ಬೆಂಗಳೂರು (ಫೆ.6): ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಪಬ್(Pub)ಗಳಲ್ಲಿ ಕನ್ನಡ ಹಾಡಿರಲಿ (Kannada song) ಕನ್ನಡ ಮಾತಾಡೋರು ಸಿಗೋದು ಕಡಿಮೆ. ಕನ್ನಡ ನೆಲದಲ್ಲೇ ಬದುಕುತ್ತಿದ್ರು ಕನ್ನಡ ಭಾಷೆ ಮಾತಾಡಲು ಹಿಂದೇಟು ಹಾಕ್ತಾರೆ. ಅನ್ನ ಭಾಷಿಗರು ನಮ್ಮ ಕರ್ನಾಟಕದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಕನ್ನಡ ಬಂದ್ರು ಅವರು ಕನ್ನಡ ಮಾತಾಡಲ್ಲ. ಪರಿಸ್ಥಿತಿ ಹೀಗಿರುವಾಗ ಕನ್ನಡ ಪ್ರೇಮಿಯೊಬ್ಬ ಪಬ್ನಲ್ಲಿ ಕನ್ನಡ ಹಾಡು ಪ್ಲೇ ಮಾಡಲು ಕೇಳಿದ್ದಾನೆ. ಆದ್ರೆ ಡಿಜೆ (DJ) ಕನ್ನಡ ಸಾಂಗ್ ಹಾಕಲು ಕಿರಿಕ್ ಮಾಡಿದ್ದಾನೆ. ಫೆಬ್ರವರಿ 5 ರಂದು ಸುಮಿತಾ ಎಂಬ ಯುವತಿ ಹುಟ್ಟುಹಬ್ಬವಿತ್ತು. ಹಾಗಾಗಿ ಬದ್ಮಾಶ್ ಪಬ್ (Badmash pub)ಗೆ ಸಹೋದರರು, ಸ್ನೇಹಿತರು ಸೇರಿದಂತೆ 15 ಜನರ ತಂಡ ತೆರಳಿತ್ತು. ಹಾಡು ಹಾಕಿ ಎಂದಿದ್ದಕ್ಕೆ ಡಿಜೆ ಯುವತಿ ಸೋದರನ ಮೇಲೆ ಹಲ್ಲೆಗೆ ಯತ್ನಿಸಿರೋ ಘಟನೆ ನಡೆದಿದೆ.
ಅಸಲಿಗೆ ಪಬ್ನಲ್ಲಿ ನಡೆದಿದ್ದು ಏನು?
ಯುವತಿ ಸುಮಿತಾ, ಸಹೋದರ ನಂದಕಿಶೋರ್ ಹಾಗೂ ಸ್ನೇಹಿತರು ಪಬ್ಗೆ ಹೊಗಿದ್ದರು. ಈ ವೇಳೆ ಕನ್ನಡ ಹಾಡು ಪ್ಲೇ ಮಾಡಿ ಎಂದು ಹೇಳಿದಕ್ಕೆ ಯುವತಿ ಹಾಗೂ ಆತನ ಸಹೋದರ ಮೇಲೆ ಡಿಜೆ ಸಿದ್ಧಾರ್ಥ್ ಹಲ್ಲೆಗೆ ಮುಂದಾದ್ರು ಎಂದು ಸುಮಿತಾ ಮತ್ತು ನಂದಕಿಶೋರ್ ಆರೋಪಿಸಿದ್ದಾರೆ. ಫೆಬ್ರವರಿ 5 ರಂದು ಸುಮಿತಾ ಎಂಬ ಯುವತಿ ಹುಟ್ಟುಹಬ್ಬವಿತ್ತು. ಹಾಗಾಗಿ ಬದ್ಮಾಶ್ ಪಬ್ಗೆ ಸಹೋದರರು ಹಾಗೂ ಸ್ನೇಹಿತರ 15 ಜನರ ತಂಡ ತೆರಳಿತ್ತು. ರಾತ್ರಿ 9 ಗಂಟೆಗೆ ಎಲ್ಲರೂ ಪಬ್ಗೆ ಹೋಗಿದ್ದರು ಕನ್ನಡ ಹಾಡು ಪ್ಲೇ ಮಾಡುವಂತೆ ಡಿಜೆ ಬಳಿ ಕೇಳಿದ್ದಾರೆ. 9.30 ರಿಂದ ರಾತ್ರಿ 12.30 ಗಂಟೆವರೆಗೂ ಡಿಜೆ ಬಳಿ ಮನವಿ ಮಾಡಿದ್ದಾರೆ. ಸ್ವತಃ ಯುವತಿ ಸುಮಿತಾ ತೆರಳಿ ಒಂದೇ ಒಂದು ಕನ್ನಡ ಹಾಡು ಹಾಕಿ ಎಂದು ನಾಲ್ಕೈದು ಬಾರಿ ಕೇಳಿದ್ರಂತೆ. ಅಲ್ಲದೇ ಸುಮಿತಾ ಮತ್ತೊಬ್ಬ ಸಹೋದರ ಡಾ.ದೀಪಕ್ ಕೂಡ ಕನ್ನಡ ಹಾಡಿಗೆ ಮನವಿ ಮಾಡಿದ್ದಾರೆ.
ಕನ್ನಡ ಸಾಂಗ್ ಹಾಕೋದಿಲ್ಲ
ಕನ್ನಡ ಸಾಂಗ್ ಹಾಕಲು ಆಗಲ್ಲ, ಕನ್ನಡ ಸಾಂಗ್ ಕೇಳೋದಾದ್ರೆ ಹೊರಗ್ ಹೋಗಿ ಅಂತ ಡಿಕೆ ಅವಾಜ್ ಹಾಕಿದ್ದಾನಂತೆ. ಈ ವೇಳೆ ಪದೆ ಪದೆ ಕನ್ನಡ ಹಾಡು ಕೇಳ್ತಿದ್ದಾಗ ಸುಮಿತಾ ಸ್ನೇಹಿತರು ಮತ್ತು ಸಹೋದರರಿದ್ದ ಟೇಬಲ್ ಬಳಿ ಬಂದ ಡಿಜೆ ಸುಮಿತಾ ಸಹೋದರ ನಂದ ಕಿಶೋರ್ ಕಾಲರ್ ಹಿಡಿದು ಅವಾಜ್ ಹಾಕಿದ್ದಾನೆ. ಈ ವೇಳೆ ಬದ್ಮಾಶ್ ಪಬ್ನಲ್ಲಿ ವಾಗ್ವಾದ ನಡೆದಿದೆ.
ಇದನ್ನೂ ಓದಿ: ಫೋಟೋ ವಿಚಾರಕ್ಕೆ ಪಬ್ನಲ್ಲಿ `ಕಿರಿಕ್’: ಬಿಯರ್ ಬಾಟಲ್ನಿಂದ ಬಿಗ್ ಬಾಸ್ ಸ್ಪರ್ಧಿ ಮೇಲೆ ಹಲ್ಲೆ
ಪಬ್ಗೆ ಕನ್ನಡ ಸಂಘಟನೆಗಳ ವಾರ್ನಿಂಗ್
ಇನ್ನು ವಿಷಯ ತಿಳಿಯುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಪಬ್ಗೆ ಭೇಟಿ ನೀಡಿದ್ರು. ಪಬ್ ಮ್ಯಾನೇಜರ್ ನನ್ನು ತರಾಟೆಗೆ ತೆಗೆದುಕೊಂಡ ಕನ್ನಡ ಪರ ಹೋರಾಟಗಾರ ಶಿವಕುಮಾರ ನಾಯ್ಕ್. ಪಬ್ ನಲ್ಲಿ ಕನ್ನಡ ಹಾಡು ಹಾಕಲು ಕಿರಿಕ್ ಮಾಡ್ತಿರಾ. ನಾಳೆಯಿಂದ ಪ್ರತಿದಿನ ಕನ್ನಡ ಹಾಡು ಹಾಕುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: 14 ಕೋಟಿ ಗರಿ ಗರಿ ನೋಟಿನಿಂದ ಪಬ್ ಅಲಂಕಾರ! ಸುತ್ತಮುತ್ತ ದುಡ್ಡು ತುಂಬಿದ್ರೂ ಕದಿಯೋದು ಕಷ್ಟ!
ತಪ್ಪಾಯ್ತು ಕ್ಷಮಿಸಿ, ನಾವೂ ಕೂಡ ಕನ್ನಡ ಅಭಿಮಾನಿಗಳು
ನಾವು ಕೂಡ ಕನ್ನಡ ಅಭಿಮಾನಿಗಳೇ, ನಿನ್ನೆ ರಾತ್ರಿ ಏನೋ ತಪ್ಪಾಗಿದೆ ಅದಕ್ಕೆ ಕ್ಷಮೆ ಕೇಳುತ್ತೇನೆ ಅಂತ ಪಬ್ ಮ್ಯಾನೇಜರ್ ಡಾಮಿನಿಕ್ ಹೇಳಿದ್ದಾರೆ. ನಾನು ಹೆಚ್ ಎಸ್ ಆರ್ ಲೇಔಟ್ ಹೋಗಿದ್ದೆ.ನಾನು ಇಲ್ಲೆ ಹುಟ್ಟಿ ಬೆಳೆದಿದ್ದು.ಇನ್ಮುಂದೆ ಹೀಗೆ ಆಗಲ್ಲ. ನಾವು ಇನ್ಮುಂದೆ ಕನ್ನಡ ಹಾಡನ್ನು ಕಡ್ಡಾಯವಾಗಿ ಹಾಕ್ತೀವಿ, ಅದರ ಪೂಟೇಜ್ ಕೂಡ ಕೊಡ್ತೀವಿ. ಡಿಜೆ ಮೇಲೆ ಕ್ರಮ ಕೈಗೊಳ್ತೀವಿ ಎಂದು ಡಾಮಿನಿಕ್ ಹೇಳಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ