ಕುಡಿದ ಅಮಲಿನಲ್ಲಿ ನಡು ರಸ್ತೆಯಲ್ಲಿ ಜಗಳವಾಡಿದ ವಿದೇಶಿ ಪ್ರಜೆಗಳು

ಪೊಲೀಸರು ಕಾರನ್ನು ವಶಕ್ಕೆ ಪಡೆದ ಹಿನ್ನಲೆ ನನಗೆ ಕಾರ್ ಬೇಕೇ ಬೇಕು ಎಂದು  ಠಾಣೆಯಲ್ಲಿ ಹಠ ಹಿಡಿದು ಕುಳಿತ ಘಟನೆ ಕೂಡ ನಡೆಯಿತು

ನಡುರಸ್ತೆಯಲ್ಲಿ ಜಗಳವಾಡಿದ ವಿದೇಶಿಗರು

ನಡುರಸ್ತೆಯಲ್ಲಿ ಜಗಳವಾಡಿದ ವಿದೇಶಿಗರು

 • Share this:
  ಬೆಂಗಳೂರು (ಜು. 7): ವೇಗವಾಗಿ ಕಾರು ಚಲಾಯಿಸಿ ನಿಯಮ ಉಲ್ಲಂಘಟನೆ ಮಾಡಿದ್ದಲ್ಲದೇ, ನಡು ರಸ್ತೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಕಿತ್ತಾಟ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಕಬ್ಬನ್ ಪಾರ್ಕ್ ಠಾಣೆ ಸಿಗ್ನಲ್ ಬಳಿ ವಿದೇಶಿ ಯುವಕ ಮತ್ತು ಯುವತಿ ಜಗಳವಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಕರೆದು ಕೊಂಡು ಹೋದರು. ಕಾರ್ ನಲ್ಲಿ ಇಬ್ಬರು ಯುವಕರು ಸೇರಿದಂತೆ ಮೂವರು ಮಹಿಳೆಯರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  ಕುಡಿತ ಮತ್ತಿನಲ್ಲಿದ್ದ ಈ ಇಬ್ಬರು ವಿದೇಶದಿಗರು ಸಿಟಿವೈ ಜಂಕ್ಷನ್ ಬಳಿ ವೇಗವಾಗಿ ಕಾರನ್ನು ಚಾಲನೆ ಮಾಡಿದ್ದಾರೆ. ನಿಯಮ ಉಲ್ಲಿಂಘಿಸಿ ವೇಗವಾಗಿ ಕಾರು ಚಾಲನೆ ಮಾಡಿದ ಹಿನ್ನಲೆ ಸಿಟಿವೈ ಜಂಕ್ಷನ್ ಬಳಿ ಪೊಲೀಸರು ಕಾರನ್ನು ತಡೆದಿದ್ದಾರೆ. ಈ ವೇಳೆ ಇಬ್ಬರು ಕುಡಿದು ವಾಹನ ಚಾಲನೆ ಮಾಡಿರುವುದು ಪತ್ತೆಯಾಗಿದೆ. ಕುಡಿದು ವಾಹನ ಚಾಲಾಯಿಸಿದ್ದಲ್ಲದೇ ಈ ಇಬ್ಬರು ವೇಗವಾಗಿ ಕಾರು ಚಲಾಯಿಸಿ, ಪೊಲೀಸರೊಂದಿಗೂ ವಾಗ್ವಾದ ನಡೆಸಿದ್ದರು.

  ಇದನ್ನು ಓದಿ: ಬಾರ್ ಓಪನ್​ ಮಾಡ್ತೀರಾ ಆದರೆ, ಸ್ಕೂಲ್​​ ಯಾಕೆ ಇಲ್ಲ; ಕೂಡಲೇ ಶಾಲೆ‌ ತೆರೆಯುವಂತೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಒತ್ತಾಯ

  ಇದೇ ಹಿನ್ನಲೆ ಇವರನ್ನು ಕಬ್ಬನ್​​ ಪಾರ್ಕ್​ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
  ಡ್ರಿಂಕ್ ಅಂಡ್ ಡ್ರೈವ್, ನೆಗ್ಲಿಜೆನ್ಸ್ ಡ್ರೈವಿಂಗ್, ಚೇಸ್ ಅಂಡ್ ಕಾಟ್, ಮಿಸ್ ಬಿಹೇವಿಯರ್ ವಿತ್ ಪೊಲೀಸ್ ಆಫೀಸರ್ ಸೆಕ್ಷನ್ ಅಡಿ ದಂಡ 13.500 ದಂಡ ವಿಧಿಸಿದ್ದು, ಕೋರ್ಟ್ ನಲ್ಲಿ ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ.

  ಇನ್ನು ಪೊಲೀಸರು ಕಾರನ್ನು ವಶಕ್ಕೆ ಪಡೆದ ಹಿನ್ನಲೆ ನನಗೆ ಕಾರ್ ಬೇಕೆ ಬೇಕು ಎಂದು  ಠಾಣೆಯಲ್ಲಿ ಹಠ ಹಿಡಿದು ಕುಳಿತ ಘಟನೆ ಕೂಡ ನಡೆಯಿತು
  Published by:Seema R
  First published: