SSLC Exam Result 2021: ಪೂರಕ ಪರೀಕ್ಷೆ ಬರೆದು ಅನುತ್ತೀರ್ಣರಾದ SSLC ವಿದ್ಯಾರ್ಥಿಗಳನ್ನ ಪಾಸ್ ಮಾಡುತ್ತಾರಾ?

'ಯಾರು ಅವಕಾಶ ಉಪಯೋಗಿಸಿಕೊಂಡಿಲ್ಲ, ಅವರಿಗೆ ಮುಂದಿನ ಪರೀಕ್ಷೆ ಬರೆಯಲು ಅವಕಾಶ ಕೊಡುವುದಾಗಿ ಹೇಳಿದ್ದೇವೆ ಹೊರತು, ಎಲ್ಲರನ್ನೂ ಪಾಸ್ ಮಾಡ್ತಿವಿ ಅಂತ ಹೇಳಿಲ್ಲ. '

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬ ಗಾದೆ ಮಾತು ಈ ಮಕ್ಕಳಿಗೆ ಸೂಕ್ತವಾಗಿ ಅನ್ವಯಿಸುತ್ತದೆ. SSLC ಪರೀಕ್ಷೆಗೆ ಹಾಜರಾದ ಎಲ್ಲಾ ಮಕ್ಕಳನ್ನು ಶಿಕ್ಷಣ ಇಲಾಖೆ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಮಾಡಿತ್ತು.  ಸರ್ಕಾರದ ಸಾಮೂಹಿಕ ಜಸ್ಟ್​​ ಪಾಸನ ಒಪ್ಪದ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆ ರೀತಿ ಪರೀಕ್ಷೆ ತೆಗೆದುಕೊಂಡವರಲ್ಲಿ ಕೆಲವರು ಅನುತ್ತೀರ್ಣರಾಗಿದ್ದರು. ಅದರೀಗ ಪೂರಕ ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿದ್ಯಾರ್ಥಿಗಳನ್ನೂ ಪಾಸ್ ಮಾಡುವಂತೆ ಒತ್ತಾಸೆ ಕೇಳಿ ಬರುತ್ತಿದೆ. 

ವಿದ್ಯಾರ್ಥಿಗಳು SSLC ಪರೀಕ್ಷೆಗೆ ಇನ್ನೊಂದು ವರ್ಷ ಕಾಯಬೇಕು 

ಶಿಕ್ಷಣ ಇಲಾಖೆಯ ಹೇಳೊದೊಂದು ಮಾಡೊದು ಇನ್ನೊಂದು ಎನ್ನವಂತಾಗಿದೆ. ಸಾಂಕ್ರಾಮಿಕ ಕೊರೊನಾ ಸೋಂಕು ವ್ಯಾಪಿಸಿದ ಕಾರಣಕ್ಕೆ 2020-21ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ ಪಾಸ್ ಮಾಡುವುದು ಹಾಗೂ ಅವರ ಕಲಿಕಾ ಮಟ್ಟ ನಿರ್ಧಾರ ಮಾಡುವುದು ಕಷ್ಟವಾಗಿತ್ತು. ಹೀಗಾಗಿ ಅನಿರ್ವಾಯವಾಗಿ ಪರೀಕ್ಷಾ ಮಂಡಳಿ ಸರಳವಾಗಿ ಎರಡು ದಿನಗಳ ಕಾಲ ಎಕ್ಸಾಂ ಮಾಡಿತ್ತು.. ಎಕ್ಸಾಂ ಬರೆದವರಿಗೆಲ್ಲ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಕೂಡಾ  ಮಾಡಿದೆ. ಆದ್ರೆ  ಕೋವಿಡ್ ಕಾರಣಕ್ಕೆ ಮೊದಲ ಪ್ರಯತ್ನದಲ್ಲಿ ಬಹಷ್ಟು ವಿದ್ಯಾರ್ಥಿಗಳು ಕೊರೊನಾ ಭೀತಿಗೆ ಹೆದರಿ ಮೊದಲ ಆಯೋಜನೆಯಲ್ಲಿ ಪರೀಕ್ಷೆಯನ್ನ ತೆಗೆದುಕೊಳ್ಳಲು ಹಿಂದೇಟ್ಟು ಹಾಕಿದ್ದರು.

ಗ್ರೇಸ್ ಮಾರ್ಕ್ಸ್ ಇಲ್ಲದೆ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು

ಇವರಿಗೆಲ್ಲ ಕಳೆದ ತಿಂಗಳ ಸೆಪ್ಟೆಂಬರ್  27-29 ರಂದು ಎಕ್ಸಾಂ ಮಾಡಲಾಗಿದೆ.  ಸುಮಾರು 53,155 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲಾಯ್ತು.  ಈ ಹಿಂದೆ ಜುಲೈ ಸಮಯದಲ್ಲಿ ಪರೀಕ್ಷೆ ಬರೆದವರನ್ನ ಕೊರೊನಾ ಆತಂಕದ ಕಾರಣಕ್ಕೆ ಯಾವ ವಿದ್ಯಾರ್ಥಿಯನ್ನೂ ಫೇಲ್ ಮಾಡೋದಿಲ್ಲ.  ಬದಲಿಗೆ ಕಡಿಮೆ ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಎಲ್ಲರನ್ನೂ ಪಾಸ್ ಮಾಡಲಾಗಿದೆ. ಆದರೆ ಈ ಸಲ ಪರೀಕ್ಷೆ ಬರೆದು ಫೇಲ್ ಆದವರಿಗೆ ಶಿಕ್ಷಣ ಇಲಾಖೆ ಗ್ರೇಸ್ ಮಾರ್ಕ್ಸ್ ನೀಡಿಲ್ಲ ಹೀಗಾಗಿ 23,655 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.

ಇದನ್ನೂ ಓದಿ: CM Bommai Giving Bonus: ಆಯುಧ ಪೂಜೆಯಂದು ಪುತ್ರನ ಫ್ಯಾಕ್ಟರಿಯ ನೌಕರರಿಗೆ ಭರ್ಜರಿ ಬೋನಸ್ ಕೊಟ್ಟ ಸಿಎಂ

ಪೋಷಕರ ಬೇಸರ 

ಇನ್ನು ವಿದ್ಯಾರ್ಥಿಗಳು, ಪೋಷಕರು ಶಿಕ್ಷಣ ಇಲಾಖೆ ಈ ನಡೆಗೆ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಈ ಹಿಂದೆ ಜುಲೈ ಸಮಯದಲ್ಲಿ ಪರೀಕ್ಷೆ ಬರೆದವರನ್ನ ಕೊರೊನಾ ಆತಂಕದ ಕಾರಣಕ್ಕೆ ಯಾವ ವಿದ್ಯಾರ್ಥಿಯನ್ನೂ ಫೇಲ್ ಮಾಡೋದಿಲ್ಲ ಎಂದು ಹೇಳಿ ಎಲ್ಲಾರನ್ನು ಪಾಸ್ ಮಾಡಿದ್ದರು.  ಇದೀಗ ಪೂರಕ ಪರೀಕ್ಷೆ ಬರೆದ 23 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ  ಫೇಲ್ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಶಿಕ್ಷಣ ಸಚಿವರನ್ನ ಪ್ರಶ್ನಿಸಿದ್ದಾರೆ.

ಕಡ್ಡಿ ತುಂಡಾದಂತೆ ಹೇಳಿಕೆ ನೀಡಿದ ನಿರ್ದೇಶಕಿ

ಇತ್ತ SSLC ಬೋರ್ಡ್ ನಿರ್ದೇಶಕಿ ಸುಮಗಂಲ ಮಾತ್ರ ಇಲಾಖೆಯ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮೊದಲ ಪರೀಕ್ಷೆ  ಬರೆದಿದ್ದವರಿಗೆ ಅಷ್ಟೇ ಪಾಸ್ ಆಗಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಆ ಅವಕಾಶ ಉಪಯೋಗಿಸಿಕೊಳ್ಳುವುದು, ಬಿಡುವುದು ವಿದ್ಯಾರ್ಥಿಗಳಿಗೆ ಬಿಟ್ಟಿದ್ದು. ಯಾರು ಅವಕಾಶ ಉಪಯೋಗಿಸಿಕೊಂಡಿಲ್ಲ, ಅವರಿಗೆ ಮುಂದಿನ ಪರೀಕ್ಷೆ ಬರೆಯಲು ಅವಕಾಶ ಕೊಡುವುದಾಗಿ ಹೇಳಿದ್ದೇವೆ ಹೊರತು, ಎಲ್ಲರನ್ನೂ ಪಾಸ್ ಮಾಡ್ತಿವಿ ಅಂತ ಹೇಳಿಲ್ಲ ಅಂತಿದ್ದಾರೆ. ಒಟ್ಟಾರೆಯಾಗಿ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಪಾಸ್ ಎಂದು ಕೊಂಡವರಿಗೆ ನಿರಾಸೆ ಜೊತೆಗೆ ಆತಂಕ ಎದುರಾಗಿದೆ. ಒಂದು ವರ್ಷದ ಶೈಕ್ಷಣಿಕ ವರ್ಷದ ಭವಿಷ್ಯ ಹಾಳಾಗುವ ಭಯ ಮಕ್ಕಳಲ್ಲಿ, ಪೋಷಕರಲ್ಲಿ ಕಾಡ್ತಿದೆ. ಹೀಗಾಗಿ ಶಿಕ್ಷಣ ಸಚಿವರ ಮನವಿಗೆ ಮುಂದಾಗಿದ್ದಾರೆ.
Published by:Kavya V
First published: