ದಿಲ್ಲು-ಧಮ್ ಇದ್ದವನು ಮಾತ್ರ ಸೇನೆಗೆ ಸೇರ್ತಾನೆ, ಹೊಟ್ಟೆಪಾಡಿಗಲ್ಲ: ಕುಮಾರಸ್ವಾಮಿಗೆ CT Ravi ತಿರುಗೇಟು!

ದಿಲ್-ಧಮ್‌ ಇದ್ದವನು ಮಾತ್ರ ಸೈನ್ಯಕ್ಕೆ ಸೇರುತ್ತಾರೆ. ಹೊಟ್ಟೆಪಾಡಿಗಾಗಿ ಸೈನ್ಯಕ್ಕೆ ಸೇರುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಸೈನಿಕರನ್ನೂ ಕೂಡ ಅವಮಾನ ಮಾಡಿದ್ದರು. ಯುಪಿಎಸ್‌ಸಿ ಮೇಲೆ ಅನುಮಾನ ಪಡುವುದು ದೊಡ್ಡದಲ್ಲ ಎಂದು ಎಚ್​ಡಿಕೆ ವಿರುದ್ಧ ಕಿಡಿ ಕಾರಿದರು.

ಸಿ ಟಿ ರವಿ

ಸಿ ಟಿ ರವಿ

  • Share this:
ಬೆಂಗಳೂರು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (hd kumaraswamy )ಇಂದು RSSಗೆ ಹಿಡನ್​ ಅಜೆಂಡಾ ಇದೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದರು. ಕಳೆದ ಕೆಲ ತಿಂಗಳುಗಳಿಂದ RSS ಕುರಿತ ಪುಸ್ತಕ ಓದುತ್ತಿದ್ದು, ಅವರ ಒಳ ಉದ್ದೇಶ ಅರ್ಥವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ( CT Ravi ) ತಿರುಗೇಟು ನೀಡಿದ್ದಾರೆ. RSSನಲ್ಲಿ ಹಿಡನ್ ಅಜೆಂಡಾ ಇಲ್ಲ, ದೇಶ ಸದೃಢವಾಗಬೇಕೆಂಬ ಬಹಿರಂಗ ಅಜೆಂಡಾ ಇದೆ. ಅನೇಕರು RSSನಲ್ಲಿ ತಮ್ಮ ಜೀವನ ಮುಡಿಪಿಟ್ಟಿದ್ದಾರೆ. ವೈದ್ಯರು, ಇಂಜಿನಿಯರ್‌ಗಳು ಅನೇಕರು ಜೀವನ ಸಮರ್ಪಣೆ ಮಾಡಿದ್ದಾರೆ. RSSನಲ್ಲಿ ಅನೇಕರು‌ ಸೇವಾಮನೋಭಾವದಿಂದ ತರಬೇತಿ ನೀಡುತ್ತಾರೆ. ಶಾಖೆಯಲ್ಲಿ ತರಬೇತಿ ನಡೆದಿಲ್ಲ, ಆದರೆ ಸ್ವಯಂ ಸೇವಕರು ತರಬೇತಿ ನೀಡುತ್ತಾರೆ. ತರಬೇತಿಯಿಂದ ಆಯ್ಕೆಯಾದರೆ ಅದು ಸಾರ್ಥಕ ಆಗುತ್ತದೆ. ಇದರಲ್ಲಿ‌ ಹಿಡನ್ ಅಜೆಂಡಾ ಏನಿದೆ ಎಂದು RSSn ಸಮರ್ಥಿಸಿಕೊಂಡರು.

ದಿಲ್-ಧಮ್‌ ಇದ್ದವನು ಮಾತ್ರ ಸೈನ್ಯಕ್ಕೆ ಸೇರುತ್ತಾರೆ

ಸ್ವಯಂ ಸೇವಕರಿಗೆ ಯಾವುದೇ ಸ್ವಾರ್ಥವಿಲ್ಲ. ದೇಶ ಭಕ್ತಿಯಿಂದ ನಾನಾ ಮುಖಗಳಲ್ಲಿ‌ ಕೆಲಸ ಮಾಡುತ್ತಾರೆ. ಆದರೆ ಸ್ವಯಂ ಸೇವಕರ ಬಗ್ಗೆ ಇವರಿಗೆ ಗೊತ್ತಿಲ್ಲ. ಸ್ವಜನ ಪಕ್ಷಪಾತ, ಕುಟುಂಬದ ಸ್ವಾರ್ಥ ಇರುವವರು ಎಲ್ಲವನ್ನೂ ಅನುಮಾನಿಸುತ್ತಾರೆ. ಸ್ವಯಂ ಸೇವಕರಿಗೆ ಹಿಡನ್ ಅಜೆಂಡಾ ಇರುವುದಿಲ್ಲ. ದೇಶದ ಒಳಿತಿಗಾಗಿ ಸ್ವಯಂ ಸೇವಕರು ಕೆಲಸ ಮಾಡುತ್ತಾರೆ ಎಂದರು. ದಿಲ್-ಧಮ್‌ ಇದ್ದವನು ಮಾತ್ರ ಸೈನ್ಯಕ್ಕೆ ಸೇರುತ್ತಾರೆ. ಹೊಟ್ಟೆಪಾಡಿಗಾಗಿ ಸೈನ್ಯಕ್ಕೆ ಸೇರುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಸೈನಿಕರನ್ನೂ ಕೂಡ ಅವಮಾನ ಮಾಡಿದ್ದರು. ಯುಪಿಎಸ್‌ಸಿ ಮೇಲೆ ಅನುಮಾನ ಪಡುವುದು ದೊಡ್ಡದಲ್ಲ ಎಂದು ಎಚ್​ಡಿಕೆ ವಿರುದ್ಧ ಕಿಡಿ ಕಾರಿದರು.

ರಾಜ್ಯದಲ್ಲಿ ಇದ್ದಂತೆ ತಾಳಿಭಾಗ್ಯ ಅಲ್ಲಿಲ್ಲ

UPSC ಘನತೆ ಇರುವ ಸಾಂವಿಧಾನಿಕ ಸಂಸ್ಥೆ. ರಾಜ್ಯದಲ್ಲಿ ಇದ್ದಂತೆ ತಾಳಿಭಾಗ್ಯ ಅಲ್ಲಿಲ್ಲ. ಯಾವುದೇ ಪರೀಕ್ಷಾ ಅಕ್ರಮ ಅಲ್ಲಿಲ್ಲ. ಸಂದರ್ಶನದಲ್ಲಿ ಅಕ್ರಮ ಮಾಡುವಂತದ್ದು ಇಲ್ಲ, ಹಣದ ಆಧಾರದ ಮೇಲೆ ಆಯ್ಕೆಯೂ ಇಲ್ಲ. ಕಷ್ಟಪಟ್ಟು ಮೆರಿಟ್ ಮೇಲೆ ಯಾರು ಬೇಕಾದರೂ ಆಯ್ಕೆಯಾಗಬಹುದು. ಪಾರದರ್ಶಕವಾಗಿ ಅರ್ಹತೆ ಇದ್ದವರು ಆಯ್ಕೆ ಆಗಬಹುದು. ಇವಿಎಂ, ಸುಪ್ರೀಂಕೋರ್ಟ್, ಇಡಿ ಮೇಲೆ ಅನುಮಾನಪಡುತ್ತಾರೆ. ಅನುಮಾನದ ಖಾಯಿಲೆಗೆ ನಮ್ಮಲ್ಲಿ ಔಷಧ ಇಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ನಾವು ಕೂಡ ಹಿಂದುಗಳೇ, ಆದರೆ ಹಿಂದುತ್ವ ಮೊದಲ ಅಜೆಂಡಾ ಅಲ್ಲ: RSSಗೆ ತಿರುಗೇಟು ನೀಡಿದ HDK

ಕುಮಾರಸ್ವಾಮಿ ಬಾಯಿ ಹರಕೆಯಿಂದ ಹಾಗೆಯೇ ಆಗಲಿ

RSSನವರು ಐಎಎಸ್ ಅಧಿಕಾರಿಗಳಾಗಿದ್ದಾರೆ ಎಂಬ ಎಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ , ನಾನು ಮಾಜಿ ಮುಖ್ಯಮಂತ್ರಿಗಳಿಗೆ ಒಂದು ಮಾತು ಹೇಳ್ತೆನೆ. RSS ಆಡಳಿತ ನಡೆಸುವ ಸಂಸ್ಥೆಯಲ್ಲ, ಸೇವೆ ಮಾಡುವ ಸಂಸ್ಥೆ. ಕಾರ್ಯಕರ್ತರಿಗೆ ಸೇವಾ ಮನೋಭಾವ ಬೆಳೆಸುವ ಪ್ರಪಂಚದ ಪ್ರಮುಖ ಸಂಸ್ಥೆ ಆರ್ ಎಸ್ ಎಸ್.  ಕುಮಾರಸ್ವಾಮಿ ಬಾಯಿ ಹರಕೆಯಿಂದ ಹಾಗೆಯೇ ಆಗಲಿ, ನಿಜಕ್ಕೂ ಆಗ ದೇಶಕ್ಕೆ ಒಳ್ಳೆದಾಗತ್ತೆ. RSS ಎಲ್ಲಿ ಇರತ್ತೋ ಅಲ್ಲಿ ಬಹಳ ಒಳ್ಳೆಯ ಕೆಲಸಗಳಾಗುತ್ತವೆ ಎಂದರು.

ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ

ಕುಮಾರಸ್ವಾಮಿಯವರಿಗೆ ಡೌಟ್ ಬೇಡ, ಆರ್ ಎಸ್ ಎಸ್ ಇರುವುದರಿಂದ ದೇಶದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ. ಕಾಶ್ಮೀರದಲ್ಲಿ 370ನೇ ವಿಧಿ ಹೋಯ್ತು, ಭಯೋತ್ಪಾದನೆ‌ ನಿರ್ಮೂಲನೆ ಆಯ್ತು. 4000 ಜನ ಅನ್ನೋದು ಬಹಳ ದೊಡ್ಡ ಸಂಖ್ಯೆ. ಕುಮಾರಸ್ವಾಮಿ ಬಾಯಿ ಹರಕೆಯಿಂದ ಅಷ್ಟು ಮಂದಿ ಆರ್ ಎಸ್ ಎಸ್ ನವರು ಐಎಎಸ್ ಅಧಿಕಾರಿಗಳಾಗಲಿ. ಆದರೆ ತಾಲಿಬಾನಿಗಳು ಎನ್ನುವ ಸಿದ್ದರಾಮಯ್ಯ ಗೆ ತಲೆ ಕೆಟ್ಟಿದೆ, ಅವರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು. ಅಫ್ಘಾನಿಸ್ತಾನ್​​ನಲ್ಲಿ ಆಗುವ ಹತ್ಯೆಗಳನ್ನು ಸಿದ್ದರಾಮಯ್ಯ ಒಪ್ಪಿಕೊಳ್ತಾರಾ ಎಂದು ಪ್ರಶ್ನಿಸಿದರು.
Published by:Kavya V
First published: