Bitcoin ಹಗರಣದಲ್ಲಿ ಕಾಂಗ್ರೆಸ್ಸಿಗರು ಇದ್ದರೆ, BJP ಸರ್ಕಾರ ತನಿಖೆಗೆ ತಡ ಏಕೆ ಮಾಡುತ್ತಿದೆ: DK Shivakumar ತಿರುಗೇಟು

ಹಣ್ಣು ತಿಂದವನು ಯಾರೋ, ಸಿಪ್ಪೆ ತಿಂದವನು ಯಾರೋ. ಹಾದಿ ತಪ್ಪಿಸುವ ಕೆಲಸ ಬೇಡ ಎಂದು ಕಾಂಗ್ರೆಸ್​​ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

  • Share this:
ಬೆಂಗಳೂರು: ಬಿಟ್​​ಕಾಯಿನ್​​ ಹಗರಣ (Bitcoin Scam) ರಾಜ್ಯ ಕಾಂಗ್ರೆಸ್​​ ನಾಯಕರ (congress leaders ) ಕೊರಳಿಗೇ ಸುತ್ತಿಕೊಳ್ಳಲಿದೆ ಎಂದ ಬಿಜೆಪಿ ನಾಯಕರ (BJP leaders)ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (DK Shivakumar) ಆಕ್ರೋಶ ವ್ಯಕ್ತಪಡಿಸಿದರು.ಕೆಲವು ಮಾಧ್ಯಮಗಳಲ್ಲಿ ಕಾಂಗ್ರೆಸ್ ನವರು ಬಿಟ್ ಕಾಯಿನ್ ನಲ್ಲಿ ಇದ್ದಾರೆ ಅಂತ ತೋರಿಸ್ತಾ ಇದ್ದಾರೆ. ಕಾಂಗ್ರೆಸ್​​​ಗೆ ಡ್ಯಾಮೇಜ್ ಮಾಡುವ ಪ್ರಯತ್ನ ಆಗುತ್ತಿದೆ. ಆದ್ರೆ ಕಾಂಗ್ರೆಸ್​​​ನವರನ್ನು ಡ್ಯಾಮೇಜ್ ಮಾಡೋಕೆ ಆಗಲ್ಲ. ನಾವು ಮಾಹಿತಿ ಕಲೆ ಹಾಕ್ತಾ ಇದ್ದೇವೆ. ಕಾಂಗ್ರೆಸ್ ನಾಯಕರಿದ್ರೆ ಲೇಟ್ ಯಾಕೆ ಮಾಡ್ತಾ ಇದ್ದಾರೆ, ಅರೆಸ್ಟ್ ಮಾಡ್ಲಿ ತಡ ಮಾಡ್ತಿರೋದು ಯಾಕೆ. ಟೈಮ್ ಯಾಕೆ ವ್ಯರ್ಥ ಮಾಡುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು. ಹಣ್ಣು ತಿಂದವನು ಯಾರೋ, ಸಿಪ್ಪೆ ತಿಂದವನು ಯಾರೋ. ಹಾದಿ ತಪ್ಪಿಸುವ ಕೆಲಸ ಬೇಡ ಎಂದು ಕಾಂಗ್ರೆಸ್​​ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡಿದರು.

ಹಗರಣದಲ್ಲಿ ಏನಿದೆ ಅಂತ ಸಿಎಂ‌ ಬಿಚ್ಚಿಡಲಿ

ಸಿಎಂ ಯಾಕೆ ದೆಹಲಿ ಹೋಗಿದ್ದಾರೆ ಎಂಬುವುದು ಅವರ ಆಂತರಿಕ ವಿಷಯ. ಸಿಎಂ ಬಗ್ಗೆ ಅವರ ಪಾರ್ಟಿಯ ಸಚಿವರು, ಶಾಸಕರೇ ಪೋನ್ ಮಾಡಿ ಮಾತಾಡ್ತಾ ಇದ್ದಾರೆ. ಅದೆಲ್ಲಾ ನಾನು ಬಿಡಿಸಿ ಹೇಳಬೇಕಿಲ್ಲ. ಪರೋಕ್ಷವಾಗಿ ಸಿಎಂ ಬಿಟ್ ಕಾಯಿನ್ ಕೇಸ್ ನಲ್ಲಿ ಇದ್ದಾರೆ ಎಂದು ಹೇಳುವ ಪ್ರಯತ್ನ ಮಾಡಿದರು. ಸಿಎಂಗೆ ತಲೆ ಕೆಡಿಸಿಕೊಳ್ಳಬೇಡಿ ಅಂತ ಪ್ರಧಾನಿ ಹೇಳಿದ್ದಾರೆಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಬಹಳ ಸಂತೋಷ. ಹಗರಣದಲ್ಲಿ ಏನಿದೆ ಅಂತ ಸಿಎಂ‌ ಬಿಚ್ಚಿಡಲಿ. ಕೆಲವು ಹೇಳೋದು ಉಳಿದದ್ದು ಹೇಳದೇ ಇರೋದು ಮಾಡಬಾರದು ಸಿಎಂ. ಸಚಿನ್ ಮಾಮನಿ ಪಿಎಂಗೆ ಬರೆದ ಪತ್ರದಲ್ಲಿ ಎಲ್ಲ ಉಲ್ಲೇಖ ಮಾಡಿದ್ದಾರೆ. ತನಿಖೆ ಮಾಡಬೇಕಲ್ಲ ಇವರು? ಯಾರಿದಾರೆ, ಯಾರಿಲ್ಲ, ಎಲ್ಲಿ ಹಗರಣ ನಡೀತು ಅಂತ ಹೇಳಲಿ ಎಂದು ಸವಾಲೆಸೆದರು.

ಸ್ಪೀಕರ್​​ ಸೋಲಿನ ಹತಾಷೆ ತೋರಿಸ್ತಿದ್ದಾರೆ

ಹಾನಗಲ್​​ನ ನೂತನ ಶಾಸಕ ಶ್ರೀನಿವಾಸ ಮಾನೆ ಪದಗ್ರಹಣಕ್ಕೆ ಸ್ಪೀಕರ್ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ವಿರುದ್ದ ಡಿಕೆಶಿ ಕಿಡಿಕಾರಿದರು. ಹಾನಗಲ್ ಚುನಾವಣೆ ಸೋತ ಹತಾಶೆಯನ್ನು ಸ್ಪೀಕರ್ ಈ ರೀತಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರು ಬಹಳ ಶಿಸ್ತಿನ ಸಂವಿಧಾನ ಬದ್ದ ಆಡಳಿತ ನಡೆಸ್ತಿದ್ದಾರೆ. ಮೊನ್ನೆಯ ಅಸೆಂಬ್ಲಿ ಕೂಡ ಸಂವಿಧಾನವಾಗಿ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು. ಸ್ಪೀಕರ್ ಪಕ್ಷಾತೀತ ಅಲ್ಲವೇ ಎಂಬ ಪ್ರಶ್ನೆಗೆ, ಯಾವ ಪಕ್ಷಾತೀತ ಎಂದು ಕೇಳಿದರು. ಸ್ಪೀಕರ್ ಕ್ರಮಕ್ಕೆ ನೀವೇ ಒಂದು ಅಭಿಪ್ರಾಯ ಕೊಡಿ ಎಂದು ಡಿಕೆಶಿ ಮಾಧ್ಯಮಗಳಿಗೆ ಕೇಳಿದರು.

ಇದನ್ನೂ ಓದಿ: ಅಮ್ಮ-ಮಗ ‘Rafale’ನಲ್ಲಿ ಸಿಕ್ಕಿಹಾಕಿಕೊಂಡಂತೆ, ಕಾಂಗ್ರೆಸ್​​ನವರು Bitcoinನಲ್ಲಿ ತಗ್ಲಾಕೊಳ್ತಾರೆ; Pratap Simha

ಪೊಲೀಸರ ನಡವಳಿಕೆ ಖಂಡಿಸುತ್ತೇನೆ

ಬೆಳಗಾವಿಯಲ್ಲಿ ರೈತರ ಹೋರಾಟ ರೈತರ ಹಕ್ಕು, ಜಮೀನು ಕಳೆದುಕೊಳ್ಳೋರದ್ದು ಪಿತ್ರಾರ್ಜಿತ ಆಸ್ತಿ. ರೈತರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಜತೆ ಪೊಲೀಸರು ಗೌರವದಿಂದ ನಡೆದುಕೊಳ್ಳಲಿ. ಪೊಲೀಸರ ನಡವಳಿಕೆಯನ್ನು ನಾವು ಖಂಡಿಸುತ್ತೇವೆ. ಬಿಜೆಪಿಯವರೇ ಬಾಯಿ ಚಪಲಕ್ಕಾಗಿ ಕೆಲ ನಮ್ಮವರ ಹೆಸರನ್ನು ಮಾಧ್ಯಮಗಳ ಮೂಲಕ ಹೇಳಿಸುತ್ತಿದ್ದಾರೆ ಅಷ್ಟೇ ಎಂದು ಬಿಟ್​ಕಾಯಿನ್​ ಆರೋಪಕ್ಕೆ ಕಾರಣ ಹೇಳಿದರು.

ಬಿಟ್ ಕಾಯಿನ್ ವ್ಯವಹಾರ ತಪ್ಪಲ್ಲ

ಕೊಪ್ಪಳದ ಗಂಗಾವತಿಯಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಬಿಟ್ ಕಾಯಿನ್ ವ್ಯವಹಾರ ತಪ್ಪಲ್ಲ. ಅದ್ರೆ ಹ್ಯಾಕಿಂಗ್ ಮಾಡಿರೋದು ತಪ್ಪು ಎಂದರು. ಹ್ಯಾಕ್ ಮಾಡಿದೋರಿಗೆ ನಮ್ಮ ರಾಜ್ಯದ ಇಬ್ಬರು ಪ್ರಭಾವಿ ರಾಜಕಾರಣಿಗಳು ಸಪೋರ್ಟ್ ಮಾಡಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಇಬ್ಬರು ಪ್ರಭಾವಿ ರಾಜಕಾರಣಿಗಳು ಸಹಾಯ ಮಾಡಿದ್ದಾರೆ. ಪ್ರಧಾನಿ ಕಚೇರಿಗೆ ಇಲ್ಲಿಂದ ಪತ್ರ ಹೋದ ಮೇಲೆ ಶ್ರೀಕಿ ಮೇಲೆ ಕೇಸ್ ದಾಖಲಾಗಿದೆ. ಈ ಪ್ರಕರಣ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
Published by:Kavya V
First published: