ಬೆಂಗಳೂರಿಗೂ ತಟ್ಟಿದ ಅಫ್ಘನ್-ತಾಲಿಬಾನ್ ಬಿಕ್ಕಟ್ಟಿನ ಬಿಸಿ:  ಗಗನಕ್ಕೇರಿದ ಡ್ರೈ ಫ್ರೂಟ್ಸ್ ಬೆಲೆ!

afghanistan crisis: ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮ ಆಳ್ವಿಕೆ ಪ್ರಾರಂಭಿಸಿದ್ದು ಭಾರತಕ್ಕೆ ಆಮದು‌ ಮತ್ತು ರಫ್ತನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ರಾಜ್ಯದ ಒಣಹಣ್ಣುಗಳ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಅಫ್ಘನ್​​ ಡ್ರೈ ಫ್ರೂಟ್ಸ್​​

ಅಫ್ಘನ್​​ ಡ್ರೈ ಫ್ರೂಟ್ಸ್​​

  • Share this:
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದ್ದು ಲಕ್ಷಾಂತರ ಜನರಿಗೆ ಸಂಕಷ್ಟ ಎದುರಾಗಿದೆ. ಇಡೀ ಜಗತ್ತೀಗ ಅಫ್ಘಾನಿಸ್ತಾನದ ಮುಂದಿನ ಘಟನೆಗಳತ್ತ ಕಿವಿಹಾಯಿಸಿದೆ. ಈ ನಡುವೆ ಅಲ್ಲಿ ದೂರದ ಅಫ್ಘಾನ್ ಬಿಕ್ಕಟ್ಟಿನ ಬಿಸಿ ಇಲ್ಲಿ ನಮ್ಮ ಬೆಂಗಳೂರಿಗೂ ತಟ್ಟಿದೆ. ಹಲವು ಡ್ರೈ ಫ್ರೂಟ್‌ಗಳು ಅಫ್ಘಾನ್ ನಿಂದಲೇ ಬೆಂಗಳೂರಿನ ಸರಬರಾಜಾಗಬೇಕು. ಸದ್ಯಕ್ಕೆ ಈ‌ ದೇಶದ ಆಮದು ಬಂದ್ ಆಗಿದ್ದು ಒಣಹಣ್ಣುಗಳ ಬೆಲೆ ಗಗನಕ್ಕೇರಿದೆ.

ಮೊದಮೊದಲು ಅಫ್ಘಾನಿಸ್ತಾನದಲ್ಲಿ ಅರಾಜಕತೆ ಎದ್ದರೇ ನಮಗೆನು ಸಮಸ್ಯೆ ಅಂತ ಹಲವರು ಅಂದುಕೊಂಡಿದ್ದರು. ಆದ್ರೆ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮ ಆಳ್ವಿಕೆ ಪ್ರಾರಂಭಿಸಿದ್ದು ಭಾರತಕ್ಕೆ ಆಮದು‌ ಮತ್ತು ರಫ್ತನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ರಾಜ್ಯದ ಒಣಹಣ್ಣುಗಳ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಯಾಕಂದ್ರೆ ಅಫ್ಘಾನಿಸ್ತಾನ ಒಣಹಣ್ಣುಗಳ ರಪ್ತಿಗೆ ಮೊದಲಿಂದಲೂ ಪ್ರಸಿದ್ದಿ ಪಡೆದಿತ್ತು. ಅಫ್ಘಾನ್ ಕೇಸರಿಗೆ ತನ್ನದೇ ಆದ ಬೇಡಿಕೆ ನಮ್ಮ ಬೆಂಗಳೂರಿನಲ್ಲಿದೆ. 15, 20 ದಿನದಿಂದ ಅಫ್ಘಾನಿಸ್ತಾನದಿಂದ ಯಾವುದೇ ರೀತಿಯ ಒಣಹಣ್ಣುಗಳು‌ವ ರಫ್ತಾಗುತ್ತಿಲ್ಲ. ಹೀಗಾಗಿ ಈ‌ ಹಿಂದೆ ಖರೀದಿಸಿ ಸಂಗ್ರಹಿಸಿದ್ದಷ್ಟನ್ನೇ ಮಾರುಕಟ್ಟೆಯಲ್ಲಿ ಸಿಗಲಿದೆ. ಅದೂ‌ ಕೂಡ 70 ರಿಂದ 80% ದಷ್ಟು ಹೆಚ್ಚು ಬೆಲೆಗೆ ಮಾರಾಟವಾಗ್ತಿದೆ ಈಗ.

ಬೆಂಗಳೂರಿನಲ್ಲಿ ಅಫ್ಘನ್ ಡ್ರೈ ಫ್ರೂಟ್ಸ್ ಗಳ ಬೆಲೆ ಏರಿಕೆ!

• ಅಫ್ಘನ್ ಸ್ಪೆಷಲ್ ಅಂಜೂರ್ :  ಮೊದಲು ₹ 1,400 : ಈಗ ₹ 2,400

• ಅಫ್ಗನ್​​ ಕೇಸರಿ ( 2gm) : ಮೊದಲು ₹ 400 : ಈಗ ₹ 900

• ಅಫ್ಘನ್ ಒಣ ದ್ರಾಕ್ಷಿ  (1kg) :  ಮೊದಲು ₹ 640 : ಈಗ ₹ 920

• ಅಫ್ಘನ್ ಪೈನ್ ನಟ್ಸ್ (ಚಿಲ್ಗೋಜಾ : 1kg) : ಮೊದಲು ₹ 6,400 : ಈಗ ₹ 8,800

• ಅಫ್ಗನ್ ಮಾಮ್ರಾ ಬದಾಮ್ (1kg) : ಮೊದಲು ₹ 2,140 : ಈಗ ₹ 3,960

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ದಬ್ಬಾಳಿಕೆ ಸ್ವಲ್ಪ ಸಮಯವಷ್ಟೇ, ಜಾಸ್ತಿ ದಿನ ನಡೆಯಲ್ಲ: ಪ್ರಧಾನಿ ಮೋದಿ

ಕೊರೋನಾ ‌ಮೊದಲ ಬಾರಿ‌ ಬಂದಾಗ ಚೀನಾ ದಿಂದ ಆಮದಾಗುತ್ತಿದ್ದ ವಸ್ತುಗಳು ಸರಬರಾಜು ನಿಂತು ಬೆಲೆ ಏರಿಕೆಯಾಗಿತ್ತು. ಇದೀಗ ಅಫ್ಘಾನಿಸ್ತಾನದಿಂದ 20 ದಿನಗಳ‌ ಹಿಂದೆ ಆಮದಾದ ಒಣಹಣ್ಣುಗಳು‌ ಮಾತ್ರ ಸಿಗುತ್ತಿದೆ. ಅದೂ ಕೂಡ ದುಪ್ಪಟ್ಟು ಬೆಲೆಗೆ ಮಾರಾಟವಾಗ್ತಿದೆ. ಸದ್ಯ ಆಮದು ನಿಂತಿದ್ದರಿಂದ ಡ್ರೈ ಫ್ರೂಟ್ ಮಾಫಿಯಾ ಶುರುವಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಅಂತ ಡ್ರೈ ಫ್ರುಟ್ಸ್ ವ್ಯಾಪಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇದ್ರೀಸ್ ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಅಟ್ಟಹಾಸದ ಬಿಸಿ ಬೆಂಗಳೂರಿನ ಒಣಹಣ್ಣುಗಳ ಮಾರಾಟಗಾರರಿಗೂ ತಟ್ಟಿದೆ. ಬೆಲೆ ಏರಿಕೆ ಆದಂತೆ ಡ್ರೈ ಫ್ರೂಟ್ ಮಾಪಿಯಾ ತಲೆ ಎತ್ತಿದೆ. ಇದಕ್ಕೆ ಸರಕಾರ ಕಡಿವಾಣ ಹಾಕಲಿದ್ಯಾ ಅನ್ನೊದನ್ನ ಕಾದು ನೋಡ ಬೇಕಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: