Electric Bus: ಬಿಎಂಟಿಸಿ ಪಾಲಿಗೆ 'ಬಿಳಿಯಾನೆ' ಆದ ಎಲೆಕ್ಟ್ರಿಕ್ ಬಸ್; ಆದಾಯಕ್ಕಿಂತ ಬಾಡಿಗೆಯೇ ಜಾಸ್ತಿ!

ಎಲೆಕ್ಟ್ರಿಕ್ ಬಸ್ ಇದೇ ರೀತಿ ಇನ್ನೊಂದು ಸ್ವಲ್ಪ ದಿನ ಓಡಿದರೆ ಬಿಎಂಟಿಸಿ ‘ಬೀದಿ ಬಸವ’ ಆಗೋದರಲ್ಲಿ ಅನುಮಾನವೇ ಇಲ್ಲ. ಇಕೋ ಫ್ರೆಂಡ್ಲಿ ಬಸ್ (Eco Friendly Bus) ರಸ್ತೆಗಿಳಿಸ್ತಿವಿ, ಮಾಲಿನ್ಯವನ್ನ (Pollution) ಝೀರೋ (Zero) ಮಾಡ್ತಿವಿ ಅಂತ ಬಿಎಂಟಿಸಿ ಕೋಟಿ ಕೋಟಿ ಸುರಿದು ಎಲೆಕ್ಟ್ರಿಬಸ್ ರಸ್ತೆಗಿಳಿಸಿತು. ಆದರೆ ಇದರ ನಿರ್ವಹಣೆ ಎನ್ನುವುದು ಬಿಎಂಟಿಸಿ ಪಾಲಿಗೆ ‘ಬಿಳಿಯಾನೆ’ಯಂತೆ ಆಗಿದೆ!

ಬಿಎಂಟಿಸಿಯಿಂದ ಓಡಾಡುತ್ತಿರುವ ಎಲೆಕ್ಟ್ರಿಕ್ ಬಸ್

ಬಿಎಂಟಿಸಿಯಿಂದ ಓಡಾಡುತ್ತಿರುವ ಎಲೆಕ್ಟ್ರಿಕ್ ಬಸ್

  • Share this:
ಬೆಂಗಳೂರು: ಬೆಂಗಳೂರಿಗರ ಸಂಚಾರದ ಜೀವನಾಡಿ ಬಿಎಂಟಿಸಿ (BMTC) ನಷ್ಟದ ಸುಳಿಯಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಎಂಟಿಸಿಯ ಇವತ್ತಿನ ಸ್ಥಿತಿಗೆ ವೋಲ್ವೋ (Volvo), ಮಾರ್ಕೋ ಪೋಲೋ ಬಸ್‌ಗಳ (Marcopolo bus) ಕೊಡುಗೆ ಬಹಳ ದೊಡ್ಡದಿದೆ. ಇದರ ಲೀಸ್ಟ್‌ಗೆ ಈಗ ಎಲೆಕ್ಟ್ರಿಕ್ ಬಸ್ (Electric Bus) ಸೇರಿಕೊಂಡಿದೆ. ಎಲೆಕ್ಟ್ರಿಕ್ ಬಸ್ ಇದೇ ರೀತಿ ಇನ್ನೊಂದು ಸ್ವಲ್ಪ ದಿನ ಓಡಿದರೆ ಬಿಎಂಟಿಸಿ ‘ಬೀದಿ ಬಸವ’ ಆಗೋದರಲ್ಲಿ ಅನುಮಾನವೇ ಇಲ್ಲ. ಇಕೋ ಫ್ರೆಂಡ್ಲಿ ಬಸ್ (Eco Friendly Bus) ರಸ್ತೆಗಿಳಿಸ್ತಿವಿ, ಮಾಲಿನ್ಯವನ್ನ (Pollution) ಝೀರೋ (Zero) ಮಾಡ್ತಿವಿ ಅಂತ ಬಿಎಂಟಿಸಿ ಕೋಟಿ ಕೋಟಿ ಸುರಿದು ಎಲೆಕ್ಟ್ರಿಬಸ್ ರಸ್ತೆಗಿಳಿಸಿತು. ಆದರೆ ಇದರ ನಿರ್ವಹಣೆ ಎನ್ನುವುದು ಬಿಎಂಟಿಸಿ ಪಾಲಿಗೆ ‘ಬಿಳಿಯಾನೆ’ಯಂತೆ ಆಗಿದೆ.

ಖಾಸಗಿ ಕಂಪನಿಗಳಿಗೆ ಬಿಎಂಟಿಸಿಗೆ ಪಂಗನಾಮ?

ಖಾಸಗಿ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಬಸ್ ನಿರ್ವಹಣೆಯನ್ನ ಆ ಕಂಪನಿಗೆ ವಹಿಸಿಕೊಟ್ಟಿತು. ಹೇಳೋಕೆ ಎಲೆಕ್ಟ್ರಿಕ್ ಬಸ್, ಮೆಂಟೇನೆನ್ಸ್ ಖಾಸಗಿ ಕಂಪನಿಯದ್ದು ಅವ್ರಿಗೆ ಕಿಲೋಮೀಟರ್ ಲೆಕ್ಕದಲ್ಲಿ ಕಾಸು ಕೊಟ್ರಾಯ್ತು, ಬಂದ ಕಲೆಕ್ಷನ್ ಎಣಿಸಿ ಖಜಾನೆ ತುಂಬಿಸಿಕೊಂಡ್ರಾಯ್ತು ಅಂತ ನಿಗಮದ ಅಧಿಕಾರಿಗಳು ಲೆಕ್ಕಾಚಾರ ಹಾಕಿಕೊಂಡಿದ್ದರು. ಅಲ್ಲದೇ ಈ ಖಾಸಗಿ ಕಂಪನಿಗಳ ಜೊತೆಗಿನ ಗುತ್ತಿಗೆ ಬಗ್ಗೆ ಕಲರ್ ಕಲರ್ ಕತೆಯ್ನೂ ಹೇಳ್ತಿದ್ರು.

ಆದ್ರೆ ಈ ಗುತ್ತಿಗೆ ಬಸ್ಗಳ ನಿಜ ಬಣ್ಣ ಅದಾಗ್ಲೇ ಬಯಲಾಗಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಇನ್ನಷ್ಟು ದಿನ ಓಡಿದ್ರೆ ಇಡೀ ನಿಗಮ ಏರ್ ಇಂಡಿಯಾ ರೀತಿ ಹರಾಜಾಗೋದು ಗ್ಯಾರೆಂಟಿ.

ನಷ್ಟದ ಅರಿವಿದ್ರೂ ಹೊಸ ಒಡಂಬಡಿಕೆಗೆ ಮುಂದಾದ ಬಿಎಂಟಿಸಿ

ಸದ್ಯ ಬಿಎಂಟಿಸಿ  NTPC ಕಂಪನಿ ಜೊತೆಗೆ ಸೇರ್ಕೊಂಡು 90ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದೆ. ಆದ್ರೆ NTPC ಕಂಪನಿ ಜೊತೆಗೆ ಬಿಎಂಟಿಸಿ ಮಾಡಿಕೊಂಡಿರೋ ಕರಾರು ಈಗ ನಿಗಮಕ್ಕೆ ಮುಳುವಾಗೋ ಎಲ್ಲಾ ಲಕ್ಷಣ ಕಾಣಿಸ್ತಿದೆ.

ಇದನ್ನೂ ಓದಿ: Apple Growing: ಬೆಂಗಳೂರಿನ ಸುತ್ತಮುತ್ತ ಬೆಳೆಯೋ ಸೇಬು ತಿಂದಿದ್ದೀರಾ? ರಾಜ್ಯದಲ್ಲಿ ಮತ್ತೆ ಆ್ಯಪಲ್ ಕ್ರಾಂತಿ!

ಜನ ಬಾರದಿದ್ದರೂ ಬಾಡಿಗೆ ಪಾವತಿಸಲೇ ಬೇಕು

ಕಾರಣ ಏನಂದ್ರೆ ಬಸ್ ಗೆ ಜನ ಬರ್ಲಿ ಬಾರದಿರ್ಲಿ  ಪ್ರತೀ ಕಿಲೋಮೀಟರ್ಗೆ 51 ರೂ 60 ಪೈಸೆ ಯಂತೆ 180 ಕಿಲೋಮೀಟರ್ಗೆ 9.288ರೂಗಳನ್ನ ನಿತ್ಯ  ಎನ್ಟಿಪಿಸಿ ಕಂಪನಿಗೆ ಪಾವತಿ ಮಾಡ್ಬೇಕು. ಆದ್ರೆ ಒಂದು ಎಲೆಕ್ಟ್ರಿಕ್ ಬಸ್ನಿಂದ ಪ್ರತಿನಿತ್ಯ ಟಿಕೆಟ್ ಪೇರ್ ಕಲೆಕ್ಷನ್ ಆಗ್ತಿರೋದು 5,868 ರೂ ಮಾತ್ರ. ಹೀಗಾಗಿ ಪ್ರತಿನಿತ್ಯ  ಒಂದು ಎಲೆಕ್ಟ್ರಿಕ್ ಬಸ್ ರಸ್ತೆಗಿಳಿದ್ರೆ ನಿಗಮಕ್ಕೆ 3420ರೂ ನಷ್ಟವಾಗ್ತಿದೆ.

ಅಶೋಕ್ ಲೈಲೆಂಡ್ ಕಂಪನಿ ಜೊತೆಗೆ 300 ಬಸ್ ಒಪ್ಪಂದ

NTPC ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡ ಕಾರಣದಿಂದಾಗಿ ನಷ್ಟವಾಗ್ತಿದೆ. ನಿಗಮಕ್ಕೆ ಆರ್ಥಿಕ ಹೊರೆಯಾಗ್ತಿದೆ ಅನ್ನೋದು ಗೊತ್ತಿದ್ರೂ ನಿಗಮ ಮತ್ತೆ 300 ಹೊಸ ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗಿದೆ. ಈ ಬಾರಿ ಅಶೋಕ್ ಲೈಲೆಂಡ್ ಕಂಪನಿ ಜೊತೆಗೆ ಒಪ್ಪಂದ ಏರ್ಪಡುತ್ತಿದ್ದು ಒಂದು ಕಿಮೀಗೆ 48 ರೂ.ನಂತೆ ನಿತ್ಯ ಒಂದು ಬಸ್ಗೆ ಮಿನಿಮಮ್ 210 ಕಿಲೋಮೀಟರ್ ನಂತೆ ಒಡಂಬಡಿಕೆ ಮಾಡಿಕೊಳ್ಳಲಾಗ್ತಿದೆ.

ಪ್ರತಿ ತಿಂಗಳು 4 ಕೋಟಿಯಷ್ಟು ನಷ್ಟ!

ಈ ಒಪ್ಪಂದದ ಪ್ರಕಾರ ಸದ್ಯದ ನಷ್ಟವೇ ಮುಂದುವೆರೆದ್ರೆ ಪ್ರತೀ ಕಿಲೋಮೀಟರ್ಗಾಗೋ ನಷ್ಟ 21 ರೂ.ಗೆ ಏರಿಕೆಯಾಗೋ ಸಾದ್ಯತೆ ಇದೆ. ಇನ್ನು ಈಗಿರೋ 90 ಹಾಗೂ ಹೊಸದಾಗಿ ಬರೋ 300 ಎಲೆಕ್ಟ್ರಿಕ್ ಬಸ್ಗಳಿಂದ ನಿಗಮಕ್ಕೆ ಪ್ರತಿತಿಂಗಳು  ಕನಿಷ್ಟ 4 ಕೋಟಿ 89 ಲಕ್ಷದ 24 ಸಾವಿರ ರೂ ನಷ್ಟ ಸಂಭವಿಸಲಿದೆ. ಆದ್ರೆ ನಿಗಮ ಮಾತ್ರ ಬೇರೆಯದ್ದೇ ಕತೆ ಹೇಳ್ತಿದೆ.

ಇದನ್ನೂ ಓದಿ: Neo Train: ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಸೇರ್ಪಡೆ, ಶೀಘ್ರವೇ ಓಡಾಡಲಿದೆ ಮೆಟ್ರೋ ನಿಯೋ ರೈಲು

ಖಾಸಗಿ ಕಂಪನಿಗಳ ಜೊತೆ 10 ವರ್ಷಕ್ಕೆ ಕರಾರು

ಸದ್ಯ ಈ ಎರಡೂ ಕಂಪನಿಗಳ ಜೊತೆಗೆ 10 ವರ್ಷಕ್ಕೆ ಕರಾರು ಮಾಡಿಕೊಳ್ಳಲಾಗಿದೆ. ನಷ್ಟ ಎಷ್ಟೇ ಹೆಚ್ಚಾದ್ರೂ ನಿಗಮ ಮಾತ್ರ ಪ್ರತಿನಿತ್ಯ ಹಣ ಎಣಿಸ್ಲೇ ಬೇಕು. ಮಾರ್ಕೋಪೋಲೋ, ವೋಲ್ವೋ ಬಸ್ಗಳಿಂದ ಹೊಡೆತ ತಿಂದಿದ್ದ ನಿಗಮ ಎಚ್ಚೆತ್ತುಕೊಳ್ಳುತ್ತೆ, ಇನ್ಮುಂದೆ ಈ ತಪ್ಪು ಮಾಡೋದಿಲ್ಲ ಎಂದೇ ಎಲ್ಲರೂ ನಿರೀಕ್ಷೆ ಮಾಡಿದ್ರು. ಆದ್ರೆ ಎಲೆಕ್ಟ್ರಿಕ್ ಬಸ್ ವಿಚಾರದಲ್ಲಿ ಅವಿವೇಕತನದಿಂದಲೋ ಅಥವಾ ಕಮಿಷನ್ ಆಸೆಯಿಂದಲೋ ಈ ಒಪ್ಪಂದ ಮಾಡಿಕೊಂಡಿದ್ದು ಈಗ ಈ ಒಪ್ಪಂದ ನಿಗಮಕ್ಕೆ ಮರಣ ಶಾಸನವಾಗಿ ಮಾರ್ಪಟ್ಟಿದೆ.
Published by:Annappa Achari
First published: