ಅಪ್ಪು-ರಾಘಣ್ಣರಿಂದ ಖರೀದಿಸಿದ್ದ ಆಸ್ತಿಯನ್ನು ದರ್ಶನ್​ಗೆ ಉಮಾಪತಿ ಕೊಡದಿದ್ದದ್ದೇ ವೈಮನಸ್ಸಿಗೆ ಕಾರಣವಾಯ್ತಾ?

ದೊಡ್ಮನೆಯವರ ಆಸ್ತಿಯನ್ನ ದರ್ಶನ್ ಅವರಿಗೆ ಕೊಟ್ಟರೆ ಬೇರೆಯದ್ದೇ ಆಯಾಮ ಪಡಿಯುತ್ತೆ ಎಂದು ನಾನು ಕೊಡಲಿಲ್ಲ ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.

ಉಮಾಪತಿ-ದರ್ಶನ್​

ಉಮಾಪತಿ-ದರ್ಶನ್​

  • Share this:
ಬೆಂಗಳೂರು: ಅರುಣಾಕುಮಾರಿ ಎಂಬುವರು ನನಗೆ 25 ಕೋಟಿ ವಂಚಿಸಲು ಯತ್ನಿಸಿದ್ದಾರೆ ಎಂದು ನಟ ದರ್ಶನ್​​ ಠಾಣೆಗೆ ದೂರು ನೀಡಿದಾಗಿನಿಂದ ಶುರುವಾದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಿರ್ಮಾಪಕ ಉಮಾಪತಿ ಜೊತೆ ದರ್ಶನ್​​ ಜಗಳ-ಸಂಧಾನ, ನಿರ್ದೇಶಕ ಇಂದ್ರಜಿತ್​ ಆರೋಪಗಳಿಂದ ಇಡೀ ಪ್ರಕರಣ ಗೋಜಲುಗೋಜಲಾಗಿದೆ. ಇಂದು ಮಾಧ್ಯಮಗಳ ಎದುರು ಮಾತನಾಡಿದ ನಿರ್ಮಾಪಕ ಉಮಾಪತಿ, ನನ್ನ ಮತ್ತು ದರ್ಶನ್​​ ಮಧ್ಯೆ ಆಸ್ತಿ ಖರೀದಿ ವಿಚಾರ ಭಿನ್ನಾಭಿಪ್ರಾಯ ಬಂದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ನನ್ನ ಹಾಗೂ ದರ್ಶನ್​ ಮಧ್ಯೆ ಏನು ಸಮಸ್ಯೆ ಆಗಿರಲಿಲ್ಲ. ಆಸ್ತಿ ವಿಚಾರವಾಗಿ ನನ್ನ ಬಳಿ ದರ್ಶನ್ ಕೇಳಿದ್ದರು. ಆದರೆ ಅದನ್ನು ನಾನು ಕೊಡೋದಿಲ್ಲ ಅಂದಿದ್ದೆ. ಅಲ್ಲಿಗೆ ದರ್ಶನ್ ಸುಮ್ಮನಾಗಿದ್ರು. ಆ ಆಸ್ತಿಯನ್ನು ನಾನು ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್​​ಕುಮಾರ್ ಅವರಿಂದ ಖರೀದಿಸಿದ್ದೆ. ನಮ್ಮ ದೊಡ್ಮನೆಯವರ ಆಸ್ತಿ ಅದು, ಹಾಗಾಗಿ ನಾನು ಕೊಟ್ಟಿರಲಿಲ್ಲ. ಆಸ್ತಿ ಕೊಟ್ಡಿಲ್ಲ ಅಂತ ದರ್ಶನ್ ಸರ್ ಕೋಪ ಮಾಡಿಕೊಂಡಿಲ್ಲ ಅಂತ ಅನ್ನಿಸ್ತಿದೆ. ದೊಡ್ಮನೆಯವರ ಆಸ್ತಿಯನ್ನ ದರ್ಶನ್ ಅವರಿಗೆ ಕೊಟ್ಟರೆ ಬೇರೆಯದ್ದೇ ಆಯಾಮ ಪಡಿಯುತ್ತೆ ಎಂದು ನಾನು ಕೊಡಲಿಲ್ಲ ಎಂದು ತಿಳಿಸಿದರು.

ಯಾವುದು ಆ ಆಸ್ತಿ?

ರೆಸಿಡೆನ್ಸಿ ರಸ್ತೆಯಲ್ಲಿರುವ ಪ್ರೆಸ್ಟೀಜ್ ಟವರ್ ನಲ್ಲಿದ್ದ ಫ್ಲ್ಯಾಟ್​​ನ ಪುನೀತ್, ರಾಘವೇಂದ್ರ ರಾಜ್ ಕುಮಾರ್ ಅವರಿಂದ  ನಿರ್ಮಾಪಕ ಉಮಾಪತಿ ಖರೀದಿ ಮಾಡಿದ್ದರು. ಪ್ರೆಸ್ಟೀಜ್ ಟವರ್ ನ ಗ್ರೌಂಡ್ ಪ್ಲೋರ್ 6 -7 ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಜಂಟಿಯಾಗಿ ಖರೀದಿ ಮಾಡಿದ್ದರು. ಅದೇ ಕಮರ್ಷಿಯಲ್  ಪ್ರಾಪರ್ಟಿಯನ್ನು 4 ವರ್ಷಗಳ ಹಿಂದೆ ಉಮಾಪತಿ ಖರೀದಿ ಮಾಡಿದ್ದಾರೆ. ಅದನ್ನು ನಟ ದರ್ಶನ್ ತಮಗೆ ನೀಡುವಂತೆ ಕೇಳಿದ್ದು, ಅದಕ್ಕೆ ಉಮಾಪತಿ ಇಲ್ಲ ಎಂದಿದ್ದರು.

ಇದನ್ನೂ ಓದಿ: ದರ್ಶನ್ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾನು ದಲಿತನೇ ಅಲ್ಲ ಎಂದ ವೇಟರ್ ಬಿಚ್ಚಿಟ್ಟರು ಅಸಲಿ ಕಥೆ

ಆಸ್ತಿ ಖರೀದಿ ವಿಚಾರವೇ ವೈಮನಸ್ಸಿಗೆ ಕಾರಣವಾಯಿತಾ ಎಂಬ ಚರ್ಚೆ ಹುಟ್ಟುಹಾಕುವಂತೆ ಹೇಳಿಕೆ ನೀಡಿದ ನಿರ್ಮಾಪಕ ಉಮಾಪತಿ ನಂತರ ಆ ರೀತಿ ಆಗಿಲ್ಲ ಅಂತಲೂ ಹೇಳಿದ್ದಾರೆ. ಇನ್ನು ಅರುಣಾ ಕುಮಾರಿ ವಿಷಯವಾಗಿ ಮಾತನಾಡಲ್ಲ, ಆ ಪ್ರಕರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನನ್ನ ಬ್ಯಾನರ್​ ಸಿನಿಮಾ ರಾಬರ್ಟ್​​ನಲ್ಲಿ ದರ್ಶನ್​ ಅವರು ನಟಿಸಿದ್ದಾರೆ. ನಾನು ದರ್ಶನ್​ ಸರ್​ನ ಬಿಟ್ಟುಕೊಡುವ ಮಾತಿಲ್ಲ. ಅಣ್ಣ-ತಮ್ಮಂದಿರ ಮಧ್ಯೆಯೇ ಆಸ್ತಿ ವಿವಾದ ಬರುತ್ತದೆ. ನಂದು ದರ್ಶನ್​ ಅವರದ್ದು ಅಂತಹದ್ದೇ ಎನ್ನುವ ಮೂಲಕ ವಿವಾದವನ್ನು ತಣ್ಣಗಾಗಿಸಲು ಯತ್ನಿಸಿದ್ದಾರೆ.
Published by:Kavya V
First published: