ಬೆಂಗಳೂರು: ರಾಜ್ಯಕ್ಕೆ ಅಘಾತ ನೀಡಿದ ಮೈಸೂರು ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ಬಿರುಸಿನಿಂದ ನಡೆಯುತ್ತಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ, ಡಿಜಿಪಿ ಪ್ರವೀಸ್ ಸೂದ್ ಸಾಂಸ್ಕೃತಿಯ ನಗರಿಯಲ್ಲೇ ಬೀಡು ಬಿಟ್ಟಿದ್ದಾರೆ. ಸಂಜೆ ವೇಳೆ ಸಂತ್ರಸ್ತೆ ಅಂತಹ ಪ್ರದೇಶಕ್ಕೆ ಹೋಗಬಾರದಿತ್ತು ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆಗೆ ವ್ಯಾಪಾಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಮೈಸೂರು ವಿಶ್ವವಿದ್ಯಾಲಯ(Mysore University)ದ ಸುತ್ತೋಲೆ ಚರ್ಚೆಗೆ ಗ್ರಾಸವಾಗಿದೆ. ಗ್ಯಾಂಗ್ ರೇಪ್ ಹಿನ್ನೆಲೆಯಲ್ಲಿ ಮಾನಸ ಗಂಗೋತ್ರಿಯಲ್ಲಿ ಇನ್ಮುಂದೆ ಸಂಜೆ 6 ಗಂಟೆ ಬಳಿಕ ವಿದ್ಯಾರ್ಥಿನಿಯರು ಒಂಟಿಯಾಗಿ ಓಡಾಡುವುದು, ಕೂರುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಸುರಕ್ಷತೆ ದೃಷ್ಟಿಯಿಂದ ಕುಕ್ಕರಳ್ಳಿ ಕೆರೆಯ ಬಳಿಯೂ ಯುವತಿಯರು ಸಂಜೆ ವೇಳೆ ಓಡಾಡಬಾರದು ಎಂದು ವಿವಿ ಸುತ್ತೋಲೆ ಹೊರಡಿಸಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಪಕುಲಪತಿ ಕೂಡಲೇ ಮನೆಗೆ ಕಳಿಸಿ
ಮೈಸೂರು ವಿವಿ ಉಪಕುಲಪತಿ ಆದೇಶ ಹೊರಡಿಸಿದ್ದಾರೆ. ಕ್ಯಾಂಪಸ್ ಒಳಗಡೆ ಆರು ಗಂಟೆ ನಂತರ ಯಾರು ಓಡಾಡದಂತೆ ಹೇಳಿದ್ದಾರೆ. ಇದೊಂದು ಅವೈಜ್ಞಾನಿಕ ನಿಯಮ. ಈ ವಿಚಾರವಾಗಿ ನಾನು ಗರ್ವನರ್ ಜೊತೆಗೆ ಮಾತನಾಡಲಿದ್ದೇನೆ. ಹೋಮ್ ಮಿನಿಸ್ಟರ್ ತಪ್ಪಾ..? ಕಮಿಷನರ್ ತಪ್ಪಾ..? ರಾತ್ರಿ ಹೊತ್ತು ಓಡಾಡಬೇಡಿ ಅಂದ್ರೆ ಹೇಗೆ? ರಕ್ಷಣೆ ಕೊಡಬೇಕಾಗಿದ್ದು ಪೊಲೀಸ್ ಕೆಲಸ. ಪ್ರವಾಸಿ ತಾಣ ಬೇರೆ, ಸಾಕಷ್ಟು ಕಡೆಯಿಂದ ಮೈಸೂರಿಗೆ ಜನಗಳು ಬರ್ತಾರೆ. ಯುವತಿಯರಿಗೆ ಓಡಾಡಬೇಡಿ ಅಂದ್ರೆ ಹೇಗೆ? ಉಪಕುಲಪತಿಗಳ ಆದೇಶ ಕಾನೂನು ಬಾಹಿರ. ಉಪಕುಲಪತಿಗಳ ಅಪಾಯಿಂಟ್ ಮೆಂಟ್ ಕ್ಯಾನ್ಸಲ್ ಮಾಡಬೇಕು, ಅವರನ್ನು ಕೂಡಲೇ ಮನೆಗೆ ಕಳಿಸಬೇಕು ಎಂದು ಡಿಕೆಶಿ ಕಟುವಾಗಿ ಟೀಕಿಸಿದರು.
ಪೊಲೀಸರು ಏನೆಲ್ಲ ಮಾಡಿದ್ದಾರೆ ಅಂತ ಗೊತ್ತಿದೆ
ಮೈಸೂರು ಅತ್ಯಾಚಾರ ಪ್ರಕರಣದ ಕಾಂಗ್ರೆಸ್ ಸಮಿತಿ ವಿಚಾರವಾಗಿ ಮಾತನಾಡಿದ ಡಿಕೆಶಿ ಅವರು, ಈಗ ರೇವಣ್ಣ , ಉಗ್ರಪ್ಪ ನನ್ನನ್ನ ಭೇಟಿ ಮಾಡಿದ್ದಾರೆ. ಪ್ರಾಥಮಿಕ ವಿಚಾರ ಹಂಚಿಕೊಂಡಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಒಳ್ಳೆಯ ಕೆಲಸ ಮಾಡಿದ್ದರೆ ಅವರನ್ನು ಅಭಿನಂದಿಸುತ್ತೇವೆ. ಕೆಟ್ಟ ಕೆಲಸ ಮಾಡಿದ್ದಾರೆ ಟೀಕೆ ಮಾಡುತ್ತೇವೆ. ಈ ಹಿಂದೆ ಪೊಲೀಸರು ಏನೆಲ್ಲ ಮಾಡಿದ್ದಾರೆ ಅಂತ ನಮಗೂ ಗೊತ್ತಿದೆ. ಯಾವೆಲ್ಲ ಕೇಸ್ ಮುಚ್ಚಿ ಹಾಕಿದ್ರು. ಯಾವೆಲ್ಲ ಕೇಸ್ ನಲ್ಲಿ ಆರೋಪಗಳಿಗೆ ಶಿಕ್ಷೆ ಕೊಡಿಸಿದ್ರು. ಈಗ ಎಷ್ಟರ ಮಟ್ಟಿಗೆ ಸಂತ್ರಸ್ತರಿಗೆ ನ್ಯಾಯ ಕೊಡಿಸುತ್ತಾರೆ ನೋಡೋಣ ಎಂದು ಪರೋಕ್ಷವಾಗಿ ಪೊಲೀಸ್ ಇಲಾಖೆಗೆ ಕುಟುಕಿದರು.
ಇನ್ನು ಪ್ರಕರಣ ಸಂಬಂಧ ಡಿಜಿಪಿ ಪ್ರವೀಣ್ ಸೂದ್ ಮೈಸೂರಿನ ಐಜಿಪಿ ಕಚೇರಿಯಲ್ಲೇ ಪತ್ರಿಕಾಗೋಷ್ಠಿ ನಡೆಸಿದರು. ನಮ್ಮ ಸರ್ವೀಸ್ನಲ್ಲಿ 20 ಗಂಟೆಗಳಲ್ಲಿ ಈ ರೀತಿ ಪತ್ರಿಕಾಗೋಷ್ಠಿ ಮಾಡುವ ಸಂದರ್ಭ ಬಂದಿರಲಿಲ್ಲ. ಆಗಸ್ಟ್ 24ರಂದು ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಿಜಕ್ಕೂ ದುಃಖದ ಘಟನೆ. ಸಂಜೆ 7 ಗಂಟೆ ಸಮಯದಲ್ಲಿ ಸಂತ್ರಸ್ಥೆಯ ಸ್ನೇಹಿತ ಪೊಲೀಸರಿಗೆ ದೂರು ಕೊಟ್ಟಿದ್ದ. ಕಿಡಿಗೇಡಿಗರು 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಕ್ಕೆ ಈ ಘೋರ ಕೃತ್ಯ ಎಸಗಿದ್ದಾರೆ ಎಂದು ಹೇಳಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ