Educational Year 2021-22: ಜುಲೈ. 1ರಿಂದ ಶಾಲೆ ಆರಂಭಕ್ಕೆ ಸೂಚನೆ; ಪರಿಷ್ಕೃತ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

Karnataka School Reopening: ಸರ್ಕಾರ ಲಾಕ್​ಡೌನ್​ ಅನ್ನು ಜೂನ್​. 14 ರವರೆಗೆ ಘೋಷಣೆ ಮಾಡಿರುವ ಹಿನ್ನಲೆ ಶಾಲೆಗಳನ್ನು ಜೂನ್​ 15ರಿಂದ ತೆರೆಯಲು ಸಾಧ್ಯವಿಲ್ಲ. ಇದೇ ಹಿನ್ನಲೆ ಈ ಹಿಂದಿನ ಆದೇಶವನ್ನು ಪರಿಷ್ಕರಿಸಲಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜೂ. 4):  ರಾಜ್ಯದಲ್ಲಿ ಕೊರೋನಾ ಆರ್ಭಟದ ಹಿನ್ನಲೆ ದ್ವೀತಿಯ ಪಿಯುಸಿ ಪರೀಕ್ಷೆಗಳನ್ನು ಸರ್ಕಾರ ರದ್ದು ಮಾಡಿದೆ. ಇದರ ಬೆನ್ನಲ್ಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭದ ದಿನಾಂಕವನ್ನು ಪರಿಷ್ಕರಿಸಿ ಸರ್ಕಾರ ಇಂದು ಆದೇಶ ನೀಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ ಜೂನ್​ 15ರಂದು ಶಾಲೆ ಪ್ರಾರಂಭಕ್ಕೆ ಅಧಿಸೂಚನೆ ಹೊರಡಿಸಿತ್ತು. ಈಗ ಈ ಆದೇಶವನ್ನು ಪರಿಷ್ಕರಿಸಿದ ಶಿಕ್ಷಣ ಇಲಾಖೆ ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭಕ್ಕೆ ಹೊಸ ಸುತ್ತೋಲೆ ಹೊರಡಿಸಿದೆ. ಜುಲೈ 1ರಿಂದ ಅ.9ರವರೆಗೆ ಮೊದಲ ಅವಧಿ, ಅ.21ರಿಂದ ಏಪ್ರಿಲ್​ 30ರವರೆಗೆ 2ನೇ ಅವಧಿ ಆರಂಭವಾಗಿದೆ ಎಂದು ತಿಳಿಸಿದೆ. ಅಲ್ಲದೇ, ಜೂನ್​ 15ರಿಂದ ದಾಖಲಾತಿ ಆರಂಭಕ್ಕೆ ಸೂಚನೆ ನೀಡಿದ್ದು, ಆ.31ರೊಳಗೆ ದಾಖಲಾತಿ ಮುಕ್ತಾಯಕ್ಕೆ ಸೂಚಿಸಲಾಗಿದೆ. 

  ರಾಜ್ಯದಲ್ಲಿ ಕೊರೋನಾ ಸೋಂಕು ತಗ್ಗಿದೆಯಾದರೂ, ಮೂರನೇ ಅಲೆ ಬಗ್ಗೆ ಈಗಾಗಲೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಸರ್ಕಾರ ಲಾಕ್​ಡೌನ್​ ಅನ್ನು ಜೂನ್​. 14 ರವರೆಗೆ ಘೋಷಣೆ ಮಾಡಿರುವ ಹಿನ್ನಲೆ ಶಾಲೆಗಳನ್ನು ಜೂನ್​ 15ರಿಂದ ತೆರೆಯಲು ಸಾಧ್ಯವಿಲ್ಲ. ಇದೇ ಹಿನ್ನಲೆ ಈ ಹಿಂದಿನ ಆದೇಶವನ್ನು ಪರಿಷ್ಕರಿಸಲಾಗಿದೆ.

  ಕೋವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್ ಲೈನ್, ದೂರದರ್ಶನ, ಅಂತರ್ಜಾಲ ಕಲೆಕೆಯನ್ನು ಅನುಸರಿಸಬೇಕು. ಮಕ್ಕಳು ಪಾಠ-ಪ್ರವಚನಗಳಲ್ಲಿ ಪಾಲ್ಗಳ್ಳುವ ಮೂಲಕ ಕಲಿಕೆ ಮತ್ತು ಮೌಲ್ಯಮಾಪನದ ಕಾರ್ಯದ ನಿರಂತರತೆಯನ್ನು ಕಾಯ್ದುಕೊಳ್ಳಬೇಕು, ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ಪರ್ಯಾಯ ಮಾರ್ಗಗಳ ಮೂಲಕ ಶಿಕ್ಷಣ ನೀಡುವ ಕುರಿತು ವಿವರವಾದ ಮಾರ್ಗಸೂಚಿಯನ್ನು ಬಳಿಕ ಹೊರಡಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಆಯುಕ್ತರು ತಿಳಿಸಿದ್ದಾರೆ.

  ಇದನ್ನು ಓದಿ: ಮುಖ್ಯಮಂತ್ರಿಗಳ ದೌರ್ಬಲ್ಯದಿಂದ ಮೈಸೂರಿನಲ್ಲಿ ಅಧಿಕಾರಿಗಳು ಸೂಪರ್​ಮ್ಯಾನ್​ನಂತೆ ವರ್ತಿಸುತ್ತಿದ್ದಾರೆ; ಎಚ್​ಡಿಕೆ

  ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಸಬೇಕು. ಶೈಕ್ಷಣಿಕ ಅವಧಿಗಳು, ರಜಾ ದಿನಗಳು ನತ್ತು ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತೆ ನಿಗದಿಪಡಿಸಬೇಕು ಎಂದು ಸೂಚಿಸಲಾಗಿದೆ.
  ವಿದ್ಯಾರ್ಥಿಗಳ ಜೊತೆ ನಿರಂತರ ದೂರವಾಣಿ ಸಂಪರ್ಕದಲ್ಲಿರಬೇಕು. ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೇರೇಪಿಸಬೇಕು ಎಂದು ಸುತ್ತೋಲೆಯಲ್ಲಿ ಶಿಕ್ಷಕರಿಗೆ ಸೂಚಿಸಲಾಗಿದೆ.

  ದಸರಾ ರಜೆ ಅಕ್ಟೋಬರ್​ 10 ರಿಂದ  ರಿಂದ ಅಕ್ಟೋಬರ್​ 20 ರವರೆಗೆ, ಬೇಸಿಗೆ ರಜೆ :  2022ರ ಮೇ 1ರಿಂದ 28 ಮೇ ವರೆಗೆ ಇರಲಿದೆ.   ಶಾಲೆ ಶುರು ಎಂದರೆ ಆನ್​ಲೈನ್​ ಮೂಲಕ ಮಾತ್ರ ಪಾಠಗಳು ನಡೆಯಲಿವೆ. ಆಫ್​​ಲೈನ್​​ ಶಾಲೆ ನಡೆಸುವ ಬಗ್ಗೆ ನಿರ್ಧಾರ ಆಗಿಲ್ಲ. ಕೊರೋನಾ 3ನೇ ಅಲೆ ಮಕ್ಕಳನ್ನು ಗುರಿಯಾಗಿಸಿಕೊಳ್ಳಲುವ ಆತಂಕ ಇರುವುದರಿಂದ ಶಾಲೆಗಳ ಬಾಗಿಲು ಸದ್ಯಕ್ಕೆ ತೆಗೆಯುವುದು ಅನುಮಾನ. ಆನ್​​ಲೈನ್​ ಶಿಕ್ಷಣವೇ ಸದ್ಯದ ಮಾರ್ಗವಾಗಿದೆ. ಶಿಕ್ಷಣದ ಜೊತೆ ಮಕ್ಕಳ ಆರೋಗ್ಯ ನಮ್ಮ ಮೊದಲ ಆದ್ಯತೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: