿದ್ದಾರ್ಥ್ ನ ಶ್ರೀಮಂತಿಕೆಯ ಜೀವನ ನೋಡಿ ಮಾರುಹೋದ ರೇಣುಕಾ ಆತನ ಹಿಂದೆ ಬೀಳುತ್ತಾಳೆ. ಆಗ ರೇಣುಕಾಗೆ ಬೇಕಾದನ್ನ‌ ಕೊಡಿಸಿ ತನ್ನತ್ತ ಸೆಳೆಯುತ್ತಾನೆ. ಹೀಗೆ ದಿನ ಕಳೆದಂತೆ ಸಿದ್ದಾರ್ಥ್ ಜೊತೆ ಆತ್ಮಿಯತೆ ಹೆಚ್ಚಾಗುತ್ತೆ. ಆಗ ಪ್ರೀತಿಯ ವಿಚಾರವನ್ನ ರೇಣುಕಾ ಪೋಷಕರಿಗೆ ತಿಳಿಸುತ್ತಾಳೆ. ಮದುವೆ ಆಗುವುದಾದರೆ ಸಿದ್ದಾರ್ಥ್ ನನ್ನೇ ಆಗ್ತೀನಿ ಎಂದು ಹಠ ಹಿಡಿಯುತ್ತಾಳೆ. ಆದರೆ ಮನೆಯಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸ್ತಾರೆ.

ಆಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ರೇಣುಕಾಗೆ ಕೈತುಂಬಾ ಸಂಬಳ ಬರ್ತಿತ್ತು. ಆದ್ರೆ ಪ್ರೀತಿಯ ಬೆನ್ನೇರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಿದ್ದಾರ್ಥ್ ಜೊತೆ ಸೇರುತ್ತಾಳೆ. ಲವರ್ ಸಿದ್ದಾರ್ಥ್ ಜೊತೆ ವಿಶಾಖಪಟ್ನಂನಲ್ಲಿ ಮನೆ ಮಾಡಿಕೊಂಡು ಜೀವನ ನಡೆಸ್ತಿರ್ತಾರೆ. ಹೀಗಿರುವಾಗ್ಲೇ ರೇಣುಕಾಗೆ ಗಾಂಜಾ ಮಾರಾಟದಿಂದ ಹೇಗೆ ಹಣ ಗಳಿಸಬಹುದು ಎಂದು ಬ್ರೈನ್ ವಾಶ್ ಮಾಡ್ತಾನೆ ಸಿದ್ಧಾರ್ಥ. ಚೆನ್ನೈ, ಹೈದ್ರಾಬಾದ್ ನಲ್ಲಿ ತಾನು ಸಪ್ಲೈ ಮಾಡ್ತೀನಿ. ನೀನು ಬೆಂಗಳೂರಿನಲ್ಲಿ ಮಾರಾಟ ಮಾಡು. ಹೇಗಿದ್ರೂ ಲಾಕ್ ಡೌನ್​ನಿಂದ ಹೆಚ್ಚಿನ ಹಣ ಸಿಗುತ್ತೆ ಎಂದು ಕಳಿಸಿರ್ತಾನೆ. ಹೀಗೆ ಐಷಾರಾಮಿ ಜೀವನಕ್ಕಾಗಿ ಪ್ರಿಯತಮೆಯನ್ನು ದಂಧೆಗೆ ಬಳಸಿಕೊಳ್ಳುತ್ತಾನೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್: CD ಮೇಕಿಂಗ್, ವಿತರಣೆ ಬಗ್ಗೆ ಆರೋಪಿ ನರೇಶ್​ಗೆ SIT ಡ್ರಿಲ್!

ಗಾಂಜಾ ಸಪ್ಲೈ ಮಾಡಿದರೆ ಹೆಚ್ಚು ಹಣ ಬರುತ್ತೆ. ಲೈಫ್​​ ಸೆಟ್ಲ್ ಆಗಬಹುದು ಅಂತ ನಂಬಿಸಿದ್ದ. ಬಿಹಾರದ ಓರ್ವನನ್ನ ಪರಿಚಯಿಸಿ ನಗರದಲ್ಲಿ ಮಾರಾಟಕ್ಕೆ ಆಕೆಯನ್ನ ಕಳಿಸಿದ್ದ. ಹೀಗೆ ಲಾಕ್ ಡೌನ್​​ ಅನ್ನೇ ಬಂಡವಾಳ‌ ಮಾಡಿಕೊಂಡು ಹೆಚ್ಚು ಹಣಕ್ಕೆ ಬಿಹಾರದ ವ್ಯಕ್ತಿ ಜೊತೆ ಸೇರಿ ಗಾಂಜಾವನ್ನ‌ ಸಣ್ಣ ಪೊಟ್ಟಣಗಳನ್ನಾಗಿ ಮಾಡ್ತಿದ್ಲು. ಮಾರತ್ ಹಳ್ಳಿಯಲ್ಲಿ ಪಿಜಿಯಲ್ಲಿದ್ದುಕೊಂಡು ಗಾಂಜಾವನ್ನ ಪ್ರಿಯಕರನಿಂದ ಪಡೆದು ಮಾರಾಟ ಮಾಡ್ತಿದ್ದಳು. ಇತ್ತೀಚೆಗೆ ಸದಾಶಿವನಗರ ಪೊಲೀಸ್ರಿಗೆ ಗಾಂಜಾ ಮಾರಾಟದ ಬಗ್ಗೆ ಮಾಹಿತಿ ಸಿಕ್ಕಿತ್ತು. ಗಾಂಜಾ ಸೇದುವ ಓರ್ವನ ವಿಚಾರಣೆ ನಡೆಸಿದ ವೇಳೆ ಯುವತಿಯ ಬಗ್ಗೆ ಬಾಯ್ಬಿಟ್ಟಿದ್ದ. ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಸದ್ಯ ಪ್ರಿಯತಮೆ ಬಂಧನ ಸುದ್ದಿ ಕೇಳಿ  ಪ್ರಿಯಕರ ಸಿದ್ದಾರ್ಥ್ ತಲೆಮರೆಸಿಕೊಂಡಿದ್ದು, ಸದಾಶಿವನಗರ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.
Published by:Kavya V
First published: