ಎ.ಮಂಜು ಹೆಗಲ ಮೇಲಿಂದ ರಾಜಕೀಯ ವೈರಿ ರಮೇಶ್ ಜಾರಕಿಹೊಳಿಗೆ ಗುರಿಯಿಟ್ಟ DK Shivakumar

A Manju ಮೇಲೆ ಶಿಸ್ತು ಕ್ರಮ ತೆಗೆದುಕೊಂಡಂತೆ ಬೆಳಗಾವಿಯಲ್ಲಿ Ramesh Jarkiholi ವಿರುದ್ಧ BJP ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು DK Shivakumar ಪ್ರಶ್ನಿಸಿದ್ದಾರೆ. ಕ್ರಮ ತೆಗೆದುಕೊಳ್ಳೋಕೆ ಬಿಜೆಪಿಯವರಿಗೆ ಧಂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ರಮೇಶ್​ ಜಾರಕಿಹೊಳಿ, ಡಿಕೆ ಶಿವಕುಮಾರ್​

ರಮೇಶ್​ ಜಾರಕಿಹೊಳಿ, ಡಿಕೆ ಶಿವಕುಮಾರ್​

  • Share this:
ಹಾಸನ: ಕಾಂಗ್ರೆಸ್​​ (Congress) ತೊರೆದು ಬಿಜೆಪಿಗೆ (BJP)ಹೋಗಿರುವ ಮಾಜಿ ಸಚಿವ ಎ.ಮಂಜು (A Manju) ಪುನಃ ಕಾಂಗ್ರೆಸ್​ ಬಾಗಿಲು ತಟ್ಟುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಇದರ ಬೆನ್ನಲ್ಲೇ ಎ.ಮಂಜು ಅವರ ಪುತ್ರ ಮಂಥರ್​ ಗೌಡಗೆ (Mantar Gowda) ಕಾಂಗ್ರೆಸ್​​ ಟಿಕೆಟ್​ ನೀಡಿದೆ. ವಿಧಾನ ಪರಿಷತ್​ ಚುನಾವಣೆಗೆ ಕೊಡಗಿನಿಂದ ಮಂಥರ್​ ಗೌಡ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅಪ್ಪ ಬಿಜೆಪಿಯಲ್ಲಿರುವಾಗ, ಮಗ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಂಥರ್​ ಗೌಡ ನಾಮಪತ್ರ ಸಲ್ಲಿಸುತ್ತಿದ್ದಂತೆ ಎ.ಮಂಜು ಅವರಿಗೆ ನಿನ್ನೆ ಬಿಜೆಪಿ ಶಾಕ್​ ಕೊಡ್ತು. ಬಿಜೆಪಿ ಪಕ್ಷ ನೀಡಿದ್ದ ಎಲ್ಲಾ ಜವಾಬ್ದಾರಿಗಳಿಂದ ಎ.ಮಂಜುರನ್ನು ಮುಕ್ತಿಗೊಳಿಸಿ ಆದೇಶ ಹೊರಡಿದೆ. ಬಿಜೆಪಿ ರಾಜ್ಯ ಶಿಸ್ತುಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್‌ ಆದೇಶ ಹೊರಡಿಸಿದ್ದಾರೆ. ಇತ್ತೀಚಿನ ಬೆಳವಣಿಗೆಗಳಿಂದ ಕೆಲವು ಸಂಶಯಗಳು ಉಂಟಾಗಿವೆ. ಈ ಕಾರಣದಿಂದ ಪಕ್ಷದ ಮಂಡ್ಯ ಜಿಲ್ಲೆಯ ಪ್ರಭಾರಿ ಹಾಗೂ ಮತ್ತುಳಿದ ಎಲ್ಲಾ ಜವಾಬ್ದಾರಿಗಳಿಂದ ನಿಮ್ಮನ್ನು ಮುಕ್ತಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಬೆಳಗಾವಿ ವಿಚಾರವಾಗಿ ಯಾಕೆ ನಿರ್ಧಾರ ಮಾಡ್ತಿಲ್ಲ?

ಎ.ಮಂಜು ಮೇಲೆ ಬಿಜೆಪಿ ಶಿಸ್ತುಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಹೊಸ ಬಾಂಬ್​ ಸಿಡಿಸಿದರು. ಎ.ಮಂಜು ಹೆಗಲ ಮೇಲಿಂದ ರಾಜಕೀಯ ಎದುರಾಳಿಗೆ ಗುರಿಯಿಟ್ಟರು. ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಮಂಜು ‌ಬಗ್ಗೆಯೇನೋ ನಿರ್ಧಾರ ತೆಗೆದುಕೊಂಡರು. ಆದರೆ ಬೆಳಗಾವಿ ವಿಚಾರವಾಗಿ ಯಾಕೆ ನಿರ್ಧಾರ ಮಾಡ್ತಿಲ್ಲ ಎಂದು ಪ್ರಶ್ನಿಸಿದರು. ಕ್ರಮ ತೆಗೆದುಕೊಳ್ಳೋಕೆ ಬಿಜೆಪಿಯವರಿಗೆ ಧಂ ಇಲ್ಲ, ಅಲ್ಲಿ ಯಾಕೆ ಪಕ್ಷೇತರ ಅಭ್ಯರ್ಥಿಯನ್ನು ನಿಲ್ಲಿಸಿದ್ರು ಎಲ್ಲಾ ಗೊತ್ತಿದೆ. ಯಾರು ನಿಲ್ಲಿಸಿದ್ದು ಅನ್ನೋದು ಗೊತ್ತಿದೆ ಎಂದು ಡಿಕೆಶಿ ಚಾಟಿ ಬೀಸಿದರು.

BJPಯಿಂದ ಅಂತರ ಕಾಯ್ದುಕೊಂಡ ಜಾರಕಿಹೊಳಿ

ಬಿಜೆಪಿಯಲ್ಲಿರುವ ರಮೇಶ್​ ಜಾರಕಿಹೊಳಿ ಸಹ ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಪರ ನಿಂತಿಲ್ಲ. ಬದಲಾಗಿ ಸೋದರ ಲಖನ್​ ಜಾರಕಿಹೊಳಿಗೆ ಬೆಂಬಲವಾಗಿ ನಿಂತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸೋದರನನ್ನು ಕಣಕ್ಕಿಳಿಸಿ ರಾಜಕೀಯ ದಾಳ ಉರುಳಿಸಿದ್ದಾರೆ. ಬಿಜೆಪಿ ಚುನಾವಣಾ ಪ್ರಚಾರದಿಂದ ರಮೇಶ್​ ಜಾರಕಿಹೊಳಿ ಅಂತರ ಕಾಯ್ದುಕೊಂಡಿದ್ದಾರೆ. ನಿನ್ನೆ ಈ ಬಗ್ಗೆ ಮಾತನಾಡಿದ ರಮೇಶ್​ ಜಾರಕಿಹೊಳಿ, ಕಾಂಗ್ರೆಸ್​ ಅಭ್ಯರ್ಥಿಯನ್ನು ಸೋಲಿಸುವುದು ಒಂದೇ ನನ್ನ ಗುರಿ ಎಂದಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಸೋದರ ಕಾಂಗ್ರೆಸ್​ ನಿಂದ ಬೆಳಗಾವಿಯಲ್ಲಿ ಸ್ಪರ್ಧಿಸಿದ್ದಾರೆ.

ಮಂಥರ್​ ಗೌಡ ತಾಯಿ ಕೊಡಗಿನವರು

ಎ.ಮಂಜು ಮೇಲೆ ಶಿಸ್ತು ಕ್ರಮ ತೆಗೆದುಕೊಂಡಂತೆ ಬೆಳಗಾವಿಯಲ್ಲಿ ರಮೇಶ್​ ಜಾರಕಿಹೊಳಿ ವಿರುದ್ಧ ಬಿಜೆಪಿ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಇನ್ನು ಎ.ಮಂಜು ನನ್ನನ್ನು ಭೇಟಿಯಾಗಿಲ್ಲ ಎಂದು ಕೋಲಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಎ.ಮಂಜು ಬಿಜೆಪಿಯಲ್ಲಿರಬಹುದು, ಪುತ್ರ ಕಾಂಗ್ರೆಸ್​ನಿಂದ ಸ್ಪರ್ಧಿಸಬಾರದು ಅಂತೇನು ಇಲ್ಲ. ಮಂಥರ್​ ಗೌಡ ತಾಯಿ ಕೊಡಗಿನವರು ಎಂದು ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.

ಇದನ್ನೂ ಓದಿ: ಮಳೆಹಾನಿ ಸಂಬಂಧ CM ಸರಣಿ ಸಭೆ; ಅಬ್ಬಾ ನಿಮ್ಮ ಉತ್ಸಾಹವನಷ್ಟೇ ಮೆಚ್ಚಬೇಕು ಎಂದು DK Shivakumar ವ್ಯಂಗ್ಯ

ಎ.ಮಂಜು ಸಮರ್ಥನೆ

ಇನ್ನು ನಿನ್ನೆ ಮಂಥರ್ ಗೌಡ ಕೊಡಗಿನಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಬಿಜೆಪಿಯಲ್ಲಿರುವ ತಂದೆ ಮಾಜಿ ಸಚಿವ ಎ.ಮಂಜು ಸ್ಪಷ್ಟನೆ ನೀಡಿದರು. ಸೋನಿಯಾ ಗಾಂಧಿ, ಮೇನಕಾ ಗಾಂಧಿ ಯಾರೂ ಈ ದೇಶದಲ್ಲಿ. ಅವರು ಬಿಜೆಪಿ, ಇವರು ಕಾಂಗ್ರೆಸ್ ನಲ್ಲಿ ಇಲ್ವಾ. ದೇವೇಗೌಡರ ಕುಟುಂಬದವರೆಲ್ಲಾ ಜನತಾದಳ ಅಂತಿದ್ದಾರೆ ಅಷ್ಟೇ. ಎಲ್ಲಾ ಪಾರ್ಟಿನಲ್ಲೂ ಅವರೇ ಇದ್ದಾರೆ. ಅವರು ಒಳಒಪ್ಪಂದದ ಚುನಾವಣೆ ಮಾಡ್ತಾರೆ. ಈ ಕ್ಷೇತ್ರದಲ್ಲಿ ಡಾ.ಮಂಥರ್ ಗೌಡ ಬಿಜೆಪಿ ಅಭ್ಯರ್ಥಿ ಆಗಬೇಕಿತ್ತು. ಏತಕ್ಕೆ ತಪ್ಪಿ ಹೋಯಿತು ಎಂಬುದನ್ನ ಮುಂದಿನ ದಿನಗಳಲ್ಲಿ ಹೇಳ್ತಿನಿ ಎಂದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್​ ವಿರುದ್ಧ ಅಸಮಾಧಾನ ಹೊರ ಹಾಕಿದರು. ಸಿದ್ದರಾಮಯ್ಯ ಅವರನ್ನು ನಾನು ಭೇಟಿ ಆಗಿಲ್ಲ, ಅವರಿಗೆ ಆರೋಗ್ಯ ಹದಗೆಟ್ಟಾಗ ಭೇಟಿಯಾಗಿದ್ದು ಎಂದರು.
Published by:Kavya V
First published: