• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅರ್ಚಕರಿಗೆ ಪ್ರತ್ಯೇಕವಾಗಿ ಲಸಿಕೆ ಕೊಡಿಸಿದ ಡಿಸಿಎಂ: ಜಾತಿ ಆಧಾರಿತ ವ್ಯಾಕ್ಸಿನೇಷನ್​​ನಿಂದ ಭುಗಿಲೆದ್ದ ವಿವಾದ!

ಅರ್ಚಕರಿಗೆ ಪ್ರತ್ಯೇಕವಾಗಿ ಲಸಿಕೆ ಕೊಡಿಸಿದ ಡಿಸಿಎಂ: ಜಾತಿ ಆಧಾರಿತ ವ್ಯಾಕ್ಸಿನೇಷನ್​​ನಿಂದ ಭುಗಿಲೆದ್ದ ವಿವಾದ!

ಅರ್ಚಕರಿಗೆ ಲಸಿಕೆ ಹಾಕಿಸುತ್ತಿರುವುದು.

ಅರ್ಚಕರಿಗೆ ಲಸಿಕೆ ಹಾಕಿಸುತ್ತಿರುವುದು.

'ನಿನ್ನೆ ದಲಿತರು ಲಸಿಕೆ ಪಡೆಯಲು ಹೋದಾಗ ನಿಮಗೆ ಇಲ್ಲಿ ಲಸಿಕೆ ಹಾಕಲ್ಲ ಎಂದು ಹೇಳಿ ಕಳಿಸಿದ್ದಾರೆ.'

  • Share this:

ಬೆಂಗಳೂರು: ದೇಶಾದ್ಯಂತ ಲಸಿಕಾ ಅಭಿಯಾನ ಸಮೋರಾಪಾದಿಯಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಲಸಿಕೆ ಕೊರತೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಮರ್ಪಕವಾಗಿ ಸಿಗುತ್ತಿಲ್ಲ. ವ್ಯಾಕ್ಸಿನ್​​ ಕೊರತೆಯಿಂದ ಜನ ಬೇಸತ್ತಿದ್ದು, ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್​ನಾರಾಯಣ ಅವರು ಮಲ್ಲೇಶ್ವರಂನಲ್ಲಿ ದೇವಸ್ಥಾನಗಳ ಅರ್ಚಕರಿಗಾಗಿಯೇ ಲಸಿಕೆ ಕಾರ್ಯಕ್ರಮ ಆಯೋಜಿಸಿದ್ದಾರೆ. ವಿವಿಧ ದೇವಸ್ಥಾನಗಳ ಅರ್ಚಕರಿಗೆ ಮಾತ್ರ ಪ್ರತ್ಯೇಕವಾಗಿ ಡಿಸಿಎಂ ಲಸಿಕೆ ಕೊಡಿಸಿರುವುದು ವಿವಾದಕ್ಕೆ ಗುರಿಯಾಗಿದೆ.


ಡಿಸಿಎಂ ಅಶ್ವಥ್​ ನಾರಾಯಣ ಅವರ ನಡೆಯನ್ನು ರಾಜ್ಯ ಕಾಂಗ್ರೆಸ್​ ತೀವ್ರವಾಗಿ ಖಂಡಿಸಿದೆ. ಎಐಸಿಸಿಯ ಸಾಮಾಜಿಕ ಜಾಲತಾಣ ಸಂಚಾಲಕಿ ಲಾವಣ್ಯ ಬಲ್ಲಾಳ್​ ಅವರು ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಅವರೇ ಬ್ರಾಹ್ಮಣರಿಗೆ ಮಾತ್ರ ವಿಶೇಷ ಲಸಿಕಾ ಅಭಿಯಾನ ನಡೆಸಿರುವುದು ಎಷ್ಟು ಸರಿ. ಸಾಮಾನ್ಯ ಜನರು ಲಸಿಕೆ ಪಡೆಯಲು ಸೆಂಟರ್​ಗಳಿಗೆ ಅಲೆದಾಡುತ್ತಿದ್ದಾರೆ. ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆಗಾಗಿ ನೂಕುನುಗ್ಗಲು ಸಂಭವಿಸಿದೆ. ಆದರೆ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ನೀವು ಸುಲಭವಾಗಿ ಲಸಿಕೆ ಸಿಗುವಂತೆ ಮಾಡಿದ್ದೀರಿ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಲಸಿಕೆ ಕಾರ್ಯಕ್ರಮ ಈಗ ಜಾತಿ ಆಧಾರಿತವಾಗಿದೆಯೇ. ಇದೇ ರೀತಿ ಬೇರೆ ಜಾತಿಯವರಿಗೂ ಲಸಿಕೆ ಅಭಿಯಾನ ಮಾಡುತ್ತೀರಾ. ಗೌಡ, ಕುರುಬ, ಶೆಟ್ಟಿ ಅಂತ ಜಾತಿ ಆಧಾರಿತವಾಗಿ ಲಸಿಕೆ ನೀಡುತ್ತೀರಾ ಎಂದು ಲಾವಣ್ಯ ಬಲ್ಲಾಳ್​ ಅವರು ಟ್ವೀಟ್​ ಮೂಲಕ ಪ್ರಶ್ನಿಸಿದ್ದಾರೆ.



ಕಾಂಗ್ರೆಸ್​ ನಾಯಕ ಬಿ.ಕೆ ಹರಿಪ್ರಸಾದ್ ಸಹ ಜಾತಿ ಆಧಾರದ ಮೇಲೆ ಲಸಿಕೆ ವಿತರಣೆಯಾಗ್ತಿದೆ ಎಂದು ಆರೋಪಿಸಿ ಕಿಡಿಕಾಡಿದರು. ಮಲ್ಲೇಶ್ವರ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ಜಾತಿ ಆಧಾರದ ಮೇಲೆ ಲಸಿಕೆ ಹಾಕಲಾಗ್ತಿದೆ. ನಿನ್ನೆ ದಲಿತರು ಲಸಿಕೆ ಪಡೆಯಲು ಸ್ಕೂಲ್ ಬಳಿ ಹೋದಾಗ ನಿಮಗೆ ಇಲ್ಲಿ ಲಸಿಕೆ ಹಾಕಲ್ಲ ಎಂದು ಹೇಳಿ ಕಳಿಸಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಜಾತಿ ಆಧಾರದ ಮೇಲೆ ಲಸಿಕೆ ಹಾಕಿಸುತ್ತಿದ್ದಾರೆ. ಹೀಗೆ ಮಾಡಬಾರದು, ಇದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.


ಜಾತಿ ಆಧಾರದ ಮೇಲೆ ವ್ಯಾಕ್ಸಿನ್ ನೀಡುತ್ತಿದ್ದಾರೆ. ಈ ರೀತಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ಡಿಸಿಎಂ ಮಾಡ್ತಿದ್ದಾರೆ. ಮಲ್ಲೇಶ್ವರಂನ ಗರ್ಲ್ಸ್ ಸ್ಕೂಲ್ ಲ್ಲಿ ದಲಿತರಿಗೆ ವ್ಯಾಕ್ಸಿನ್ ಕೊಟ್ಟಿಲ್ಲ. ಕಾರ್ಪೊರೇಷನ್ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದಾರೆ. ಒಂದು ಜಾತಿಗೆ ವ್ಯಾಕ್ಸಿನ್ ಕೊಡುವುದು ಸರಿಯಲ್ಲ. ಅವರಿಗೂ ಕೊಡಬಾರದು ಎಂದು ಹೇಳುವುದು ಸರಿಯಲ್ಲ. ನಮ್ಮ ಕಾರ್ಯಕರ್ತರು ದೂರು ಕೊಟ್ಟರೆ ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಪೊಲೀಸರು ದೇಶಕ್ಕೆ ಕೆಲಸ ಮಾಡಬೇಕು,ಬಿ ಜೆಪಿ ನಾಯಕರಿಗೆ ಅಲ್ಲ ಎಂದು ಬಿ.ಕೆ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿದರು.


ಇದನ್ನೂ ಓದಿ: Karnataka Lockdown Extension | ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್ ಫಿಕ್ಸ್​; ಸಿಎಂ ಯಡಿಯೂರಪ್ಪ ಘೋಷಣೆ


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇನ್ನು ರಾಜ್ಯದಲ್ಲಿ ಜೂನ್​ 7ರ ನಂತರವೂ ಲಾಕ್​​ಡೌನ್​ ವಿಸ್ತರಣೆ ಆಗಲಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಸ್ಪಷ್ಟಪಡಿಸಿದ್ದಾರೆ. ಕೆಲವೊಂದಿಷ್ಟು ಸಡಿಲಿಕೆ ನೀಡುವ ಸೂಚನೆಯನ್ನೂ ನೀಡಿದ್ದಾರೆ.

Published by:Kavya V
First published: