• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಮಠಾಧೀಶರನ್ನು ಭೇಟಿಯಾದ ಡಿಸಿಎಂ ಅಶ್ವತ್ಥ ನಾರಾಯಣ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಮಠಾಧೀಶರನ್ನು ಭೇಟಿಯಾದ ಡಿಸಿಎಂ ಅಶ್ವತ್ಥ ನಾರಾಯಣ

ಮಠಾಧೀಶರನ್ನು ಭೇಟಿಯಾದ ಡಿಸಿಎಂ ಅಶ್ವತ್ಥ ನಾರಾಯಣ

ಮಠಾಧೀಶರನ್ನು ಭೇಟಿಯಾದ ಡಿಸಿಎಂ ಅಶ್ವತ್ಥ ನಾರಾಯಣ

ಡಿಸಿಎಂ ಅಶ್ವಥ್ ನಾರಾಯಣ್ ಅವ್ರು ಮುಂದೆ ಏನಾದರೂ ಪಕ್ಷದಲ್ಲಿ ಬೆಳವಣಿಗೆ ಆದರೆ, ಅದಕ್ಕೆ ತಾವು ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಸದ್ಯ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಮುಖ್ಯಮಂತ್ರಿ ಗಳ ರೇಸ್ ನಲ್ಲಿದ್ದಾರೆ.

  • Share this:

ಬೆಂಗಳೂರು(ಜೂ.11): ರಾಜ್ಯ ಬಿಜೆಪಿಯಲ್ಲೀಗ ನಾಯಕತ್ವ ಬದಲಾವಣೆಯದ್ದೇ ಚರ್ಚೆ. ಈಗಾಗಲೇ ನಾಯಕತ್ವ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.. ಈ ನಡುವೆ ರಾಜ್ಯದ ನಾಯಕರು ಮಾತ್ರ ಮಠಾಧೀಶರ ಭೇಟಿಯಾಗ್ತಿದ್ದಾರೆ.. ಹೌದು ಕಳೆದ ಎರಡು ದಿನಗಳಿಂದ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ರಾಜ್ಯದಲ್ಲಿರುವ ವಿವಿಧ ಮಠಗಳಿಗೆ ಭೇಟಿ ನೀಡಿ, ಅಲ್ಲಿರುವ ಸ್ವಾಮೀಜಿ ಗಳ ಜೊತೆ ಚರ್ಚೆ ಮಾಡ್ತಿದ್ದಾರೆ. ಪ್ರಮುಖವಾಗಿ ಚಿತ್ರದುರ್ಗದ ಮುರುಘ ಮಠಕ್ಕೆ ಭೇಟಿ ನೀಡಿದ್ದ ಬಿ ವೈ ವಿಜಯೇಂದ್ರ ಅಲ್ಲಿರುವ ಶಿವಮೂರ್ತಿ ಸ್ವಾಮೀಜಿ ಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.


ಇದಲ್ಲದೇ ಹಲವು ವೀರಶೈವ ಮಠಕ್ಕೂ ಭೇಟಿ ನೀಡಿ ಅಲ್ಲಿರುವ ಸ್ವಾಮೀಜಿ ಗಳ ಭೇಟಿ ಮಾಡಿದ್ದಾರೆ. ಇತ್ತ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಕೂಡ ಸ್ವಾಮೀಜಿ ಗಳ ಭೇಟಿ ಮಾಡಿದ್ದಾರೆ. ಬೆಳಿಗ್ಗೆ ಬೆಂಗಳೂರಿನ ತಮ್ಮ ಖಾಸಗಿ ನಿವಾಸದಲ್ಲಿ ವೀರಶೈವ ಸ್ವಾಮೀಜಿ ಗಳ ಭೇಟಿ ಮಾಡಿ, ಹಲವು ಮಹತ್ವ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.


ಇನ್ನೂ ಈ ನಾಯಕರ ಭೇಟಿ ಹಲವು ವ್ಯಾಖ್ಯಾನಗಳಿಗೆ ಸಾಕ್ಷಿಯಾಗಿದೆ.  ಸಿಎಂ ಯಡಿಯೂರಪ್ಪ ಬದಲಾಗ್ತಾರೆ ಎಂಬ ಚರ್ಚೆ ನಡುವೆ ಈ ನಾಯಕರು ಭೇಟಿ ಮಾಡಿರೋದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಬಿ.ವೈ ವಿಜಯೇಂದ್ರ ಭೇಟಿ ವೇಳೆ ಯಡಿಯೂರಪ್ಪನವರನ್ನು ಏನಾದರೂ ಬಿಜೆಪಿ ಹೈಕಮಾಂಡ್ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ರೆ, ಅವಾಗ ನಿಮ್ಮ ಬೆಂಬಲ ಬೇಕು, ಅವಾಗ ನಮ್ಮ ಪರ ನಿಲ್ಲಬೇಕು ಎಂದು ಚರ್ಚಿಸಿದ್ದಾರೆ ಎಂದು ಹೇಳಲಾಗ್ತಿದೆ.


ಇದನ್ನೂ ಓದಿ:Fresh Fruits: ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದ ಇಂಪೋರ್ಟೆಡ್ ಹಣ್ಣುಗಳು; ಬೆಲೆಯೂ ಕಡಿಮೆ, ತಾಜಾ ಕೂಡ..!


ಇತ್ತ ಡಿಸಿಎಂ ಅಶ್ವಥ್ ನಾರಾಯಣ್ ಅವ್ರು ಮುಂದೆ ಏನಾದರೂ ಪಕ್ಷದಲ್ಲಿ ಬೆಳವಣಿಗೆ ಆದರೆ, ಅದಕ್ಕೆ ತಾವು ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಸದ್ಯ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಮುಖ್ಯಮಂತ್ರಿ ಗಳ ರೇಸ್ ನಲ್ಲಿದ್ದಾರೆ. ಹೀಗಾಗಿ ಮುಂದೆ ಯಡಿಯೂರಪ್ಪರನ್ನು ಹೈಕಮಾಂಡ್ ಬದಲಾವಣೆ ಮಾಡಿದ್ರೆ ತಮಗೆ ಸಿಎಂ ಸ್ಥಾನ ಸಿಗಬಹುದು ಅವಾಗ ಬೆಂಬಲ ಬೇಕು ಎಂಬ ವ್ಯಾಖ್ಯಾನ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.


ಒಟ್ಟಾರೆ ರಾಜ್ಯ ಬಿಜೆಪಿಯಲ್ಲಂತೂ ಇವಾಗ ನಾಯಕತ್ವ ಬದಲಾವಣೆ ಬಗ್ಗೆಯೇ ಮಾತಾಗಿದೆ. ಈ ನಡುವೆ ಬಿಜೆಪಿ ನಾಯಕರ ಮಠಾಧೀಶರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು