ಬೆಂಗಳೂರು: ದೇಶದಲ್ಲಿ ಸೇರಿದಂತೆ ಕರ್ನಾಟಕದಲ್ಲಿ ಕೊರೊನಾ 2ನೇ ಅಲೆ ಅಬ್ಬರ ತಗ್ಗುತ್ತಾ ಬರುತ್ತಿದೆ. ತಜ್ಞರು ಎಚ್ಚರಿಸಿರುವಂತೆ ಕೊರೊನಾ 3ನೇ ಅಲೆಗೆ ಈಗಲಿಂದಲೇ ತಯಾರಿ ಮಾಡಿಕೊಳ್ಳಬೇಕಿದೆ. ಮೊದಲ ಅಲೆ ಬಳಿಕ ಮೈಮರೆತಂತೆ ಈ ಬಾರಿಯೂ ನಿರ್ಲಕ್ಷ್ಯವಹಿಸಿದರೆ ಭಯಾನಕ ಪರಿಸ್ಥಿತಿ ನಿರ್ಮಾಣವಾಗುತ್ತೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಎಚ್ಚೆತ್ತುಕೊಂಡಿದ್ದು ಇಂದು ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಸಭೆ ಬಳಿಕ ಡಿಸಿಎಂ ಡಾ.ಅಶ್ವತ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಮೂರನೇ ಅಲೆಗೆ ೧,೫೦೦ ಕೋಟಿ ಮೀಸಲಿಟ್ಟಿರುವುದಾಗಿ ಘೋಷಿಸಿದರು. ಈ ಬಗ್ಗೆ ಟಾಸ್ಕ್ ಪೋರ್ಸ್ ಸಭೆಯಲ್ಲಿ ತೀರ್ಮಾನವಾಗಿದೆ. ಕಾರ್ಯಪಡೆ ಸಭೆಯಲ್ಲಿ ಹಲವು ನಿರ್ಣಯಗಳನ್ನ ಕೈಗೊಳ್ಳಲಾಗಿದೆ. ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ತೀರ್ಮಾನವಾಗಿದೆ. ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ೪ ಸಾವಿರ ವೈದ್ಯರು ಬೇಕಾಗಲಿದೆ. ಒಂದೂವರೆ ಸಾವಿರ ಕೋಟಿ ವೆಚ್ಚವಾಗಲಿದೆ. ಸಂಬಳ ನೀಡುವುದಕ್ಕೆ ೬೦೦ ಕೋಟಿಯಾಗಲಿದೆ. ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಯ ಅಗತ್ಯವಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಭೂಮಿ ಗುರುತಿಸಬೇಕಾಗಿದೆ.
ಮೂರನೇ ಅಲೆಗೆ ಬೇಕಾದ ತಯಾರಿ ಕುರಿತು ಚರ್ಚಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ೧೪೬ ತಾಲ್ಲೂಕು, ೧೯ ಜಿಲ್ಲಾಸ್ಪತ್ರೆಗೆ ಸೌಲಭ್ಯದ ನಿರ್ಣಯವಾಗಿದೆ. ಇದಕ್ಕಾಗಿ ಮೂರು ತಿಂಗಳ ಸಮಯಾವಕಾಶ ನೀಡಲಾಗಿದೆ. ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ ನೀಡಲಾಗುವುದು. ಸರ್ಕಾರಿ ಆಸ್ಪತ್ರೆ ಅಂದ ತಕ್ಷಣ ಗುಣಮಟ್ಟದಲ್ಲಿ ಕುಸಿತ ಕಾಣಬಾರದು. ಭಾರತ ಸರ್ಕಾರ ಹೆಲ್ತ್ ನಲ್ಲಿ ಸ್ಕಿಲ್ ಡೆವೆಲಪ್ಮೆಂಟ್ ಮಾಡಲು ೬ ಪ್ರೋಗ್ರಾಂ ಮಾಡಲಾಗುತ್ತೆ ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದರು.
ಇದನ್ನೂ ಓದಿ: ಕುಮಾರಸ್ವಾಮಿನ ಕಿತ್ತಾಕಿ BSYನ ತಂದಿದ್ದೇವೆ, ಅವರೇ ಸಿಎಂ ಆಗಿ ಮುಂದುವರಿಯಲಿ: ಯೋಗೇಶ್ವರ್ ಯೂಟರ್ನ್?
ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ಪ್ರವಾಸಿಗರಿಗೆ ಲಸಿಕೆ ನೀಡಲಿದ್ದೇವೆ. ಎರಡನೇ ಡೋಸ್ ಅಂತರವನ್ನ ೪ ರಿಂದ ೬ ವಾರ ಅಂತರ ಮಾಡಿ ಕೋವಿಶೀಲ್ಡ್ ಲಸಿಕೆ ನೀಡಲಿದ್ದೇವೆ. ಪಾಸ್ ಪೋರ್ಟ್ ನಂಬರ್ ತೋರಿಸಿ ಲಸಿಕೆ ಪಡೆಯಬಹುದು ಎಂದು ತಿಳಿಸಿದರು.
೫ ಸಾವಿರ ವಿದ್ಯಾರ್ಥಿಗಳಿಗೆ , ಎಸ್ ಎಸ್ ಎಲ್ ಸಿ, ಪಿಯುಸಿ ವಿಧ್ಯಾರ್ಥಿಗಳಿಗೆ ಫ್ರೀ ತರಬೇತಿ ನೀಡಲಾಗುತ್ತೆ. 3 ತಿಂಗಳ ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ೫ ಸಾವಿರ ನೀಡಲಾಗುತ್ತೆ. ಎಲ್ಲಾ ಹಂತಗಳಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಲಾಗುತ್ತೆ. ಪ್ರತಿಯೊಂದು ಮಾಹಿತಿ ಪಡೆದುಕೊಳ್ಳಲಾಗುತ್ತೆ. ಸಿಬ್ಬಂದಿಗಳಿಗೆ ಎಲ್ಲಾ ಮಾಹಿತಿ ಜಿಲ್ಲಾ ಮಟ್ಟದಲ್ಲಿ ಒದಗಬೇಕು. ೧೪೬ ತಾಲೂಕಿನಲ್ಲಿಆಸ್ಪತ್ರೆ ಅಪ್ ಗ್ರೇಡ್ ಮಾಡಲಾಗುವುದು. ಬೆಂಗಳೂರಿನಲ್ಲಿ ಹೊಸದಾಗಿ ಪ್ರಯತ್ನ ಮಾಡಲಾಗಿದೆ. ಎಲ್ಲಿ ಲಭ್ಯತೆ ಇದೆ ಅಲ್ಲಿ ಮಾಡುತ್ತೇವೆ. ನಾಲ್ಕು ಕ್ಷೇತ್ರಗಳಿಗೆ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದರು.
ಅನ್ ಲಾಕ್ ವಿಚಾರದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಎಲ್ಲರ ಜೊತೆ ಚರ್ಚೆ ಮಾಡ್ತಾರೆ. ಬಳಿಕ ಅನ್ ಲಾಕ್ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ತಾರೆ. ಕೇಸ್ ಕಡಿಮೆಯಾದ್ರು ಟ್ರಯಾಸಿಂಗ್ ಸೆಂಟರ್ಸ್ ಗಳನ್ನ ಹಾಗೂ ಕೋವಿಡ್ ಕೇರ್ ಸೆಂಟರ್ ಗಳನ್ನ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರವೇ ಲಸಿಕೆ ಕೊಡ್ತಿವಿ ಅಂದಿದೆ, ಈ ಕಾರಣ ನಾವೂ ಲಸಿಕೆ ಖರೀದಿ ಮಾಡಲ್ಲ. ಈಗಾಗಲೇ ೩ ಕೋಟಿ ಲಸಿಕೆಗೆ ಆರ್ಡರ್ ಕೊಟ್ಟಿರೋದನ್ನ ಏನ್ ಮಾಡಬೇಕು ಅನ್ನೋದನ್ನ ನೋಡ್ತಿವಿ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಬ್ರಾಹ್ಮಣರ ವಿರುದ್ಧ ನಟ ಚೇತನ್ ಹೇಳಿಕೆ: ಪೊಲೀಸ್ ಆಯುಕ್ತರಿಗೆ ಬಾಹ್ಮಣ ಸಮುದಾಯದಿಂದ ದೂರು
೭೩೦೦ ಆ್ಯಕ್ಸಿಜನ್ ಬೆಡ್ ಗಳನ್ನ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ನಿರ್ಮಾಣಕ್ಕೆ ಸರ್ಕಾರದಿಂದ ಸುಮಾರು ಎರಡರಿಂದ ಮೂರು ಕೋಟಿ ನೀಡಲಿದ್ದೇವೆ. ೫೮ ಲಸಿಕೆ ಗಳು ಕೇಂದ್ರ ಸರ್ಕಾರದಿಂದ ಈ ತಿಂಗಳು ಬರುತ್ತೆ. ಖಾಸಗಿ ಕಂಪನಿಗಳಿಂದ ೨೦ ಲಕ್ಷ ಲಸಿಕೆ ಈ ತಿಂಗಳು ಬರಲಿದೆ. ೧೮ ವರ್ಷ ಮೇಲ್ಪಟ್ಟವರಲ್ಲಿ ಫ್ರಂಟ್ ಲೈನ್ ಹಾಗೂ ಪ್ರಾಮುಖ್ಯತೆಗೆ ಅನುಗುಣವಾಗಿ ನೀಡಲಿದ್ದೇವೆ.
೩ ನೇ ಅಲೆಗೆ ಬೇಕಾಗಿರುವ ೫ ಲಕ್ಷ ರೆಮಿಡಿಸಿವರ್ ಸ್ಟಾಕ್ ಮಾಡಿಕೊಳ್ಳುತ್ತೇವೆ. ಬ್ಲಾಕ್ ಫಂಗಸ್ ಗೆ ಬೇಕಾಗಿರುವ ಲೈಪೋಸೋಮಲ್ ಆ್ಯಂಪೋಟೆರಿಸಿನ್ ಬಿ ಬೇಕಾಗಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಬರ್ತಿದೆ. ಜೀನೋಮ್ ಸ್ಕೀಕ್ವೆನ್ಸಿಂಗ್ ಲ್ಯಾಬ್ ಗಳನ್ನ ರಾಜ್ಯದ್ಯಂತ ಏಳು ಕಡೆ ಹೊಸದಾಗಿ ತೆರೆಯುತ್ತೇವೆ. ಕೋವಿಡ್ ರೂಪಾಂತರಿ ಪತ್ತೆಹಚ್ಚಲು ಉಪ ಸಮಿತಿ ರಚನೆ ಮಾಡುತ್ತೇವೆ. ನಿಮ್ಹಾನ್ಸ್ ವೈದ್ಯ ಡಾ.ರವಿ ಇದಕ್ಕೆ ಅಧ್ಯಕ್ಷರಾಗಿರುತ್ತಾರೆ. ಎಂಟು ಜನವುಳ್ಳ ಕಮಿಟಿಯಲ್ಲಿ ಹೆಚ್ ಸಿಜಿಯಿಂದ ಡಾ. ವಿಶಾಲ್ ರಾವ್, ಡಾ.ಅಂಬಿಕಾ ಸೇರಿದಂತೆ ಹಲವು ವೈದ್ಯರು ಇರಲಿದ್ದಾರೆ. ಕೋವಿಡ್ ಮ್ಯೂಟೇಶನ್ ಬಗ್ಗೆ ಇದರಿಂದ ಗೊತ್ತಾಗುತ್ತೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ