Bengaluru: ರಾತ್ರಿಯಿಡಿ ಬೊಗಳುತ್ತವೆ ಎಂದು 9 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದ ಪಾಪಿಗಳು

ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ (Electronic City) ಬಳಿ ಕಿಡಿಗೇಡಿಗಳು 9 ಶ್ವಾನಗಳಿಗೆ ವಿಷ ಹಾಕಿ ವಿಕೃತಿ ಮೆರೆದಿದ್ದಾರೆ. 4 ದಿನಗಳ ಹಿಂದೆಯೇ ಈ ಘಟನೆ ನಡೆದಿದೆ, ಬುಧವಾರ 9 ಶ್ವಾನಗಳಿಗೆ ತಿನ್ನೋ ಆಹಾರದಲ್ಲಿ ಪಾಪಿಗಳು ವಿಷ ಹಾಕಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಏ.24): ಮೂಕ ಪ್ರಾಣಿಗಳ ಮೇಲೆ ಇದೆಂಥಾ ಕೋಪ ಇವರಿಗೆ, ಮಾನವೀಯತೆ ಮರೆತ ಜನ್ರು ಶ್ವಾನಗಳಿಗೆ (Dogs) ವಿಷ ಹಾಕಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ (Electronic City) ಬಳಿ ಕಿಡಿಗೇಡಿಗಳು 9 ಶ್ವಾನಗಳಿಗೆ ವಿಷ ಹಾಕಿ ವಿಕೃತಿ ಮೆರೆದಿದ್ದಾರೆ. 4 ದಿನಗಳ ಹಿಂದೆಯೇ ಈ ಘಟನೆ ನಡೆದಿದೆ, ಬುಧವಾರ 9 ಶ್ವಾನಗಳಿಗೆ ತಿನ್ನೋ ಆಹಾರದಲ್ಲಿ ಪಾಪಿಗಳು ವಿಷ ಹಾಕಿದ್ದಾರೆ. ವಿಷ (Poison)ತಿಂದ ಮೂರು ಶ್ವಾನಗಳು ಬುಧವಾರವೇ ಸಾವನ್ನಪ್ಪಿದ್ರೆ (Death), ಉಳಿದ 6 ನಾಯಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು ಆದ್ರೆ ಚಿಕಿತ್ಸೆ ಫಲಿಸದೇ ಎಲ್ಲಾ ಶ್ವಾನಗಳು ಸಾವನ್ನಪ್ಪಿವೆ. ಸೋಮವಾರ ಎಲ್ಲಾ ಶ್ವಾನಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ.

ವಿಷ ಹಾಕಿದವರನ್ನು ಹುಡುಕಿ ಶಿಕ್ಷೆ ನೀಡಿ

ಶ್ವಾನಗಳಿಗೆ ವಿಷ ಹಾಕಿ ಕೊಂದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪ್ರಾಣಿ ಪ್ರಿಯರು ವಿಷ ಹಾಕಿದ ಕಿಡಿಗೇಡಿಗಳ ವಿರುದ್ಧ ಕಿಡಿಕಾರಿದ್ದಾರೆ. ಪ್ರಾಣಿಗಳಿಗೆ ವಿಷ ಹಾಕಿ ಕೊಲ್ಲುವುದು ವನ್ಯಜೀವಿ ಸಂರಕ್ಷಣೆ​ ಕಾಯ್ದೆ 1972 ಅಡಿಯಲ್ಲಿ ಅಪರಾಧ. ನಾಯಿಗಳಿಗೆ ಆಹಾರದಲ್ಲಿ ವಿಷ ಹಾಕುವುದರಿಂದ ಇತರ ಪ್ರಾಣಿಗಳೂ ಸಾಯುವ ಸಾಧ್ಯತೆ ಇರುತ್ತದೆ. ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದೇವೆ' ಎಂದು ಸಾಮಾಜಿಕ ಹೋರಾಟಗಾರ ಅರುಣ್ ತಿಳಿಸಿದರು. ಮೂಕ ಪ್ರಾಣಿಗಳಿಗೆ ವಿಷ ಹಾಕಿ ಕೊಂದವರು ಸೈಕೋ ಕಿಲ್ಲರ್​ಗಳು, ಇದು ಒಂದು ಕ್ರೂರ ಕೃತ್ಯ, ವಿಷ ಹಾಕಿದವರನ್ನು ಪೊಲೀಸರು ಪತ್ತೆ ಹಚ್ಚಿ ಅವರಿಗೆ ಸೂಕ್ತ ಶಿಕ್ಷೆ ನೀಡ್ಬೇಕು ಎಂದು ಅರುಣ್​ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Pramod Muthalik: ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲ್ಲರಿ ಶಾಪ್​ನಲ್ಲೇ ಚಿನ್ನ ಖರೀದಿಸಿ; ಪ್ರಮೋದ್ ಮುತಾಲಿಕ್ ಕರೆ

ಅಮಾಯಕರನ್ನ ಬಂಧಿಸಿ ₹15 ಲಕ್ಷ ಲಂಚ

ಬೆಳಗಾವಿ: ಕೊಲೆ ಪ್ರಕರಣವೊಂದರಲ್ಲಿ ಅಮಾಯಕರನ್ನ ಬಂಧಿಸಿ ₹15 ಲಕ್ಷ ಲಂಚ ಪಡೆದು ಕಿರುಕುಳ ನೀಡಿದ ಆರೋಪ ಗೋಕಾಕ್‌ ಪೊಲೀಸರು ವಿರುದ್ಧ ಕೇಳಿ ಬಂದಿದೆ. ಈ ಹಿನ್ನೆಲೆ ಸಮಗ್ರ ತನಿಖೆಗೆ ಬೆಳಗಾವಿ ಎಸ್​ಪಿ ಲಕ್ಷ್ಮಣ ನಿಂಬರಗಿ ಆದೇಶ ನೀಡಿದ್ದಾರೆ.ಗೋಕಾಕ್ ಇನ್ಸ್‌ಪೆಕ್ಟರ್ ಗೋಪಾಲ್ ರಾಠೋಡ್, ಪಿಎಸ್ಐ ಹಾಗೂ ಸಿಬ್ಬಂದಿ ವಿರುದ್ಧ ಬೆಳಗಾವಿ ಜಿಲ್ಲೆ ಗೋಕಾಕ್‌ನ ಸಿದ್ದಪ್ಪ ಬಬಲಿ ಕುಟುಂಬಸ್ಥರು ಗಂಭೀರ ಆರೋಪಿ ಮಾಡಿದ್ದಾರೆ. ಇದಲ್ಲದೇ ನಿನ್ನೆ(ಶನಿವಾರ) ನ್ಯಾಯಕ್ಕಾಗಿ ನಗರದ ಡಿಸಿ ಕಚೇರಿಗೆ ಆಗಮಿಸಿ ವೃದ್ಧ ದಂಪತಿ, ಕುಟುಂಬಸ್ಥರು ಮಾಧ್ಯಮದವರು ಮುಂದೆ ಕಣ್ಣೀರು ಹಾಕಿದ್ದಾರೆ.ಮತ್ತೊಂದೆಡೆ ಗೋಕಾಕ್ ಇನ್ಸ್‌ಪೆಕ್ಟರ್, ಸಿಬ್ಬಂದಿ ವಿರುದ್ಧ ಸಿದ್ದಪ್ಪ ಬಬಲಿ ಕುಟುಂಬಸ್ಥರು ಈಗಾಗಲೇ ನ್ಯಾಯಕ್ಕಾಗಿ ಸಿಎಂ, ಗೃಹಸಚಿವರು ಹಾಗೂ ಲೋಕಾಯುಕ್ತ, ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.

ಏನಿದು ಪ್ರಕರಣ 

2021ರ ಜುಲೈ 17ರಂದು ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಮಹಾಂತೇಶ ನಗರ ಬಡಾವಣೆಯಲ್ಲಿ ಮಂಜುನಾಥ ಮುರಕಿಭಾವಿ ಎಂಬುವರ ಕೊಲೆಯಾಗಿತ್ತು. ಕೊಲೆ ಪ್ರಕರಣದಲ್ಲಿ ಸಿದ್ದಪ್ಪ ಬಬಲಿ ಮಕ್ಕಳಾದ ಕೃಷ್ಣ,ಅರ್ಜುನ್ ಎಂಬುವರನ್ನು ಬಂಧಿಸಲಾಗಿತ್ತು. ಬಂಧಿತರ ಅಕ್ಕನ ಮಗಳನ್ನು ಕೊಲೆಯಾದ ಯುವಕ ಮಂಜುನಾಥ ಪ್ರೀತಿಸುತ್ತಿದ್ದ ಎಂಬ ಆರೋಪವಿದೆ. ಅಕ್ಕನ ಮಗಳ ಮದುವೆಯಾದ ಬಳಿಕವೂ ಮಂಜುನಾಥ ಸಂಪರ್ಕದಲ್ಲಿದ್ದ ಹಿನ್ನೆಲೆ ಆತನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: Operation Lotus: ರಾಜ್ಯದಲ್ಲಿ ಆಪರೇಷನ್ ಕಮಲದ ಸುಳಿವು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ Nalin Kumar Kateel

ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಬಂಧನ

ಆದರೆ, ಬಂಧಿತರಿಗೂ ಹಾಗೂ ಕೊಲೆಯಾದ ಯುವಕನಿಗೂ ಯಾವುದೇ ಸಂಬಂಧ ಇಲ್ಲ. ಮಂಜು ಬಸಪ್ಪ ರಂಗನಕೊಪ್ಪ ಎಂಬುವರ ಹೇಳಿಕೆ ಮೇಲೆಯಷ್ಟೇ ನಮ್ಮ ಮಕ್ಕಳನ್ನ ಬಂಧಿಸಿದ್ದಾರೆ. ಕೊಲೆಯಲ್ಲಿ ಯಾವುದೇ ಸಾಕ್ಷ್ಯಾಧಾರ ಇಲ್ಲದೇ ತಮ್ಮ ಮಕ್ಕಳನ್ನು ಬಂಧಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ‌ ಮಾಡಿದ್ದಾರೆ. ಇದಲ್ಲದೇ ಕುಟುಂಬಸ್ಥರ ಮೇಲೆ ಕೇಸ್ ಹಾಕದಿರಲು ಗೋಕಾಕ್ ಸಿಪಿಐ ಗೋಪಾಲ್ ರಾಠೋಡ್, ಪಿಎಸ್ಐ ಹಾಗೂ ಸಿಬ್ಬಂದಿ ಗ್ರಾಮದ ಪ್ರಮುಖರ ಮುಖಾಂತರ 15 ಲಕ್ಷ ರೂ. ಹಣ ಪಡೆದಿದ್ದಾರೆ. ನಾವು ಜಮೀನು ಅಡವಿಟ್ಟು ಹಣ ನೀಡಿದ್ದೇವೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
Published by:Pavana HS
First published: