ಕ್ಯಾನ್ಸರ್ ರೋಗಿಗಳಿಗೆ ವರ ಹಾಗೂ ಶಾಪವಾಗಿದೆ ಈ ಸಿಟಿ ಸ್ಕ್ಯಾನ್: ರೋಗವನ್ನು ಆರಂಭದಲ್ಲೇ ಪತ್ತೆಹಚ್ಚುವುದು ಹೇಗೆ?

Cancer: ಕೆಲವು ಪರಿಸ್ಥಿತಿಗಳಲ್ಲಿ ಆರೋಗ್ಯ ಸಂಸ್ಥೆಗಳಲ್ಲಿ ಸೂಕ್ತ ವೈದ್ಯಕೀಯ ಸಲಕರಣೆಗಳು ಇಲ್ಲದಿರುವುದರಿಂದ ಕ್ಯಾನ್ಸರ್ ಚಿಕಿತ್ಸೆ ವಿಳಂಬವಾಗಿದೆ ಎಂದು ವಯದ್ಯರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

Covid 19: ಕೋವಿಡ್ ಸಾಂಕ್ರಾಮಿಕದ ನಂತರ ಇತ್ತೀಚಿನ ದಿನಗಳಲ್ಲಿ ಹಲವಾರು ಮಾರಣಾಂತಿಕ ರೋಗಗಳು ಪತ್ತೆಯಾಗುತ್ತಿದ್ದು ಕೋವಿಡ್‌ಗಾಗಿ ನಡೆಸುವ ಸಿಟಿ ಸ್ಕ್ಯಾನ್‌ನಿಂದಾಗಿ ಕ್ಯಾನ್ಸರ್ ರೋಗವು ಆರಂಭ ಹಂತದಲ್ಲೇ ಪತ್ತೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೋವಿಡ್ ಪತ್ತೆಹಚ್ಚಲು ನಡೆಸುವ ಸಿಟಿ ಸ್ಕ್ಯಾನ್‌ನಿಂದಾಗಿ ಹಲವಾರು ರೋಗಿಗಳಲ್ಲಿ ಕ್ಯಾನ್ಸರ್‌ನ ಆರಂಭದ ಲಕ್ಷಣಗಳನ್ನು ಕಂಡುಹಿಡಿಯಲಾಗುತ್ತಿದ್ದು ಇದರಿಂದ ಬಹಳಷ್ಟು ರೋಗಿಗಳನ್ನು ಪ್ರಾಣಾಪಾಯದಿಂದ ಕಾಪಾಡಬಹುದಾಗಿದೆ. ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಮತ್ತು ತಪ್ಪಾದ ಚಿಕಿತ್ಸೆಯಿಂದಾಗಿ ಕ್ಯಾನ್ಸರ್‌ ಪತ್ತೆಮಾಡುವಲ್ಲಿ ವಿಳಂಬವಾಗುತ್ತಿದ್ದು ಹೆಚ್ಚಿನ ರೋಗಿಗಳು ಅಪಾಯ ಸ್ಥಿತಿಯಲ್ಲಿದ್ದಾರೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.


ಗ್ರಾಮೀಣ ಭಾಗದಲ್ಲಿರುವ ಜನರು ಸೌಲಭ್ಯ ವಂಚಿತ ಆರೋಗ್ಯ ಕೇಂದ್ರಗಳಿಗೆ ತಪಾಸಣೆಗಾಗಿ ಹೋಗುತ್ತಿದ್ದು ಅವರಿಗೆ ಕೋವಿಡ್‌ಗಾಗಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಯಾವುದೇ ಸ್ಕ್ಯಾನಿಂಗ್ ನಡೆಸುತ್ತಿಲ್ಲ. ಹೀಗಾಗಿ ಕ್ಯಾನ್ಸರ್‌ನ 3 - 4ನೇ ಹಂತದಲ್ಲಿರುವ ರೋಗಿಗಳು ಅಪಾಯದಲ್ಲಿದ್ದಾರೆಂದು ವೈದ್ಯರು ಹೇಳುತ್ತಾರೆ.


ನ್ಯುಮೋನಿಯಾ, ಟಿಬಿ ಇರುವ ರೋಗಿಗಳಿಗೂ ಸೂಕ್ತ ವೈದ್ಯಕೀಯ ಸೌಲಭ್ಯ ನೀಡದಿರುವ ಕಾರಣ ಅಂತಹ ರೋಗಿಗಳಲ್ಲಿ ಗಂಭೀರವಾಗಿರುವ ಕ್ಯಾನ್ಸರ್ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂಬುದು ವೈದ್ಯಲೋಕದ ಕಳವಳವಾಗಿದೆ. ಫೋರ್ಟಿಸ್ ಆಸ್ಪತ್ರೆಯ ಕ್ಯಾನ್ಸರ್ ವೈದ್ಯರಾದ ನೀತಿ ರೈಜಾದಾ ಹೇಳುವಂತೆ ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ಹೆಚ್ಚಿನ ಮರಣ ಪ್ರಮಾಣ ವರದಿಯಾಗುತ್ತಿದ್ದು ಚಿಕಿತ್ಸೆ ವಿಳಂಬದಿಂದ ಬದುಕುಳಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆರಂಭ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಔಷಧೋಪಚಾರ ಮಾಡಿದಲ್ಲಿ, ಕ್ಯಾನ್ಸರ್ ರೋಗಿಗಳೂ ಇತರರಂತೆ ಸಾಮಾನ್ಯ ಜೀವನ ನಡೆಸಬಹುದಾಗಿದೆ. ಆದರೆ ರೋಗದ 3 - 4ನೇ ಹಂತದಲ್ಲಿ ರೋಗಿ ಆಸ್ಪತ್ರೆಗೆ ಬಂದರೆ ಬದುಕುಳಿಯುವ ಅವಕಾಶ ತುಂಬಾ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ.


ಇದನ್ನೂ ಓದಿ: ತೂಕ ಇಳಿಸೋಕೂ ಒಂದಷ್ಟು ಪ್ಲಾನ್​ಗಳಿವೆ, ಇದ್ರಲ್ಲಿ ನಿಮ್ಗೆ ಯಾವ್ದು ಸೂಟ್ ಆಗುತ್ತೆ ನೋಡಿ

ಇತ್ತೀಚೆಗೆ ತಾನೇ 70ರ ಹರೆಯದ ಗ್ರಾಮೀಣ ಭಾಗದ ರೋಗಿಯೊಬ್ಬರು ಏಪ್ರಿಲ್‌ ತಿಂಗಳಿನಿಂದಲೇ ರೋಗಲಕ್ಷಣಗಳನ್ನು ಹೊಂದಿದ್ದರೂ ಇವರಿಗೆ ಕೋವಿಡ್‌ ಎಂದು ತಪ್ಪಾಗಿ ಅರ್ಥೈಸಿ ಸಿಟಿ ಸ್ಕ್ಯಾನಿಂಗ್ ನಡೆಸಲಾಗಿತ್ತು. ಆಕೆಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಕ್ಯಾನ್ಸರ್ ಪತ್ತೆಹಚ್ಚಲಾಗಿರಲಿಲ್ಲ. ಎರಡನೇ ಸಲ ಕ್ಷಯರೋಗವೆಂದು ತೀರ್ಮಾನಿಸಿದರು. ಆದರೆ ಆಕೆ ಇನ್ನೂ ರೋಗಲಕ್ಷಣಗಳನ್ನು ಹೊಂದಿದ್ದರು. ಇದರಿಂದ ಆಕೆಗೆ ನ್ಯುಮೋನಿಯಾಕ್ಕೆ ಚಿಕಿತ್ಸೆ ನೀಡಿದ್ದ ವೈದ್ಯರನ್ನು ಭೇಟಿಯಾದರು. ಈಗಾಗಲೇ 4 ತಿಂಗಳು ವಿಳಂಬವಾಗಿತ್ತು. ಅವರ ಊರಿನಲ್ಲಿ ವೈದ್ಯಕೀಯ ತಪಾಸಣೆಗಳ ಕೊರತೆ ಇದ್ದುದರಿಂದ ರೋಗಿಯಲ್ಲಿ ಕ್ಯಾನ್ಸರ್ ರೋಗಲಕ್ಷಣ ಪತ್ತೆಹಚ್ಚಲಾಗಲಿಲ್ಲವೆಂದು ವೈದ್ಯೆ ತಿಳಿಸಿದ್ದಾರೆ.


ಬಿಬಿಎಂಪಿಯ ಕೋವಿಡ್-19 ಟಾಸ್ಕ್ ಫೋರ್ಸ್ ಸದಸ್ಯರಾಗಿರುವ ಹಿರಿಯ ಶ್ವಾಸಕೋಶಶಾಸ್ತ್ರಜ್ಞ ಡಾ. ರವೀಂದ್ರ ಮೆಹ್ತಾ ಹೇಳುವಂತೆ ಸಾಂಕ್ರಾಮಿಕದ ಈ ಸಮಯದಲ್ಲಿ ಕ್ಯಾನ್ಸರ್‌ನಂತಹ ಪ್ರಾಣಾಪಾಯವಿರುವ ರೋಗಗಳನ್ನು ಪತ್ತೆಹಚ್ಚುವಲ್ಲಿ ಕೋವಿಡ್ ಚಿಕಿತ್ಸೆ ನೆರವಾಗಿದ್ದು ಹಲವಾರು ರೋಗಿಗಳಿಗೆ ವರದಾನವಾಗಿದೆ ಎಂದು ತಿಳಿಸಿದ್ದಾರೆ. ಕೆಲವೊಬ್ಬರು ರೋಗಿಗಳು ರೋಗಲಕ್ಷಣಗಳನ್ನು ಕಡೆಗಣಿಸಿದ್ದು ವೈದ್ಯರನ್ನು ಭೇಟಿಯಾಗಲಿಲ್ಲ. ಇನ್ನು ಕೆಲವು ಪರಿಸ್ಥಿತಿಗಳಲ್ಲಿ ಆರೋಗ್ಯ ಸಂಸ್ಥೆಗಳಲ್ಲಿ ಸೂಕ್ತ ವೈದ್ಯಕೀಯ ಸಲಕರಣೆಗಳು ಇಲ್ಲದಿರುವುದರಿಂದ ಚಿಕಿತ್ಸೆ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.


ಎರಡೂ ಸಂದರ್ಭಗಳಲ್ಲಿ ರೋಗಿಯು ಕ್ಯಾನ್ಸರ್‌ನ ಮೂರನೇ ಹಂತದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದು ಇದರಿಂದ ಬದುಕುಳಿಯುವ ಅವಕಾಶ ಕಡಿಮೆ ಇರುತ್ತದೆ. ಇನ್ನು ಕೆಲವು ರೋಗಿಗಳು ಕೋವಿಡ್ ಸಮಯದಲ್ಲಿ ನಡೆಸುವ ಶ್ವಾಸಕೋಶದ ಸಿಟಿ ಸ್ಕ್ಯಾನ್‌ಗೆ ಒಳಗಾಗಿದ್ದು ಇದರಿಂದ ಆರಂಭ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.


ಕ್ಯಾನ್ಸರ್ ಅನ್ನು ಆರಂಭ ಹಂತದಲ್ಲೇ ಪತ್ತೆಮಾಡುವುದು ಹೇಗೆ?
ಕ್ಯಾನ್ಸರ್‌ನ ಅನುವಂಶಿಕ ಇತಿಹಾಸವನ್ನು ಹೊಂದಿರುವ ರೋಗಿಗಳು ಅಭಿಪ್ರಾಯ ಪಡೆಯುವ ಸಲುವಾಗಿ ವೈದ್ಯರನ್ನು ಭೇಟಿಯಾಗಬೇಕು. ಇನ್ನು ಕಚೇರಿಗೆ ಹೋಗುವವರು ನಿಗದಿತ ಪರೀಕ್ಷೆಗೆ ಒಳಪಡಬೇಕು. ಇನ್ನು ಹೆಚ್ಚು ಧೂಮಪಾನ ಮಾಡುವವರು ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯಕ್ಕೆ ಹೆಚ್ಚು ಒಳಗಾಗಲಿದ್ದು ಉಸಿರಾಟ ಸಮಸ್ಯೆ ಕಂಡುಬಂದರೆ ಅಥವಾ ಇನ್ನಿತರ ಸಮಸ್ಯೆಗಳನ್ನು ಹೊಂದಿದ್ದಲ್ಲಿ ಸ್ಕ್ಯಾನಿಂಗ್ ಮಾಡಿಸಬೇಕಾಗುತ್ತದೆ.


Published by:Sandhya M
First published: