Bangalore Central Jail: ಜೈಲಿನಲ್ಲಿ ಕೈದಿಗಳು ತಯಾರಿಸಿರುವ ಫೆನಾಯಿಲ್​​ಗೆ ಎಲ್ಲಿಲ್ಲದ ಬೇಡಿಕೆ

ಕೇವಲ ಫೆನಾಯಿಲ್ ಅಷ್ಟೇ ಅಲ್ದೆ ಕಬ್ಬಿಣದ ಉಪಕರಣಗಳಿಗೂ ಡಿಮ್ಯಾಂಡ್‌ ಇದೆ. ಕುರ್ಚಿ,ಟೇಬಲ್ ,ಬೀರು ,ಬಾಕ್ಸ್, ಕಬಾರ್ಡ್ ಗಳನ್ನ ಮಾಡಲು ಟೆಂಡರ್ ಪಡೆದಿದ್ದಾರೆ‌. ಹಾಗೇ ಕೋರ್ಟ್ ,ಕಾಲೇಜು ,ಸ್ಟೇಷನ್ ಗಳಿಂದ ಕಬ್ಭಿಣದ ಯಾವುದೇ ವಸ್ತು ಬೇಕಿದ್ರೂ ಜೈಲಿಂದಲೇ ಸಪ್ಲೈ ಆಗುತ್ತೆ.

ಜೈಲಿನಲ್ಲಿ ತಯಾರಾದ ವಸ್ತುಗಳಿಗೆ ಬೇಡಿಕೆ

ಜೈಲಿನಲ್ಲಿ ತಯಾರಾದ ವಸ್ತುಗಳಿಗೆ ಬೇಡಿಕೆ

  • Share this:
ಬೆಂಗಳೂರು:  ಸೆಂಟ್ರಲ್ ಜೈಲಿನಲ್ಲೀಗ ಕಾರ್ಯಗಾರದ್ದೇ ಸುದ್ದಿಯಾಗಿದೆ. ಸಜಾಬಂಧಿ ಕೈದಿಗಳಿಂದ ವಿಭಿನ್ನ ಆಲೋಚನೆ, ಪ್ರಯತ್ನ ಮುಂದುವರೆದಿದೆ. ಪರಪ್ಪನ ಅಗ್ರಹಾರದಲ್ಲಿ ತಯಾರಾಗುವ ವಸ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಸಿಕ್ಕಿದೆ. ಸಾರ್ವಜನಿಕರಿಂದಲೂ ಆ ವಸ್ತುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಬರ್ತಿದೆ.  ಸದಾ ಒಂದಿಲ್ಲೊಂದು ಘಟನೆಗಳಿಂದ ಮುನ್ನಲ್ಲೆಗೆ ಬರ್ತಿರೋ ಸೆಂಟ್ರಲ್ ಜೈಲ್ ಮತ್ತೆ ಸುದ್ದಿಯಾಗಿದೆ. ಸಜಾ ಬಂಧಿ ಕೈದಿಗಳು ವಿಭಿನ್ನ ಆಲೋಚನೆ ಮಾಡಿ ಫೆನಾಯಿಲ್ ಉದ್ದಿಮೆಯ ಪ್ರಯಯತ್ನಕ್ಕೆ ಕೈ ಹಾಕಿದ್ದಾರೆ. ಜೈಲಾಧಿಕಾರಿಗಳು ಸಹ ಸಾಥ್ ನೀಡಿದ್ದಾರೆ.

15 ದಿನಗಳಲ್ಲೇ ಫೆನಾಯಿಲ್​ ಉದ್ಯಮ 

ಹದಿನೈದು ದಿನದ ಹಿಂದೆಯಷ್ಟೇ ಐವರು ಕೈದಿಗಳಿಂದ ಫೆನಾಯಿಲ್ ಕಾರ್ಯಾ ಶುರುವಾಗಿತ್ತು. ಕೇವಲ ಜೈಲಿನ ಸುಚಿತ್ವಕ್ಕೆಂದು ಸೀಮಿತ ಸಂಖ್ಯೆಯ ಫೆನಾಯಿಲ್ ತಯಾರಿಸಲು ಮುಂದಾಗಿದ್ರು. ಆದ್ರೆ ದಿನಕಳೆದಂತೆ ದೊಡ್ಡ ಉದ್ದಿಯಾಗಿ ಬೆಳೆದಿದೆ. ವಿವಿಧ ಬಣ್ಣದ ಸುಹಾಸನೆಯ ಫೆನಾಯಿಲ್ ಬಾಟಲ್ ತಯಾರಿಸಲಾಗ್ತಿದೆ. ಒಂದು ಲೀಟರ್ ಅರವತ್ತು ರೂ ನಂತೆ ಎಲ್ಲಾ ಕಾರಾಗೃಹಗಳಿಗೆ ರವಾನೆ ಮಾಡಲಾಗ್ತಿದೆ. ಈ ಮಧ್ಯೆ  ಜೈಲಿಗೆ ಬಂದು ಸಾರ್ವಜನಿಕರು ಸಹ ಖರೀದಿ ಮಾಡ್ತಿದ್ದಾರೆ. ಕೈದಿಗಳ ವಿಭಿನ್ನ ಫೆನಾಯಿಲ್ ಉದ್ದಿಮೆಗೆ ಜೈಲಾಧಿಕಾರಿಗಳು ಸಹ ಫೀದಾ ಆಗಿದ್ದಾರೆ.

ಜೈಲಿನಲ್ಲಿ ತಯಾರಾಗ್ತಿವೆ ಅತ್ಯುತ್ತಮ ವಸ್ತುಗಳು

ಕೇವಲ ಫೆನಾಯಿಲ್ ಅಷ್ಟೇ ಅಲ್ದೆ ಕಬ್ಬಿಣದ ಉಪಕರಣಗಳಿಗೂ ಡಿಮ್ಯಾಂಡ್‌ ಇದೆ. ಕುರ್ಚಿ,ಟೇಬಲ್ ,ಬೀರು ,ಬಾಕ್ಸ್, ಕಬಾರ್ಡ್ ಗಳನ್ನ ಮಾಡಲು ಟೆಂಡರ್ ಪಡೆದಿದ್ದಾರೆ‌. ಹಾಗೇ ಕೋರ್ಟ್ ,ಕಾಲೇಜು ,ಸ್ಟೇಷನ್ ಗಳಿಂದ ಕಬ್ಭಿಣದ ಯಾವುದೇ ವಸ್ತು ಬೇಕಿದ್ರೂ ಜೈಲಿಂದಲೇ ಸಪ್ಲೈ ಆಗುತ್ತೆ. ಇನ್ನು ಪ್ರತಿನಿತ್ಯ ಜೈಲಲ್ಲಿ ಡ್ಯೂಟಿ ಸಮಯದಂತೆ ತಮ್ಮ ಉದ್ದಿಮೆ ಕೆಲಸದಲ್ಲಿ ಕೈದಿಗಳು ನಿರತರಾಗುತ್ತಾರೆ. ಇತ್ತೀಚೆಗಷ್ಟೆ ಹೋಮ್ ಗಾರ್ಡ್ಸ್ ಗೆ ಹದಿನೆಂಟು ಸಾವಿರ ಶರ್ಟ್ ಪ್ಯಾಂಟ್ ಗಳನ್ನ  ಕೈದಿಗಳು ಹೊಲಿದು ಕೊಟ್ಟಿದ್ರು.ಜೈಲಿನ ಗಾರ್ಮೆಂಟ್ಸ್ ನಲ್ಲಿ ತಯಾರಾಗುವ ಬಟ್ಟೆಗಳಿಗೂ ಬೇಡಿಕೆ ಇದ್ದು, ಮಾಸ್ಕ್ , ಟವಲ್ ಸೇರಿದಂತೆ ಬಟ್ಟೆಗಳ ಹೊಲಿಕೆಗೆ 40 ಹೊಲಿಗೆ ಯಂತ್ರದ ವ್ಯವಸ್ಥೆ ಇದೆ.

ಸಾರ್ವಜನಿಕರಿಗೆ ಎಲ್ಲಿಲ್ಲದ ಬೇಡಿಕೆ 

ಇದೇ ರೀತಿಯಾಗಿ ಮಾಸ್ಕ್ ಗಳನ್ನ ಸಹ ಜೈಲಲ್ಲಿ ಹೊಲಿಯುತ್ತಿದ್ದು,ಎಲ್ಲಾ ಕಾರಾಗೃಹದ ಕೈದಿಗಳಿಗೆ ಕಳಿಸಲಾಗ್ತಿದೆ.  ಕೋವಿಡ್ ಹಿನ್ನಲೆ ಹೆಚ್ಚು ಜಾಗ್ರತೆ ವಹಿಸಿದ್ದು,ಸ್ವಚ್ಚತೆಗಾಗಿ ಫೆನಾಯಿಲ್ ತಯಾರಿಸಲು ಮುಂದಾಗಿದ್ರು. ಆದ್ರೆ ವಿವಿಧ ಬಣ್ಣದ ಸುಹಾಸನೆಯದ್ದು ತಯಾರಿಸಿ ಇತರೆ ಜೈಲಿಗಳಿಗೂ ಕಳಿಸಿದ್ದಾರೆ‌... ಆಗ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಸಾರ್ವಜನಿಕರೂ ಸಹ ಫೆನಾಯಿಲ್ ಖರೀದಿಗೆ ಮುಗಿಬಿದ್ಧಿದ್ದಾರೆ. ಈ ಮೂಲಕ ಕೈದಿಗಳ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಜೊತೆಗೆ ಜೈಲಲ್ಲಿ ಸದಾ ಕ್ರಿಯಾಶೀಲತೆಯಿಂದಿರಲು ಅಧಿಕಾರಿಗಳು ಸಾಥ್ ಕೊಡ್ತಿರೋದು ಹೆಮ್ಮೆಯ ವಿಷಯ.

ಇದನ್ನೂ ಓದಿ: Mysuru Dasara 2021: ಈ ಬಾರಿಯೂ ಸರಳ, ಸಾಂಪ್ರದಾಯಿಕವಾಗಿ ಮೈಸೂರು ದಸರಾ ಆಚರಣೆಗೆ ಸರ್ಕಾರ ನಿರ್ಧಾರ!

ಕೈದಿಗಳಲ್ಲಿ ಸಕಾರಾತ್ಮಕ ಬೆಳವಣಿಗೆ 

ಇದೇ ರೀತಿ ಕೃಷಿ ಚಟುವಟಿಕೆಗಳಲ್ಲಿ ಸಹ ಕೈದಿಗಳು ತೊಡಗಿಕೊಂಡಿದ್ದಾರೆ. ಜೈಲಲ್ಲಿ ತರಕಾರಿ ಬೆಳೆದು ಅಡುಗೆಗೆ ಬಳಸಿಕೊಳ್ಳಲಾಗ್ತಿದೆ. ಹೀಗೆ ಬೇರೆ ಕಾರಾಗೃಹಗಳಿಗಳಿಗೂ ಹೋಗುತ್ತೆ. ಬೇಕರಿ ತಿನಿಸುಗಳಿಗೂ ಜೈಲಲ್ಲೇ ಕೈದಿಗಳು ಖರೀದಿಸ್ತಿದ್ದಾರೆ. ಕೈದಿಗಳು ಸಹ ಕೈದಿಗಳ ಕ್ರಿಯಾಶೀಲತೆಗೆ ಕೈಜೋಡಿಸಿದ್ದಾರೆ. ಒಂದ್ವೇಳೆ ಕೈದಿಗಳು ಏನಾದ್ರು ಕಲಿಯಬೇಕು ಎಂದು ಒಂದು ಟೀಂ ರೆಡಿಯಾದ್ರೆ, ತರಬೇತಿ ಸಹ ನೀಡಲಾಗುತ್ತೆ .ಹಿಂದೆ ಕೈದಿಗಳು ಏನು ಕೆಲಸ ಮಾಡ್ತಿದ್ರು ಅದನ್ನ ತಿಳಿದುಕೊಂಡು ಹತ್ತು ಮಂದಿಯಂತೆ ಟ್ರೈನಿಂಗ್ ಕೊಡ್ತಾರೆ. ಒಂದು ತಿಂಗಳು ತರಬೇತಿ ಪಡೆದ ಕೈದಿಗಳಿಗೆ ಕಾರ್ಯೋನ್ಮುಖರಾಗಲು ಅವಕಾಶ ನೀಡಲಾಗುತ್ತೆ.. ಹೀಗೆ ಒಂದೊಂದು ತಂಡಕ್ಕೆ ಪ್ರತ್ಯೇಕ ಜಾಗ ಕೊಟ್ಟು ಸಿಬ್ಬಂದಿಯೂ ಸಾಥ್ ನೀಡಲಿದ್ದಾರೆ. ಜೀವನದಲ್ಲಿ ಗೊತ್ತೋ ಗೊತ್ತಿಲ್ಲದೋ ಕಾನೂನಿನ ವಿರುದ್ಧವಾಗಿ ನಡೆದುಕೊಂಡವರು ಜೈಲಿನಲ್ಲಿ ಹೊಸ ಜೀವನ ಕಂಡು ಕೊಳ್ಳುತ್ತಿದ್ದಾರೆ.
Published by:Kavya V
First published: