Darshan Fans- ದರ್ಶನ್ ಅಭಿಮಾನಿಗಳಿಂದ ನನ್ನ ಕಿವಿ ಹಾಳಾಯ್ತು: ಸಾಹಿತಿ ಗೊ.ರು.ಚ. ಬೇಸರ

Go Ru Channabasappa recalls an incident 2 years back- ಎರಡು ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಮಾಡಿದ ಆ ಒಂದು ಕೆಲಸದಿಂದ ಹಿರಿಯ ಸಾಹಿತಿ ಗೊ.ರು. ಚನ್ನಬಸವಪ್ಪ ಅವರ ಕಿವಿಯ ಶ್ರವಣಶಕ್ತಿ ಹೋಯಿತಂತೆ…

ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್

  • Share this:
ಬೆಂಗಳೂರು, ನ. 17: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಂದ (Challenging Star Darshan's fans) ನನ್ನ ಕಿವಿಗಳು ಶ್ರವಣಶಕ್ತಿ ಕಳೆದುಕೊಂಡಿವೆ ಎಂದು ಹಿರಿಯ ಕನ್ನಡ ಸಾಹಿತಿ ಗೊ.ರು. ಚನ್ನಬಸಪ್ಪ (Kannada writer Go Ru Channabasappa) ಹೇಳಿದ್ದಾರೆ. ನಗರದ ರಮಣಶ್ರೀ ಹೋಟೆಲ್​ನಲ್ಲಿ ನಡೆದ ರಮಣಶ್ರೀ ಶರಣರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಹಿರಿಯ ಸಾಹಿತಿಗಳು, ದರ್ಶನ್ ಅಭಿಮಾನಿಗಳು ಹೊಡೆದ ಪಟಾಕಿಯಿಂದ ನನ್ನ ಕಿವಿ ಹಾಳಾಗಿದೆ (Ears gone deaf due to cracker burst) ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ, ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ, ಆಕಸ್ಮಿಕವಾಗಿ ಆಗಿದ್ದು ಎಂದೂ ಅವರು ಸ್ಪಷ್ಟಪಡಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ರಮಣಶ್ರೀ ಪ್ರತಿಷ್ಠಾನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆಯಿತು.

ಪ್ರಖ್ಯಾತ ಜಾನಪದ ಸಾಹಿತಿಯೂ ಆದ ಗೊ.ರು. ಚನ್ನಬಸವಪ್ಪ ತಮ್ಮ ಭಾಷಣ ಆರಂಭದಲ್ಲೇ ಪಟಾಕಿ ಪ್ರಸಂಗ ಪ್ರಸ್ತಾಪಿಸಿದರು. ಎರಡು ನಿಮಿಷ ಮಾತನಾಡಿ ಫ್ಯಾನ್ಸ್ ಬಗ್ಗೆ ಅಸಮಾಧಾನ ತೋಡಿಕೊಂಡು, ಅದು ಆಕಸ್ಮಿಕ ಘಟನೆ ಎಂದು ಹೇಳಿ ಎರಡು ನಿಮಿಷಕ್ಕೆ ಭಾಷಣ ಮುಗಿಸಿದರು.

ಪಟಾಕಿ ಸದ್ದಿಗೆ ಹೋಯ್ತು ಕಿವಿ:

ತಮಗಿಂತ ಮುಂಚೆ ಮಾತನಾಡಿದ ಗಣ್ಯರ ಮಾತು ನನಗೆ ಕೇಳಿಸಲಿಲ್ಲ. ಅದಕ್ಕೆ ಕಾರಣ, ಎರಡು ವರ್ಷದ ಹಿಂದೆ ದರ್ಶನ್ ಹುಟ್ಟು ಹಬ್ಬ ಆಚರಿಸಲು ಅವರ ಮನೆ ಬಳಿ ಅಭಿಮಾನಿಗಳು ಸೇರಿದ್ದರು. ಆ ವೇಳೆ ಭಾರೀ ದೊಡ್ಡ ಪಟಾಕಿ ಹೊಡೆದರು. ಆ ಗುಂಪಿನಲ್ಲಿ ಯಾರು ಪಟಾಕಿ ಹೊಡೆದರು ಅಂತ ಗೊತ್ತಿಲ್ಲ. ಆ ಪಟಾಕಿಯ ದೊಡ್ಡ ಶಬ್ದಕ್ಕೆ ನನ್ನ ಕಿವಿ ತಮಟೆ ಹಾಳಾಯಿತು ಎಂದು ಹಿರಿಯ ಸಾಹಿತಿ ವಿವರಿಸಿದರು.

ಮನವಿ ಮಾಡಿದ ಬಳಿಕ ಸರಿಹೋಯಿತು:

ನಮ್ಮ ಮನೆ ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ಮನೆ ಬಳಿಯೇ ಇರುವುದು. ಆ ಘಟನೆ ಬಳಿಕ ದರ್ಶನ್​ಗೆ ಪತ್ರ ಬರೆದೆ. ಮುಂದಿನ ಬರ್ತ್​ಡೇಗೆ ಹೀಗೆ ಆಗಬಾರದು ಎಂದು ಕೇಳಿಕೊಂಡೆ. ಮುಂದಿನ ಹುಟ್ಟು ಹಬ್ಬ ಆಚರಣೆ ಮಾಡುವಾಗ ಅಕ್ಕಪಕ್ಕದವರಿಗೆ ತೊಂದರೆ ಆಗಬಾರದು ಎಂದು ದೊಡ್ಡ ಬೋರ್ಡ್ ಹಾಕಿದರು. ಪೊಲೀಸರು ದೊಡ್ಡ ಬ್ಯಾರಿಕೇಡ್ ಹಾಕಿದರು. ಯಾವುದೇ ಪಟಾಕಿ ಶಬ್ದವೂ ಆಗಲಿಲ್ಲ ಎಂದು ಅವರು ತಿಳಿಸಿದರು.

ಎರಡು ವರ್ಷ ಹಿಂದೆ ನಡೆದದ್ದು ಆಕಸ್ಮಿಕ ಘಟನೆ. ಇದರಲ್ಲಿ ಯಾರನ್ನೂ ಅಪರಾಧಿ ಅಂತ ದೂರುವಂತಿಲ್ಲ. ನನಗೂ ವಯಸ್ಸಾಗಿದೆ. ಸಹಜವಾಗಿಯೇ ಶ್ರವಣದೋಷ ಆಗಿರಬಹುದು ಎಂದು ಕೊನೆಯಲ್ಲಿ ಗೊ.ರು. ಚನ್ನಬಸಪ್ಪ ಸ್ಪಷ್ಟನೆ ಕೊಟ್ಟು ಭಾಷಣ ಮುಗಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರೇ ನಿಮ್ಮ ರಾಜಕೀಯ ಅನುಭವ ಗಾಳಿಗೆ ತೂರಬೇಡಿ: ಸಚಿವ V.Somanna ವಾಗ್ದಾಳಿ

ಡಾ. ಗುರುರಾಜ್ ಕರಜಗಿಗೆ ಪ್ರಶಸ್ತಿ:

ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ ಅವರಿಗೆ ಈ ಸಂದರ್ಭದಲ್ಲಿ ರಮಣಶ್ರೀ ಶರಣ ಪ್ರಶಸ್ತಿ ನೀಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಎಸ್ ಷಡಕ್ಷರಿ ಅವರ “ಕ್ಷಣ ಹೊತ್ತು ಅಣಿಮುತ್ತು ಭಾಗ-9” ಪುಸ್ತಕವನ್ನ ಲೋಕಾರ್ಪಣೆ ಮಾಡಲಾಯಿತು.

ಬಸವಣ್ಣನ ಒಂದು ವಚನವನ್ನಾದರೂ ರೂಢಿಸಿಕೊಳ್ಳಿ: ಸಿಎಂ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಯಕಯೋಗಿ ಬಸವಣ್ಣ ಅವರ ತತ್ವಾದರ್ಶಗಳು ಈಗಲೂ ಬಹಳ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು. ಬಸವಣ್ಣ ಅವರು ಕಾಯಕವೇ ಕೈಲಾಸ ಎಂದು ಹೇಲಿ ಬದುಕುವ ದಾರಿಯನ್ನ ತೋರಿಸಿಕೊಟ್ಟಿದ್ಧಾರೆ. ಕಾಯಕವೇ ಕೈಲಾಸ ಎಂದರೆ ವರ್ಕ್ ಈಸ್ ವರ್ಷಿಪ್ (Work is Worship) ಅಲ್ಲ, ಅದು ವರ್ಕ್ ಈಸ್ ಹೆವನ್ (Work is Heaven) ಎಂದು. ಈ ಒಂದು ವಚನದಲ್ಲಿ ಎಲ್ಲವೂ ಇದೆ. ಅದನ್ನ ಸರಿಯಾಗಿ ತಿಳಿದುಕೊಂಡರೆ ಮಾತ್ರ ಅರ್ಥ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬಸವಣ್ಣ ಅವರು 21 ಸಾವಿರ ವಚನಗಳನ್ನ ಬರೆದಿದ್ದಾರೆ. ಅದರಲ್ಲಿ ಒಂದು ವಚನವನ್ನಾದರೂ ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಾಕು ಎಂದು ಬೊಮ್ಮಾಯಿ ತಿಳಿಹೇಳಿದರು.

ವರದಿ: ಕೃಷ್ಣ ಜಿ.ವಿ.
Published by:Vijayasarthy SN
First published: