CM Meeting: ಸರ್ಕಾರಿ ಸೇವೆಗೆ ಅಲೆದಾಡುವ ಅಗತ್ಯವಿಲ್ಲ, ಗ್ರಾಮ ಒನ್ ಕೇಂದ್ರಗಳಲ್ಲಿ ಬಿಪಿಎಲ್, ಎಪಿಎಲ್​ ಕಾರ್ಡ್​ ವಿತರಣೆ

ರಾಜ್ಯ ಸರ್ಕಾರ ಬಿಪಿಎಲ್​, ಎಪಿಎಲ್​ ಕಾರ್ಡ್ ಪಡೆಯೋ ಮಾರ್ಗವನ್ನು ಇನ್ನಷ್ಟು ಸುಲಭಗೊಳಿಸಿದ್ದು, ಗ್ರಾಮ ಒನ್​ ಕೇಂದ್ರಗಳಲ್ಲಿ ವಿತರಣೆ ಮಾಡೋದಾಗಿ ಸಿಎಂ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು (ಫೆ.5): ಸರ್ಕಾರ (Government) ಜನರಿಗಾಗಿ ಹಲವು ಯೋಜನೆಗಳನ್ನು ತರುತ್ತೆ, ಆದ್ರೆ ಯೋಜನೆಯ ಪ್ರತಿಫಲ ಪಡೆಯೋ ವೇಳೆಗೆ ಜನರೇ ಸುಸ್ತಾಗಿ ಹೋಗಿರ್ತಾರೆ. ವೋಟರ್​ ಐಡಿ (Voter id), ರೇಷನ್ ಕಾರ್ಡ್​ ಮಾಡಿಸಲು ಜನ ಕ್ಯೂ ನಿಲ್ಬೇಕು. ಅಯ್ಯೋ ಯಾರಪ್ಪಾ ಈ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ತಾರೆ ಅಂತ ಜನ ಕಾರ್ಡ್​ ಮಾಡಿಸೋದೇ ಬೇಡ ಅಂತ ಸುಮ್ಮನಾಗಿ ಬಿಡ್ತಾರೆ. ಇನ್ನು ರೈತರು ಪಾಡಂತು ಕೇಳಲೇಬೇಡಿ ಬೆಳೆ ಹಾನಿ ಅಂತ ಪರಿಹಾರಕ್ಕಾಗಿ ಅರ್ಜಿ ಹಾಕಲು ಹರಸಾಹಸ ಪಡ್ಬೇಕು, ಇನ್ನು ಅದು ರೈತರ ಕೈ ಸೇರೋ ಅಷ್ಟರಲ್ಲಿ ಅರ್ಧ ಹಣವೂ ಉಳಿಯಲ್ಲ, ಮಧ್ಯವರ್ತಿಗಳ ಪಾಲಾಗಿ ಹೋಗಿರುತ್ತೆ. ಸರ್ಕಾರ ಯೋಜನೆಗಳನ್ನು ಡಿಜಿಟಲೀಕರಣ ಮಾಡಿದ್ರು ಜನರ ತಲುಪುದು ಕಷ್ಟವಾಗಿ ಬಿಟ್ಟಿದೆ. ಇದೀಗ ರಾಜ್ಯ ಸರ್ಕಾರ ಬಿಪಿಎಲ್ (BPL)​, ಎಪಿಎಲ್​ (APL) ಕಾರ್ಡ್ (Card)​ ಪಡೆಯೋ ಮಾರ್ಗವನ್ನು ಇನ್ನಷ್ಟು ಸುಲಭಗೊಳಿಸಿದ್ದು, ಗ್ರಾಮ ಒನ್​ (Grama one) ಕೇಂದ್ರಗಳಲ್ಲಿ ವಿತರಣೆ ಮಾಡೋದಾಗಿ ಸಿಎಂ ಹೇಳಿದ್ದಾರೆ.

ಗ್ರಾಮ ಒನ್​ ಕೇಂದ್ರಗಳಲ್ಲಿ ವಿತರಣೆ

ರಾಜ್ಯದಲ್ಲಿ ಸುಮಾರು 4 ಲಕ್ಷ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ಗಳಿಗೆ ಮಂಜೂರಾತಿ ನೀಡಲಾಗಿದ್ದು, ಇವುಗಳನ್ನು ಗ್ರಾಮ ಒನ್ ಕೇಂದ್ರಗಳ ಮೂಲಕ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗ್ರಾಮ ಒನ್ ಯೋಜನೆಯ ಪ್ರಗತಿ ಕುರಿತು ಜಿಲ್ಲಾಡಳಿತ ಹಾಗೂ ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್​ಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಸಿಎಂ ಮಾತನಾಡಿದರು.

ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಸರ್ಕಾರ ತನ್ನ ಅಧಿಕಾರ ಮತ್ತು ಜವಾಬ್ದಾರಿ ಆಪರೇಟರ್ಸ್‍ಗಳಿಗೆ ವಹಿಸಲಾಗಿದೆ. ಜನರ ಬಳಿ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರವನ್ನು ನೀಡಬೇಕೆಂದು ಮುಖ್ಯಮಂತ್ರಿಗಳು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: Government Order: ಬಿಲ್ಡಪ್ ಬಿಡಿ ಕೆಲಸವಷ್ಟೇ ಮಾಡಿ; ಸರ್ಕಾರದ ನೀತಿ, ಕ್ರಮವನ್ನು ಟೀಕಿಸದಂತೆ ಅಧಿಕಾರಿಗಳಿಗೆ ಸರ್ಕಾರ ಮೂಗುಧಾರ!

ಜನರ ಅಲೆದಾಟ ತಪ್ಪಿಸಲು ಯೋಜನೆ

ಜನರ ಎಲ್ಲ ಮಾಹಿತಿಗಳು ಕಾಗದರೂಪದಲ್ಲಿಯೇ ಪಡೆಯುವ ಅವಶ್ಯಕತೆಯಿಲ್ಲ. 'ಕುಟುಂಬ' ಜನಸೇವಕ ಸಾಫ್ಟ್‍ವೇರ್‍ಗಲ್ಲಿಯೂ ಮಾಹಿತಿಗಳು ಲಭಿಸುತ್ತದೆ. ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ತ್ವರಿತವಾಗಿ ಸರ್ಕಾರದ ಸೇವೆಯನ್ನು ಪೂರೈಸಬೇಕು. ಮಾಹಿತಿ ಕೊರತೆ ಇದ್ದರೆ ಸ್ಪಷ್ಟೀಕರಣ ನೀಡಬೇಕು. ಸೇವೆ ಪೂರೈಸಲು ಕಾನೂನಾತ್ಮಕವಾಗಿ ಸಾಧ್ಯವಾಗದಿದ್ದಲ್ಲಿ ಅರ್ಜಿಯ ತಿರಸ್ಕಾರಕ್ಕೆ ಸಕಾರಣವನ್ನು ನೀಡಬೇಕು. ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು ಅಂತ ಹೇಳಿದ್ದಾರೆ.

‘ನಮ್ಮ ಯೋಜನೆಗಳು ಜನರನ್ನು ತಲುಪಲಿ’

ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಹಶೀಲ್ದಾರ್ ಸಿಬ್ಬಂದಿಗಳೊಂದಿಗೆ ಸೌಹಾರ್ದತೆಯಿಂದಿರಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಮೀರಿದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುವ ಅರಿವು ಇರಬೇಕು ಎಂದರು. ಅರ್ಜಿಗಳು ಕಡಿಮೆ ಬಂದರೆ , ಅಲ್ಲಿ ಪ್ರಚಾರ ಹಾಗೂ ಸ್ಪಂದನೆಯ ಕೊರತೆಯನ್ನು ಬಿಂಬಿಸುತ್ತದೆ. ಹಿರಿಯ ನಾಗರಿಕರು, ಬಡವರು ಹಾಗೂ ಅಂಗವಿಕಲರಿಗಿರುವ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಸೇವೆ ಒದಗಿಸಬೇಕು. ಆಪರೇಟರ್‍ಗಳಿಗೆ ನೀಡಿರುವ ಸೌಲಭ್ಯಗಳ ಇತಿಮಿತಿಯೊಳಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಉತ್ತಮ ಕೆಲಸಗಾರನಿಗೆ ಸಿಗಲಿದೆ ಬಹುಮಾನ

ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್ಸ್‍ಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ 12 ತಿಂಗಳ ಅವಧಿಯಲ್ಲಿ ಪ್ರತಿ ವಾರ ಮೂರು ಉತ್ತಮ ಆಪರೇಟರ್ಸ್ ಗಳನ್ನು ಆಯ್ಕೆ ಮಾಡಿ ಪ್ರಥಮ ಬಹುಮಾನ 10,000 ರೂ. ದ್ವಿತೀಯ ಬಹುಮಾನ ರೂ.7,000 ಹಾಗೂ ತೃತೀಯ ಬಹುಮಾನ ರೂ.5,000 ಗಳನ್ನು ಇ ಆಡಳಿತ ಇಲಾಖೆ ವತಿಯಿಂದ ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ಜಿಲ್ಲೆಗೆ ತಿಂಗಳಿಗೊಮ್ಮೆ 1 ಲಕ್ಷ ರೂ. ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಪುರಸಭೆ ಮುಖ್ಯಾಧಿಕಾರಿ - ಎಸಿಬಿ ಬಲೆಗೆ ಸಿಕ್ಕಿಬಿದ್ದ ಲಂಚಕೋರ

ಸರ್ಕಾರದ ಸೇವೆಯನ್ನು ಯಶಸ್ವಿಯಾಗಿ ತಲುಪಿಸಿ

ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್‍ಗಳು ಸರ್ಕಾರದ ಪ್ರತಿನಿಧಿಗಳಾಗಿದ್ದು, ತಮ್ಮ ಕಾರ್ಯವೈಖರಿಯ ಮೇಲೆ ಸರ್ಕಾರದ ವರ್ಚಸ್ಸು ಅವಲಂಬಿಸಿದೆ. ಗ್ರಾಮ ಒನ್ ಆಪರೇಟರ್ ಗಳು ಗ್ರಾಮ ಒನ್ ಸೇವೆಗಳನ್ನು ಜನರಿಗೆ ಯಶಸ್ವಿಯಾಗಿ ತಲುಪಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಾಕಿ ಇರುವ ಗ್ರಾಮ ಒನ್ ಕೇಂದ್ರಗಳನ್ನು ಆದ್ಯತೆ ಮೇಲೆ ಪ್ರಾರಂಭಿಸಲು ಹಾಗೂ ಸಾರ್ವಜನಿಕರು ಗ್ರಾಮ ಒನ್‍ನಲ್ಲಿ ಸೇವೆಗಳ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡಬೇಕೆಂದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
Published by:Pavana HS
First published: