Sudhindra Haldodderi: ಡಿಆರ್​ಡಿಒ ಮಾಜಿ ವಿಜ್ಞಾನಿ ಸುಧಿಂದ್ರ ಹಾಲ್ದೊಡ್ಡೇರಿ ಇನ್ನಿಲ್ಲ

61 ವರ್ಷದ ಸುಧೀಂದ್ರ ಹಾಲ್ದೊಡ್ಢೇರಿ ಅವರ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಸುಧಿಂದ್ರ ಹಾಲ್ದೊಡ್ಡೇರಿ

ಸುಧಿಂದ್ರ ಹಾಲ್ದೊಡ್ಡೇರಿ

  • Share this:
    ಬೆಂಗಳೂರು (ಜು. 2): ಡಿಆರ್​ಡಿಒ ಮಾಜಿ ವಿಜ್ಞಾನಿ, ಎಚ್​ಎಎಲ್​ ಸಂಸ್ಥೆ ನಿವೃತ್ತ ಇಂಜಿನಿಯರ್​ ಹಾಗೂ ಖ್ಯಾತ ವಿಜ್ಞಾನ ಬರಹಗಾರರಾಗಿದ್ದ ಸುಧಿಂದ್ರ ಹಾಲ್ದೊಡ್ಡೇರಿ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದೊಂದುವಾರದ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 61 ವರ್ಷದ ಸುಧೀಂದ್ರ ಹಾಲ್ದೊಡ್ಢೇರಿ ಅವರ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

    ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಕಳೆದೊಂದು ವಾರದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಮಿದುಳಿಗೆ ಆಕ್ಸಿಜನ್​ ಸರಬರಾಜು ಆಗದ ಹಿನ್ನಲೆ ಬಹುತೇಕ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರು ಎಲ್ಲಾ ಪ್ರಯತ್ನ ನಡೆಸಿದರೂ ಚಿಕಿತ್ಸೆ ಸ್ಪಂದನೆ ವ್ಯಕ್ತವಾಗದ ಹಿನ್ನಲೆ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
    Published by:Seema R
    First published: