PU Exam: ಪಿಯು ಪರೀಕ್ಷೆ ಕುರಿತು ನಾಳೆ ಶಿಕ್ಷಣ ಸಚಿವರಿಂದ ಅಧಿಕೃತ ಆದೇಶ

ನಾಳೆ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿ ನಡೆಸಲಿದ್ದು, ಪರೀಕ್ಷೆ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಧಿಕೃತವಾಗಿ ಸ್ಪಷ್ಟಪಡಿಸಲಿದ್ದಾರೆ.

ಸಚಿವ ಸುರೇಶ್​ ಕುಮಾರ್.

ಸಚಿವ ಸುರೇಶ್​ ಕುಮಾರ್.

  • Share this:
    ಬೆಂಗಳೂರು (ಜೂ, 3):  ಕೇಂದ್ರ ಸರ್ಕಾರ ಸಿಬಿಎಸ್​ಸಿ ಮತ್ತು ಐಸಿಎಸ್​ಸಿ ಪರೀಕ್ಷೆ ರದ್ದು ಮಾಡಿ ಆದೇಶಿಸಿದ ಬಳಿಕ ರಾಜ್ಯ ಸರ್ಕಾರ ಪಿಯು ಮತ್ತು ಎಸ್​ಎಸ್​ಎಲ್​ಸಿ ಪರೀಕ್ಷೆ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಪ್ರಶ್ನೆ ಮೂಡಿದೆ. ಕಳೆದೆರಡು ದಿನಗಳಿಂದ ಈ ಕುರಿತು ಶಿಕ್ಷಣ ಸಚಿವರಿಗೂ ಕೂಡ ಪ್ರಶ್ನೆಗಳು ಎದುರಾಗುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಾತ್ರ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅಲ್ಲದೇ ಪೋಷಕರು, ಖಾಸಗಿ ಶಿಕ್ಷಣ ಮಂಡಳಿ ಒಕ್ಕೂಟ ಕೂಡ ಈ ಬಗ್ಗೆ ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಇದೇ ಹಿನ್ನಲೆ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ನಿರ್ಧರಿಸಿದ್ದಾರೆ. ಇದರ ಅಂಗವಾಗಿ ನಾಳೆ ಬೆಳಗ್ಗೆ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ.

    ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ‌ ನಾಳೆ‌ ಬೆಳಗ್ಗೆ 10 ಗಂಟೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿ ನಡೆಸಲಿದ್ದು, ಪರೀಕ್ಷೆ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಧಿಕೃತವಾಗಿ ಸ್ಪಷ್ಟಪಡಿಸಲಿದ್ದಾರೆ.

    ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಪರೀಕ್ಷೆಗೆ ಒತ್ತಾಯಿಸಿದೆ. ಕಾಲೇಜು ಹಂತದಲ್ಲಿ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದು, ಆಯಾ ಕಾಲೇಜುಗಳಲ್ಲೇ ಪರೀಕ್ಷೆ ನಡೆಸಿ ಫಲಿತಾಂಶ ನೀಡುವಂತೆ ತಿಳಿಸಿದೆ. ಕಳೆದ ವರ್ಷ ಕೊರೋನಾ ಸೋಂಕಿನ ನಡುವೆಯೂ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನ ಯಶಸ್ವಿಯಾಗಿ ಇಲಾಖೆ ನಡೆಸಿದೆ. ಇದೇ ಹಿನ್ನಲೆ ಈ ಬಾರಿ ಕೂಡ ಈಗ ಮತ್ತಷ್ಟು ಸೂಕ್ತ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಸಲಹೆ ನೀಡಿದೆ.

    ರಾಜ್ಯದಲ್ಲಿ ಪರೀಕ್ಷೆ ರದ್ದು ಮಾಡುವ ಬದಲಾಗಿ ಪರೀಕ್ಷೆ ನಡೆಸಬೇಕು ಎಂಬ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಸೋಂಕು ತಗ್ಗಿದೆಯಾದರೂ ಅಪಾಯ ಇದ್ದೆ ಇದೆ. ಈ ಹಿನ್ನಲೆ ತಕ್ಷಣಕ್ಕೆ ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಂಡಿಲ್ಲ. ಈ ಕುರಿತು ಅಂತಿಮವಾಗಿ ಶಿಕ್ಷಣ ಸಚಿವರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

    ಇದನ್ನು ಓದಿ: ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ; ಮೈಸೂರು ಪಾಲಿಕೆ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿಲ್ಪಾ ನಾಗ್​​

    ಇದೇ ವೇಳೆ ಅವರು ಮಕ್ಕಳ ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ಪರೀಕ್ಷೆ ಕ್ರಮ ನಡೆಸಬೇಕು. ದ್ವಿತೀಯ ಪಿಯು ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟವಾಗಿದ್ದು, ಪರೀಕ್ಷೆ ನಡೆಸುವುದು ಅತ್ಯಗತ್ಯ. ಪರೀಕ್ಷೆ ಯಾವುದೇ ಮಾದರಿಯಲ್ಲಿದ್ದರೂ ಪರವಾಗಿಲ್ಲ, ಪರೀಕ್ಷೆ ನಡೆಸುವುದು ಮುಖ್ಯ  ಈ ಹಿನ್ನಲೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಒಂದೇ ಗಂಟೆಯಲ್ಲಿ ಪರೀಕ್ಷೆ ನಡೆಸಬೇಕು. ಪಿಯು ವಿದ್ಯಾರ್ಥಿಗಳ ಅಪ್ಷನಲ್​ ವಿಷಯಗಳೆಲ್ಲಾ ಸೇರಿಸಿ ಒಂದು ಮುಖ್ಯ ವಿಷಯ ಒಂದು ಮಾಡಿ ಎರಡೇ ಪರೀಕ್ಷೆ ಮಾಡಲು ಸಲಹೆ ನೀಡಲಾಗಿದೆ

    ಇದನ್ನು ಓದಿ: ಸೊಸೆಯನ್ನು ಬಲವಂತವಾಗಿ ತಬ್ಬಿಕೊಂಡು ಕೋವಿಡ್-19 ಸೋಂಕು ಅಂಟಿಸಿದ ಅತ್ತೆ..!

    ಇದೇ ವೇಳೆ ಆತಂಕಕ್ಕೆ ಒಳಗಾಗಿರುವ ಪೋಷಕರು ಮಾತ್ರ ಪರೀಕ್ಷೆ ನಡೆಸುವುದು ಬೇಡ ಎಂದು ತಿಳಿಸಿದ್ದಾರೆ. ಪೋಷಕರ ಸಮನ್ವಯ ಸಮಿತಿ ಸದಸ್ಯ ಯೋಗಾನಂದ್ ಮಾತನಾಡಿ, ಸಿಬಿಎಸ್​ಸಿ ಮತ್ತು ಐಸಿಎಸ್​ಸಿ ಹಾಗೂ ರಾಜ್ಯ ಪಠ್ಯಕ್ರಮ ವಿದ್ಯಾರ್ಥಿಗಳ ನಡುವೆ ತಾರತಮ್ಯ ಉಂಟು ಮಾಡಬಾರದು. ಮಕ್ಕಳ ಆರೋಗ್ಯ ಮುಖ್ಯ. ಸದ್ಯದ ಮಟ್ಟಿಗೆ ಪರೀಕ್ಷೆ ನಡೆಸದೆ ಇರುವುದು ಒಳ್ಳೆಯದು ಅಂತ ಹೇಳಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:Seema R
    First published: