ರೈತರ ಪ್ರತಿಭಟನೆಯಲ್ಲಿ Urban Naxals, CAA ಹೋರಾಟಗಾರರು ಸೇರಿಕೊಂಡಿದ್ದಾರೆ: CT Ravi ಆರೋಪ

CT Ravi on farmers protest: ಉತ್ತಿ-ಬಿತ್ತದವನೂ ಕೂಡ ರೈತನಾಗಿ ಪ್ರತಿಭಟನೆಗೆ ಕೂತಿದ್ದ. ಈ ಪ್ರತಿಭಟನೆ ಹಿಂದೆ ದೇಶವನ್ನ ತುಂಡರಿಸೋ ತಂತ್ರವಿದೆ ಅಂತ ಮಾಹಿತಿ ದೊರೆಯಿತು. ಹೀಗಾಗಿ ರೈತರಿಗೆ ಉಪಯೋಗವಾಗುವ ಮೂರು ಕಾಯ್ದೆ ಹಿಂಪಡೆಯಲಾಗಿದೆ.

ಸಿ ಟಿ ರವಿ

ಸಿ ಟಿ ರವಿ

  • Share this:
ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಸುದ್ದಿಗೋಷ್ಠಿ ನಡೆಸಿ ವಿವಾದಿತ 3 ಕೃಷಿ ಕಾಯ್ದೆಗಳನ್ನು (Farmers Law ) ಕೇಂದ್ರ ಸರ್ಕಾರ (Central Government) ಹಿಂಪಡೆದ ನಿರ್ಧಾರವನ್ನು ಸಮರ್ಥಿಸಿಕೊಂಡು, ವಿರೋಧಿಸುವವರಿಗೆ ತಿರುಗೇಟು ನೀಡಿದರು. ಕೇಂದ್ರ ಸರ್ಕಾರದಿಂದ ಸುಧಾರಿತ ಎಪಿಎಂಸಿ ಕಾಯ್ದೆ ಜಾರಿಗೆ ತರಲಿದೆ, ಈ ಬಗ್ಗೆ ಪ್ರಧಾನಿಗಳು ಈಗಾಗಲೇ ಹೇಳಿದ್ದಾರೆ. ಸುಧಾರಿತ ಕಾಯ್ದೆಯನ್ನ ಜಾರಿಗೆ ತರಲಿದ್ದಾರೆ. ಪಂಚರಾಜ್ಯ ಚುನಾವಣೆಯಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆದಿಲ್ಲ. ಅಮಾವಾಸ್ಯೆ, ಹುಣ್ಣಿಮೆಗೆಲ್ಲಾ‌ ಚುನಾವಣೆ ನಡೆಯುತ್ತಿರುತ್ತವೆ, ಅದಕ್ಕೆಲ್ಲ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ. 2014ರ ಅಧಿಕಾರಾವಧಿ ಕೊನೆಯಲ್ಲಿ ಮತ್ತೆ ಬಿಜೆಪಿ ಬರೋದೇ ಇಲ್ಲ ಅಂದ್ರು. ಆದ್ರೆ, 2019ರಲ್ಲಿ ಸಿಂಗಲ್ ಮೆಜಾರಿಟಿ ಸರ್ಕಾರ ಬಂತು. ಜಾತಿ ಇಟ್ಟು, ಓಲೈಕೆ ರಾಜಕಾರಣ ಎಂದಿಗೂ ಬಿಜೆಪಿ ಮಾಡಲಿಲ್ಲ ಎಂದು ಸಮರ್ಥಿಸಿಕೊಂಡರು.

ರೈತರ ಹೆಸರಿಟ್ಟುಕೊಂಡು ಏನೋ ಮಾಡುತ್ತಿದ್ದಾರೆ

ರಾಷ್ಟ್ರಹಿತದ ದೃಷ್ಟಿಯೊಂದೇ ನಮ್ಮ ಗುರಿ. ದೇಶದಲ್ಲಿರೋ ಎಲ್ಲಾ ಪ್ರಜೆಗಳೂ ಒಂದೇ, ಎಲ್ಲರನ್ನೂ ಒಂದೇ ರೀತಿಯಲ್ಲೇ ನೋಡಿಕೊಳ್ತೇವೆ. ರೈತರ ಹೆಸರಿಟ್ಟುಕೊಂಡು ಏನೋ ಮಾಡುತ್ತಿದ್ದಾರೆ ಅನ್ನೋ ಸಂಶಯ ಇತ್ತು. ಕೆಂಪು ಕೋಟೆ ಮೇಲೆ ಖಲಿಸ್ತಾನ ಧ್ವಜ ಹಾರಿಸಿದ್ರು. ಕಾಯ್ದೆಗಳಲ್ಲಿ ಯಾವ ಅಂಶ ರೈತ ವಿರೋಧಿ ಇದೆ. 2008ರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ರು. ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಕೂಡ ಬೇಡಿಕೆ ಇಟ್ಟಿದ್ರು. ಆದ್ರೆ ತಮ್ಮ ಬೇಡಿಕೆ ವಿಸ್ತರಿಸುತ್ತಾ ಹೋಗ್ತಿದ್ದಾರೆ, ಇದರಲ್ಲಿ ಅರಾಜಕತೆ ಕಂಡು ಬರ್ತಿದೆ. ರೈತ ಬೆಳೆದ ಬೆಳೆಯನ್ನ, ತಾನೇ ಎಲ್ಲಿ‌ ಹೆಚ್ಚು ಬೆಲೆಗೆ ಮಾರಾಟ ಆಗುತ್ತೋ ಅಲ್ಲಿ ಮಾರಬಹುದು. ಆಲೂಗಡ್ಡೆ ಬೆಳೆಯಲು ಪೆಪ್ಸಿ ಕಂಪನಿ ಪಂಜಾಬ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಕಟಾವಿನ 48 ಗಂಟೆಯೊಳಗೆ ಹಣ ನೀಡುವಂತೆ ಒಪ್ಪಂದ ಮಾಡಿತ್ತು. ರೈತನನ್ನ ಬೆಂಬಲಿಸೋ ಕಾಯ್ದೆ ಇದಾಗಿದ್ದು ವಿರೋಧಿ ಅಂಶ ಇದರಲ್ಲಿ ಎಲ್ಲಿದೆ ಎಂದು ಪ್ರಶ್ನಿಸಿದರು.

ಉತ್ತಿ-ಬಿತ್ತದವನೂ ಕೂಡ ರೈತನಾಗಿ ಪ್ರತಿಭಟನೆಗೆ ಕೂತಿದ್ದ

ರೈತರ ಪ್ರತಿಭಟನೆ ಜೊತೆ ಅರ್ಬನ್ ನಕ್ಸಲ್ಸ್, ಸಿಎಎ ಹೋರಾಟಗಾರರು, ಬಿಜೆಪಿ ವಿರೋಧಿಸೋ ರಾಜಕೀಯ ಪಕ್ಷಗಳು ಸೇರಿಕೊಂಡವು. ಉತ್ತಿ-ಬಿತ್ತದವನೂ ಕೂಡ ರೈತನಾಗಿ ಪ್ರತಿಭಟನೆಗೆ ಕೂತಿದ್ದ. ಈ ಪ್ರತಿಭಟನೆ ಹಿಂದೆ ದೇಶವನ್ನ ತುಂಡರಿಸೋ ತಂತ್ರವಿದೆ ಅಂತ ಮಾಹಿತಿ ದೊರೆಯಿತು. ಹೀಗಾಗಿ ರೈತರಿಗೆ ಉಪಯೋಗವಾಗುವ ಮೂರು ಕಾಯ್ದೆ ಹಿಂಪಡೆಯಲಾಗಿದೆ. ಇಷ್ಟೆಲ್ಲಾ ಹೇಳಿದ ಬಳಿಕವೂ ಪ್ರತಿಭಟನೆ ಮುಂದುವರೆಸೋದಾಗಿ ಹೇಳ್ತಿದ್ದಾರೆ ಎಂದು ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದರು.

ರಕ್ತಪಾತಕ್ಕೆ ಅವಕಾಶ ಇಲ್ಲ

ಸಿಎಎ ರದ್ದುಪಡಿಸದಿದ್ದರೆ ಶಾಹೀನ್ ಬಾಗ್ ರೀತಿ ರಕ್ತಪಾತ ನಡೆಯುತ್ತೆ ಎಂದು ಓವೈಸಿ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ರಕ್ತಪಾತಕ್ಕೆ ಅವಕಾಶ ಇಲ್ಲ. ಓವೈಸಿ ಕಸಬ್ ರೀತಿ, ಬಿನ್ ಲಾಡೆನ್ ರೀತಿ ವರ್ತಿಸಲು ಬಂದರೆ ಭಾರತ ಈ ರೀತಿ ಹಿಂಸಾಚಾರವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಜಿನ್ನ, ಖಸಬ್, ಬಿನ್ ಲಾಡೆನ್ ರೀತಿ ವರ್ತಿಸಿದ್ರೆ, ಭಾರತ ಇಂತವರನ್ನ ತಡೆಗಟ್ಟಲು ಸಿದ್ದವಿದೆ ಎಂದು ಅಬ್ಬರಿಸಿದರು.

ಅಕ್ರಮ ನುಸುಳುಕೋರರಿಗೆ ಇಲ್ಲಿ ಜಾಗ ಇಲ್ಲ

CAA ಪೌರತ್ವ ಕೊಡುವ ಕಾಯ್ದೆ. ಧಾರ್ಮಿಕ ವಿರೋಧದಿಂದ ಇತರೆ ದೇಶಗಳಿಂದ ಬಂದಿರುವವರಿಗೆ ಪೌರತ್ವ ಕೊಡುವುದು. ಹಿಂದೂ, ಜೈನ, ಬೌದ್ಧರಿಗೆ ಪೌರತ್ವ ನೀಡುತ್ತಿದೆ. ಅದೇ ಮಾದರಿಯಲ್ಲೇ ಮುಸ್ಲಿಮರಿಗೂ ನೀಡಬೇಕು ಅನ್ನೋದು ಅವರ ಬೇಡಿಕೆ. ಬೇರೆ ಬೇರೆ ದೇಶಗಳಲ್ಲಿ ಘೋಷಿತ ಇಸ್ಲಾಂ ದೇಶಗಳಿವೆ. ಎಲ್ಲರಿಗೂ ಪೌರತ್ವ ನೀಡುವ ಬಗ್ಗೆ ಇವರಿಗೆ ಅಪೇಕ್ಷೆ ಇದ್ದರೆ, ಇಸ್ಲಾಂ ರಾಷ್ಟ್ರ ಅಂತ ಘೋಷಣೆ ಮಾಡಿರೋ ದೇಶಗಳು ಸರ್ವ ಧರ್ಮ ಅಳವಡಿಸಿಕೊಳ್ಳಬೇಕು. ಉಳಿದವರನ್ನ ಕಾಫೀರರು ಅಂತ ಘೋಷಿಸಿ, ಅವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಭಾರತ ಅಖಂಡ ಭಾರತವಾದಾಗ ಮಾತ್ರ, ಎಲ್ಲರಿಗೂ ಪೌರತ್ವ ಸಿಗಲಿದೆ. ಅಕ್ರಮ ನುಸುಳುಕೋರರಿಗೆ ಇಲ್ಲಿ ಜಾಗ ಇಲ್ಲ ಎಂದರು.

ಇದನ್ನೂ ಓದಿ: ಹಾಸನದಲ್ಲಿ Suraj Revanna ನಾಮಪತ್ರ ಸಲ್ಲಿಕೆ; ಹಿರಿಯರ ಮನೆಗೆ ಕಿರಿಯರು ಹೋಗೋದು ಸರಿಯಲ್ಲ ಎಂದ BJP

ಯಾರು ಧರ್ಮ ಸಂಕಟಕ್ಕೆ ಸಿಲುಕುತ್ತಾರೆ ಅವರಿಗೆ ಹಿಂದಿನಿಂದಲೂ ಪೌರತ್ವ ನೀಡಿದ್ದಾರೆ. ಯಾರು ಜಿಹಾದಿ ವಾದದ ಮೇಲೆ ಬರ್ತಾರೆ ಅವರಿಗೆ ಇಲ್ಲಿ ಅವಕಾಶ ಇಲ್ಲ. ಯಾರು ವಿರೋಧಿಸ್ತಾರೆ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲೇ ಉತ್ತರ ನೀಡ್ತೀವಿ. ಸಂವಿಧಾನ, ಬ್ಯಾಲಟ್ ಮೇಲೆ ನಂಬಿಕೆ ಇಟ್ಟು ಬರುವವರಿಗೆ ಅವಕಾಶ ಇದೆ. ಅಂಬೇಡ್ಕರ್ ಸಂವಿಧಾನ ಬಗ್ಗೆ ನಂಬಿಕೆ ಇಟ್ಟು ಬರುವವರಿಗೆ ಅವಕಾಶ ನೀಡುತ್ತೇವೆ ಎಂದರು.
Published by:Kavya V
First published: