Karnataka Legislative Council: 25 ವಿಧಾನ ಪರಿಷತ್​​​ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ: ಸಂಪೂರ್ಣ ಮಾಹಿತಿ ಇಲ್ಲಿದೆ

ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಆದೇಶ ಹೊರಡಿಸಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ.

ವಿಧಾನ ಪರಿಷತ್​​

ವಿಧಾನ ಪರಿಷತ್​​

  • Share this:
ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ (Karnataka Legislative Council) ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ (MLC’s)ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.

ಡಿಸೆಂಬರ್ 10ರಂದು ರಾಜ್ಯ ವಿಧಾನ ಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಎಲೆಕ್ಷನ್ ನಡೆಯಲಿದೆ.

ತೆರವಾಗುತ್ತಿರುವ 25 MLC ಸ್ಥಾನಗಳ ವಿವರ ಹೀಗಿದೆ

  1. ಕಾಂಗ್ರೆಸ್​​- 13

  2. ಬಿಜೆಪಿಯ - 6

  3. ಜೆಡಿಎಸ್​​​ -5

  4. ಬಿಜೆಪಿ ಬೆಂಬಲಿತ ಪಕ್ಷೇತರ - 1


ಈ ಎಲ್ಲಾ ಬಿಜೆಪಿ ಎಮ್​ಎಲ್​ಸಿಗಳ ಅಧಿಕಾರ ಅವಧಿ ಮುಗಿಯಲಿದೆ

1.ಕೋಟಾ ಶ್ರೀನಿವಾಸ ಪೂಜಾರಿ (ಸಭಾ ನಾಯಕ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ

2.ಬಿ.ಜಿ. ಪಾಟೀಲ್-ಕಲಬುರಗಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

3.ಪ್ರದೀಪ್ ಶೆಟ್ಟರ್- ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

4.ಎಂ.ಕೆ. ಪ್ರಾಣೇಶ್ (ಉಪ ಸಭಾಪತಿ) ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

5.ಸುನೀಲ್ ಸುಬ್ರಹ್ಮಣಿ ಮಂಡೇಪಂಡ-ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

6.ಮಹಂತೇಶ್ ಕವಟಗಿಮಠ (ಮುಖ್ಯ ಸಚೇತಕ)- ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

7.ವಿವೇಕರಾವ್ ಪಾಟೀಲ್ (ಪಕ್ಷೇತರ)- ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

ಇದನ್ನೂ ಓದಿ: Bitcoin: ಕರ್ನಾಟಕದಲ್ಲಿ ಬಿಟ್‌ಕಾಯಿನ್ ಹಗರಣದ ತನಿಖೆಯ ಕುರಿತು PMO ಪರಿಶೀಲನೆ..

ಕಾಂಗ್ರೆಸ್

1.ಎಸ್.ಆರ್. ಪಾಟೀಲ್ (ಪ್ರತಿಪಕ್ಷ ನಾಯಕ)- ವಿಜಯಪುರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

2.ಪ್ರತಾಪ್ ಚಂದ್ರ ಶೆಟ್ಟಿ (ಮಾಜಿ ಸಭಾಪತಿ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

3.ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್- ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

4.ಶ್ರೀನಿವಾಸ್ ಮಾನೆ (ಹಾಲಿ ಶಾಸಕ-ಹಾನಗಲ್)- ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

5.ಧರ್ಮಸೇನ-ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

6.ವಿಜಯ್ ಸಿಂಗ್- ಬೀದರ್ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

7.ಬಸವರಾಜ್ ಪಾಟೀಲ್ ಇಟಗಿ- ರಾಯಚೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

8.ಕೆ.ಸಿ. ಕೊಂಡಯ್ಯ-ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

9.ಆರ್. ಪ್ರಸನ್ನಕುಮಾರ್- ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ

10.ಗೋಪಾಲಸ್ವಾಮಿ-ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

11.ಎಂ. ನಾರಾಯಣಸ್ವಾಮಿ (ಪ್ರತಿಪಕ್ಷ ಸಚೇತಕ)-ಬೆಂಗಳೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

12.ಎಸ್.ರವಿ- ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

13.ರಘು ಆಚಾರ್- ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ

14.ನೀಲ್ ಗೌಡ ಪಾಟೀಲ್ -ವಿಜಯಪುರ ಸ್ಥಳೀಯ ಸಂಸ್ಥೆ ಕ್ಷೇತ್ರ

ಜೆಡಿಎಸ್

1.ಎನ್.ಅಪ್ಪಾಜಿ ಗೌಡ (ಪ್ರತಿಪಕ್ಷ ಸಚೇತಕ) ಮಂಡ್ಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

2.ಸಂದೇಶ್ ನಾಗರಾಜ್-ಮೈಸೂರು ಸಂಸ್ಥೆಗಳ ಪ್ರತಿನಿಧಿ

3.ಸಿ.ಆರ್. ಮನೋಹರ್- ಕೋಲಾರ ಸಂಸ್ಥೆಗಳ ಪ್ರತಿನಿಧಿ.

4.ಕಾಂತರಾಜು (ಬಿಎಂಎಲ್)- ತುಮಕೂರು ಸಂಸ್ಥೆಗಳ ಪ್ರತಿನಿಧಿ.

ದ್ವಿ ಸದಸ್ಯ ಸ್ಥಾನಗಳಿರುವ ಕ್ಷೇತ್ರಗಳು

  • ವಿಜಯಪುರ

  • ಬೆಳಗಾವಿ

  • ಮೈಸೂರು

  • ಧಾರವಾಡ

  • ದಕ್ಷಿಣ ಕನ್ನಡ

Published by:Kavya V
First published: