• Home
  • »
  • News
  • »
  • state
  • »
  • DK Shivakumar: ಅದೊಂದು ಕೆಲಸ ಮಾಡಿ..ಹೆಗಲ ಮೇಲೆ ಕೈ ಅಲ್ಲ, ನಿಮ್ಮನ್ನು ಭುಜದ ಮೇಲೆ ಹೊರುವೆ: ಡಿಕೆ ಶಿವಕುಮಾರ್

DK Shivakumar: ಅದೊಂದು ಕೆಲಸ ಮಾಡಿ..ಹೆಗಲ ಮೇಲೆ ಕೈ ಅಲ್ಲ, ನಿಮ್ಮನ್ನು ಭುಜದ ಮೇಲೆ ಹೊರುವೆ: ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಸುಮ್ಮನೆ ಪೋಟೋಗಳನ್ನು ಹಾಕ್ಕೊಳ್ಳೋದ್ದಲ್ಲ, ನಿಮ್ಮ ಪೋಟೋಗಳು ಟಿವಿಗಳಲ್ಲಿ ಬರಬೇಕು. ನಿಮ್ಮ ಹೋರಾಟ ಟಿವಿಗಳಲ್ಲಿ ಬರಬೇಕು‌. ಆಗ ನಿಮ್ಮಲ್ಲಿ ನಾಯಕತ್ವದ ಗುಣ ಇದೆ ಎಂದು ಅರ್ಥ ಎಂದು ಎನ್​​ಎಸ್​​​ಯುಐಗೆ ಡಿಕೆಶಿ ಚಾಲೆಂಜ್ ಮಾಡಿದರು.

  • Share this:

ಬೆಂಗಳೂರು: ಕಾಂಗ್ರೆಸ್​​ ಭವನದಲ್ಲಿ NSUI ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಮಾತನಾಡಿದರು. ಡಿಕೆಶಿ ವೇದಿಕೆ ಬರುತ್ತಿದ್ದಂತೆ ಯುವಕರು ಡಿಕೆ ಡಿಕೆ ಎಂದು ಜಯಕಾರ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನೀವು ಸುಮ್ಮನೆ ಡಿಕೆ ಡಿಕೆ ಅಂತ ಕೂಗೋದಲ್ಲ, ಇದಕ್ಕೆಲ್ಲಾ ನಾನು ಬಗ್ಗಲ್ಲ. ಒಬ್ಬೊಬ್ಬರು 1 ಸಾವಿರ ಜನರ ಮೆಂಬರ್ ಶಿಪ್ ಮಾಡ್ಕೊಂಡು ತನ್ನಿ, ಆಗ ನಾನೇ ನಿಮ್ಮನ್ನ ಭುಜದ ಮೇಲೆ ಇಟ್ಕೊಳ್ತೀನಿ. ಸುಮ್ಮನೆ ಪೋಟೋಗಳನ್ನು ಹಾಕ್ಕೊಳ್ಳೋದ್ದಲ್ಲ, ನಿಮ್ಮ ಪೋಟೋಗಳು ಟಿವಿಗಳಲ್ಲಿ ಬರಬೇಕು. ನಿಮ್ಮ ಹೋರಾಟ ಟಿವಿಗಳಲ್ಲಿ ಬರಬೇಕು‌. ಆಗ ನಿಮ್ಮಲ್ಲಿ ನಾಯಕತ್ವದ ಗುಣ ಇದೆ ಎಂದು ಅರ್ಥ ಎಂದು ಎನ್​​ಎಸ್​​​ಯುಐಗೆ ಡಿಕೆಶಿ ಚಾಲೆಂಜ್ ಮಾಡಿದರು.


ಮೈಸೂರು ವಿವಿ ವಿರುದ್ಧ ಆಕ್ರೋಶ 


ನಂತರ ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರದಲ್ಲಿ ಬರೀ ರೇಪ್ ಗಳು ನಡೆಯುತ್ತಿವೆ. ಬೇರೆ ಬೇರೆ ನಾಯಕರು ರೇಪ್ ಮಾಡ್ತಿದ್ದಾರೆ. ಅದರ ಬಗ್ಗೆ ಈಗ ಮಾತನಾಡುವುದು ಬೇಡ, ಮುಂದೆ ಮಾತನಾಡ್ತೀನಿ ಎಂದು ಬಿಜೆಪಿ ನಾಯಕರನ್ನು ಕುಟುಕಿದರು. ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಹೆಣ್ಣು ಮಕ್ಕಳು ಸಂಜೆ ಬಳಿಕ ಹೊರಗೆ ಬರಬಾರದು ಎಂದು ಯುನಿವರ್ಸಿಟಿ ಆದೇಶ ಮಾಡಿದೆ. ಇವರಿಗೆ ನಾಚಿಕೆ ಆಗಬೇಕು ಎಂದು ಡಿಕೆಶಿ ವಾಗ್ದಾಳಿ ಮಾಡಿದರು.


ಅಂದು ನಾನು ಕಾಂಗ್ರೆಸ್​ ಬಿಡಲಿಲ್ಲ 


ಹಳೆಯ ನೆನಪುಗಳನ್ನು ಡಿಕೆ ಶಿವಕುಮಾರ್​ ಹಂಚಿಕೊಂಡರು. ನನಗೆ NSUI ಎಲೆಕ್ಷನ್ ಗೆ ಟಿಕೆಟ್ ಕೊಟ್ಟಿರಲಿಲ್ಲ, ಆಗ ಪಿಜಿಆರ್ ಸಿಂಧ್ಯಾ ಇದೇ ಬಿಲ್ಡಿಂಗ್ ಗೆ ನನ್ನ ಕರೆಸಿ ಜನತಾ ಪಾರ್ಟಿ ಸೇರು ಅಂದಿದ್ರು, ಆದರೆ ನಾನು ಒಪ್ಪಿರಲಿಲ್ಲ. ಆಗ ಇನ್ನು ಅವರು ಎಂಎಲ್ಎ ಆಗಿರಲಿಲ್ಲ. ಆದರೆ ನನ್ನ‌ ಮನಸು ಒಪ್ಪಲಿಲ್ಲ, ನನ್ನ ಬ್ಲಡ್ ಒಪ್ಪಲಿಲ್ಲ ಹೀಗಾಗಿ ಸೇರಲ್ಲ ಅಂದೆ. ಕಾಂಗ್ರೆಸ್​ನಲ್ಲೇ ಉಳಿದೆ, ಈಗ ಇಲ್ಲಿಯವರೆಗೆ ಬಂದಿದ್ದೇನೆ ಎಂದರು.


ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು. ನರೇಂದ್ರ ಮೋದಿ ಸುಳ್ಳು ಬಿಟ್ಟು ಬೇರೆ ಏನು ಹೇಳಲ್ಲ. ಯುವಕರನ್ನೆಲ್ಲಾ ದಾರಿ ತಪ್ಪಿಸಿಬಿಟ್ರು. ಕೆಲವೊಂದು ಕಡೆ ಮೋದಿ, ಮೋದಿ ಅಂತಾರೆ, ಎಲ್ಲರನ್ನ ದಾರಿ ತಪ್ಪಿಸಿ ಬಿಟ್ಟರು. ಯುವಕರು ಇನ್ನೂ ಬೂದಿಯಾಗಿಲ್ಲ, ಸ್ಲೋ ಆಗಿ ಆಗ್ತಾರೆ. ಮನ್ ಕಿ ಬಾತ್ ನಲ್ಲೂ ಬರಿ ಸುಳ್ಳು ಹೇಳ್ತಾರೆ. ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡ್ತೀನಿ ಅಂದ್ರು ಕೊಟ್ರಾ..? ಕೆಲಸ ಕೊಡೋಕೆ ಆಗಲಿಲ್ಲ, ಅದ್ಕೆ ಗಡ್ಡ ಬೆಳೆಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.


ಇದನ್ನೂ ಓದಿ: Yatnal| ಒಂದೇ ಕುಟುಂಬದ ಎಷ್ಟು ಜನರಿಗೆ ಅವಕಾಶ? ಯಡಿಯೂರಪ್ಪ ವಿರುದ್ಧ ಮತ್ತೆ ಕಿಡಿಕಾರಿದ ಯತ್ನಾಳ್


ಕೆಲಸ ಕೊಡಿ ಅಂದ್ರೆ ಪಕೋಡ ಮಾರು ಅಂತಾರೆ. ಅದನ್ನಾದ್ರೂ ಮಾಡೋಣ ಅಂದ್ರೆ ಅದೂ ಸಾಧ್ಯವಿಲ್ಲ‌. ಅಡುಗೆ ಎಣ್ಣೆ ಬೆಲೆ ಜಾಸ್ತಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಏನಾಯ್ತು, ಚರ್ಚೆನೇ ಮಾಡದೇ ಜಾರಿ ಮಾಡ್ತೀವಿ ಅಂತ ಹೇಳಿಬಿಟ್ರು. ಮುಸಲ್ಮಾನರು ಬೇಡ, ಕ್ರಿಶ್ಚಿಯನ್ ಬೇಡ, ಮಹಿಳೆಯರು ಬೇಡ ಅಂತಾರೆ. ಇದ್ಯಾವ ದೇಶ ಭಕ್ತಿ ಎಂದು ಪ್ರಶ್ನಿಸಿದರು. ನೆಹರೂ ನಮ್ಮ ಜೊತೆಯಲ್ಲಿ ಇಲ್ಲ, ಆದರೂ ಅವರ ವಿಚಾರಗಳು ನಮ್ಮಲ್ಲಿವೆ. ನಾವೆಲ್ಲರೂ ದೇಶ ಕಟ್ಟಬೇಕು. ಜಾತ್ಯಾತೀತ ರಾಷ್ಟ್ರ ನಿರ್ಮಾಣ ಕಡೆ ಹೋಗಬೇಕು. ಎಲ್ಲರೂ ವಿಚಾರವಂಥರಾಗಿ, ದೇಶ ಬೆಳೆಸೋಣ ಎಂದು ಯುವ ಜನತೆಗೆ ಕರೆ ನೀಡಿದರು.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು