ಬೈ ಎಲೆಕ್ಷನ್​​ನಲ್ಲಿ BJPಯಿಂದ 1 ವೋಟಿಗೆ ₹10 ಸಾವಿರ? ವಿಡಿಯೋ ರಿಲೀಸ್ ಮಾಡಿದ DK Shivakumar

ಇಷ್ಟು ಭ್ರಷ್ಟ ಚುನಾವಣೆ, ಭ್ರಷ್ಟ ಪಕ್ಷ ನಾವ್ ನೋಡಿಲ್ಲ. ಅವರ ಪಾರ್ಟಿಯವರೇ ನಮಗೆ ಈ ವಿಡಿಯೋಗಳನ್ನ ಕಳುಹಿಸಿದ್ದಾರೆ. ದುಡ್ಡಿನ ಕವರ್, ಕಮಲದ ಫೋಟೋ ಇದೆ ಎಂದು ಆರೋಪಿಸಿದರು.

ಡಿಕೆಶಿಯಿಂದ ವೋಟಿಗಾಗಿ ನೋಟು ಆರೋಪ

ಡಿಕೆಶಿಯಿಂದ ವೋಟಿಗಾಗಿ ನೋಟು ಆರೋಪ

  • Share this:
ಬೆಂಗಳೂರು: ರಾಜ್ಯದಲ್ಲಿ ಶನಿವಾರ (ಅ.30) ಸಿಂಧಗಿ ಹಾಗೂ ಹಾನಗಲ್​ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ (by election) ನಡೆಯುತ್ತಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮತದಾನಕ್ಕೆ 2 ದಿನ ಬಾಕಿ ಇರುವಾಗ ಬಿಜೆಪಿ ಒಂದು ವೋಟಿಗೆ 10 ಸಾವಿರ ರೂಪಾಯಿಗಳನ್ನು (10 thousand rupees for single vote ) ಮತದಾರರಿಗೆ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar )​​ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಮತದಾರರಿಗೆ ಕಮಲದ ಚಿಹ್ನೆ ಇರುವ ಕವರ್​ ಒಳಗೆ 2 ಸಾವಿರ ಮುಖಪುಟದ 5 ನೋಟುಗಳನ್ನು ನೀಡಿರುವುದು. ಮತದಾರರು ಅದನ್ನು ತೆಗೆದು ನೋಡುತ್ತಿರುವ 2 ವಿಡಿಯೋಗಳನ್ನು ಮಾಧ್ಯಮಗಳಿಗೆ ಡಿಕೆಶಿ ನೀಡಿದರು. ಒಂದು ವಿಡಿಯೋದಲ್ಲಿ ಮಹಿಳೆ ಕವರ್​ ತೆರೆದು ಹಣ ನೋಡಿದ್ರೆ, ಮತ್ತೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕುರ್ಚಿಯ ಮೇಲೆ ಕುಳಿತುಕೊಂಡು ಕವರ್​ ತೆಗೆದು ಹಣ ಎಣಿಸುತ್ತಿರುವ ದೃಶ್ಯ ಇದೆ. ಹಣದ ಕವರ್​ ಮೇಲೆ ಕಮಲದ ಚಿಹ್ನೆ, ಅಭ್ಯರ್ಥಿ ಫೋಟೋ ಇರುವುದನ್ನು ಕಾಣಬಹುದಾಗಿದೆ.

ಇಷ್ಟು ಭ್ರಷ್ಟ ಚುನಾವಣೆ, ಭ್ರಷ್ಟ ಪಕ್ಷ ನಾವ್ ನೋಡಿಲ್ಲ

ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಡಿಕೆಶಿ, ಸಿಂದಗಿ‌, ಹಾನಗಲ್ ಚುನಾವಣೆಯಲ್ಲಿ ಬಿಜೆಪಿ ವೋಟಿಗಾಗಿ ನೋಟಿನ ಮಳೆಯನ್ನು ಸುರಿಸುತ್ತಿದ್ದಾರೆ.  ಮತದಾರರಿಗೆ 5, 10 ಸಾವಿರ ಹಣ ಹಂಚಿಕೆ ಮಾಡಲಾಗುತ್ತಿದೆ. ಒಂದು ವೋಟಿಗೆ 10 ಸಾವಿರ ರೂಪಾಯಿ ಕೊಡುತ್ತಿದ್ದಾರೆ. ಬಿಜೆಪಿಯವರು ಈ ರೀತಿ ಚುನಾವಣೆ ಮಾಡ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಈ ರೀತಿ ಚುನಾವಣೆ ಮಾಡಿದ್ರೆ ಜನಕ್ಕೆ ಏನ್ ಮಾಡ್ಬೇಕು ಅನ್ಕೋತೀರಿ. ಇಷ್ಟು ಭ್ರಷ್ಟ ಚುನಾವಣೆ, ಭ್ರಷ್ಟ ಪಕ್ಷ ನಾವ್ ನೋಡಿಲ್ಲ. ಅವರ ಪಾರ್ಟಿಯವರೇ ನಮಗೆ ಈ ವಿಡಿಯೋಗಳನ್ನ ಕಳುಹಿಸಿದ್ದಾರೆ. ದುಡ್ಡಿನ ಕವರ್, ಕಮಲದ ಫೋಟೋ ಇದೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ಪರ್ಮನೆಂಟ್ ಆಗಿ ಹುಬ್ಬಳ್ಳಿಯಲ್ಲೇ ಇರಲಿ. ಎಲ್ಲಾ ಮಂತ್ರಿಗಳೂ ಇದೇ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹೌದು ನಮ್ಮ ಸ್ನೇಹಿತನ ಮನೆ ಮೇಲೆ ದಾಳಿ ನಡೆದಿದೆ

ಇನ್ನು ಇಂದು ಡಿಕೆಶಿ ಆಪ್ತ ಉದ್ಯಮಿ ಯು.ಬಿ.ಶೆಟ್ಟಿ ಹಾಗೂ ಕುಟುಂಬಸ್ಥರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೌದು ನಮ್ಮ ಸ್ನೇಹಿತನ ಮನೆ ಮೇಲೆ ದಾಳಿ ನಡೆದಿದೆ. ಖಂಡಿತ ನಮ್ಮ‌ ಸ್ನೇಹಿತನ ಮನೆಯೇ ಅದು. ಬೆಂಗಳೂರನಲ್ಲೂ ಎರಡು ಕಡೆ ಹೋಗಿದ್ರು. ನಮ್ಮ ಮನೆ ಮೇಲೆ ದಾಳಿ ನಡೆದಿಲ್ಲ, ನಾನು ಎಲ್ಲದಕ್ಕೂ ಸಿದ್ದನಿದ್ದೇನೆ ಎಂದರು. ನಾನು ಬೇರೆಯವರ ರೀತಿ ಉಡಾಫೆ ಮಾತು ಮಾತಾಡಲ್ಲ. ನಮ್ಮ ಮನೆಗೆ ಯಾವ ಐಟಿ ಅಧಿಕಾರಿಗಳು ಬಂದಿಲ್ಲ. ನನ್ನ ಸ್ನೇಹಿತರ ಮನೆಗೆ ಹೋಗಿದ್ದಾರೆ ಅಷ್ಟೇ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Grant Discrimination: ಕೇಂದ್ರದ ಮಲತಾಯಿ ಧೋರಣೆ; ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಅನುದಾನ ಸೊನ್ನೆ

ಬಿಟ್ ಕಾಯಿನ್ ಪ್ರಕರಣ ಮುಚ್ಚಿ ಹಾಕ್ತಾರೆ ನೋಡ್ತಿರಿ

ಬಿಟ್ ಕಾಯಿನ್ ಪ್ರಕರಣದಲ್ಲಿ ಬಗ್ಗೆ ದೊಡ್ಡ ದೊಡ್ಡವರ ಹೆಸರುಗಳು ಹೇಳಿ ಬರ್ತಿದೆ. ರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳ ಹೆಸರು ಕೇಳಿ ಬರ್ತಿದೆ. ಬಿಟ್ ಕಾಯಿನ್  ಪ್ರಕರಣ ಮುಚ್ಚಿ ಹಾಕುವ ಕೆಲಸ ಆಗ್ತಿದೆ ಎಂದು ಆರೋಪಿಸಿದ ಡಿಕೆಶಿ, ಪ್ರಕರಣದಲ್ಲಿ ಯಾರ ಇದ್ದಾರೆ ಮಾಹಿತಿಯಿಲ್ಲ ಎಂದರು.
Published by:Kavya V
First published: