Crime News: ದೃಶ್ಯಂ ಸಿನಿಮಾ ಸ್ಟೈಲ್ನಲ್ಲಿ ಕಳ್ಳತನದ ನಾಟಕ ಆಡಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್ ಕುಟುಂಬ
Robbery: ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಪರಿಚಿತರ ಹೆಸರಿನಲ್ಲಿ ಅಡವಿಟ್ಟು ಆ ಬಳಿಕ ಆಭರಣ ಕಳ್ಳತನ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿ ಪೊಲೀಸರಿಂದ ಗಿರವಿ ಇರಿಸಿಕೊಂಡ ಅಂಗಡಿಯ ಬಗ್ಗೆ ಸುಳಿವು ನೀಡಿ, ಆಭರಣವನ್ನು ಪೊಲೀಸರೇ ಕತರ್ನಾಕ್ ಕುಟುಂಬದವರಿಗೆ ತಂದು ಒಪ್ಪಿಸುವ ರೀತಿ ಸಂಚು ರೂಪಿಸಿದ್ದ ಕುಟುಂಬವೊಂದು ಈಗ ಪೊಲೀಸರ ಅತಿಥಿಯಾಗಿದೆ
ದೃಶ್ಯಂ (Drushyam)ಸಿನಿಮಾ(Film) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಕನ್ನಡ(Kannada) ಮಲಯಾಳಂ(Malayalam) ತೆಲುಗು(Telugu) ಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್(Hit) ಕಂಡಿರುವ ದೃಶ್ಯಂ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಸಿನಿಮಾ.. ದೃಶ್ಯಂ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್(Crazy star Ravichandran) ಮನೋಜ್ಞವಾಗಿ ಅಭಿನಯ ಮಾಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.. ಕೊಲೆ (Murder) ಮಾಡಿದರೂ ಯಾವುದೇ ಸಾಕ್ಷ್ಯಾಧಾರ ಸಿಗದಂತೆ ನಟನೆ ಮಾಡಿ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಕಥಾಹಂದರವುಳ್ಳ ದೃಶ್ಯಂ ಸಿನಿಮಾ ಪ್ರಿಯರ ಮೆಚ್ಚುಗೆಗೆ ಕಾರಣವಾಗಿತ್ತು.. ಈಗ ಕುಟುಂಬವೊಂದು ಇದೇ ದೃಶ್ಯಂ ಸಿನಿಮಾವನ್ನು ಪ್ರೇರಣೆಯಾಗಿ ಪಡೆದುಕೊಂಡು ಕಳ್ಳತನದ ನಾಟಕ ಆಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದೆ.
ದೃಶ್ಯಂ ಸಿನಿಮಾದ ರೀತಿ ಕಥೆ ಕಟ್ಟಲು ಹೋಗಿ ಪೊಲೀಸರ ಅತಿಥಿಯಾದ ಕುಟುಂಬ
ಬೆಂಗಳೂರಿನ ಆನೇಕಲ್ ಸಮೀಪದ ಸರ್ಜಾಪುರದಲ್ಲಿ ಕತರ್ನಾಕ್ ಕುಟುಂಬವೊಂದು ಸುಲಭವಾಗಿ ಹಣ ಮಾಡಲು, ದೃಶ್ಯಂ ಸಿನಿಮಾ ಪ್ರೇರೇಪಣೆ ಮಾಡಿಕೊಂಡಿದೆ.. ಇದಕ್ಕಾಗಿ ಏನು ತಿಳಿಯದ ಅಮಾಯಕರನ್ನು ಕೂಡ ನನ್ನ ಜಾಲಕ್ಕೆ ಸಿಕ್ಕಿ ಹಣ ಮಾಡುವ ಕತರ್ನಾಕ್ ಸ್ಕೆಚ್ ಹಾಕಿದೆ.. ಈ ಕತರ್ನಾಕ್ ಸ್ಕೆಚ್ ಗೆ ಇಡೀ ಕುಟುಂಬವೇ ಬೆಂಬಲ ನೀಡಿದೆ. ಹೌದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಪರಿಚಿತರ ಹೆಸರಿನಲ್ಲಿ ಅಡವಿಟ್ಟು ಆ ಬಳಿಕ ಆಭರಣ ಕಳ್ಳತನ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿ ಪೊಲೀಸರಿಂದ ಗಿರವಿ ಇರಿಸಿಕೊಂಡ ಅಂಗಡಿಯ ಬಗ್ಗೆ ಸುಳಿವು ನೀಡಿ, ಆಭರಣವನ್ನು ಪೊಲೀಸರೇ ಕತರ್ನಾಕ್ ಕುಟುಂಬದವರಿಗೆ ತಂದು ಒಪ್ಪಿಸುವ ರೀತಿ ಸಂಚು ರೂಪಿಸಿದ್ದ ಕುಟುಂಬವೊಂದು ಈಗ ಪೊಲೀಸರ ಅತಿಥಿಯಾಗಿದೆ.
ಪರಿಚಿತರ ಮೂಲಕ ಒಡವೆ ಅಡವಿಟ್ಟು ಹಣ ಪಡೆದುಕೊಂಡು ಬಳಿಕ ಅದು ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿ, ಒಡವೆ ಅಡ ವಿಟ್ಟುಕೊಂಡು ಅಂಗಡಿಯ ಬಗ್ಗೆ ಪೊಲೀಸರಿಗೆ ಸುಳಿವು ನೀಡಿ ಮೊದಲ ಬಾರಿಗೆ ಕತರ್ನಾಕ್ ಕುಟುಂಬ ಚಿನ್ನ ಹಾಗೂ ಹಣ ಲಪಟಾಯಿಸಲು ಯಶಸ್ವಿಯಾಗಿತ್ತು.. ಈ ಮೊದಲೇ ರೂಪಿಸಿದ ಪ್ಲಾನ್ ನಂತೆ ಈ ಕುಟುಂಬ ಯಶವಂತಪುರದಲ್ಲಿ ಸ್ನೇಹಿತರ ಮೂಲಕ ಚಿನ್ನ ಗಿರವಿ ಇಡುತ್ತಾರೆ. ಆ ಬಳಿಕ ಆಭರಣ ಕಳ್ಳತನ ಆಗಿದೆ ಎಂದು ನಾಟಕ ಅರಂಭಿಸುತ್ತಾರೆ. ಪೊಲೀಸರ ಮುಂದೆ ಕಣ್ಣೀರು ಸುರಿಸಿ ನಂಬಿಸುತ್ತಾರೆ. ಇದನ್ನು ನಂಬಿ ತನಿಖೆ ನಡೆಸಿದ್ದ ಪೊಲೀಸರು ಒಮ್ಮೆ ಆಭರಣ ಬಿಡಿಸಿಕೊಟ್ಟಿದ್ದರು! ಸುಲಭವಾಗಿ ಹಣ ಮಾಡುವ ಹಾದಿ ಕಂಡುಕೊಂಡಿದ್ದ ಈ ಕುಟುಂಬ ಇದೀಗ ಮತ್ತೊಂದು ಪ್ಲಾನ್ ರೂಪಿಸಿತ್ತು. ಆದರೆ ಪ್ಲಾನ್ ಉಲ್ಟಾ ಹೊಡೆದು ಕುಟುಂಬ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ..
ಎರಡನೇ ಬಾರಿ ಕೈಕೊಟ್ಟ ಪ್ಲಾನ್..
ಸರ್ಜಾಪುರದ ನಿವಾಸಿ ರವಿಪ್ರಕಾಶ್ ಎಂಬುವವರು ನಾವು ದೇವಸ್ಥಾನಕ್ಕೆ ಎಂದು ಹೋಗಿದ್ದಾ ವೇಳೆಯಲ್ಲಿ ಮನೆಯಲ್ಲಿ ಇಟ್ಟಿದ್ದ ಆಭರಣವನ್ನು ಕಳ್ಳತನ ಮಾಡಿದ್ದಾರೆ. ದಯವಿಟ್ಟು ನಮ್ಮ ಚಿನ್ನಾಭರಣಗಳನ್ನು ಪತ್ತೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು.. ಹೀಗಾಗಿ ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಕಳ್ಳತನದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಹೀಗಾಗಿ ಕುಟುಂಬದವರ ಮೇಲೆ ಅನುಮಾನಗೊಂಡ ಪೊಲೀಸರು ಒಬ್ಬೊಬ್ಬರನ್ನೇ ಕರೆದು ವಿಚಾರಣೆ ನಡೆಸಿದಾಗ ಕುಟುಂಬದ ನಾಟಕ ಬಯಲಿಗೆ ಬಂದಿದೆ..
ದೂರುದಾರ ರವಿಪ್ರಕಾಶ್ ಅವರ ಪುತ್ರ ಮಿಥುನ್ ಕುಮಾರ್ ತನ್ನ ಸ್ನೇಹಿತ ದೀಪಕ್ ಎಂಬುವರ ಮೂಲಕ ಬ್ಯಾಂಕಿನಲ್ಲಿ ಒಡವೆ ಗಿರವಿ ಇಡಿಸಿದ್ದರು. 25 ಲಕ್ಷ ರೂ. ಹಣ ಪಡೆದಿದ್ದರು. ಇದಕ್ಕಾಗಿ ದೀಪಕ್ಗೂ ಸ್ವಲ್ಪ ಹಣ ಕೊಟ್ಟಿದ್ದರು. ರವಿ ಪ್ರಕಾಶ್ ಹೆಂಡತಿ ಸಂಗೀತಾ, ತಂಗಿ ಆಶಾ, ಚರಣ್, ಮಿಥುನ್ ಕುಮರ್, ಈತನ ಪ್ರಿಯತಮೆ ಆಸ್ಮಾ ಎಲ್ಲರೂ ಚಿನ್ನಾಭರಣ ಕಳುವು ನಾಟಕ ಆರಂಭಿಸಿದ್ದರು. ಆರಂಭದಲ್ಲಿ ಪೊಲೀಸರು ಇದನ್ನು ನಂಬಿಸಿದ್ದ ಪೊಲೀಸರು, ಯಾವುದೇ ಆಯಾಮದಲ್ಲಿ ತನಿಖೆ ನಡೆಸಿದರೂ ಕಳುವು ಆಗಿರುವ ಬಗ್ಗೆ ಕುರುಹುಗಳೇ ಸಿಕ್ಕಿಲ್ಲ. ಹೀಗಾಗಿ ಕುಟುಂಬದ ಒಬ್ಬೊಬ್ಬರನ್ನೇ ಕರೆದು ವಿಚಾರಣೆ ನಡೆಸಿದಾಗ ವೇಳೆಯಲ್ಲಿ ಇಡೀ ಕುಟುಂಬವೇ ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ ನಾಟಕ ಆಡಿದೆ ಎಂಬುದು ಬಯಲಿಗೆ ಬಂದಿದೆ.. ಹೀಗಾಗಿ ಸರ್ಜಾಪುರ ಪೊಲೀಸರು ಈ ವಂಚಕ ಕುಟುಂಬವನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.