• Home
  • »
  • News
  • »
  • state
  • »
  • Grant Discrimination: ಕೇಂದ್ರದ ಮಲತಾಯಿ ಧೋರಣೆ; ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಅನುದಾನ ಸೊನ್ನೆ

Grant Discrimination: ಕೇಂದ್ರದ ಮಲತಾಯಿ ಧೋರಣೆ; ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಅನುದಾನ ಸೊನ್ನೆ

ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್​ರೆಡ್ಡಿ, ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್​ ಸಿಂಗ್

ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್​ರೆಡ್ಡಿ, ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್​ ಸಿಂಗ್

ಪ್ರವಾಸೋದ್ಯಮ ಅಭಿವೃದ್ಧಿ ಅನುದಾನದಲ್ಲಿ ಕರ್ನಾಟಕ ಕಡೆಗಣನೆ ಮಾಡಲಾಗಿದೆ. ಹಾಗಾದ್ರೆ ಯಾವ್ಯಾವ ರಾಜ್ಯಗಳಿಗೆ ಎಷ್ಟು ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

  • Share this:

ಬೆಂಗಳೂರು: ನಮ್ಮ ರಾಜ್ಯ ಪ್ರವಾಸೋದ್ಯಮಕ್ಕೆ(karnataka tourism)‌ ಹೇಳಿ ಮಾಡಿಸಿದ ತಾಣ. ಹಸುರಿನ ದಟ್ಟವಾದ ಪಶ್ಚಿಮ ಘಟ್ಟದ ಸಾಲು, ಮನಮೋಹಕ ಜಲಪಾತಗಳು, ನದಿ, ಝರಿ, ತೊರೆ, ಜೀವ ವೈವಿಧ್ಯ, ಅಪಾರ ಸಸ್ಯ ಸಂಪತ್ತು, ಅಪರೂಪದ ಪ್ರಾಣಿ ಜಗತ್ತು, ಸುಂದರವಾದ ಸಮುದ್ರ ತೀರಗಳು ಹಾಗೂ ಶ್ರೀಮಂತ ಕಲಾನೈಪುಣ್ಯ ಇರುವ ಐತಿಹಾಸಿಕ ಸ್ಥಳಗಳು (historical places in karnataka), ಜಗತ್ಪ್ರಸಿದ್ಧ ದೇವಸ್ಥಾನಗಳು.. ಹೀಗೆ ಪಟ್ಟಿ ಮಾಡುತ್ತ ಹೋಗಬಹುದು.  ಅಸಂಖ್ಯ ಅದ್ಭುತ ಪ್ರವಾಸಿ ತಾಣಗಳಿರುವ ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ (central government) ಒಂದೇ ಒಂದು ನಯಾಪೈಸೆ ಅನುದಾನ ಕೊಟ್ಟಿಲ್ಲ.  ಹೌದು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಪ್ರವಾಸೋದ್ಯಮ‌ ಇಲಾಖೆಯಲ್ಲೂ (tourism department of india) ಮುಂದುವರಿದಿದೆ. 2014ರಿಂದ ಈವರೆಗೆ 1'185.15 ಕೋಟಿ ರೂಪಾಯಿ ಅನುದಾನ ನೀಡಿದ್ದರೂ ರಾಜ್ಯದ ಪಾಲು ದೊಡ್ಡ ಸೊನ್ನೆ ಮಾತ್ರ. ಇಂದು ನಡೆದ ದಕ್ಷಿಣ ಭಾರತದ ರಾಜ್ಯಗಳ ಪ್ರವಾಸೋದ್ಯಮ ಇಲಾಖೆ ಸಚಿವರ ಸಮ್ಮೇಳನದಲ್ಲಿ ಈ ಸಂಗತಿ ಬಯಲಾಗಿದೆ.


ಪ್ರವಾಸೋದ್ಯಮ ಅಭಿವೃದ್ಧಿ ಅನುದಾನದಲ್ಲಿ ಕರ್ನಾಟಕ ಕಡೆಗಣನೆ ಮಾಡಲಾಗಿದೆ. ಹಾಗಾದ್ರೆ ಯಾವ್ಯಾವ ರಾಜ್ಯಗಳಿಗೆ ಎಷ್ಟು ನೀಡಲಾಗಿದೆ ಎಂದು ನೋಡುವುದಾದರೆ..


ಆಂಧ್ರಪ್ರದೇಶ: ಆರ್ಥಿಕ ವರ್ಷ 2014-15 ರಿಂದ 2017-18 ರ ವರೆಗೆ ಒಟ್ಟು ₹141.53 ಕೋಟಿ ಅನುದಾನ ಮಿಸಲಾಗಿದ್ದು ಈ ವರೆಗೆ ₹141.77 ಕೋಟಿ ಹೆಚ್ಚುವರಿ ₹24 ಲಕ್ಷ ಬಿಡುಗಡೆಯಾಗಿದೆ.


ಕೇರಳ: ಆರ್ಥಿಕ ವರ್ಷ 2015-16 ರಿಂದ 2018-19 ವರೆಗೆ ₹413.58 ಕೋಟಿ ಅನುದಾನ ಮಿಸಲಾಗಿದ್ದು, ₹180.39 ಕೋಟಿ ಅನುದಾನ ಬಿಡುಗಡೆ ಆಗಿದೆ.


ತಮಿಳುನಾಡು: ಆರ್ಥಿಕ ವರ್ಷ 2016-17 ಕ್ಕೆ ₹ 73.13 ಕೋಟಿ ಮಿಸಲಾಗಿದ್ದು 68.6 ಕೋಟಿ ಬಿಡುಗಡೆ ಆಗಿದೆ.


ತೆಲಂಗಾಣ: ಆರ್ಥಿಕ ವರ್ಷ 2015-16 ರಿಂದ 2017-18 ರ ವರೆಗೆ ₹268.39 ಕೋಟಿ ಮಿಸಲಾಗಿದ್ದು ₹233.53 ಕೋಟಿ ಬಿಡುಗಡೆಯಾಗಿದೆ.


ಪುದುಚೇರಿ: ಆರ್ಥಿಕ ವರ್ಷ 2015-16 ರಿಂದ 2017-18 ರ ವರೆಗೆ ₹ 113. 35ಕೋಟಿ ಮಿಸಲಾಗಿದ್ದು ₹142.76 ಕೋಟಿ ಬಿಡುಗಡೆ ಆಗಿದೆ, ಹೆಚ್ಚುವರಿ ₹29.41 ಕೋಟಿ ನೀಡಲಾಗಿದೆ.


ಇದಲ್ಲದೆ ಪ್ರಶಾದ್ ಯೋಜನೆಯಲ್ಲೂ ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಒಟ್ಟು ₹140.21 ಕೋಟಿ ಅನುಮತಿ ನೀಡಿದ್ದು, ಈವರೆಗೆ  ₹121.49 ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಅಂಕಿಅಂಶಗಳು ಹೇಳುತ್ತಿವೆ.


ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳುವುದೇನು?
ಸುದ್ದಿಗೋಷ್ಟಿಯಲ್ಲಿ ಉತ್ತರಿಸಿದ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ, ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬುದನ್ನು ಒಪ್ಪಿಕೊಂಡರು. ಪ್ರಶ್ನೆ ಎದುರಾದಾಗ ಮುಜುಗರಕ್ಕೆ ಒಳಗಾದ ಕಿಶನ್ ರೆಡ್ಡಿ ಉತ್ತರಿಸಲು ತಡಬಡಾಯಿಸಿದರು. ಪಕ್ಕದಲ್ಲಿದ್ದ ಮಹಿಳಾ ಅಧಿಕಾರಿಯನ್ನು ಕೇಳಿ ಉತ್ತರ ನೀಡಲು ಯತ್ನಿಸಿದರು. ನಾನು ಪ್ರವಾಸೋದ್ಯಮ ಸಚಿವನಾಗಿ ಕೇವಲ‌‌ ಮೂರು ತಿಂಗಳಾಗಿದೆ. ಹೀಗಾಗಿ ತಮಗೆ ಗೊತ್ತಿಲ್ಲ ಎಂದರು. ಇದಕ್ಕೆ ಸ್ಪಷ್ಟನೆ ನೀಡುವ ಭರದಲ್ಲಿ ಮಹಿಳಾ ಅಧಿಕಾರಿ, ಕೇಂದ್ರ ಸರ್ಕಾರ ಅನುದಾನ‌ ನೀಡಲು ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ‌ ಪ್ರಸ್ತಾವನೆ ಸಲ್ಲಿಸುವಲ್ಲಿ ವಿಫಲವಾಗಿದೆ ಎಂದರು.


ರಾಜ್ಯ ವಿಫಲವಾಗಿಲ್ಲ ಎಂದ ಆನಂದ್ ಸಿಂಗ್


ಪ್ರಸ್ತಾವನೆ ಸಲ್ಲಿಸಲು ರಾಜ್ಯ ವಿಫಲವಾಗಿದೆ ಎಂದು ಅಧಿಕಾರಿ ಹೇಳಿದ್ದಕ್ಕೆ ಅಲ್ಲೇ ಇದ್ದ ಪ್ರವಾಸೋದ್ಯಮ ಸಚಿವರಿಗೆ ಇರಿಸು ಮುರಿಸು ಸೃಷ್ಟಿಯಾಯ್ತು. ರಾಜ್ಯ ಸರ್ಕಾರದ ವೈಫಲ್ಯ ಎಂಬ ಪದಬಳಕೆ ಮಾಡಬಾರದು. ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಸ್ತಾವನೆ ತಿರಸ್ಕೃತವಾಗಿವೆ ಎಂದು ಸಮರ್ಥನೆ ನೀಡಿದರು.


ಇದನ್ನೂ ಓದಿ: ಪಟಾಕಿ ಬೇಡ ಅಂದರೆ ನಮ್ಮ ಮನೆ ಮಕ್ಕಳೇ ಕೇಳಲ್ಲ; Crackers Ban ಅಸಾಧ್ಯ; ಸಚಿವ ಆನಂದ್ ಸಿಂಗ್


ಪ್ರವಾಸೋದ್ಯಮ ಕಾರ್ಯಕ್ರಮದಲ್ಲಿ ಕನ್ನಡ ಕಡೆ ಗಣನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಆನಂದ ಸಿಂಗ್ , ಇದು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಹಾಗಾಗಿ ಅಧಿಕಾರಿಗಳು ಲೋಪ ಮಾಡಿದ್ದಾರೆ. ನನ್ನ ಗಮನಕ್ಕೆ ಬಂದ ತಕ್ಷಣ ಅದನ್ನು ಬಗೆ ಹರಿಸದ್ದೇನೆ, ಡಿಜಿಟಲ್ ಇದ್ದ ಬೋರ್ಡ್ ಬದಲಾವಣೆ ಮಾಡಿದ್ದೇವೆ. ಈಗ ಬ್ಯಾನರ್ ಕೂಡ ಬದಲಾವಣೆ ಮಾಡುತ್ತಿದ್ದೇವೆ, ಹಾಗಾಗಿ ಕನ್ನಡ ಕಡೆ ಗಣನೆ ಮಾಡಿಲ್ಲ. ಸಣ್ಣ ತಪ್ಪಿನಿಂದ ಇದಾಗಿದೆ ಅಂತ ಆನಂದ್ ಸಿಂಗ್ ಸಮರ್ಥನೆ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಬಗ್ಗೆ ಮೊದಲು ಉಡಾಫೆ ಉತ್ತರ ನೀಡಿದ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಮಾಧ್ಯಮಗಳ ತರಾಟೆ ಬಳಿಕ ತಪ್ಪೊಪ್ಪಿಕೊಂಡರು. ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಮಾಡ್ತೇವೆ ಎಂದು ಭರವಸೆ ಕೊಟ್ಟರು.

Published by:Kavya V
First published: