ನೀರಿಗೋಸ್ಕರ ನಡೆಯುತ್ತೇನೆ, ಇವರಿಗೆ ಪಕ್ಷ ಮುಖ್ಯವೇ ಹೊರತು ಜನರ ಪ್ರಾಣ ಅಲ್ಲ: DK Shivkumar

ನಿಗದಿಯಾಗಿರುವ ಪಾದಯಾತ್ರೆ (Mekedatu Padaytre) ದಿನಾಂಕ ಬದಲಾಗಲ್ಲ. ಎಲ್ಲ ಕೋವಿಡ್ ಮಾರ್ಗಸೂಚಿ (COVID Guidelines) ಗಳನ್ನು ಅನುಸರಿಸಿ ನಾವು ಪಾದಯಾತ್ರೆ ಮಾಡುತ್ತೇವೆ. ನಾವು ಮಾತ್ರ ಓಡಾಡೋದು ಇವರಿಗೆ ಕಾಣಿಸುತ್ತಾ?

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ನಿಗಧಿಯಾಗಿರುವ ಪಾದಯಾತ್ರೆ (Mekedatu Padaytre) ದಿನಾಂಕ ಬದಲಾಗಲ್ಲ. ಎಲ್ಲ ಕೋವಿಡ್ ಮಾರ್ಗಸೂಚಿ (COVID Guidelines) ಗಳನ್ನು ಅನುಸರಿಸಿ ನಾವು ಪಾದಯಾತ್ರೆ ಮಾಡುತ್ತೇವೆ. ನಾವು ಮಾತ್ರ ಓಡಾಡೋದು ಇವರಿಗೆ ಕಾಣಿಸುತ್ತಾ? ಬೇರೆ ಯಾರೂ ಓಡೋಡಾದು ಇವರಿಗೆ ಕಾಣಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President D K Shivakumar) ಪ್ರಶ್ನೆ ಮಾಡಿದ್ದಾರೆ. ನಾನು ಪಾದಯಾತ್ರೆ ಯಾಕೆ ಅಂತ ಕರೀತಿರಿ. ನಾನು ನೀರಿಗಾಗಿ ನಡೆಯುತ್ತಿದ್ದೇವೆ. ಕಾವೇರಿ ತಾಯಿಯ ನೀರನ್ನು (Cauvery Water) ಬೆಂಗಳೂರಿಗೆ (Bengaluru) ತರಲು ನಡೆಯುತ್ತಿದ್ದೇವೆ . ಆ ನೀರನ್ನು ತರಬೇಕು ಅನ್ನೋದು ನಮ್ಮ ಉದ್ದೇಶ. ಆ ನೀರನ್ನು ಇವರಿಗೂ ಸಹ ಕುಡಿಸುತ್ತೇವೆ. ನಾನು ಮೆರವಣಿಗೆ, ಧರಣಿ ಯಾವುದನ್ನೂ ಮಾಡಲ್ಲ. ನೀರಿಗಾಗಿ ನಡೆಯುತ್ತಿದ್ದೇವೆ ಎಂದು ಹೇಳಿದರು.

ವೀಕೆಂಡ್ ಕರ್ಫ್ಯೂ ನೋಟಿಸ್ ನಮಗೂ ಬಂದಿದೆ. ಅದನ್ನು ನಾನು ಗಮನಿಸುತ್ತಿದ್ದೇನೆ. ಬೆಂಗಳೂರಿನ ನಡಿಗೆ ಉಸ್ತುವಾರಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರು ತೆಗೆದುಕೊಂಡಿದ್ದಾರೆ. ನಾನು ಬೆಂಗಳೂರಿನ ಶಾಸಕರು ಮತ್ತು ವಿಪಕ್ಷ ನಾಯಕರ ಜೊತೆ ಈ ಕುರಿತು ಮಾತನಾಡುತ್ತೇನೆ ಎಂದರು.

ಉತ್ತರ ಪ್ರದೇಶದಲ್ಲಿ ಕೊರೊನಾ ಇಲ್ಲವೇ?

ಬಿಜೆಪಿಯವರಿಗೆ ಪಕ್ಷ ಮುಖ್ಯವೇ ಹೊರತು ಜನರ ಪ್ರಾಣ ಅಲ್ಲ. ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೊಡ್ಡ ಸಮಾವೇಶ ಮಾಡುತ್ತಿದ್ದಾರೆ ಅಲ್ಲಿ ಕೊರೊನಾ ಇಲ್ಲವೇ? ನಮ್ಮನ್ನು ತಡೆಯಲು ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹರಿಹಾಯ್ದರು.

ಇದನ್ನೂ ಓದಿ:  Karnataka Weekend Curfew: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ: ನೈಟ್ ಕರ್ಫ್ಯೂ ವಿಸ್ತರಣೆ, ಶಾಲೆಗಳು ಬಂದ್​

ಯಡಿಯೂರಪ್ಪ, ಸಿಎಂ ಬೊಮ್ಮಾಯಿ ನಿರಂತರವಾಗಿ ಮದುವೆಗಳಲ್ಲಿ ಭಾಗಿಯಾಗ್ತಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ ಕೊರೊನಾ ನಡುವೆ ಜನಾಶೀರ್ವಾದ ಯಾತ್ರೆ ಮಾಡಿತು. ಮೊದಲು ಇವರ ಮೇಲೆ ಕೇಸ್ ಹಾಕಲಿ ಎಂದು ಆಗ್ರಹಿಸಿದರು.

ಬೀದಿ ಬದಿ ವ್ಯಾಪಾರಿಗಳು ಏನು ಮಾಡಬೇಕು?

ವರ್ತಕರು, ಡ್ರೈವರ್. ಬೀದಿ ವ್ಯಾಪಾರ ಮಾಡುವವರರನ್ನು ಬಿಜೆಪಿ ಸರ್ಕಾರ ಕೊಲೆ ಮಾಡುತ್ತಿದೆ. ಹೀಗೆ ನಿಯಮಗಳನ್ನು ತಂದ್ರೆ ಅವರೆಲ್ಲ ಏನು ಮಾಡಬೇಕು. ನನ್ನ ಮೇಲೆ , ಸಿಎಲ್ ಪಿ ನಾಯಕರ ಮೇಲೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕೇಸ್ ಹಾಕಿದ್ದಾರೆ. ಇವರೆಗೆ ಬೇರೆ ರೂಲ್ಸ್, ನಮಗೆ ಬೇರೆ ರೂಲ್ಸ್ , ಮೋದಿ ಅವರು ರ್ಯಾಲಿ ಮಾಡಿದ್ರು ಅದಕ್ಕೇನು ಹೇಳ್ತಾರೆ ಎಂದು ಪ್ರಶ್ನೆ ಹಾಕಿದರು.

ನಾವು ರ್ಯಾಲಿ ಮಾಡುತ್ತಿರುವುದು ಕುಡಿಯುವ ನೀರಿಗಾಗಿ. ಬೆಂಗಳೂರಿನ ಜನರಿಗೆ , ರೈತರಿಗೆ ಪ್ರಾರ್ಥನೆ ಮಾಡುತ್ತಿದ್ದೇವೆ. ನಮ್ಮ ಶಾಸಕಾಂಗ ಪಕ್ಷದ ನಾಯಕರು ಮಾತಾಡಿದ್ದಾರೆ ನಾಯಕರ ಬಳಿ ಮಾತಾಡುತ್ತೇನೆ, ಬೆಂಗಳೂರು ಶಾಸಕರ ಜೊತೆಗೆ ಮಾತಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:  ಮೋದಿ Rally ಮಾಡಬಹುದು, ಆದರೆ ನಾವು ಪಾದಯಾತ್ರೆ ಮಾಡಿದ್ರೆ ಕೊರೊನಾ ಬರುತ್ತಾ? Siddaramaiah ಕಿಡಿ

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ

ಜ.6ರಿಂದ ಮುಂದಿನ 2 ವಾರ ಬೆಂಗಳೂರಲ್ಲಿ 10, 11ನೇ ತರಗತಿ ಹೊರತು ಪಡಿಸಿ ಉಳಿದೆಲ್ಲಾ ತರಗತಿಗಳಿಗೆ ಆನ್​​ಲೈನ್​ ಕ್ಲಾಸ್​ ನಡೆಸಲು ನಿರ್ಧಾರ ಮಾಡಲಾಗಿದೆ. 10ನೇ ತರಗತಿ, ಪ್ರಥಮ ಪಿಯು ತರಗತಿಗಳು ಮಾತ್ರ ನಡೆಯಲಿದೆ. ಉಳಿದೆಲ್ಲಾ ಶಾಲೆಗಳು ಗುರುವಾರದಿಂದ ಬಂದ್​ ಆಗಲಿವೆ. ಶಾಲಾ-ಕಾಲೇಜು ವಿಚಾರ ಬೆಂಗಳೂರಿಗೆ ಮಾತ್ರ ಅನ್ವಯವಾಗಲಿದೆ.

ಮುಂದಿನ ಎರಡು ವಾರ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆವರೆಗೆ ವೀಕೆಂಡ್ ಕರ್ಫ್ಯೂ ಇರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರಷ್ಟು ಮಾತ್ರ ಅನುಮತಿ. ಡಬಲ್ ಡೋಸ್ ಲಸಿಕೆ ಕಡ್ಡಾಯ. ಹೊರಾಂಗಣ ಮದುವೆಯಲ್ಲಿ 200 ಮಂದಿ, ಒಳಾಂಗಣ ಮದುವೆಯಲ್ಲಿ 100 ಜನ ಮಾತ್ರ ಭಾಗಿಯಾಗಬಹುದು. ಇಡೀ ರಾಜ್ಯದಲ್ಲಿ ಎರಡು ವಾರ ನೈಟ್ ಕರ್ಪ್ಯೂ ಇರಲಿದೆ.
Published by:Mahmadrafik K
First published: