BSY Birthday: ಯಡಿಯೂರಪ್ಪ ಹುಟ್ಟುಹಬ್ಬದ ದಿನ ಬಿಜೆಪಿ ರೈತ ಕಾರ್ಯಕರ್ತರಿಗೆ ಭರ್ಜರಿ ಗಿಫ್ಟ್

ಮಾಜಿ ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದ ಹಿನ್ನೆಲೆ ಬಿಜೆಪಿ ಪಕ್ಷ ಕಾರ್ಯಕರ್ತರಿಗೆ ಭರ್ಜರಿ ಗಿಫ್ಟ್ ​ ನೀಡಿದೆ. ಬಿಜೆಪಿಗಾಗಿ ದುಡಿದ ರೈತ ಕಾರ್ಯಕರ್ತರಿಗೆ ಉಚಿತವಾಗಿ ಟ್ರ್ಯಾಕ್ಟರ್ ವಿತರಿಸಿದ್ದಾರೆ

ಮಾಜಿ ಸಿಎಂ ಯಡಿಯೂರಪ್ಪ

ಮಾಜಿ ಸಿಎಂ ಯಡಿಯೂರಪ್ಪ

  • Share this:
ಬೆಂಗಳೂರು (ಫೆ.27): ಹುಟ್ಟುಹಬ್ಬದ ದಿನ ಮಾಜಿ ಸಿಎಂ ಯಡಿಯೂರಪ್ಪ (B.S Yediyurappa)  ಹೆಸರಲ್ಲಿ ಬಿಜೆಪಿ (BJP) ಪಕ್ಷ ಕಾರ್ಯಕರ್ತರಿಗೆ ಭರ್ಜರಿ ಗಿಫ್ಟ್ (Gift)​ ನೀಡಿದೆ. ಬಿಜೆಪಿಗಾಗಿ ದುಡಿದ ರೈತ (Farmer) ಕಾರ್ಯಕರ್ತರಿಗೆ (Activist) ಉಚಿತವಾಗಿ ಟ್ರ್ಯಾಕ್ಟರ್ (Tractor) ನೀಡಿದ್ರು. ಇವತ್ತು ಬಿಜೆಪಿ ನಾಯಕ ಬಿ.ಎಸ್​ ಯಡಿಯೂರಪ್ಪ ಅವರ ಹುಟ್ಟುಹಬ್ಬ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರೋ ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಇದರ ಜೊತೆಗೆ ಬಿಜೆಪಿ ಪಕ್ಷ 15 ಟ್ರ್ಯಾಕ್ಟರ್​ಗಳನ್ನು ರೈತ ಕಾರ್ಯಕರ್ತರಿಗೆ ನೀಡಲು ನಿರ್ಧರಿಸಿದ್ರು. ಬಿಎಸ್​ವೈ ಹುಟ್ಟುಹಬ್ಬ ಹಿನ್ನೆಲೆ ಇವತ್ತು ಪಕ್ಷದ ಗಣ್ಯರು ರೈತರಿಗೆ ಟ್ರ್ಯಾಕ್ಟರ್ ವಿತರಿಸಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲ ಸವಲತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರುದ್ರೇಶ್ ನೇತೃತ್ವದಲ್ಲಿ ಟ್ರ್ಯಾಕ್ಟರ್​ ವಿತರಣಾ ಕಾರ್ಯಕ್ರಮವನ್ನು ಇಂದು ಯಡಿಯೂರಪ್ಪ ಅವರ ಕಾವೇರಿ ನಿವಾಸದಲ್ಲಿ ಆಯೋಜಿಸಲಾಗಿತ್ತು.

‘ಪಕ್ಷ ಕಟ್ಟಿ ಬೆಳೆಸಿದವರು ಬಿಎಸ್​ವೈ’

ಯಡಿಯೂರಪ್ಪ ಅವರು ಪಕ್ಷವನ್ನು ತಳ ಹಂತದಿಂದ ಕಟ್ಟಿ ಬೆಳೆಸುವ ಜೊತೆಗೆ 4 ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ ಎಲ್ಲಾ ಜಾತಿ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಜನ್ಮದಿನ ಅಂಗವಾಗಿ ಕಾರ್ಯಕ್ರಮ ಟ್ರ್ಯಾಕ್ಟರ್​ ವಿತರಣಾ ಕಾರ್ಯಕ್ರಮ ಆಯೋಜಿಸಿದ್ದಾಗಿ ರುದ್ರೇಶ್ ಹೇಳಿದ್ರು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್​ ಬೊಮ್ಮಾಯಿ, ಸಚಿವ ಸಂಪುಟ ಸಹೋದ್ಯೋಗಿಗಳು, ಶಾಸಕರು, ಕಾರ್ಯಕರ್ತರು ಭಾಗಿಯಾಗಿದ್ರು.

ರೈತ ಕಾರ್ಯಕರ್ತರಿಗೆ ಟ್ರ್ಯಾಕ್ಟರ್​

ಇನ್ನು ಉಚಿತವಾಗಿ ರೈತ ಕಾರ್ಯಕರ್ತರಿಗೆ ಟ್ರ್ಯಾಕ್ಟರ್ ನೀಡೋ ಕಾರ್ಯಕ್ರಮಕ್ಕೆ ಕೆಆರ್​ಐಡಿಎಲ್ ಅಧ್ಯಕ್ಷ ಚಂದು ಪಾಟೀಲ, ಕೆಎಸ್​ಎಸ್ಎಸ್​ಐಡಿದಸಿ ಅಧ್ಯಕ್ಷೆ ಡಾ. ಶೈಲೇಂದ್ರ ಬಿಲ್ದಾಳೆ, ಎಸ್​ಟಿಆರ್​ಆರ್ ಅಧ್ಯಕ್ಷ ಮುನಿರಾಜು, ಬಿಎಂಐಸಿಸಿಸ ಅಧ್ಯಕ್ಷ ಜೈದೇವ್​, ಎಂಎಂಎಲ್ ಅಧ್ಯಕ್ಷ ಮುನಿರಾಜು ಕೈಜೋಡಿಸಿದ್ದಾರೆಂದು ರುದ್ರೇಶ್ ತಿಳಿಸಿದ್ದಾರೆ.

ರ್ನಾಟಕದ ರಾಜಕಾರಣದಲ್ಲಿ  'ರಾಜಾಹುಲಿ' ಎಂದೇ ಜನಪ್ರಿಯವಾಗಿರುವ, ಶಿಕಾರಿಪುರ  ಎಂದಾಕ್ಷಣ ನೆನಪಾಗುವ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ಅವರಿಗೆ ಇಂದು ಹುಟ್ಟು ಹಬ್ಬದ  ಸಡಗರ, ಸಂಭ್ರಮ. ಯಡಿಯೂರಪ್ಪ ಅವರು ಇಂದು 80 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನರಿಗೆ  ಹುಟ್ಟು ಹಬ್ಬದ ಶುಭಾಶಯಗಳು.

ಇದನ್ನೂ ಓದಿ: BSY Birthday: 80ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್.ಯಡಿಯೂರಪ್ಪ.. ಅವರ ಛಲ, ಹೋರಾಟ ಎಂಥವರನ್ನೂ ಬಡಿದೆಬ್ಬಿಸುತ್ತೆ!

ಬಡವರು, ದಲಿತರು, ರೈತರ ಪರ ಹೋರಾಟ ನಡೆಸಿದ ಹೆಮ್ಮೆ ಬಿಎಸ್ ವೈ ಅವರದ್ದು. ಅಸಾಧಾರಣ ನಾಯಕನಾಗಿ, ರಾಜ್ಯದ ಜನರ, ರೈತ ಬಂಧುಗಳ, ದುರ್ಬಲರ ಆಶೋತ್ತರಗಳಿಗಾಗಿ ದುಡಿದ ನಾಯಕ ಬಿಎಸ್ ವೈ. ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರು ಬಿಎಸ್ ವೈ.

ಬಿಎಸ್ ವೈ ಜೀವನ ಚರಿತ್ರೆ

1943ರ ಫೆಬ್ರವರಿ 27ರಂದು ಸಿದ್ದಲಿಂಗಯ್ಯ ಹಾಗೂ ಶ್ರೀಮತಿ ಪುಟ್ಟ ತಾಯಮ್ಮನವರ ಸುಪುತ್ರನಾಗಿ ಬಿ.ಎಸ್. ಯಡಿಯೂರಪ್ಪ ಜನಿಸಿದರು. ಬಿಎಸ್ ವೈ, ಉನ್ನತ ಮಟ್ಟದ ನಾಯಕ ಆಗುತ್ತಾರೆಂದು ಪಾಲಕರು ಊಹಿಸಿರಲಿಲ್ಲ. ತಮ್ಮ ನಾಲ್ಕನೇ ವಯಸ್ಸಿನಲ್ಲಿ ಬಿಎಸ್ ವೈ ತಾಯಿಯವರನ್ನು ಕಳೆದುಕೊಂಡರು. ಆದರೆ ತಮ್ಮ ಗುರಿ, ಸಾಧನೆ, ಬಿಜೆಪಿಯ ಉದ್ಧಾರಕ್ಕೆ ದುಡಿದ ಅವರ ಧ್ಯೇಯ ನಿಶ್ಚಲತೆಗೆ ಯಾವತ್ತೂ ಧಕ್ಕೆಯಾಗಲಿಲ್ಲ.

ಇದನ್ನೂ ಓದಿ: Padayatre: ಧರ್ಮಸ್ಥಳಕ್ಕೆ ಪ್ರಜ್ವಲ್, ಮಾದಪ್ಪನ ಗುಡಿಗೆ ನಿಖಿಲ್ ಪಾದಯಾತ್ರೆ, ಜೆಡಿಎಸ್ ‘ಬ್ರದರ್ಸ್‘ ಯಾತ್ರೆ ಫೈಟ್!

ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಗಿಸಿದರು. 1965ರಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡರು. ಆ ಉದ್ಯೋಗವನ್ನು ತ್ಯಜಿಸಿ ಶಿಕಾರಿಪುರದ ವೀರಭದ್ರ ಶಾಸ್ತ್ರೀ ಶಂಕರ್ ರೈಸ್ ಮಿಲ್ ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. 1967ರಲ್ಲಿ ರೈಸ್ ಮಿಲ್ ಮಾಲೀಕರ ಸುಪುತ್ರಿ ಮೈತ್ರಾ ದೇವಿಯವರನ್ನು ವಿವಾಹವಾದರು. 1972 ರಲ್ಲಿ ಇದೇ ಶಿಕಾರಿಪುರದ ಜನಸಂಘದ ಅಧ್ಯಕ್ಷರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು.

ಬಿಎಸ್ ವೈ ಪ್ರಮುಖ ಹೋರಾಟಗಳು

ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ 1975ರ ತುರ್ತು ಪರಿಸ್ಥಿತಿಯ 45 ದಿನಗಳ ಕಾಲ ಸೆರೆವಾಸ ಅನುಭವಿಸಿದರು. ನಂತರ 1700ಮಂದಿಯನ್ನು ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸಿದರು. ಹಾಗೂ ಬಗರ್ ಹುಕುಂ ರೈತರ ಪರವಾಗಿ ಹೋರಾಟ ನಡೆಸಿದರು. ಶಿಕಾರಿಪುರ ತಾಲ್ಲೂಕಿನಾದ್ಯಂತ ಸಂಚರಿಸಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತರಲು 1987 ರಲ್ಲಿ ಸೈಕಲ್ ಜಾಥಾ ನಡೆಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿದರು.
Published by:Pavana HS
First published: