• Home
 • »
 • News
 • »
 • state
 • »
 • D.K.Shivakumar V/S Yatnal: ರಾಹುಲ್ ಗಾಂಧಿನ ಹುಚ್ಚ ಎಂದ ಯತ್ನಾಳ್​​​ಗೆ ಡಿಕೆ ಶಿವಕುಮಾರ್ ತಿರುಗೇಟು

D.K.Shivakumar V/S Yatnal: ರಾಹುಲ್ ಗಾಂಧಿನ ಹುಚ್ಚ ಎಂದ ಯತ್ನಾಳ್​​​ಗೆ ಡಿಕೆ ಶಿವಕುಮಾರ್ ತಿರುಗೇಟು

ಡಿ.ಕೆ. ಶಿವಕುಮಾರ್.

ಡಿ.ಕೆ. ಶಿವಕುಮಾರ್.

ನಿರುದ್ಯೋಗ, ಬೆಲೆ ಏರಿಕೆಯಿಂದ ತೊಂದರೆ ಆಗುತ್ತಿದೆ. ಅದನ್ನು ಮರೆಸಲು, ಜನರ ದಾರಿ ತಪ್ಪಿಸಲು ಈ ರೀತಿ ಮಾತಾಡುತ್ತಾರೆ. ಜನರ ಮೈಂಡ್ ಡೈವರ್ಟ್ ಮಾಡಲು ಹೇಳ್ತಾರೆ ಎಂದು ಡಿಕೆ ಶಿವಕುಮಾರ್​ ಆರೋಪಿಸಿದರು.

 • Share this:

  ಬೆಂಗಳೂರು: ಕಾಂಗ್ರೆಸ್​ ವರಿಷ್ಠ ರಾಹುಲ್ ಗಾಂಧಿ ಒಬ್ಬ ಹುಚ್ಚ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​​ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ತಿರುಗೇಟು ನೀಡಿದರು. ಮಾಧ್ಯಮಗಳ ಎದುರು ಮಾತನಾಡಿದ ಅವರು, ಪಾಪಾ ಏನು ಮಾಡ್ತೀರಾ ಯತ್ನಾಳ್​ ನ್ಯೂಸ್ ನಲ್ಲಿ ಇರಬೇಕು, ಆ ಹುಚ್ಚ ನ್ಯೂಸ್ ನಲ್ಲಿ ಇರಬೇಕು. ಅದಕ್ಕೆ ಏನೇನೋ ಮಾತಾಡುತ್ತಾನೆ. ಪ್ರಚಾರದಲ್ಲಿ ಇರಬೇಕಲ್ಲ ಅದಕ್ಕೆ ಏನೇನಾದ್ರೂ ಮಾತಾಡುತ್ತಾನೆ ಎಂದು ಕಿಡಿಕಾರಿದರು. ಯತ್ನಾಳ್​ ಸದಾ ಸುದ್ದಿಯಲ್ಲಿರಬೇಕು ಎಂದು ಹೇಳಿಕೆಗಳನ್ನು ನೀಡುತ್ತಾರೆ. ನಿರುದ್ಯೋಗ, ಬೆಲೆ ಏರಿಕೆಯಿಂದ ತೊಂದರೆ ಆಗುತ್ತಿದೆ. ಅದನ್ನು ಮರೆಸಲು, ಜನರ ದಾರಿ ತಪ್ಪಿಸಲು ಈ ರೀತಿ ಮಾತಾಡುತ್ತಾರೆ. ಜನರ ಮೈಂಡ್ ಡೈವರ್ಟ್ ಮಾಡಲು ಹೇಳ್ತಾರೆ ಎಂದು ಡಿಕೆ ಶಿವಕುಮಾರ್​ ಆರೋಪಿಸಿದರು.


  ಡಿಕೆಶಿನ ಭೇಟಿಯಾದ ವಿನಯ್​​ ಕುಲಕರ್ಣಿ


  ಇನ್ನು ಜಿ.ಪ. ಸದಸ್ಯ ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮಾಜಿ ಸಚಿವ ವಿನಯ್​​ ಕುಮಲರ್ಣಿ ಜೈಲಿನಿಂದ ಬಿಡುಗಡೆ ಆದ ಬಳಿಕ ಇಂದು ಬೆಂಗಳೂರಿನ ಡಿಕೆ ಶಿವಕುಮಾರ್​​ ಮನೆಗೆ ಭೇಟಿ ನೀಡಿದರು. ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ಡಿಕೆಶಿ, ವಿನಯ್ ಕುಲಕರ್ಣಿ ಪರ ಬ್ಯಾಟ್​ ಬೀಸಿದರು. ವಿನಯ್ ಕುಲಕರ್ಣಿ ಅವರು ಕಾಂಗ್ರೆಸ್​​ನ ಹಿರಿಯ ನಾಯಕರು. ನಾನು-ಅವರು ಎಲ್ಲಾ ಜೊತೆಗೆ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ. ಅವರು ಈಗ ಚುನಾವಣೆಯಲ್ಲಿ ಸೋತಿರಬಹುದು. ಈಗ ರಾಜಕೀಯವಾಗಿ ನೋವು ಆಗಿದೆ . ಅವರ ಮೇಲೆ ಇರುವ ಕೇಸ್ ಯಾವ ಹಂತದಲ್ಲಿದೆ ಅನ್ನೋದ್ ನನಗೆ ಗೊತ್ತಿದೆ. ಅವರ ವಿರುದ್ಧ  ಯಾವ ಯಾವ ನಾಯಕರು ಏನ್ ಮಾತಡಿದ್ದಾರೆ ಗೊತ್ತಿದೆ ಎಂದರು.


  ಇದನ್ನೂ ಓದಿ: ಪಕ್ಷ ಬಿಟ್ಟು ಹೋದವರು ನನಗೆ ಶಾಕ್ ಕೊಡೋಕೆ ಆಗಲ್ಲ: ನನಗೆ ಮಮತಾ ಬ್ಯಾನರ್ಜಿಯೇ ಸ್ಫೂರ್ತಿ; ಎಚ್​ಡಿಕೆ


  ವಿನಯ್ ವಿರುದ್ಧವಾಗಿ ಚುನಾವಣೆಗೆ ಮೊದಲು ಹಾಗೂ ಚುನಾವಣೆ ನಂತ್ರ ನಾಯಕರು ಮಾಡಿರುವ ಭಾಷಣದ ದಾಖಲೆ  ನಿಮ್ಮಗಳ ಹತ್ತಿರ ಇದೆ. ಅವರಿಗೆ ನ್ಯಾಯ ಕೊಡ್ಸಬೇಕು ಅಂದರೆ ಈಗ ನೀವು ರಿಪ್ಲೈ ಮಾಡಿ. ಅವರಿಗೆ ಆಗಿರುವ ನೋವನ್ನು ನನ್ನ ಜೊತೆಗೆ ಹಂಚಿಕೊಂಡಿದ್ದಾರೆ. ಅದು ಜೈಲು ಒಳಗೆ , ಹೊರಗೆ ಎಲ್ಲಾ ನೋವು ಹಂಚಿಕೊಂಡಿದ್ದಾರೆ.  ಈಗ ನಾನು ಆ ಕುರಿತು  ಮಾತಾಡಲ್ಲ, ಮುಂದೆ ಪಕ್ಷದಲ್ಲಿ ಕೆಲಸ ಮಾಡ್ಕೊಂಡು ಹೋಗ್ತಾರೆ. ಅವರ ಜೊತೆಗೆ ಕಾಂಗ್ರೆಸ್ ಪಕ್ಷದ ಇರುತ್ತೆ. ಅವರ ಕುಟುಂಬದ ಸದಸ್ಯರು , ಕಾರ್ಯಕರ್ತರ ಎಲ್ಲಾ ಇದ್ದಾರೆ. ನಮ್ಮಗೆ ನಂಬಿಕೆ ಇದೆ ಅವರು ತಪ್ಪು ಮಾಡಿಲ್ಲ, ಕಾನೂನಿನಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂದರು.


  ರಾಮಲಿಂಗಾ ರೆಡ್ಡಿ ತಿರುಗೇಟು


  ಇನ್ನು ವಿನಯ್​​ ಕುಲಕರ್ಣಿಗೆ ಜಾಮೀನು ಸಿಕ್ಕಿರುವ ಬಗ್ಗೆ ಬಿಜೆಪಿಯ ವ್ಯಂಗ್ಯಕ್ಕೆ ಕಾಂಗ್ರೆಸ್​ ನಾಯಕ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದರು. ವಿನಯ್ ಜಾಮೀನಿನ‌ ಸ್ವಾಗತಕ್ಕೆ ಲೇವಡಿ ಮಾಡ್ತಾರೆ. ಇವರ ನಾಯಕರು ಜೈಲಿಗೆ ಹೋಗಿ ಬಂದಿರಲಿಲ್ವೇ? ಯಡಿಯೂರಪ್ಪ ಜೈಲಿನಿಂದ ಬಂದವರಲ್ವೇ? ಜನಾರ್ದನರೆಡ್ಡಿ ಜೈಲಿನಿಂದ ಬಂದವರಲ್ವೇ? 17 ಮಂತ್ರಿಗಳು ಜಾಮೀನು ಪಡೆದಿರಲಿಲ್ವೇ? ಕಟ್ಟಾ, ಕೃಷ್ಣಯ್ಯ ಶೆಟ್ಟಿ ಜೈಲಿನಿಂದ ಬಂದವರಲ್ವೇ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ನಾಯಕರ ವಿರುದ್ಧ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  Published by:Kavya V
  First published: