ಸಿಎಂ ಭೇಟಿ ವೇಳೆ ಸ್ವಾಮೀಜಿಗಳಿಗೆ ನೀಡಿದ ಕವರ್​​ನಲ್ಲಿ ಏನಿತ್ತು ಎಂದು ತಿಳಿಸಿದ ದಿಂಗಾಲೇಶ್ವರ ಸ್ವಾಮೀಜಿ

cover given to the Swamijis: ಯಾವುದೇ ಪಕ್ಷದ ಪರ ಮಠಗಳು ನಿಂತಿಲ್ಲ, ಅನ್ಯಾಯವಾದಾಗ ಮಠಾಧೀಶರು ಮಧ್ಯಪ್ರವೇಶ ಮಾಡ್ತಾರೆ. ವ್ಯಕ್ತಿಗೆ ಅನ್ಯಾಯವಾದಾಗ ಕೇಳುವುದರಲ್ಲಿ ತಪ್ಪಿಲ್ಲ, ಎಲ್ಲಿ ಅನ್ಯಾಯ ನಡೆಯುತ್ತೆ ಅಲ್ಲಿ‌ ಮಾರ್ಗದರ್ಶನ ಮಾಡಬೇಕಾಗುತ್ತದೆ ಎಂದು ತಮ್ಮ ನಿಲುವನ್ನು ಸ್ವಾಮೀಜಿಗಳು ಸಮರ್ಥಿಸಿಕೊಂಡರು.

ಸ್ವಾಮೀಜಿಗಳ ಜೊತೆ ಸಿಎಂ ಚರ್ಚೆ

ಸ್ವಾಮೀಜಿಗಳ ಜೊತೆ ಸಿಎಂ ಚರ್ಚೆ

  • Share this:
ಬೆಂಗಳೂರು: ಸಿಎಂ ಬಿ.ಎಸ್​.ಯಡಿಯೂರಪ್ಪರನ್ನು ಬದಲಾಯಿಸದಂತೆ ಬೆಂಬಲ ನೀಡಿದ್ದರ ಬಗ್ಗೆ ಸ್ವಾಮೀಜಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ಸದ್ಯದ ರಾಜಕೀಯ ಬೆಳವಣಿಗೆಯ ಕುರಿತು ಮುಖ್ಯವಾಗಿ ಮಾತನಾಡಿದ ತಿಪಟೂರಿನ ರುದ್ರಮುನಿ‌ ಶ್ರೀಗಳು, ಮಠಗಳು ಸಮಾಜಕ್ಕೆ ತಮ್ಮದೇ ಕೊಡುಗೆ ಕೊಟ್ಟಿವೆ. ಮಠಾಧಿಪತಿಗಳ ಸಾಲಿನ ರಾಜ್ಯಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಸಮಾಜದಲ್ಲಿ‌ ಗೊಂದಲವಾದಾಗ ಜನ ಮಠಕ್ಕೆ ಭೇಟಿ ನೀಡ್ತಾರೆ, ಮಠಾಧೀಶರ ಸಲಹೆಗಳನ್ನ ಕೇಳ್ತಾರೆ. ಸಮಾಜದ ಅಂಕುಡೊಂಕು ಸರಿಮಾಡಬೇಕು, ಹೀಗಾಗಿ ಜು. ೨೫ ರಂದು ಅರಮನೆ ಮೈದಾನದಲ್ಲಿ ಮಠಾಧೀಶರ ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಮಠಾಧೀಶರಿಗೆ ಸಿಎಂ ನಿವಾಸದಲ್ಲಿ ಕವರ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಶ್ರೀ, ಅದನ್ನೇ ಬೇರೆ ರೀತಿಯಲ್ಲಿ‌ತೋರಿಸಿದ್ದು ವಿಕೃತಿ ತೋರಿಸುತ್ತದೆ. ಅದನ್ನ ತೋರಿಸುವವರ ಮನಸ್ಸಿನ ವಿಕೃತಿ ತೋರಿಸುತ್ತದೆ. ಮಠಾಧೀಶರು ಹೋದಾಗ ಹಣ್ಣುಹಂಪಲು ಕೊಡ್ತಾರೆ. ಮನೆಗಳಿಗೆ ಬಂದಾಗ ಭಕ್ತರು ನೀವೇ ಕೊಡ್ತೀರ, ಅದನ್ನೇ ಬೇರೆ ರೀತಿ ತೋರಿಸಿದರೆ ಹೇಗೆ ಮಾಡುವುದು. ಅವರು ಕೊಟ್ಟ ಕವರ್ ನಲ್ಲಿ ಏನೂ ಇರಲಿಲ್ಲ, ಕಾಣಿಕೆ ಕೊಡುವ ಸಂಸ್ಕೃತಿ ಭಕ್ತರಲ್ಲಿದೆ. ಅದಕ್ಕೆ ಬೇರೆ ಅರ್ಥ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬಾಳೆ ಹೊಸೂರಿನ ದಿಂಗಾಲೇಶ್ವರ ಶ್ರೀಗಳ ಸ್ಪಷ್ಟನೆ ನೀಡಿದರು.

ವರ್ತಮಾನದ ವಿಚಾರಗಳ ಚರ್ಚೆಗೆ ಮಠಾಧಿಪತಿಗಳ ಸಮಾವೇಶ ಕರೆದಿದ್ದೇವೆ. ಈ ಸಮಾವೇಶ ರಾಜ್ಯದ ಹಿತ ರಕ್ಷಣೆಗಾಗಿ ನಡೆಯಲಿದೆ. ಮಠಾಧಿಪತಿಗಳ ಕರ್ತವ್ಯ ಕುರಿತು ಚಿಂತನೆ ಮಾಡಲಿದೆ. ರಾಜ್ಯದ ಅಗ್ರಗಣ್ಯ ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಇದು ಸಾರ್ವಜನಿಕ ಸಭೆಯಲ್ಲ, ಇದು ಮಠಾಧಿಪತಿಗಳ ಸಭೆ. ಇದು ಒಂದು ಸಮಾಜದ ಸಭೆಯಲ್ಲ, ಎಲ್ಲಾ ಸಮಾಜಗಳ ಮಠಾಧೀಶರ ಸಭೆ. ಯಾವುದೇ ವ್ಯಕ್ತಿ ಕುರಿತು ಸಮಾವೇಶ ಮಾಡ್ತಿಲ್ಲ, ಹಲವು ಧ್ಯೇಯೋದ್ದೇಶಗಳನ್ನ ಕುರಿತು ಚರ್ಚಿಸಲಿದ್ದೇವೆ. ರಾಜ್ಯದ ಮಠಾಧಿಪತಿಗಳು ನಾಳೆ ಬೆಂಗಳೂರಿಗೆ ಆಗಮಿಸಬೇಕು ಎಂದು ಮಠಾಧೀಶರಿಗೆ ದಿಂಗಾಲೇಶ್ವರ ಶ್ರೀಗಳ ಕರೆ ನೀಡಿದರು.

ಸಮಗ್ರ ಚಿಂತನೆಯನ್ನ ಇಟ್ಟುಕೊಂಡು ಸಭೆ ಮಾಡುತ್ತೇವೆ. ರಾಜಕೀಯ ಚಿಂತನೆಯೂ ಇರಲಿದೆ. ಕೊರೊನಾ ಸಂದರ್ಭದಲ್ಲಿ ಮಠಗಳು ಮುಂದೆ ಬರಲಿಲ್ಲ ಎಂಬ ಮಾತು ಒಪ್ಪಲ್ಲ. ಮಠಗಳು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿವೆ. ಮಠಾಧೀಶರು ಮಾಡಿಲ್ಲ ಅನ್ನೋದು ಸರಿಯಲ್ಲ ಎಂದರು. ಸ್ವಾಮೀಜಿಗಳ ಸಮಾಜದ ಹಿತಕ್ಕಾಗಿ ರಾಜಕಾರಣಿಗಳ ಬಳಿ ಬರಬೇಕು. ನಾವು ಯಾವುದೇ ಹೊಸ ಸಂಪ್ರದಾಯ ಮಾಡಿಕೊಂಡಿಲ್ಲ. ಶಿಕ್ಷಣ ಸಂಸ್ಥೆಗಳನ್ನ ಮಠಗಳು ಕಟ್ಟಿವೆ. ಶಿಕ್ಷಣದ ಕೆಲಸಗಳನ್ನ ಮಾಡಿಕೊಳ್ಳಬೇಕಾದರೆ ಬರಬೇಕಾಗುತ್ತದೆ. ಯಾವುದೇ ಪಕ್ಷದ ಪರ ಮಠಗಳು ನಿಂತಿಲ್ಲ, ಅನ್ಯಾಯವಾದಾಗ ಮಠಾಧೀಶರು ಮಧ್ಯಪ್ರವೇಶ ಮಾಡ್ತಾರೆ. ವ್ಯಕ್ತಿಗೆ ಅನ್ಯಾಯವಾದಾಗ ಕೇಳುವುದರಲ್ಲಿ ತಪ್ಪಿಲ್ಲ, ಎಲ್ಲಿ ಅನ್ಯಾಯ ನಡೆಯುತ್ತೆ ಅಲ್ಲಿ‌ ಮಾರ್ಗದರ್ಶನ ಮಾಡಬೇಕಾಗುತ್ತದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ತಿಪಟೂರಿನ ಷಡಕ್ಷರಿ ರುದ್ರಮುನಿ ಸ್ವಾಮಿಗಳು, ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಬೊಮ್ಮನಹಳ್ಳಿ ಅಗಡಿ ಸೂಗೂರು ಅರಕಲಗೂಡು ಶಿಗ್ಗಾವ್ ಶನಿವಾರ ಸಂತೆ ಅಕ್ಕಿಆಲೂರು ಸ್ವಾಮೀಜಿ ಉಪಸ್ಥಿತರಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: