ED Raid: ಜಮೀರ್​ ಸಹೋದರ, ಮಗನ ಪ್ರತ್ಯೇಕ ವಿಚಾರಣೆ; ಕ್ಲೌಡ್​ ಅಕೌಂಟ್​ನಿಂದ ಸಿಕ್ಕಿದ ಮಹತ್ವದ ಸುಳಿವು!

ನ್ಯಾಷನಲ್ ಟ್ರಾವೆಲ್ಸ್ ನೋಡಿಕೊಳ್ಳುತ್ತಿದ್ದ ಜಮೀರ್​ ಅಹ್ಮದ್​ ಅವರ ಮೂರನೇ ಸಹೋದರ ಶಕೀರ್​ ಅವರನ್ನು ಕೂಡ ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಜಮೀರ್​ ಸಹೋದರ

ಜಮೀರ್​ ಸಹೋದರ

 • Share this:
  ಬೆಂಗಳೂರು (ಆ. 5): ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್ (Zameer Ahmed Khan)​ ಅವರ ತಮ್ಮ ಮುಜಮಿಲ್​ ಖಾನ್​ ಅವರನ್ನು ಜಾರಿ ನಿರ್ದೇಶನಾಯಲದ (ED Raid) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಂಬೆಳಗ್ಗೆ ಚಾಮರಾಜಪೇಟೆ ಶಾಸಕರ ಮನೆ ಸೇರಿದಂತೆ ಕಚೇರಿಗಳ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಸತತ 10 ಗಂಟೆಗಳ ಪರಿಶೀಲನೆ ನಡೆಸಿದರು. ಅಕ್ರಮ ವಿದೇಶಿ ವ್ಯವಹಾರ ಕಂಡು ಬಂದ ಹಿನ್ನಲೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಈ ವೇಳೆ ಜಮೀರ್​ ಅಹ್ಮದ್​ ಅವರ ಮನೆ, ಕಚೇರಿ, ಫ್ಲಾಟ್​, ಅವರ ನ್ಯಾಷನಲ್​ ಟ್ರಾವೆಲ್ಸ್​ ಕಚೇರಿ ಮೇಲೆ ದಾಳಿ ನಡೆಸಿ ಅನೇಕ ದಾಖಲೆಗಳನ್ನು ಪರಿಶೀಲನೆ ನಡೆಸಿದರು

  ಕೆಲ ವ್ಯವಹಾರಿಕ ದಾಖಲೆಗಳನ್ನ ಈಗಾಗಲೇ ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು, ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಅವರ ತಮ್ಮ ಮುಜಮಿಲ್​ ಖಾನ್​ ಅನ್ನು ವಶಕ್ಕೆ ಪಡೆದಿದ್ದಾರೆ. ಮುಜಮಿಲ್​ ಖಾನ್​ ಕೂಡ ಜಮೀರ್​ ಅಹ್ಮದ್​ ಖಾನ್​ ಅವರ ಆರ್ಥಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಹೊಂದಿದ್ದ ಕಾರಣ ಅವರನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಮುಜಮಿಲ್​ ಖಾನ್​ ಅನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ಕರೆದುಕೊಂಡು ಹೋಗುತ್ತಿದ್ದಂತೆ ಅವರ ಮನೆ ಮುಂದೆ ಜಮಾಯಿಸಿದ್ದ ಜಮೀರ್​ ಅಹ್ಮದ್​ ಖಾನ್​​ ಅವರ ಬೆಂಬಲಿಗರು ಇಡಿ ಕಾರನ್ನು ಹಿಂಬಾಲಿಸಿ, ಹೈ ಡ್ರಾಮಾ ಸೃಷ್ಟಿಸಿದರು.

  ನ್ಯಾಷನಲ್ ಟ್ರಾವೆಲ್ಸ್ ನೋಡಿಕೊಳ್ಳುತ್ತಿದ್ದ ಜಮೀರ್​ ಅಹ್ಮದ್​ ಅವರ ಮೂರನೇ ಸಹೋದರ ಶಕೀರ್​ ಅವರನ್ನು ಕೂಡ ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಇದೇ ವೇಳೆ ಜಮೀರ್​ ಅವರ ಮಗನನ್ನು ಕೂಡ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ

  ಕ್ಲೌಡ್ ಅಕೌಂಟ್ ನಲ್ಲಿ ಜಮೀರ್ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ..!
  ಮಾಜಿ ಸಚಿವ‌ ಜಮೀರ್ ಅಹಮದ್ ಖಾನ್ ಮನೆ ಮೇಲೆ ಇಡಿ ದಾಳಿಗೆ ಕಾರಣ ಐಎಂಎ ಮ್ಯಾನೇಜರ್ ನವೀದ್ ಸೇವ್​ ಮಾಡಿದ್ದ ಡಾಟಾ ಎನ್ನಲಾಗಿದೆ. ಐಎಂಎ ಹಣದ ವ್ಯವಹಾರಗಳ ಕುರಿತು ಮನ್ಸೂರ್ ಖಾನ್ ಡಾಟಾ ಸೇವ್ ಮಾಡಿ ಇ ಮೇಲ್ ಕ್ಲೌಡ್ ನಲ್ಲಿ ಸಂಗ್ರಹ ಮಾಡಿದ್ದರು. ಹಣ ವರ್ಗಾವಣೆಯ ಡಿಟೇಲ್ಸ್ ಕ್ಲೌಡ್ ನಲ್ಲಿ ಸೇವ್ ಆಗಿತ್ತು.

  ಇದನ್ನು ಓದಿ: ಆಷಾಢ ಮಾಸದಲ್ಲಿ ಕುಣಿಯುವ ಈ ನೃತ್ಯಕ್ಕಿದೆ ಕರಾವಳಿ ಭಾಗದಲ್ಲಿ ಭಾರೀ ಮಹತ್ವ

  ಪ್ರಕರಣ ದಾಖಲಾಗುತ್ತಿದ್ದಂತೆ ನವೀದ್ ಈ ಮಾಹಿತಿಗಳನ್ನು ಡಿಲೀಟ್​ ಮಾಡಿದ್ದರು. ಬಳಿಕ ರಿಟ್ರೀವ್ ಮಾಡಿ ಸಿಬಿಐ ಮಾಹಿತಿ ಹೊರತೆಗೆದಿದ್ದರು. ಅದರಲ್ಲಿ ಯಾರಿಗೆ.?, ಎಷ್ಟು.? ಎಲ್ಲಿ.? ಯಾವ ಮಾರ್ಗದಲ್ಲಿ ಸಂದಾಯ ಆಗಿತ್ತು ಎಂದು ಪತ್ತೆ ಮಾಡಲಾಗಿತ್ತು. ಹಣ ಪಡೆದವರು, ಕಳಿಸಿದ ವ್ಯಕ್ತಿ ಮತ್ತು ಅವರ ಡಿಟೇಲ್ಸ್ ಸಮೇತ ಸೇವ್ ಮಾಡಲಾಗಿತ್ತು. ಈ ಮಾಹಿತಿ ಡಿಲೀಟ್ ಬಳಿಕ ಮನ್ಸೂರ್​ ಅದನ್ನು ಅಮೆಜಾನ್ ಕ್ಲೌಡ್ ಗೆ ಶಿಫ್ಟ್ ಮಾಡಿಸಿದ್ದ. ಸಿಬಿಐ ತನಿಖೆ ಆರಂಭಿಸಿದಾಗ ಈ ಮಾಹಿತಿ ಪತ್ತೆಯಾಗಿತ್ತು. ಇದಕ್ಕೂ ಮೊದಲು ಕ್ಲೌಡ್ ಹ್ಯಾಕ್ ಆಗಿದೆ ಎಂದಿದ್ದ ಇಡಿ. ಸದ್ಯ ಸಿಬಿಐ ಹೊರ ತೆಗೆದ ಮಾಹಿತಿ ಆಧಾರದ ಮೇಲೆ ತನಿಖೆ ಚುರುಕು ಮಾಡಲಾಗಿದೆ. ಪ್ರಕರಣ ಸಂಬಂಧ ಬಹುತೇಕ ಜಮೀರ್ ರಿಗೆ ನೋಟಿಸ್ ಕೊಟ್ಟು ವಿಚಾರಣೆ ಬರುವಂತೆ ಹೇಳುವ ಸಾಧ್ಯತೆ ಕೂಡ ಇದೆ

  ಜಮೀರ್ ವರ್ಗಾವಣೆ ಆಗಿರುವ ಮಾಹಿತಿಯೂ ಪತ್ತೆ
  ಈ ಕ್ಲೌಡ್​ನಲ್ಲಿ ಸೇವ್​ ಆಗಿದ್ದ ಮಾಹಿತಿಯಲ್ಲಿ ಶಾಸಕ ಜಮೀರ್​ ಅಹ್ಮದ್​ ಅವರಿಗೂ ಹಣ ವರ್ಗಾವಣೆ ಆಗಿರುವ ಮಾಹಿತಿ ಲಭ್ಯವಾಗಿದೆ. ಈಗ ಸಂಪೂರ್ಣ ಮಾಹಿತಿಯನ್ನು ಇಡಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಐಎಂಎ ಗೋಲ್ಡ್ 5 ಕೋಟಿ ಮೌಲ್ಯದ ಚಿನ್ನ ಹಾಗೂ ಬಡ್ಡಿಯ ರೂಪದಲ್ಲಿಯೂ ಹಣವನ್ನು ಜಮೀರ್​ ಪಡೆದು ಕೊಂಡಿದ್ದರು ಎನ್ನಲಾಗಿದೆ.
  Published by:Seema R
  First published: