Garbage Dumping: ಬಿಬಿಎಂಪಿ ಆಯುಕ್ತರಿಗೆ ಲಾಸ್ಟ್ ವಾರ್ನಿಂಗ್ ಕೊಟ್ಟ ಹೈಕೋರ್ಟ್, ಆದೇಶ ಪಾಲಿಸದಿದ್ದರೆ ಜೈಲು ಶಿಕ್ಷೆ

ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯುವ ತನ್ನ ಆದೇಶವನ್ನು ಏಕೆ ನಿರ್ಲಕ್ಷಿಸಲಾಗಿದೆ ಎಂಬುದನ್ನು ವಿವರಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಪೀಠವು ಗೌರವ್ ಗುಪ್ತಾ ಅವರಿಗೆ ಕೋರ್ಟ್​ ತಿಳಿಸಿದೆ.

ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ತರಾಟೆ

ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ತರಾಟೆ

  • Share this:
ಕರ್ನಾಟಕ ಹೈಕೋರ್ಟ್ ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಮಿಟ್ಟಗಾನಹಳ್ಳಿ (Mittaganahalli) ಕ್ವಾರಿಯಲ್ಲಿ ತ್ಯಾಜ್ಯ (Waste) ಸುರಿಯುವುದನ್ನು ತಡೆಯುವ ತನ್ನ ಆದೇಶವನ್ನು ಏಕೆ ನಿರ್ಲಕ್ಷಿಸಲಾಗಿದೆ ಎಂಬುದನ್ನು ವಿವರಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta) ಆದೇಶವನ್ನು ಪಾಲಿಸದಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಈ ವಿಷಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್ (High court), ಗುಪ್ತಾ ಅವರಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಅರಿಯಲು ಸಾಧ್ಯವಾಗಲಿಲ್ವ ಎಂದು ಪ್ರಶ್ನಿಸಿದೆ. ಕೆಲವು ಅಧಿಕಾರಿಗಳು ತಾವು ಕಾನೂನನ್ನು ಮೀರಿದ್ರೆ ಏನ್​ ಆಗುತ್ತೆ ಅಂತ ಉದಾಸೀನಾ ಮಾಡ್ತಾರೆ. ಆದ್ರೆ ನಾವು ಅವರಿಗೆ ಕಾನೂನು ಏನು ಎಂಬುದನ್ನು ತಿಳಸಬೇಕಿದೆ ಎಂದು ಪೀಠ ಕಟುವಾಗಿ ನುಡಿದಿದೆ. ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯುವ ತನ್ನ ಆದೇಶವನ್ನು ಏಕೆ ನಿರ್ಲಕ್ಷಿಸಲಾಗಿದೆ ಎಂಬುದನ್ನು ವಿವರಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಪೀಠವು ಗೌರವ್ ಗುಪ್ತಾ ಅವರಿಗೆ ಕೋರ್ಟ್​ ತಿಳಿಸಿದೆ.

ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಕಸ ವಿಲೇವಾರಿ

ಕರ್ನಾಟಕ ರಾಜ್ಯದ ಅನುಮತಿಯಿಲ್ಲದೆ ಜಿಲ್ಲೆಯ ಮಿಟ್ಟಗಾನಹಳ್ಳಿಯಲ್ಲಿರುವ ಕ್ವಾರಿಯಲ್ಲಿ ಬೆಂಗಳೂರು ನಗರದ ಕಸವನ್ನು ಸುರಿಯುತ್ತಿರುವ ಕುರಿತು ಬಿಬಿಎಂಪಿ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹಾಕಿತ್ತು. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

‘ಆದೇಶ ಪಾಲಿಸದಿದ್ರೆ ಜೈಲು ಶಿಕ್ಷೆ’

ಬಿಬಿಎಂಪಿ ಪರ ವಾದ ಮಂಡಿಸುತ್ತಿರುವ ಉದಯ್ ಹೊಳ್ಳ ಅವರಿಗೆ ನ್ಯಾಯಾಲಯ, ''ನ್ಯಾಯಾಲಯದ ಆದೇಶಕ್ಕಿಂತ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಗೌರವ್​ ಗುಪ್ತಾ ನ್ಯಾಯಾಲಯದ ಆದೇಶವನ್ನು ಅರ್ಥಮಾಡಿಕೊಂಡು ಪಾಲಿಸಲು ಸಾಧ್ಯವಾಗದಿದ್ದರೆ ನಾವು ಅವರನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ. ನ್ಯಾಯಾಲಯದ ಆದೇಶ ಅಂತಿಮವಾಗಿದೆ. ಖುದ್ದಾಗಿ ಹಾಜರಾಗಲಿ, ಕೋರ್ಟ್​ ಆದೇಶವನ್ನು ಹೇಗೆ ನಿರಾಕರಿಸುತ್ತೀರಾ? ನಮ್ಮ ಆದೇಶವನ್ನು ಅರಿಯದೇ ಕಸ ವಿಲೇವಾರಿ ಮಾಡಿದ್ರೆ, ಅವರನ್ನ ಜೈಲಿಗೆ ಹಾಕುತ್ತೇವೆ. ನೀವು ಅವರನ್ನ ಹೇಗೆ ರಕ್ಷಿಸುವಿರಿ? ಎಂದು ಬಿಬಿಎಂಪಿ ಪರ ವಕೀಲರನ್ನು ನ್ಯಾಯಧೀಶರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Uttara Kannada: ಉತ್ತರ ಕನ್ನಡದಿಂದ ಉತ್ತರ ಕರ್ನಾಟಕಕ್ಕೆ ಹರಿಯುತ್ತಾಳಾ ಕಾಳಿ? ಜಿಲ್ಲೆ ಜನರಿಂದ ಆಕ್ರೋಶ

ತ್ಯಾಜ್ಯ ವಿಲೇವಾರಿ ಮಾಡದಂತೆ ಆದೇಶಿಸಲಾಗಿದೆ. ಹೀಗಿದ್ದರೂ ಘನತ್ಯಾಜ್ಯ ಸುರಿಯುವುದು ಮುಂದುವರಿದಿದೆ. ನಾವು ಸ್ವಲ್ಪ ಸಮಯದಿಂದ ಅವರ ನಡವಳಿಕೆಯನ್ನು ಗಮನಿಸುತ್ತಿದ್ದೇವೆ. ಇದು ಮೊದಲ ಪ್ರಕರಣವಲ್ಲ. ”ಮಾರ್ಚ್ 6, 2021 ರಂದು ನ್ಯಾಯಾಲಯವು ಕ್ವಾರಿಯಲ್ಲಿ ಕಸ ಸುರಿಯುವುದನ್ನು ನಿಲ್ಲಿಸುವಂತೆ ನಾಗರಿಕ ಸಂಸ್ಥೆಗೆ ನಿರ್ದೇಶನ ನೀಡಿತ್ತು, ಆದರೆ ಬಿಬಿಎಂಪಿ ಅದನ್ನು ಮುಂದುವರೆಸಿದೆ ಎಂದು ತಿಳಿಸಲಾಯಿತು. ಕೆಎಸ್‌ಪಿಸಿಬಿ ಪರ ವಕೀಲರು, ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ತ್ಯಾಜ್ಯ ಸುರಿಯಲು ಬಿಬಿಎಂಪಿಗೆ ಈ ಹಿಂದೆ ಅನುಮತಿ ನೀಡಿರಲಿಲ್ಲ ಅಂತ ಹೇಳಿದ್ದಾರೆ

ಇದನ್ನೂ ಓದಿ: Shivaji Statue: ಪುಣೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ ಮಾಡಿದ ಮೋದಿ

ಪ್ರಮಾಣಪತ್ರ ಸಲ್ಲಿಸಲು ತಾಕೀತು

ಕೋರ್ಟ್‌ ಆದೇಶ ಪಾಲನೆ ಮಾಡದೆ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ಆಯುಕ್ತರನ್ನು ಯಾವುದೇ ನಿಯಮ ಅಥವಾ ಕಾನೂನುಗಳು ರಕ್ಷಿಸುವುದಿಲ್ಲ ಎಂದು ತೀಕ್ಷ್ಣವಾಗಿ ನುಡಿದ ಪೀಠ, ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ತಮ್ಮ ವರ್ತನೆಯ ಬಗ್ಗೆ ವಿವರಣೆ ನೀಡಿ ವೈಯಕ್ತಿಕ ಪ್ರಮಾಣಪತ್ರ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡುತ್ತೇವೆ. ಪ್ರಮಾಣಪತ್ರ ಪರಿಶೀಲಿಸಿದ ಬಳಿಕ, ಅವರ ಮೇಲೆ ಕರುಣೆ ತೋರಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವುದಾಗಿ ತಿಳಿಸಿ, ಮುಂದಿನ ವಿಚಾರಣೆ ವೇಳೆ ಮುಖ್ಯ ಆಯುಕ್ತರು ಖುದ್ದು ಹಾಜರಿರಬೇಕು ಎಂದು ನಿರ್ದೇಶಿಸಿತು.
Published by:Pavana HS
First published: