DK Shivakumar: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಯಡಿಯೂರಪ್ಪ ಗಳಗಳನೆ ಅತ್ತಿದ್ದು ಏಕೆ? : ಡಿ.ಕೆ.ಶಿವಕುಮಾರ್

ರಾಜೀನಾಮೆ ನೀಡುವಾಗ  ಬಿ.ಎಸ್​.ಯಡಿಯೂರಪ್ಪ ಪಾಪ ಗಳಗಳನೆ ಅತ್ತರು. ಕೋವಿಡ್​​ ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ ಕೇಂದ್ರ ಸರ್ಕಾರ ಕೇಂದ್ರ ಆರೋಗ್ಯ ಸಚಿವರನ್ನು ಬದಲಾವಣೆ ಮಾಡಿತು. ಇಲ್ಲೂ ಅಷ್ಟೇ ಅದಕ್ಕೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಡಿಕೆಶಿ ಕುಹಕವಾಡಿದರು.

ಡಿ.ಕೆ. ಶಿವಕುಮಾರ್​.

ಡಿ.ಕೆ. ಶಿವಕುಮಾರ್​.

  • Share this:
ದೊಡ್ಡಬಳ್ಳಾಪುರ: ಬಿಜೆಪಿಯ ಸಿಎಂ ಬದಲಾವಣೆ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ವ್ಯಂಗ್ಯವಾಡಿದರು. ಇಲ್ಲಿನ ದೊಡ್ಡಬೆಳವಂಗಲದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅವಶ್ಯಕತೆ ಏನಿತ್ತು, ಅವರ ಮೇಲೆ ಏನಾದರೂ ಆರೋಪ ಇತ್ತಾ ಎಂದು ಪ್ರಶ್ನಿಸಿದರು. ರಾಜೀನಾಮೆ ನೀಡುವಾಗ  ಬಿ.ಎಸ್​.ಯಡಿಯೂರಪ್ಪ ಪಾಪ ಗಳಗಳನೆ ಅತ್ತರು. ಇದೆಲ್ಲಾ ನೋಡಿದರೆ ಜನಪರ‌ ಸರ್ಕಾರ ನೀಡಲು ಇವರಿಂದ ಆಗಿಲ್ಲ ಎಂದು ಸಾಬೀತಾದಂತೆ‌ ಆಯಿತು.  ಕೋವಿಡ್​​ ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ ಕೇಂದ್ರ ಸರ್ಕಾರ ಕೇಂದ್ರ ಆರೋಗ್ಯ ಸಚಿವರನ್ನು ಬದಲಾವಣೆ ಮಾಡಿತು. ಇಲ್ಲೂ ಅಷ್ಟೇ ಅದಕ್ಕೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಡಿಕೆಶಿ ಕುಹಕವಾಡಿದರು.

ಇನ್ನು ಬೆಳಗಾವಿಯಲ್ಲಿ ಅಧಿವೇಶನ ಮಾಡದೇ ಇರುವುದು ಅವರ ಮೊದಲ ತಪ್ಪು ಎಂದು ಟೀಕಿಸಿದರು. ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಈಗ ಅಧಿವೇಶನನ ಇಲ್ಲೇ ಮಾಡುತ್ತಾರೆ ಎಂದು ನನಗೆ ಮಾಹಿತಿಯಿದೆ, ಹಾಗಾದರೆ ನಿಮಗೆ ಪ್ರಿಪರೇಷನ್ ಇಲ್ಲವೇ ಎಂದು ಪ್ರಶ್ನಿಸಿದರು. ಬೆಳಗಾವಿಗೆ ಯಾಕೆ ಇನ್ನೂ ನೆರೆಯ ಹಣವನ್ನೇ ನೀಡಿಲ್ಲ. ಈಗಿನ ಮುಖ್ಯಮಂತ್ರಿಗಳು ಆ ಭಾಗದವರೇ. ಜನ ಬಂದು ಕೇಳುತ್ತಾರೆ, ಪ್ರತಿಭಟನೆ ಮಾಡುತ್ತಾರೆ ಅನ್ನೋ ಭಯದಿಂದ ಅಧಿವೇಶನವನ್ನು ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು. ನಮ್ಮ ಪ್ರಶ್ನೆ ಏನಿದೆ ಅಂತಾ ನಾವೂ ಈಗ ಹೇಳಲ್ಲ. ಜನರ ಸೇವೆ ಮಾಡುವಲ್ಲಿ ಸರಕಾರ ವಿಫಲವಾಗಿದೆ ಎಂದರು.

ಇದನ್ನೂ ಓದಿ: ಲೇಡಿ ಪೊಲೀಸ್​ನಿಂದ ರೇಪ್ ಬೆದರಿಕೆ; ಜನತಾ ದರ್ಶನ ವೇಳೆ ಸಿಎಂ ಮುಂದೆ ಮಹಿಳೆ ಅಳಲು

ಭಗವಂತ ಖೂಬಾ ಸ್ವಾಗತಕ್ಕೆ ಬಂದೂಕು ಬಳಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಂದೂಕಿಗೆ ಲೈಸೆನ್ಸ್  ಕೊಟ್ಟವರು ಯಾರು? ಯಾಕೆ ಇನ್ನೂ ಅವರನ್ನು ಅರೆಸ್ಟ್ ಮಾಡಿಲ್ಲ, ಯಾಕೆ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಮಂತ್ರಿಗೇ ಒಂದು ಕಾನೂನಾ. ಕ್ರಮ ಕೈಗೊಳ್ಳಲು ಸಿಎಂ ಬಸವರಾಜ್ ಬೊಮ್ಮಾಯಿಗೆ ಎಲ್ಲಿದೆ ಶಕ್ತಿ ಎಂದು ಪ್ರಶ್ನಿಸಿದರು. ಹೋಂ ಮಿನಿಷ್ಟರ್ ಗೆ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಿ ಹೋಗಲಿ.ಬೇರೆ ಯಾವುದಾದರೂ ಖಾತೆ ತೆಗೆದುಕೊಂಡು ಹೋಗಲಿ. ಪಾಪಾ ಇನ್ನೂ ಹೊಸದು ಆಗಲ್ಲ ಅವರ ಕೈಯಲ್ಲಿ. ಯಾವುದೋ ಒತ್ತಡದಲ್ಲಿ ಖಾತೆ ನೀಡಿದ್ದಾರೆ. ಯಾರಿಗೇ ಬೇಕಾದರೂ ಕೊಟ್ಟಿಕೊಳ್ಳಲಿ ನಮಗೆ ಚಿಂತೆಯಿಲ್ಲ ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: