ಯಡಿಯೂರಪ್ಪನ ಕಂಟ್ರೋಲ್​​ಗೆ ತೆಗೆದುಕೊಳ್ಳಲು ಆಪ್ತನ ಮೇಲೆ BJP ಐಟಿ ದಾಳಿ ಮಾಡಿಸಿದೆ: DK Shivakumar ಆರೋಪ

ಅಧಿಕಾರದಿಂದ ಕೆಳಗಿಳಿದಿರುವ ಯಡಿಯೂರಪ್ಪರನ್ನು ಕಂಟ್ರೋಲ್ ತೆಗೆದುಕೊಳ್ಳೋಕೆ ಮಾಡ್ತಿದ್ದಾರೆ. ದೆಹಲಿಯವರು ಅಲ್ಲೇ ಮಾಡ್ತಿದ್ದಾರೆ, ಹೀಗಾಗಿ ಆಂತರಿಕ ರಾಜಕೀಯ ಇದ್ದೇ ಇರುತ್ತೆ. ಕೆಲವರ ರಕ್ಷಣೆ ಮಾಡಲಾಗಿದೆ ಎಂದು ಡಿಕೆಶಿ ಆರೋಪಿಸಿದರು.

ಡಿ.ಕೆ.ಶಿವಕುಮಾರ್​

ಡಿ.ಕೆ.ಶಿವಕುಮಾರ್​

  • Share this:
ಬೆಂಗಳೂರು: ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಆಪ್ತ ಉಮೇಶ್​ ಅವರ ಮನೆ ಮೇಲೆ ಐಟಿ ದಾಳಿ(IT raid on bs yediyurappa’s pa umesh) ಸಂಬಂಧ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ (DK Shivakumar) ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ಸದಾಶಿವನಗರದ ತಮ್ಮ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಮೃದುದೋರಣೆ ತೋರಿದಂತೆ ಕಾಣುತ್ತಿತ್ತು. ಆ ಮೂಲಕ ಬಿಜೆಪಿಗರಿಗೆ ಒಳಗುದ್ದು ನೀಡಿದರು. ಬಿಎಸ್ ವೈ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ. ಸಂಬಂಧ ಪಟ್ಟವರು ಹೇಳುವವರೆಗೆ ನಾನು‌ ಮಾತನಾಡಲ್ಲ. ಉಮೇಶ್, ಮಾಜಿ ಸಿಎಂ ಬಿಎಸ್ ವೈ ಆಪ್ತ ಸಹಾಯಕನಲ್ವಾ, ಅದನ್ನ ಅಲ್ಲಗಳೆಯಲು ಅಗೋದಿಲ್ವಲ್ಲ. ಇದರ ಹಿಂದೆ ಒಳರಾಜಕೀಯ ಇದ್ದೇ ಇದೆ. ಬಿಎಸ್​ವೈನ ಕಂಟ್ರೋಲ್​ಗೆ ತೆಗೆದುಕೊಳ್ಳಲು ಆಪ್ತನ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಬಿಜೆಪಿಯಿಂದಲೇ ಆಗಿದೆ ಎಂದು ಆರೋಪಿಸಿದರು.

ಬೇರೆಯವರ ಮೇಲೆ ಐಟಿ ದಾಳಿ ಏಕಿಲ್ಲ?

ಇನ್ನು ಕೆಲವು ಸಚಿವರು ದೆಹಲಿಗೆ ತೆರಳಿದ್ದರು. ಅಲ್ಲಿ  ಹೋಗಿ ನಮ್ಮ ಮೇಲೆ ದಾಳಿ ಮಾಡಬೇಡಿ, ನಮ್ಮ ಸಹೋದರರ ಮೇಲೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನೀರಾವರಿ ಇಲಾಖೆ ಟೆಂಡರ್ ಬಗ್ಗೆ ಮಾತನಾಡಿದ್ದು ಗೊತ್ತಿದೆ, ಯಾವ ಹೊಟೇಲ್ ನಲ್ಲಿ ಯಾರು ಮಾತನಾಡಿದ್ರು ಅನ್ನೋದು ಗೊತ್ತಿದೆ. ಅವರ ಮೇಲೂ ದಾಳಿಯಾಗಬೇಕಲ್ವೇ, ಅವರನ್ನೂ ವಿಚಾರಿಸಬೇಕಲ್ವಾ ಎಂದು ಪ್ರಶ್ನಿಸಿದರು. ಅಧಿಕಾರದಿಂದ ಕೆಳಗಿಳಿದಿರುವ ಯಡಿಯೂರಪ್ಪರನ್ನು ಕಂಟ್ರೋಲ್ ತೆಗೆದುಕೊಳ್ಳೋಕೆ ಮಾಡ್ತಿದ್ದಾರೆ. ದೆಹಲಿಯವರು ಅಲ್ಲೇ ಮಾಡ್ತಿದ್ದಾರೆ, ಹೀಗಾಗಿ ಆಂತರಿಕ ರಾಜಕೀಯ ಇದ್ದೇ ಇರುತ್ತೆ. ಕೆಲವರ ರಕ್ಷಣೆ ಮಾಡಲಾಗಿದೆ. ನೀರಾವರಿ ಇಲಾಖೆಯಲ್ಲಿ ಎಲ್ಲವೂ ನಡೆಯುತ್ತಿದೆ. ಯಾವ ಹೋಟೆಲ್ ನಲ್ಲಿ ಏನು ನಡೆಯುತ್ತಿತ್ತು  ಗೊತ್ತು. ಬೆಂಕಿ ಇಲ್ಲದೆ ಹೊಗೆಯಾಡೋದಿಲ್ಲ ಎಂದು ಡಿಕೆಶಿ ಶಂಕೆ ವ್ಯಕ್ತಪಡಿಸಿದರು.

ಕಾಂಗ್ರೆಸ್​​ನವರು ಈಗ ಏನಂತಾರೆ..?

ಡಿಕೆ ಶಿವಕುಮಾರ್​ ಅವರ ಆರೋಪವನ್ನು ಸಚಿವ ವಿ ಸೋಮಣ್ಣ ಅಲ್ಲಗಳೆದು ತಿರುಗೇಟು ನೀಡಿದರು. ಕೇವಲ ಕಾಂಗ್ರೆಸ್​ ನಾಯಕರ ಮೇಲೆ ಮಾತ್ರ ಐಟಿ ದಾಳಿ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದರು. ಈಗ ಏನು ಹೇಳುತ್ತಾರೆ. ಐಟಿ ಸ್ವಾಯತ್ತ ಸಂಸ್ಥೆ, ಐಟಿಯವರು ದಾಖಲೆ ಸಂಗ್ರಹಿಸಿ ದಾಳಿ ಮಾಡುತ್ತಿದ್ದಾರೆ. ಯಾರೇ ತಪ್ಪು ಮಾಡಿದ್ರೂ ತಪ್ಪು ಅನ್ನುವ ಸಂದೇಶ ರವಾನೆ ಮಾಡಿದ್ದಾರೆ. ಐಟಿ ದಾಳಿ ಬಗ್ಗೆ ಯಡಿಯೂರಪ್ಪ ಈಗಾಗಲೇ ಸ್ಪಷ್ಟತೆ ಕೊಟ್ಟಿದಾರೆ ಎಂದರು.

ಇದನ್ನೂ ಓದಿ: Sindagi By Election: ಸಿಂದಗಿಯಲ್ಲಿ ಗೆಲ್ಲಲು ಜೆಡಿಎಸ್​ ಮೆಗಾ ಪ್ಲ್ಯಾನ್; ಮೋಡಿ ಮಾಡುತ್ತಾ ತಾತ-ಮೊಮ್ಮಗನ ಜೋಡಿ?

ಡಿಕೆಶಿ ಹೆಸರುಗಳನ್ನು ಬಹಿರಂಗಪಡಿಸಲಿ

‌ಕೇಂದ್ರದ ವ್ಯವಸ್ಥೆಯ ಇಲಾಖೆ ತನ್ನ ಕೆಲಸ ಮಾಡ್ತಿದೆ. ಯಾರು, ಯಾವ ಪಕ್ಷ ಅಂತ ಐಟಿ ನೋಡಲ್ಲ. ಐಟಿ ದಾಳಿ ಮಾಡಿಸಬೇಡಿ ಎಂದು ಕೆಲ ಸಚಿವರು ಹೈಕಮಾಂಡ್ ಬಳಿ ಮನವಿ ಮಾಡಿದ್ದಾರೆಂಬ ಡಿಕೆಶಿ ಆರೋಪವನ್ನು ಸಚಿವ ಸೋಮಣ್ಣ ನಿರಾಕರಿಸಿದರು. ಹೈಕಮಾಂಡ್ ಬಳಿ ಯಾರು ಹೋಗಿ ಕೇಳಿಕೊಂಡಿದ್ದಾರೆ ಅಂತ ಡಿಕೆಶಿ ತಿಳಿಸಲಿ. ಯಾವ ಸಚಿವರು ಹೋಗಿ ಕೇಳಿದ್ದಾರೋ ಗೊತ್ತಿಲ್ಲ, ಇದರ ಬಗ್ಗೆ ಡಿಕೆಶಿಗೆ ಮಾಹಿತಿ ಇದ್ರೆ ಹೇಳಲಿ. ನಾನೂ ಡಿಕೆಶಿ ಬಳಿ ಮಾತಾಡ್ತೀನಿ ಎಂದರು.

RSSನಿಂದಲೇ ಬಿಎಸ್​ವೈ ಅಧಿಕಾರ ಕಳೆದುಕೊಂಡರು

ಇನ್ನು ಹಾಸನದ ಸಕಲೇಶಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ‌.ಕುಮಾರಸ್ವಾಮಿ ಮಾತನಾಡಿ, ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು ಆರ್​​ಎಸ್​ಎಸ್​ ಕಾರಣ ಎನ್ನುವ ಮೂಲಕ ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ಮುಂದುವರೆಸಿದರು. RSSನಿಂದಲೇ ಅಧಿಕಾರ ಕಳೆದುಕೊಂಡ ಯಡಿಯೂರಪ್ಪ ಅವರಿಗೆ ಈಗ ಅರಿವಾಗಿದೆ. ಚುನಾಯಿತ ಜನಪ್ರತಿನಿಧಿಗಳಿಂದ ಸರ್ಕಾರ ನಡೆಯುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
Published by:Kavya V
First published: