ಡಿಕೆ..ಡಿಕೆ.. ಎಂದು ಘೋಷಣೆ ಕೂಗಿದ ಕಾರ್ಯಕರ್ತರು; ದ್ರೋಹ ಮಾಡಬೇಡಿ ಅಂತ ಗದರಿದ DK Shivakumar

ಡಿಕೆ ಎಂದು ಕೂಗಿ ಕಾಂಗ್ರೆಸ್ ಗೆ ದ್ರೋಹ ಮಾಡ್ತಾ ಇದ್ದೀರ, ಇಲ್ಲಿ ಯಾರು ಡಿಕೆಶಿ ಅಂತ ಕೂಗಬಾರದು. ನಾನು ಮೊದಲೇ ಹೇಳಿದ್ದೀನಿ ಇಲ್ಲಿ ವ್ಯಕ್ತಿ ಪೂಜೆ ಇಲ್ಲ ಪಕ್ಷದ ಪೂಜೆ ಅಷ್ಟೇ. ಡಿಕೆಶಿ ಅಂತ ಕೂಗಿದ್ರೆ ಪಕ್ಷಕ್ಕೆ ದ್ರೋಹ ಮಾಡಿದ ಹಾಗೇ ಎಂದು ಗರಂ ಆದರು.

 ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್

  • Share this:
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ (Congress Membership Registration) ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಿತು. ಕಾಂಗ್ರೆಸ್​​ ರಾಜ್ಯ ಉಸ್ತುವಾರಿ ರಂದೀಪ್​​ ಸುರ್ಜೇವಾಲ (Randeep Surjewala) ಸೇರಿದಂತೆ ರಾಜ್ಯ ಕಾಂಗ್ರೆಸ್​​ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ (DK Shivakumar) ವೇದಿಕೆಗೆ ಬರುತ್ತಿದ್ದಂತೆ ಕಾರ್ಯಕರ್ತರು ಡಿಕೆ.. ಡಿಕೆ.. ಎಂದು ಕೂಗಿದರು. ಇದರಿಂದ ಕೋಪಗೊಂಡ ಡಿಕೆಶಿ, ಯಾರು ಸಹ ಡಿಕೆಶಿ ಅಂತ ಕೂಗಬಾರದು. ಹಾಗೇ ಕೂಗಿದ್ರೆ ಹೊರಗೆ ಎದ್ದು ಹೋಗಿ ಎಂದು ಖಾರವಾಗಿಯೇ ಹೇಳಿದರು. ಡಿಕೆ ಎಂದು ಕೂಗಿ ಕಾಂಗ್ರೆಸ್ ಗೆ ದ್ರೋಹ ಮಾಡ್ತಾ ಇದ್ದೀರ, ಇಲ್ಲಿ ಯಾರು ಡಿಕೆಶಿ ಅಂತ ಕೂಗಬಾರದು. ನಾನು ಮೊದಲೇ ಹೇಳಿದ್ದೀನಿ ಇಲ್ಲಿ ವ್ಯಕ್ತಿ ಪೂಜೆ ಇಲ್ಲ ಪಕ್ಷದ ಪೂಜೆ ಅಷ್ಟೇ. ಡಿಕೆಶಿ ಅಂತ ಕೂಗಿದ್ರೆ ಪಕ್ಷಕ್ಕೆ ದ್ರೋಹ ಮಾಡಿದ ಹಾಗೇ ಎಂದು ಗರಂ ಆದರು.

ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಡಿಕೆಶಿ ವಾಗ್ದಾಳಿ

ಇಂದು ಪಕ್ಷದ ಸದಸ್ಯತ್ವವನ್ನು ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ಕೊಡ್ತಾಯಿದ್ದೀವಿ ತುಂಬಾ ಸಂತೋಷ ಆಗ್ತಾಯಿದೆ. ಕಾಂಗ್ರೆಸ್ ಅಂತ ಹೇಳಿದ್ರೆ ಹೋರಾಟ, ದೇಶಗಳಲ್ಲಿ ಕಾಂಗ್ರೆಸ್ ಹೋರಾಟಕ್ಕೆ ದೊಡ್ಡ ಇತಿಹಾಸವಿದೆ. ಸದಸ್ಯತ್ವ ನೊಂದಣಿ ಕಾರ್ಯಕ್ರಮ ಬಹಳ ಹಳೆಯದು ಎಂದರು. ಇನ್ನು ಲಸಿಕೆ ಹಂಚಿಕೆ ವಿಚಾರವಾಗಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​​ ವ್ಯಾಕ್ಸಿನೇಟ್ ಕರ್ನಾಟಕ  ಕಾರ್ಯಕ್ರಮ ನಡೆಸಿತು. ಕೋವಿಡ್ ಹೆಚ್ಚಾದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯಾಕ್ಸಿನ್ ಕೊಡುವಾಗ ವಿಫಲವಾಗಿತ್ತು. ಕೋವಿಡ್ ಸಂದರ್ಭದಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗಿತ್ತು. ನಾವೆಲ್ಲರೂ ಸರ್ಕಾರಕ್ಕೆ ಸಹಕಾರ ನೀಡಿದೆವು. ಆದ್ರೆ ಅವರು ಅದನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಹಾಗಾಗಿ ನಾವು ಜನರ ಪರವಾಗಿದ್ದೇವೆ ಅಂತ ಹೋರಾಟ ಮಾಡಿದೆವು ಎಂದರು.

ತ್ಯಾಗ ಮಾಡಿದವರು ಸೋನಿಯಾ ಗಾಂಧಿ

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗಬಹುದಿತ್ತು. ಅಬ್ದುಲ್ ಕಲಾಂ ಅವರು ಸೋನಿಯಾ ಗಾಂಧಿರನ್ನು ದೇಶದ ಪ್ರಧಾನಿ ಆಗಬೇಕು ಅಂತ ಕರೆದ್ರು. ಅವರು ನಾನು ಅರ್ಹಳಲ್ಲ, ದೇಶ ಉಳಿಯಲು ಆರ್ಥಿಕ ತಜ್ಞರು ಬೇಕು ಅಂತ ಮನಮೋಹಕ ಸಿಂಗ್ ಆಗಲಿ ಅಂತ ಹೇಳಿದ್ರು. ಇಂತಹ ತ್ಯಾಗ ಮಾಡಿದವರು ಸೋನಿಯಾ ಗಾಂಧಿ. ಅನೇಕ ಕೊಡುಗೆ ನೀಡಿ, ದೇಶದ ಬದಲಾವಣೆ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದರು. 50 ಲಕ್ಷ ಸದಸ್ಯತ್ವ ಅಭಿಯಾನ ಮಾಡುವಂತೆ ಕರೆ ನೀಡಿದ್ದೇವೆ. 2023ಕ್ಕೆ ವಿಧಾನಸೌಧದ ಮೇಲೆ ಕಾಂಗ್ರೆಸ್ ಧ್ವಜ ಹಾರುವಂತೆ ನೀವೆಲ್ಲರೂ ಮಾಡಬಹುದು. ನೀವೆಲ್ಲರೂ ಕಬ್ಬಿಣ ಆಗಬೇಕು. ಕಬ್ಬಿಣದಲ್ಲಿ ಕತ್ತರಿ, ಸೂಜಿ ಎರಡೂ ಮಾಡಬಹುದು. ಬಿಜೆಪಿ ರಾಜ್ಯವನ್ನ ಕತ್ತರಿಸ್ತಿದ್ರೆ, ನೀವು ಸೂಜಿಯಾಗಿ ಹೊಲಿಗೆ ಹಾಕಬೇಕು ಎಂದರು.

ಇದನ್ನೂ ಓದಿ: Bitcoin Scamನಲ್ಲಿ ಕಾಂಗ್ರೆಸ್ ನಾಯಕರಾದ ಹ್ಯಾರೀಸ್, ಲಮಾಣಿ ಪುತ್ರರು ಭಾಗಿಯಾಗಿದ್ದಾರೆ: BJP ಆರೋಪ

ಭಾರತಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ

ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ಸುರ್ಜೇವಾಲ ಮಾತನಾಡಿ, ಇಂದು ಎಲ್ಲರ ಪಾಲಿಗೆ ಮಹತ್ವದ ದಿನ. ಈ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ನೆಹರು ಜನ್ಮ ದಿನ. ಪ್ರಧಾನಿಯಾಗೋ ಮೊದಲು,‌ ಅವರು ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೈಲಿಗೆ ಸೇರಿದ್ರು. ಸ್ವಾತಂತ್ರ್ಯಕ್ಕಾಗಿ ಗಾಂಧಿ ಅವರ ಮಾರ್ಗದರ್ಶನದಲ್ಲಿ ನಡೆದ್ರು. ಎಲ್ಲರೂ ಇಂದೂ ನೆಹರು ನೆನಪಿಸಿಕೊಳ್ಳಬೇಕು.  ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಕಾಂಗ್ರೆಸ್ ಅವಶ್ಯಕತೆ ಇದೆ. ಭಾರತ ದೇಶ ಎಲ್ಲಾ ವರ್ಗದ, ಎಲ್ಲಾ ಜಾತಿಯ, ಎಲ್ಲಾ ಧರ್ಮದಿಂದ ಕೂಡಿದೆ. 140 ಕೋಟಿ ಪ್ರತಿಯೊಬ್ಬ ಭಾರತೀಯರ ಪರವಾಗಿ ನಿಲ್ಲುವ ಪಕ್ಷ ಕಾಂಗ್ರೆಸ್. ಈ ದೇಶದ ಪುನರ್ ನಿರ್ಮಾಣಕ್ಕೆ ನೀವು ಹೋರಾಟಗಾರರಾಗಬೇಕು ಎಂದು ಕರೆ ನೀಡಿದರು.
Published by:Kavya V
First published: