Zameer Ahmed: ಶಾಸಕ ಜಮೀರ್ ಮನೆ ಮೇಲಿನ ED Raid ರೇಡ್ ಅಂತ್ಯ, ಮನೆಯಲ್ಲಿ ಸಿಕ್ಕಿದ್ದೇನು? ಫೋನ್ ಮಾಡಿದಾಗ ಥಟ್ಟನೆ ವಿಚಾರಣೆಗೆ ಬರ್ಬೇಕು ಎಂದಿದ್ದಾರೆ ಅಧಿಕಾರಿಗಳು

Zameer Ahmed ED Raid: "ನಾನು ಶ್ರಮವಹಿಸಿ ಸಂಪೂರ್ಣವಾಗಿ ವೈಟ್​ನಲ್ಲೇ ಈ ಮನೆ ಕಟ್ಟಿದ್ದೇನೆ. ಯಾರೋ ರಾಜಕೀಯ ದ್ವೇಷಕ್ಕೆ ನನ್ನ ಮೇಲೆ ಕಂಪ್ಲೇಂಟ್ ಕೊಟ್ಟಿರ್ತಾರೆ. ಅವರನ್ನು ದೇವರು ನೋಡಿಕೊಳ್ತಾನೆ. ಫೋನ್ ಮಾಡಿದ ಕೂಡಲೇ ವಿಚಾರಣೆಗೆ ಬರಬೇಕು ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ" ಎಂದರು ಶಾಸಕ ಜಮೀರ್ ಅಹಮದ್ ಖಾನ್.

ಜಮೀರ್ ಅಹ್ಮದ್

ಜಮೀರ್ ಅಹ್ಮದ್

  • Share this:
ಬೆಂಗಳೂರು(ಆಗಸ್ಟ್ 06): ಐಎಂಎ(IMA) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ನಲಾದ ಇಡಿ ರೇಡ್ (ED Raid) ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆ. ಶಾಸಕ ಜಮೀರ್ ಅಹಮದ್ (Zameer Ahmed Khan) ಮನೆ ಮೇಲಿನ ರೇಡ್ ಇಂದು ಮುಂಜಾನೆ ಮುಗಿದಿದೆ. ನಿನ್ನೆ ಮುಂಜಾನೆ 6 ಗಂಟೆಯಿಂದ ಶಾಸಕ ಜಮೀರ್ ಅಹಮದ್ ಮನೆ ಮೇಲೆ ನಡೆಯುತ್ತಿದ್ದ ಇಡಿ ರೇಡ್ ಇಂದು ಅಂತ್ಯ ಕಂಡಿದೆ. ಸತತವಾಗಿ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ತಡರಾತ್ರಿಯೂ ಜಮೀರ್ ವಿಚಾರಣೆ ಮಾಡಿದ್ದರು. ಮುಂದೆ ತಾವು ಕೆರ ಮಾಡಿದಾಗೆಲ್ಲಾ ತಪ್ಪದೇ ವಿಚಾರಣೆಗೆ ಬರಬೇಕು ಎಂದು ತಿಳಿಸಿ ಜಮೀರ್ ಮನೆಯಿಂದ ಸದ್ಯ ಅಧಿಕಾರಿಗಳು ರೇಡ್ ಮುಗಿಸಿ ಹೊರಹೋಗಿದ್ದಾರೆ. ಒಟ್ಟು ನಾಲ್ಕು ಕಾರುಗಳಲ್ಲಿ ಬಂದಿದ್ದ ಇಡಿ ಅಧಿಕಾರಿಗಳ ತಂಡ ಸಿ ಆರ್ ಪಿಎಫ್ ಸಿಬ್ಬಂದಿ ಯೊಂದಿಗೆ  ದಾಖಲೆಗಳ ಸಮೇತ ನಿರ್ಗಮಿಸಿದೆ. ಬಹಳಷ್ಟು ಮಹತ್ವದ ದಾಖಲೆಗಳ ಸಮೇತವಾಗಿ ಇಡಿ ಅಧಿಕಾರಿಗಳು ರೇಡ್ ಮುಗಿಸಿ ಇಂದು ನಿರ್ಗಮಿಸಿದ್ದಾರೆ. ರೇಡ್ ಮುಗಿದ ನಂತರ ಮನೆಯಿಂದ ಹೊರಬಂದ ಶಾಸಕ ಜಮೀರ್ ಅಹಮದ್ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದಾರೆ.

ನಾನು ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಸದ್ಯ ದಾಖಲೆ ಪರಿಶೀಲಿಸಿದ್ರು, ಆದರೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿಲ್ಲ. ನನ್ನ ಮನೆ ವಿಚಾರಕ್ಕೆ ಹಲವು ದೂರು ಬಂದಿದೆ, ಅದಕ್ಕೆ ಬಂದಿದ್ದಾರೆ. ನಾನು ನನ್ನ ಮನೆಯನ್ನು ಸಂಪೂರ್ಣವಾಗಿ ವೈಟ್ ನಲ್ಲೇ (ಅಧಿಕೃತ ಹಣದಿಂದಲೇ) ಕಟ್ಟಿರುವುದು. ಎಲ್ಲಾ ದಾಖಲೆ ತೋರಿಸಿದ್ದೇನೆ, ವ್ಯಾಲ್ಯುಯೇಶನ್ ಮಾಡಿದ್ದಾರೆ. ನಾನು ನೀಡಿದ ದಾಖಲೆಗೆ ಸಮಾಧಾನ ಆಗಿ ಹೋಗಿದ್ದಾರೆ. ಇಡಿ ಅಧಿಕಾರಿಗಳು ಮನೆಯನ್ನು ಸಂಪೂರ್ಣವಾಗಿ ಸರ್ಚ್ ಮಾಡಿದ್ದಾರೆ, ನನ್ನ ಹಾಗೂ ನನ್ನ ಸಹೋದರರ ಮನೆಯಲ್ಲೂ ಸರ್ಚ್ ಮಾಡಿದ್ದಾರೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ಮನೆ ಯಾವಾಗ ತಗೊಂಡ್ರಿ, ಪೇಮೆಂಟ್ ಹೇಗೆ ಮಾಡಿದ್ರಿ ಅಂತ ಪ್ರಶ್ನೆಗಳನ್ನು ಕೇಳಿದ್ರು. ಈ ನಡುವೆ ತಮ್ಮನ ಹೆಂಡತಿಗೆ ಹೊಟ್ಟೆ ನೋವು ಬಂದಿತ್ತು, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಮೀರ್ ಹೇಳಿದ್ದಾರೆ.

ಇದನ್ನೂ ಓದಿ: Zameer Ahmed- 90 ಕೋಟಿ ಮೌಲ್ಯದ ನಿವೇಶನ ಕೇವಲ 9.38 ಕೋಟಿಗೆ ಮಾರಾಟ; ಇಡಿ ಕಣ್ಣಿಗೆ ಜಮೀರ್ ಬಿದ್ದದ್ದು ಹೀಗೆ

ಇನ್ನು ಇಡಿ ಅಧಿಕಾರಿಗಳು ಹಲವು ಬಾರಿ ದೂರು ಮನೆ ವಿಚಾರವಾಗಿ ಬಂದಿದೆ ಅಂದ್ರು. ನಾನೇ ಅವರನ್ನು ಬ್ಯಾಂಕ್ ಗೆ ಕಳುಹಿಸಿದ್ದೆ, ಎಸ್ ಬಿಐ ಜನತಾ ಸೇರಿ ಮೂರು ಬ್ಯಾಂಕ್ ಕಳುಹಿಸಿದ್ದೆ, ಅಲ್ಲೆಲ್ಲಾ ಪರಿಶೀಲಿಸಿದ್ದಾರೆ. ನಾನು ಶ್ರಮವಹಿಸಿ ಏಳು ವರ್ಷದಿಂದ ಮನೆ ನಿರ್ಮಾಣ ಮಾಡಿದ್ದೇನೆ.. ಎಲ್ಲರಿಗೂ ಮನೆ ಮೇಲೆ ಹಾಗೂ ನನ್ನ ಮೇಲೆ ಕಣ್ಣು..ರಾಜಕೀಯದಲ್ಲಿ ಶತ್ರುಗಳು ಸಹಜ. ದೂರು ನೀಡಿದ್ದು ಒಳ್ಳೆದಾಯ್ತು.. ಇವತ್ತಲ್ಲ ನಾಳೆ ಇದು ಆಗಲೇಬೇಕಾಗಿತ್ತು.. ಅದು ಈಗ ಕ್ಲಿಯರ್ ಆಗಿದೆ ಎಂದರು. ಇನ್ನು ಪ್ರಮುಖವಾಗಿ ಚರ್ಚೆಗೆ ಬಂದಿದ್ದ ಐಎಂಎ ವಿಚಾರವಾಗಿ ಅಧಿಕಾರಿಗಳು ಏನೂ ಕೇಳಿಲ್ಲ ಎಂದಿದ್ದಾರೆ ಜಮೀರ್ ಅಹಮದ್ ಖಾನ್.

ಅಗತ್ಯ ಇದ್ರೆ ಕರೆಯುತ್ತೇವೆ ಎಂದಿದ್ದಾರೆ, ನನ್ನ ನಂಬರ್ ಪಡೆದುಕೊಂಡಿದ್ದಾರೆ. ಬೇರೆ ಕಡೆ ರೇಡ್ ಬಗ್ಗೆ ನನಗೇನು ಗೊತ್ತಿಲ್ಲ. ಇಡಿ ಅಧಿಕಾರಿಗಳ ನಿರಿಕ್ಷೆಗೆ ತಕ್ಕಂತೆ ಅವ್ರಿಗೆ ಏನು ಸಿಕ್ಕಿಲ್ಲ..ದೂರಿನ ಹಿಂದೆ ರಾಜಕೀಯ ಹಿನ್ನಲೆ ಇರಬಹುದು..ನನ್ನ ಮೇಲೆ ದೂರು ಕೊಟ್ಟವರ್ಯಾರು ಎಂದು ಇಡಿ ಅಧಿಕಾರಿಗಳಿಗೆ ಪ್ರಶ್ನೆ ಕೇಳಿದೆ..ಆದ್ರೆ ಅವರು ಹೆಸರು ಹೇಳಿಲ್ಲ..ದೂರುದಾರರಿಗೆ ನಾನೇನು ಉತ್ತರ ಕೊಡಲ್ಲ, ದೇವರೇ ಉತ್ತರ ಕೊಡ್ತಾನೆ. ನಾನು ಕಳ್ಳತನ, ಲೂಟಿ ಮಾಡಿದ್ರೆ ತಪ್ಪು. ಸ್ವಂತ ದುಡಿಮೆಯಿಂದ ಸಂಪಾದಿಸಿದ ದುಡ್ಡು ಎಂದಿದ್ದಾರೆ ಶಾಸಕ ಜಮೀರ್ ಅಹಮದ್ ಖಾನ್. ಇನ್ನು, ಮಾಜಿ ಸಚಿವ ರೋಷನ್ ಬೇಗ್ ನಿವಾಸಿದಲ್ಲಿ ನಡೆಯುತ್ತಿರುವ ಇಡಿ ರೇಡ್ ಇನ್ನೂ ಮುಗಿದಿಲ್ಲ.
Published by:Soumya KN
First published: