ಬೆಂಗಳೂರು: ಸದ್ಯ ಗಣೇಶ ಹಬ್ಬ ಅದ್ದೂರಿಯಾಗಿ ನಡೀತಿದೆ. ಇದರ ನಡುವೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಮತ್ತೆ ಕೊರೋನಾ ಆರ್ಭಟ ಶುರುವಾಗುತ್ತೆ ಅನ್ನೋದಕ್ಕಿರುವ ಮುನ್ಸೂಚನೆ ಇದು ಎಂಬ ಆತಂಕ ಸದ್ಯದ್ದು. ಹೌದು, ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕೊರೋನಾ ಮೂರನೇ ಭೀತಿ ಮುನ್ನಲೆಗೆ ಬಂದಿದೆ. ಯಾಕಂದ್ರೆ ಡೆಲ್ಟಾ ರೂಪಾಂತರಿಯಲ್ಲಿ ಮತ್ತೆ ಹೊಸ ಮೂರು ತಳಿಗಳು ಪತ್ತೆಯಾಗಿದೆ.
ಜಿನೋಮಿಕ್ ಸೀಕ್ವೆನ್ಸಿಂಗ್ ವೇಳೆ ಪತ್ತೆಯಾದ ಹೊಸ ತಳಿಗಳು!
ಒಂದ್ಕಡೆ ಸಾಲು ಸಾಲು ಹಬ್ಬ. ಸದ್ಯ ಗಣೇಶ ಹಬ್ಬ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಹೀಗಿದ್ರೂ ಮಾರುಕಟ್ಟೆಗಳ ದೃಶ್ಯಗಳು ಭಯಾನಕವಾಗಿದೆ. ಮಾಸ್ಕ್ ಆಗಲಿ ಸಾಮಾಜಿಕ ಅಂತರವಾಗಲಿ ಎಲ್ಲವೂ ಮಾಯಾವಾಗಿದೆ. ಹಬ್ಬದ ನೆಪದಲ್ಲಿ ಜನರು ಹೀಗೆ ನಡೆದಕೊಳ್ಳುವುದಾದರೆ ಆಪಾಯ ತಪ್ಪಿದ್ದಲ್ಲ. ಯಾಕಂದ್ರೆ ಅತ್ತ ಹಬ್ಬ ಸಂಭ್ರಮ ಸಡಗರವಾದರೆ ಇತ್ತ ಕೊರೋನಾದ ಹೊಸ ತಳಿಗಳು ಪತ್ತೆಯಾಗಿದ್ದು, ಆತಂಕ ಉಂಟು ಮಾಡಿದೆ. ಎರಡನೇ ಅಲೆ ವೇಳೆ ಪತ್ತೆಯಾಗಿದ್ದ ಡೆಲ್ಟಾ ವಂಶಕ್ಕೆ ಸೇರಿದ ಕಪ್ಪಾ ಹಾಗೂ ಇತರೆ ತಳಿಗಳು ಈಗ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ನಲ್ಲಿ ಪತ್ತೆಯಾಗಿದೆ.
ಮೂರನೇ ಅಲೆಗೆ ಕಾರಣವಾಗಬಹುದಾ ಈ ಹೊಸ ತಳಿಗಳು.!?
ಸುಮಾರು 400 ಸ್ಯಾಂಪಲ್ಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಈ ವೇಳೆ ಮೂರು ಹೊಸ ತಳಿಗಳು ಪತ್ತೆಯಾಗಿದೆ. ಈ ಟೆಸ್ಟ್ ನಲ್ಲಿ AY.3, AY.4, AY.6 ಎಂಬ ಮೂರು ಹೊಸ ಡೆಲ್ಟಾ ವಂಶೀಯ ತಳಿಗಳು ಪತ್ತೆಯಾಗಿದೆ. ಇದೇ ಈಗ ಮೂರನೇ ಅಲೆಗೆ ಕಾರಣವಾಗಬಹುದಾ ಎಂಬ ಅನುಮಾನ ಎಲ್ಲೆಡೆ ಇದೆ. ಈ ಪೈಕಿ AY.6 ರೂಪಾಂತರಿ 38 ಮಂದಿಯಲ್ಲಿ ಕಾಣಿಸಿಕೊಂಡಿದೆ. ತಜ್ಞ ವೈದ್ಯರ ಎಚ್ಚರಿಕೆಯ ಮಧ್ಯೆಯೇ ಡೆಲ್ಟಾ ವಂಶವಾಹಿ ಹೊಸ ತಳಿ ಪತ್ತೆಯಾಗಿದ್ದು ಸ್ವಲ್ಪ ಟೆನ್ಶನ್ ಹೆಚ್ಚಿಸಿದೆ.
ಇದನ್ನೂ ಓದಿ: Risk from Vaccines: ಕೊರೊನಾ ಸೋಂಕಿಗಿಂತ ಹದಿಹರೆಯದವರಿಗೆ ಲಸಿಕೆಯೇ ಡೇಂಜರ್ ಅಂತೆ!
ಜಿನೋಮಿಕ್ ಸೀಕ್ವೆನ್ಸಿಂಗ್ ವೇಳೆ ಪತ್ತೆಯಾದ ಡೆಲ್ಟಾದ ಹೊಸ ತಳಿಗಳು.!!
ಹೀಗೆ ಡೆಲ್ಟಾ ವಂಶಕ್ಕೇ ಸೇರಿದ ಕಪ್ಪಾ ತಳಿ ಎರನೇ ಅಲೆ ವೇಳೆಯೇ ಒಂದು ಪ್ರಕರಣ ದಾಖಲಾಗಿತ್ತು. ಇದಾದ ಬೆನ್ನಲ್ಲೇ ಪಾಲಿಕೆ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ತೀವ್ರವಾಗಿ ನಡೆಸಿತು. ಇದೀಗ ಮೂರನೇ ಅಲೆ ಭೀತಿ ತಲೆದೂರಿರುವ ಹೊತ್ತಲ್ಲೇ ಈ ಹೊಸ ತಳಿಗಳು ಪತ್ತೆಯಾಗಿರುವುದು ನಿಜಕ್ಕೂ ಆತಂಕ ಇಮ್ಮಡಿ ಮಾಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ